Astrology Tips for Better Job : ಸ್ಟಡಿ ಮುಗಿತಿದ್ದಂಗೆ ಒಳ್ಳೆ ಕೆಲ್ಸ ಸಿಗ್ಬೇಕು ಅಂತ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಎಲ್ರಿಗೂ ಇದು ನನಸಾಗೋದಿಲ್ಲ. ಬೇಗ ಜಾಬ್ ಸಿಕ್ಕು, ಕೈ ತುಂಬ ಸಂಪಾದನೆ ಶುರು ಮಾಡ್ಬೇಕು ಅಂದ್ರೆ ಈ ಉಪಾಯ ಮಾಡಿ.

 ಉತ್ತಮ ಕೆಲ್ಸ ಪಡೆಯೋದು ಪ್ರತಿಯೊಬ್ಬನ ಆಸೆ. ಕೈ ತುಂಬ ಸಂಬಳ, ಒತ್ತಡವಿಲ್ಲದ ಕೆಲ್ಸವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಅದು ಸುಲಭವಾಗಿ ಸಿಗೋದಿಲ್ಲ. ಕೆಲವರಿಗೆ ಹೆಚ್ಚಿನ ಪರಿಶ್ರಮವಿಲ್ಲದೆ ಅತ್ಯುತ್ತಮ ಕೆಲ್ಸ ಸಿಕ್ಕಿರುತ್ತದೆ. ಮತ್ತೆ ಕೆಲವರಿಗೆ ಉತ್ತಮ ಟ್ಯಾಲೆಂಟ್ ಇದ್ದು, ಯೋಗ್ಯ ಅಂಕಗಳನ್ನು ಪಡೆದಿದ್ರೂ ಕೆಲ್ಸ ಸಿಗೋದಿಲ್ಲ. ಸಣ್ಣಪುಟ್ಟ ವೃತ್ತಿ ಜೀವನ (career)ದಲ್ಲೇ ಬದುಕು ನಡೆಸ್ಬೇಕಾಗುತ್ತದೆ. ಪ್ರತಿಯೊಬ್ಬ ಪಾಲಕರು, ತಮ್ಮ ಮಕ್ಕಳು ಒಳ್ಳೆ ಕೆಲ್ಸ ಗಿಟ್ಟಿಸಿಕೊಳ್ಳಬೇಕೆಂಬ ಆಸೆ ಹೊಂದಿರ್ತಾರೆ. ಇದೇ ಕಾರಣಕ್ಕೆ ಬಾಲ್ಯದಿಂದಲೂ ಓದು, ಕೌಶಲ್ಯ ವೃದ್ಧಿಗೆ ಆದ್ಯತೆ ನೀಡ್ತಾರೆ. ನಿಮ್ಮ ಕೆಲ್ಸ ನಿಮ್ಮ ಟ್ಯಾಲೆಂಟ್ ಜೊತೆ ಗ್ರಹಗಳ ಜೊತೆ ನಂಟು ಹೊಂದಿದೆ. ಜ್ಯೋತಿಷ್ಯ ಶಾಸ್ತ್ರ (Astrology), ನೀವು ಯಾವಾಗ ಉತ್ತಮ ಕೆಲ್ಸ ಪಡೆಯುತ್ತೀರಿ ಎಂಬುದನ್ನು ಹೇಳಬಲ್ಲದು. ನಿಮ್ಮ ಜಾತಕದಲ್ಲಿ ಇದಕ್ಕೆ ಉತ್ತರವಿದೆ.

ನಿಮಗೆ ಯಾವಾಗ ಸಿಗ್ಬಹುದು ಉತ್ತಮ ಕೆಲ್ಸ? :

ಉದ್ಯೋಗಕ್ಕೆ ಅತ್ಯಂತ ಮುಖ್ಯವಾದ ಮನೆ ಕರ್ಮ ಭಾವ. ಜ್ಯೋತಿಷ್ಯದಲ್ಲಿ, ವ್ಯಕ್ತಿಯ ಜಾತಕದಲ್ಲಿ ಹತ್ತನೇ ಮನೆಯನ್ನು ನಿರ್ಣಾಯಕ ಅಂತ ಪರಿಗಣಿಸ್ತಾರೆ. ಇದು ವ್ಯಕ್ತಿಯ ವ್ಯವಹಾರ ಮತ್ತು ಉದ್ಯೋಗ ಸ್ಥಿತಿ ಹೇಳುತ್ತೆ. ಅದನ್ನೇ ಕರ್ಮ ಭಾವ ಅಂತ ಕರೆಯಲಾಗುತ್ತೆ. ಇಲ್ಲಿ, ಸೂರ್ಯ, ಚಂದ್ರ, ಬುಧ, ಗುರು ಮತ್ತು ಶುಕ್ರನಂತಹ ಶುಭ ಗ್ರಹಗಳು ಇದ್ದರೆ ವ್ಯಕ್ತಿಗೆ ಬೇಗ ಕೆಲಸ ಸಿಗುತ್ತದೆ.

ದೇವಸ್ಥಾನದೊಳಗೆ ಬರಿಗಾಲಲ್ಲಿ ಪ್ರವೇಶಿಸುವುದು ಏಕೆ? ಇದರ ಹಿಂದಿನ ಧಾರ್ಮಿಕ, ಆಧ್ಯಾತ್ಮಿಕ ಕಾರಣ ತಿಳಿಯಿರಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಕರ್ಮ ಭಾವದಲ್ಲಿ ಇರುವ ಗ್ರಹದ ಅವಧಿಯು ಉದ್ಯೋಗ ಪಡೆಯುವ ಅವಕಾಶವನ್ನು ಸೃಷ್ಟಿಸುತ್ತದೆ. ಲಗ್ನ ಮತ್ತು ಲಗ್ನದ ಅಧಿಪತಿಯ ಅವಧಿ ಬಲವಾಗಿದ್ದರೆ, ಅದು ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಿಸುತ್ತದೆ. 

• ಸೂರ್ಯ- ಶನಿ ಕೃಪೆ : ಜ್ಯೋತಿಷ್ಯದ ಪ್ರಕಾರ, ಸೂರ್ಯ ಮತ್ತು ಶನಿ ಜಾತಕದಲ್ಲಿ ಅನುಕೂಲಕರ ಸ್ಥಾನದಲ್ಲಿದ್ದರೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. 

• ರಕ್ಷಣಾ ಮತ್ತು ವೈದ್ಯಕೀಯ ಕ್ಷೇತ್ರ : ಇಲ್ಲಿ ಮಂಗಳನ ಪ್ರಭಾವ ಮುಖ್ಯ. ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಮಂಗಳ ಪ್ರಭಾವಿಯಾಗಿದ್ದರೆ ಮತ್ತು ಕರ್ಮ ಭಾವಕ್ಕೆ ಸಂಬಂಧಿಸಿದ್ದರೆ, ಪೊಲೀಸ್, ಸೈನ್ಯ, ಶಸ್ತ್ರಚಿಕಿತ್ಸೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸುಲಭವಾಗಿ ಕೆಲ್ಸ ಸಿಗುತ್ತದೆ. 

• ಶಿಕ್ಷಣ – ಲೆಕ್ಕಪತ್ರ : ಉದ್ಯೋಗ ಮತ್ತು ವೃತ್ತಿ ಮೇಲೆ ಗುರು ಮತ್ತು ಬುಧದ ಪ್ರಭಾವ ಕೂಡ ಇರಬೇಕು. ಗುರು ಮತ್ತು ಬುಧ ಎರಡೂ ಬಲವಾಗಿದ್ದರೆ ಶಿಕ್ಷಣ ಮತ್ತು ಲೆಕ್ಕಪತ್ರ ನಿರ್ವಹಣೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ. ಗುರು ಮತ್ತು ಬುಧ, ಜಾತಕದ ಹತ್ತನೇ ಮನೆಯಲ್ಲಿದ್ರೆ ಉತ್ತಮ ಸ್ಥಾನಕ್ಕೇರುತ್ತೀರಿ. 

ಅಕ್ಟೋಬರ್ 24 ರಿಂದ ಈ ಜನರಿಗೆ ನೋಟುಗಳ ಸುರಿಮಳೆ,ಈ ರಾಶಿಗೆ ಎಲ್ಲಾ ಕೆಲಸದಲ್ಲೂ ಯಶಸ್ಸು

ಶೀಘ್ರವೇ ಉದ್ಯೋಗ ಪ್ರಾಪ್ತಿಗೆ ಏನು ಮಾಡಬೇಕು? : 

1.ಶನಿವಾರದಂದು ಶನಿ ಸ್ತೋತ್ರವನ್ನು ಪಠಿಸಬೇಕು. ಅರಳಿ ಮರದ ಕೆಳಕೆ ತುಪ್ಪದ ದೀಪವನ್ನು ಹಚ್ಚಬೇಕು.

 2.ಸೂರ್ಯನಿಗೆ ಪ್ರತಿ ದಿನ ಜಲವನ್ನು ಅರ್ಪಿಸಬೇಕು. ಓಂ ಘೃಣಿ ಸೂರ್ಯಾಯ ನಮಃ ಎಂಬ ಮಂತ್ರವನ್ನು ಜಪಿಸಬೇಕು. 

3.ವಿಷ್ಣು ಸಹಸ್ರನಾಮವನ್ನು ಪಠಿಸುತ್ತ ಬಂದಲ್ಲಿ ಶೀಘ್ರವೇ ನಿಮಗೆ ಉದ್ಯೋಗ ಲಭಿಸುತ್ತದೆ. ಹಿಂದೂ ಧರ್ಮದಲ್ಲಿ ಬಾಳೆ ಮರವನ್ನು ದೇವರಿಗೆ ಹೋಲಿಕೆ ಮಾಡಲಾಗಿದೆ. ನೀವು ಬಾಳೆ ಮರಕ್ಕೆ ದೀಪ ಹಚ್ಚಬೇಕು. 

4.ಬೇಗ ಉದ್ಯೋಗ ಸಿಗಬೇಕು ಎನ್ನುವವರು ಹಸಿರು ಬಟ್ಟೆಗಳನ್ನು ಧರಿಸಿ. ಬುಧವಾರದಂದು ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. 

5.ತುಳಸಿಯನ್ನು ಪೂಜಿಸುತ್ತ ಬನ್ನಿ. ತುಳಸಿ ಗಿಡಕ್ಕೆ ನಿಯಮಿತವಾಗಿ ಹಾಲು ಮತ್ತು ಜಲವನ್ನು ಅರ್ಪಿಸಿ.