Own Shraddha : ವ್ಯಕ್ತಿ ಸತ್ತ 12 ತಿಂಗಳ ನಂತ್ರ ಶ್ರಾದ್ಧ ಮಾಡಲಾಗುತ್ತದೆ. ದಿನಾಂಕ ನೆನಪಿಟ್ಟುಕೊಳ್ಳದ ಜನರು ಮಹಾಲಯ ಅಮಾವಾಸ್ಯೆ ದಿನ ಶ್ರಾದ್ಧ ಮಾಡ್ತಾರೆ. ಆದ್ರೆ ಸ್ವಂತ ಶ್ರಾದ್ಧ ಯಾವಾಗ ಮಾಡ್ತಾರೆ? 

ಹಿಂದೂ ಧರ್ಮ (Hinduism )ದಲ್ಲಿ ಶ್ರಾದ್ಧ (Shraddha) ಸಂಪ್ರದಾಯ ಶತಮಾನಗಳಿಂದ ಪ್ರಚಲಿತದಲ್ಲಿದೆ. ಜನರು ತಮ್ಮ ಪೂರ್ವಜರ ಆತ್ಮ ಶಾಂತಿಗಾಗಿ, ಅವರ ಮೋಕ್ಷಕ್ಕಾಗಿ ಶ್ರಾದ್ಧ, ತರ್ಪಣ ಬಿಡುವ ಕೆಲ್ಸ ಮಾಡ್ತಾರೆ. ಈಗ ಪಿತೃ ಪಕ್ಷ ನಡೆಯುತ್ತಿದ್ದು, ಜನರು ಪೂರ್ವಜರ ಆತ್ಮ ಶಾಂತಿಗೆ ಶ್ರಾದ್ಧ ಮಾಡ್ತಿದ್ದಾರೆ. ಪೂರ್ವಜರ ಸಾವಿನ ದಿನಾಂಕ ತಿಳಿದವರು, ಆ ದಿನ ಅಥವಾ ತಿಥಿಯಂದು ಅವರನ್ನು ನೆನೆದು ಶ್ರಾದ್ಧ ಮಾಡ್ತಾರೆ. ತಿಥಿ, ದಿನಾಂಕ ತಿಳಿಯದ ಜನರು ಮಹಾಲಯ ಅಮಾವಾಸ್ಯೆಯಂದು ತರ್ಪಣ ಬಿಡ್ತಾರೆ. ಈ ಬಾರಿ ಸೆಪ್ಟೆಂಬರ್ 21 ರಂದು ಮಹಾಲಯ ಅಮಾವಾಸ್ಯೆ (Mahalaya Amavasya) ಬಂದಿದೆ. ಪೂರ್ವಜರ ಸೂಕ್ಷ್ಮ ದೇಹಗಳು, ಅವರಿಗೆ ನೀಡುವ ಆಹಾರವನ್ನು ಸ್ವೀಕರಿಸುತ್ತದೆ, ನಮ್ಮನ್ನು ಹರಸುತ್ತದೆ ಎನ್ನುವ ನಂಬಿಕೆ ಇದೆ. ಧರ್ಮಗ್ರಂಥಗಳ ಪ್ರಕಾರ, ಯಾರು ಪೂರ್ವಜರ ಶ್ರಾದ್ಧ ಮಾಡುವುದಿಲ್ವೋ ಅಂತಹ ಪೂರ್ವಜರು ಮೋಕ್ಷವನ್ನು ಪಡೆಯುವುದಿಲ್ಲ ಎನ್ನಲಾಗಿದೆ. ಪೂರ್ವಜರ ಆತ್ಮಗಳು ಅತೃಪ್ತವಾಗುವುದಲ್ಲದೆ, ಕುಟುಂಬಗಳು ಮತ್ತು ಭವಿಷ್ಯದ ಪೀಳಿಗೆಗಳು ಸಹ ಪಿತೃ ದೋಷದಿಂದ ಬಳಲುತ್ತವೆ. ಶ್ರಾದ್ಧವನ್ನು ವಿಮೋಚನೆಗಾಗಿ ಮಾಡಲಾಗುತ್ತೆ. ಸಾವಿನ ನಂತ್ರ ವಿಮೋಚನೆ ಸಾಧಿಸಲಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿಯೇ ಶ್ರಾದ್ಧವನ್ನು ಸಾವಿನ ನಂತರ ಮಾಡಲಾಗುತ್ತೆ. ಆದ್ರೆ ವ್ಯಕ್ತಿ ಜೀವಂತವಾಗಿರುವಾಗ್ಲೇ ಶ್ರಾದ್ಧ ಮಾಡುವವರಿದ್ದಾರೆ.

ಬದುಕಿರುವಾಗ್ಲೇ ಯಾರು ಶ್ರಾದ್ಧ ಮಾಡಿಕೊಳ್ತಾರೆ ?: ಆತ್ಮಶ್ರಾದ್ಧವನ್ನು ಸಾಮಾನ್ಯವಾಗಿ ಸನ್ಯಾಸತ್ವ ಸ್ವೀಕರಿಸಿದವರು ಮಾಡಿಕೊಳ್ತಾರೆ. ಸಾವಿನ ನಂತ್ರ ನನ್ನ ಶ್ರಾದ್ಧವನ್ನು ಯಾರೂ ಮಾಡೋದಿಲ್ಲ ಎಂದು ಊಹಿಸುವವರು ಬದುಕಿದ್ದಾಗಲೇ ತಮ್ಮ ಶ್ರಾದ್ಧವನ್ನು ಮಾಡಿಕೊಳ್ತಾರೆ. ಆತ್ಮ ಶಾಂತಿ ಮತ್ತು ವಿಮೋಚನೆಗಾಗಿ ಈ ಶ್ರಾದ್ಧವನ್ನು ಜೀವಂತ ಇರುವಾಗ್ಲೇ ಮಾಡಿಕೊಳ್ಳಲಾಗುತ್ತದೆ. ಗರುಡ ಪುರಾಣ ಮತ್ತು ಬ್ರಹ್ಮ ಪುರಾಣದ ಪ್ರಕಾರ,ಇದು ಎಲ್ಲರಿಗೂ ಕಡ್ಡಾಯವಲ್ಲ.

ರಾಶಿಚಕ್ರದೊಳಗೆ ಅಪರೂಪದ ಕಾಕತಾಳೀಯ; ಒಂದೇ ವಾರದಲ್ಲಿ 5 ಗ್ರಹಗಳ ಬದಲಾವಣೆ: ಯಾರಿಗೆಲ್ಲಾ ಲಾಭ?

ಆತ್ಮ ಶ್ರಾದ್ಧವನ್ನು ಎಲ್ಲಿ ಮಾಡಲಾಗುತ್ತದೆ? : ಈ ಆಚರಣೆಯನ್ನು ಸಾಮಾನ್ಯವಾಗಿ ಬಿಹಾರದ ಗಯಾದಲ್ಲಿರುವ ಫಾಲ್ಗು ನದಿಯ ದಡದಲ್ಲಿ ಮಾಡಲಾಗುತ್ತದೆ. ಇದನ್ನು ಪೂರ್ವಜರ ತೀರ್ಥಯಾತ್ರೆಯ ಸ್ಥಳ. ಅಲ್ಲಿ ಶ್ರಾದ್ಧ ಮಾಡುವುದನ್ನು ಹೆಚ್ಚು ಫಲಪ್ರದ ಎಂದು ಪರಿಗಣಿಸಲಾಗಿದೆ. ಜೀವಂತವಾಗಿರುವಾಗ್ಲೇ ಈ ಸ್ಥಳದಲ್ಲಿ ಶ್ರಾದ್ಧ ಮಾಡಿದ್ರೆ ಪೂರ್ವಜರ ಪಾಪ ಕಳೆಯುತ್ತದೆ. ಅವರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗುತ್ತದೆ.

ವ್ಯಕ್ತಿ ಯಾವಾಗ ಸ್ವಂತ ಶ್ರಾದ್ಧ ಮಾಡಬಹುದು? : ಸ್ವಂತ ಶ್ರಾದ್ಧ ಮಾಡುವುದು ಯಾವುದೇ ನಿರ್ದಿಷ್ಟ ಸಮಯ ಅಥವಾ ದಿನಾಂಕವಿಲ್ಲ.ಅದು ಸಾವಿನ ನಂತರ ಮಾಡುವ ಶ್ರಾದ್ಧವಲ್ಲ. ಇದನ್ನು ಸನ್ಯಾಸ ದೀಕ್ಷೆ ತೆಗೆದುಕೊಳ್ಳುವ ಮೊದಲು ಅಥವಾ ಒಬ್ಬ ವ್ಯಕ್ತಿಯು ತಮ್ಮ ಜೀವನದ ಒಂದು ಹಂತವನ್ನು ಪೂರ್ಣಗೊಳಿಸಿ ಸಾವಿನಂತಹ ಸ್ಥಿತಿಗೆ ಪ್ರವೇಶಿಸಿದಾಗ ಮಾಡಬಹುದು. ಇದನ್ನು ಸಾಮಾನ್ಯವಾಗಿ ಪಿತೃ ಪಕ್ಷದಲ್ಲಿಯೇ ಮಾಡಲಾಗುತ್ತದೆ. ಅಮಾವಾಸ್ಯೆಯ ದಿನದಂದು ಅಥವಾ ಏಕಾದಶಿಯಂದು ಪುರೋಹಿತರ ಮಾರ್ಗದರ್ಶನದಲ್ಲಿ ಮಾಡಿಕೊಳ್ಳಬೇಕು. ಸ್ವಂತ ಶ್ರಾದ್ಧ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ಇದನ್ನು ಯಾವಾಗ ಬೇಕಾದ್ರೂ, ಯಾರು ಬೇಕಾದ್ರೂ ಮಾಡೋದು ಉತ್ತಮವಲ್ಲ. ಇದಕ್ಕೊಂದು ಸೂಕ್ತ ಕಾರಣದ ಅಗತ್ಯವಿರುತ್ತದೆ. 

ಈ ರಾಶಿಗೆ ಅಕ್ಟೋಬರ್‌ನಲ್ಲಿ ಬಂಪರ್ ಲಾಟರಿ, ಹೆಜ್ಜೆ ಹೆಜ್ಜೆಗೂ ದೊಡ್ಡ ಯಶಸ್ಸು

ಪುರೋಹಿತರು ಅಥವಾ ಜ್ಯೋತಿಷಿಗಳನ್ನು ಸಂಪರ್ಕಿಸಿ, ಅವರ ಮಾರ್ಗದರ್ಶನದಲ್ಲಿಯೇ ಇದನ್ನು ಮಾಡಬೇಕು. ತಪ್ಪಾಗಿ ಇದನ್ನು ಮಾಡೋದ್ರಿಂದ ನಿಮಗೆ ಫಲಿತಾಂಶ ಪ್ರಾಪ್ತಿಯಾಗುವುದಿಲ್ಲ. ಸ್ವಂತ ಶ್ರಾದ್ಧಕ್ಕೂ ಭಕ್ತಿ ಮತ್ತು ಶಾಸ್ತ್ರಗಳ ಅಗತ್ಯವಿದೆ. ಸಾವಿನ 12 ತಿಂಗಳ ನಂತರ ಅಥವಾ ದಿನಾಂಕದ ಪ್ರಕಾರ ನಡೆಸುವ ಸಾಮಾನ್ಯ ಮರಣೋತ್ತರ ಶ್ರಾದ್ಧಕ್ಕಿಂತ ಭಿನ್ನವಾಗಿರುತ್ತದೆ. ಆತ್ಮ ಶ್ರಾದ್ಧವು ಅತ್ಯಂತ ಅಪರೂಪದ್ದು. ಇದರಲ್ಲಿ ತ್ಯಾಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಯಾವುದೇ ವ್ಯಕ್ತಿ ಸ್ವಂತ ಶ್ರಾದ್ಧ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದರೆ ಸೂಕ್ತ ಮಾರ್ಗದರ್ಶನ ಪಡೆಯುವುದು ಅಗತ್ಯ.