Diwali Lakshmi Puja Remedies : ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವ ಇದೆ. ತಾಯಿಯನ್ನು ಒಲಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ನಿಮ್ಮ ರಾಶಿಗೆ ತಕ್ಕಂತೆ ಪೂಜೆ ಮಾಡಿದ್ರೆ ಲಕ್ಷ್ಮಿ ಆಶೀರ್ವಾದ ನಿಮ್ಮ ಮೇಲೆ ಬೀಳೋದು ಗ್ಯಾರಂಟಿ.
ದೀಪಗಳ ಹಬ್ಬ ದೀಪಾವಳಿ (Diwali) ಸಂಭ್ರಮ ಶುರುವಾಗಿದೆ. ಧನತ್ರಯೋದಶಿ ಮೂಲಕ ಐದು ದಿನಗಳ ದೀಪಾವಳಿ ಹಬ್ಬ ಆರಂಭವಾಗುತ್ತದೆ. ಅಮವಾಸ್ಯೆಯಂದು ದೀಪಾವಳಿ ಹಬ್ಬದ ಆಚರಣೆ ನಡೆಯುತ್ತದೆ. ಅಂದು ದೇವಿ ಲಕ್ಷ್ಮಿ (Lakshmi) ಹಾಗೂ ಗಣೇಶನ ಪೂಜೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಅಂದು ಭೂಮಿಗೆ ಬರುವ ತಾಯಿ ಲಕ್ಷ್ಮಿ, ಸಂಪತ್ತು ಸಮೃದ್ಧಿ, ಐಶ್ವರ್ಯ ನೀಡುತ್ತಾಳೆ ಎನ್ನುವ ನಂಬಿಕೆ ಇದೆ. ದೀಪಾವಳಿ ದಿನ ನೀವು ಲಕ್ಷ್ಮಿಯನ್ನು ಭಕ್ತಿಯಿಂದ ಪೂಜೆ ಮಾಡಿದ್ರೆ ಫಲ ಸಿದ್ಧಿಯಾಗುತ್ತದೆ. ವೈದಿಕ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗನುಗುಣವಾಗಿ ಲಕ್ಷ್ಮಿ ಪೂಜೆ ಮಾಡಿದ್ರೆ ಲಕ್ಷ್ಮಿಯ ಆಶೀರ್ವಾದ ಸಂಪೂರ್ಣ ಲಭಿಸುವುದಲ್ಲದೆ ಸದಾ ಸಂತೋಷ, ಶಾಂತಿ, ಸಂಪತ್ತು ನಿಮ್ಮದಾಗುತ್ತದೆ.
ಯಾವ ರಾಶಿಯವರು ಹೇಗೆ ಲಕ್ಷ್ಮಿ ಪೂಜೆ ಮಾಡಬೇಕು? :
ಮೇಷ ರಾಶಿ : ಮೇಷ ರಾಶಿಯವರು ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುವಾಗ ಕೊತ್ತಂಬರಿ, ಕಲ್ಲುಸಕ್ಕರೆ, ಕಮಲದ ಬೀಜಗಳು, ಬೆಲ್ಲ, ಜೇನುತುಪ್ಪ ಮತ್ತು ಕೇಸರಿಯನ್ನು ಬಳಸಬೇಕು. ಕೆಂಪು ಬಟ್ಟೆ, ತಾಮ್ರದ ಪಾತ್ರೆಗಳು, ಬೆಲ್ಲ, ಎಳ್ಳು ಮತ್ತು ಬೇಳೆಗಳನ್ನು ದಾನವಾಗಿ ನೀಡಬೇಕು. ಬಿಳಿ ಹಸುವಿಗೆ ಆಹಾರ ನೀಡುವ ಜೊತೆಗೆ ಅಕ್ಕಿ ಮತ್ತು ಸಕ್ಕರೆಯನ್ನು ದಾನ ನೀಡಬೇಕು.
ಈ ಮೂಲಾಂಕದ ಜನರು ಮದುವೆ ನಂತರವೂ ವಿವಾಹೇತರ ಸಂಬಂಧ ಇಟ್ಟುಕೊಳ್ತಾರೆ… ಹುಷಾರಾಗಿರ್ರಪ್ಪಾ!
ವೃಷಭ : ದೀಪಾವಳಿಯಂದು ಕಮಲದ ಹೂವು, ಕಪ್ಪು ಎಳ್ಳು, ಗುಲಾಬಿ ಸುಗಂಧ ದ್ರವ್ಯ, ಅಕ್ಕಿ ಹಿಟ್ಟನ್ನು ಲಕ್ಷ್ಮಿ ಪೂಜೆಗೆ ಬಳಸಿ. ಹಸಿರು ತರಕಾರಿಗಳು ಮತ್ತು ಅಕ್ಕಿಯನ್ನು ದಾನ ಮಾಡಬೇಕು. ಹಾಲಿಗೆ ಬೆಲ್ಲ ಹಾಕಿ, ಇದನ್ನು ಆಲದ ಮರದ ಬೇರಿಗೆ ಅರ್ಪಿಸಬೇಕು.
ಮಿಥುನ : ಲಕ್ಷ್ಮಿ ಪೂಜೆಯ ಸಮಯದಲ್ಲಿ ಗುಗ್ಗುಲ ಧೂಪ, ಜೇನುತುಪ್ಪ, ನಾಗಕೇಸರ, ಬೆಲ್ಲ, ಕೊತ್ತಂಬರಿ ಬೀಜಗಳು ಮತ್ತು ಕಮಲದ ಬೀಜಗಳನ್ನು ಬಳಸಿ. ಈ ರಾಶಿಯವರು ಹಣೆ, ಹೊಕ್ಕುಳ ಮತ್ತು ನಾಲಿಗೆಗೆ ಕೇಸರಿ ಮಿಶ್ರಿತ ನೀರನ್ನು ಹಚ್ಚುವುದ್ರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ.
ಕರ್ಕ : ಲಕ್ಷ್ಮಿ ದೇವಿಯ ಬಲಗೈ ಶಂಖದ ಮೇಲೆ ಕೇಸರಿಯಿಂದ ಲಕ್ಷ್ಮಿ ಬೀಜ ಶ್ರೀಮ್ ಮತ್ತು ಮಾಯಾ ಬೀಜ ಹ್ರೀಮ್ ಎಂದು ಬರೆದು ಪೂಜೆ ಮಾಡಿ. ಬಿಳಿ ಹಸುವಿಗೆ ಆಹಾರ ನೀಡಿ. ಅಕ್ಕಿ ಮತ್ತು ಸಕ್ಕರೆಯನ್ನು ದಾನ ನೀಡಿ. ಆಲದ ಮರದ ಬೇರುಗಳಿಗೆ ಸಿಹಿ ಹಾಲು ಅರ್ಪಿಸಿ.
ಸಿಂಹ : ಈ ರಾಶಿಯವರು ಲಕ್ಷ್ಮಿ ಬೀಜ ಶ್ರೀಮ್ ಮತ್ತು ಮಾಯಾ ಬೀಜ ಹ್ರೀಮ್ ಜಪಿಸಬೇಕು. ಗುಲಾಬಿ ಸುಗಂಧ ದ್ರವ್ಯ ಮತ್ತು ಕೆಂಪು ಓಲಿಯಾಂಡರ್ ಹೂವುಗಳನ್ನು ಲಕ್ಷ್ಮಿಗೆ ಅರ್ಪಿಸಿ.
ಕನ್ಯಾ : ಈ ರಾಶಿಯವರು ಅಪರಾಜಿತಾ ಹೂ ಮತ್ತು ಬೇರುಗಳು, ಮಲ್ಲಿಗೆ ಸುಗಂಧ ದ್ರವ್ಯ, ಜೇನುತುಪ್ಪ ಮತ್ತು ಕಮಲದ ಬೀಜಗಳನ್ನು ಅರ್ಪಿಸಬೇಕು. ಹನ್ನೆರಡು ಬಾದಾಮಿಗಳನ್ನು ಕಪ್ಪು ಬಟ್ಟೆಯ ಕಟ್ಟಿ ಕಬ್ಬಿಣದ ಪೆಟ್ಟಿಗೆಯಲ್ಲಿ ಮುಚ್ಚಿಡಿ. ವಿಕಲಾಂಗರಿಗೆ ಎಣ್ಣೆಯುಕ್ತ ಆಹಾರವನ್ನು ನೀಡಬೇಕು.
ತುಲಾ : ಲಕ್ಷ್ಮಿ ಪೂಜೆಯ ಸಮಯದಲ್ಲಿ ಗುಗ್ಗುಲು, ನಾಗಕೇಸರ, ಬೆಲ್ಲ, ಜೇನುತುಪ್ಪ, ಕೊತ್ತಂಬರಿ ಬೀಜಗಳು ಮತ್ತು ಕಮಲದ ಬೀಜಗಳನ್ನು ಅರ್ಪಿಸಬೇಕು. ತುಲಾ ರಾಶಿಯವರು ತಮ್ಮ ಮೊದಲ ತುತ್ತನ್ನು ಹಸು ಅಥವಾ ಅಗ್ನಿಗೆ ಅರ್ಪಿಸಬೇಕು. ಕೇಸರಿ ಮಿಶ್ರಿತ ನೀರನ್ನು ತಮ್ಮ ಹಣೆ, ಹೊಕ್ಕುಳ ಮತ್ತು ನಾಲಿಗೆಗೆ ಹಚ್ಚಿ ಮತ್ತು ಕೆಂಪು ಮೆಣಸಿನಕಾಯಿ ಬೀಜಗಳೊಂದಿಗೆ ಬೆರೆಸಿದ ನೀರನ್ನು ಸೂರ್ಯನಿಗೆ ಅರ್ಪಿಸಬೇಕು.
ನವೆಂಬರ್ 28 ಬೆಳಿಗ್ಗೆ 9.20 ರಿಂದ ಈ 4 ರಾಶಿಗೆ ಶನಿಯಿಂದ ಅದೃಷ್ಟದ ಸಮಯ
ವೃಶ್ಚಿಕ : ಈ ರಾಶಿಯವರು ಪಶ್ಚಿಮಕ್ಕೆ ಮುಖ ಮಾಡಿ, ಲಕ್ಷ್ಮಿ ದೇವಿಗೆ ಕೊತ್ತಂಬರಿ ಬೀಜಗಳು, ಗುಗ್ಗುಲು ಎಲೆಗಳು, ಮಲ್ಲಿಗೆ ಸುಗಂಧ ದ್ರವ್ಯ ಮತ್ತು ಕೆಂಪು ಓಲಿಯಂಡರ್ ಅನ್ನು ಅರ್ಪಿಸಬೇಕು. ವಿಕಲಾಂಗರಿಗೆ ಆಹಾರವನ್ನು ಅರ್ಪಿಸಿ.
ಧನು ರಾಶಿ : ಕಮಲದ ಹೂವುಗಳು, ಅಪರಾಜಿತಾ ಬೇರು, ಗುಲಾಬಿ ಸುಗಂಧ ದ್ರವ್ಯ, ದಾಳಿಂಬೆ ಮತ್ತು ಬಿಳಿ ಎಳ್ಳನ್ನು ಅರ್ಪಿಸಿ. ಧನು ರಾಶಿಯವರು ವಿಕಲಾಂಗರಿಗೆ ವೃದ್ಧರಿಗೆ ಎಣ್ಣೆಯುಕ್ತ ಆಹಾರವನ್ನು ಅರ್ಪಿಸಬೇಕು.
ಮಕರ : ತಾವರೆ ಹೂವುಗಳು, ಅಪರಾಜಿತಾ ಬೇರು, ಗುಲಾಬಿ ಸುಗಂಧ ದ್ರವ್ಯ, ದಾಳಿಂಬೆ ಮತ್ತು ಬಿಳಿ ಎಳ್ಳನ್ನು ದೀಪಾವಳಿಯಂದು ಲಕ್ಷ್ಮಿ ದೇವಿಗೆ ಅರ್ಪಿಸಬೇಕು. ಇರುವೆಗಳಿಗೆ ಬೆಲ್ಲವನ್ನು ಅರ್ಪಿಸಬೇಕು. ಶ್ರೀಗಂಧದ ಎಣ್ಣೆ ಬೆರೆಸಿದ ನೀರಿನಿಂದ ಮನೆಯನ್ನು ಒರೆಸಬೇಕು.
ಕುಂಭ : ಈ ರಾಶಿಯವರು ದೀಪಾವಳಿಯಂದು ಶಮಿ ಬೇರು, ಕೊತ್ತಂಬರಿ ಬೀಜಗಳು, ಸಕ್ಕರೆ ಮಿಠಾಯಿ, ಕಮಲದ ಹೂವುಗಳು, ಮಲ್ಲಿಗೆ ಹೂವುಗಳು, ಕೆಂಪು ಓಲಿಯಂಡರ್ ಬಳಸುವುದು ಶುಭ. ಗೋಮತಿ ಚಕ್ರವನ್ನು ಕೆಂಪು ಮತ್ತು ಬಿಳಿ ಬಣ್ಣದ ಕಟ್ಟುಗಳಲ್ಲಿ ಇರಿಸಿ ತ್ರಿಜೋರಿಯಲ್ಲಿ ಇಡಿ.
ಮೀನ : ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ಗುಲಾಬಿ ಹೂವುಗಳು, ಗುಲಾಬಿ ಸುಗಂಧ ದ್ರವ್ಯ, ದಾಳಿಂಬೆ, ಕಮಲದ ಬೀಜಗಳು ಮತ್ತು ಅಕ್ಕಿ ಹಿಟ್ಟನ್ನು ದೇಸಿ ತುಪ್ಪ ಮತ್ತು ಗುಗ್ಗುಲುವಿನ ಧೂಪದೊಂದಿಗೆ ಅರ್ಪಿಸಿ. ಜೇನುತುಪ್ಪ, ಕೇಸರಿ ಮತ್ತು ಅಪರಾಜಿತಾ ಬೇರನ್ನು ಬೆಳ್ಳಿ ಪೆಟ್ಟಿಗೆಯಲ್ಲಿ ಇರಿಸಿ ವರ್ಷಪೂರ್ತಿ ಪೂಜಿಸಿ.
