ಈ ಮೂಲಾಂಕದ ಜನರು ಮದುವೆ ನಂತರವೂ ವಿವಾಹೇತರ ಸಂಬಂಧ ಇಟ್ಟುಕೊಳ್ತಾರೆ… ಹುಷಾರಾಗಿರ್ರಪ್ಪಾ!
ಕೆಲವು ಮೂಲಾಂಕದ ಜನರನ್ನು ಕಣ್ಣು ಮುಚ್ಚಿ ನಂಬೋದಕ್ಕೆ ಸಾಧ್ಯ ಇಲ್ಲ. ಯಾಕಂದ್ರೆ ಈ ಮೂಲಾಂಕದ ಜನರು ವಿಚಿತ್ರವಾದ ಆಕರ್ಷಣೆಯನ್ನು ಹೊಂದಿರುತ್ತಾರೆ, ಇದರಿಂದಾಗಿ ಜನರು ಅವರತ್ತ ಆಯಸ್ಕಾಂತದಂತೆ ಆಕರ್ಷಿತರಾಗುತ್ತಾರೆ. ಇವರಿಗೆ ವಿವಾಹೇತರ ಸಂಬಂಧ ಕೂಡ ಇರುತ್ತೆ.

ಮೂಲಾಂಕ 6
ಸಂಖ್ಯಾಶಾಸ್ತ್ರದಲ್ಲಿ, 6 ನ್ನು ಅತ್ಯುತ್ತಮ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ಶುಕ್ರ ಸಂಖ್ಯೆ ಎಂದು ಕರೆಯಲಾಗುತ್ತದೆ, ಇದು ಪ್ರೀತಿ, ಸೌಂದರ್ಯ ಮತ್ತು ಸಂತೋಷದ ಅಂಶವಾಗಿದೆ. ಯಾರಾದರೂ 6, 24 ಅಥವಾ 15 ರಂದು ಜನಿಸಿದರೆ, ಅವರ ಮೂಲಾಂಕ 6 ಆಗಿರುತ್ತದೆ. ಮೂಲಾಂಕ 6 ಹೊಂದಿರುವವರಿಗೆ ಸಂಪತ್ತು ಮತ್ತು ಸಮೃದ್ಧಿಗೆ ಯಾವುದೇ ಕೊರತೆಯಿರೋದಿಲ್ಲ. ಐಷಾರಾಮಿ ಜೀವನ ಇಷ್ಟಪಡುವ ಈ ಜನರತ್ತ ಎಲ್ಲರೂ ಸುಲಭವಾಗಿ ಆಕರ್ಷಿತರಾಗುತ್ತಾರೆ.
ಸಂಪತ್ತಿಗೆ ಎಂದಿಗೂ ಕೊರತೆ ಇರುವುದಿಲ್ಲ
ಮೂಲಾಂಕ 6 ಹೊಂದಿರುವ ಜಾತಕದಲ್ಲಿ ಶುಕ್ರಗ್ರಹ ಬಲವಾಗಿದ್ದರೆ, ಆ ವ್ಯಕ್ತಿಗೆ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ. ಅವರು ಕೈ ಹಾಕುವ ಯಾವುದೇ ವಸ್ತುವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಿಗೆ ಜನರನ್ನು ಭೇಟಿ ಮಾಡಲು ಇಷ್ಟವಿಲ್ಲದೇ ಇದ್ದರೂ ಸಹ, ಜನರು ಇವರನ್ನು ಭೇಟಿ ಮಾಡಲು ಇಷ್ಟಪಡುತ್ತಾರೆ.
ವಿವಾಹೇತರ ಸಂಬಂಧ
ಅವರು ತಮ್ಮ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ ಮತ್ತು ಸಂಗಾತಿ ತಮ್ಮ ಜೀವನದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡೋದನ್ನು ಇಷ್ಟಪಡುವುದಿಲ್ಲ. ಆದ್ದರಿಂದ, ಅವರ ವಿವಾಹದಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ಹಾಗೂ ಅವರು ಎರಡನೇ ಮದುವೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತೆ.
ಫ್ಲರ್ಟ್ ಮಾಡುತ್ತಾರೆ:
ಈ ಜನರು ಸ್ವಾಭಾವಿಕವಾಗಿ ಆಕರ್ಷಕ ಮತ್ತು ಫ್ಲರ್ಟ್ ಮಾಡುವವರಾಗಿರುತ್ತಾರೆ. ಅವರು ಇತರರನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಅಷ್ಟೇ ಅಲ್ಲ ಅವರು ಮಾತುಕತೆ ನಡೆಸುವಲ್ಲಿ ನಿಪುಣರಾಗಿರುತ್ತಾರೆ. ಇದರಿಂದಲೇ ಅವರು ವಿವಾಹೇತರ ಸಂಬಂಧ ಹೊಂದಿರುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ.
ಸ್ನೇಹಿತರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುತ್ತಾರೆ
6 ನೇ ಸಂಖ್ಯೆಯನ್ನು ಹೊಂದಿರುವವರು ತುಂಬಾ ಶಕ್ತಿಯನ್ನು ಹೊಂದಿರುತ್ತಾರೆ, ಅವರು ಯಾರೊಂದಿಗಾದರೂ ಸಂಬಂಧ ಹೊಂದಿದ್ದರೆ ಅವರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಬಹುದು. ಅವರು ಇತರರ ಅದೃಷ್ಟವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಐಷಾರಾಮಿ ಜೀವನ ನಡೆಸುತ್ತಾರೆ
ಈ ಜನರು ನೋಡಲು ಸುಂದರವಾಗಿರುತ್ತಾರೆ. ಅವರು ಐಷಾರಾಮಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಅ ಶೋ ಆಫ್ ಮಾಡೋದು ಸಹ ಜಾಸ್ತಿ. ಅವರ ಜೇಬಿನಲ್ಲಿ 2 ರೂಪಾಯಿ ಇದ್ದರೆ, ಅವರು 10 ರೂಪಾಯಿ ಇದೆ ಎನ್ನುವಂತೆ ನಟಿಸುತ್ತಾರೆ. ಅವರು ಅತಿಯಾಗಿ ಬೇಡಿಕೆ ಇಡುತ್ತಾರೆ. ಇವರಿಗೆ ಪರ್ಫ್ಯೂಮ್ ಡಿಯೋಡ್ರಂಟ್ ಬಳಕೆ ಮಾಡೋದು ಇಷ್ಟ. ಹೆಚ್ಚು ಹಣ ಗಳಿಸ್ತಾರೆ, ದುಬಾರಿಯಾಗಿ ಖರ್ಚು ಮಾಡ್ತಾರೆ.
ಹುಟ್ಟಿನಿಂದಲೇ ಶ್ರೀಮಂತರು
ಈ ಜನರು ಬಾಯಿಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡೇ ಜನಿಸುತ್ತಾರೆ. ಅವರು ಬಹಳಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದುದಕ್ಕಾಗಿಯೇ ಈ ದಿನದಂದು ಜನಿಸಿರುತ್ತಾರೆ. ಅವರು ಹೊಗಳಿಕೆಯನ್ನು ಕೇಳಲು ಇಷ್ಟಪಡುತ್ತಾರೆ ಮತ್ತು ಜನರಿಂದ ಸುತ್ತುವರೆದಿರುವುದನ್ನು ಆನಂದಿಸುತ್ತಾರೆ. ಆದ್ದರಿಂದ, ಅವರು ಬಹು ಸಂಬಂಧಗಳನ್ನು ಹೊಂದುವ ಸಾಧ್ಯತೆ ಹೆಚ್ಚು.