ಎಸ್.ಎಲ್. ಭೈರಪ್ಪ 1958ರ ‘ಭೀಮಕಾಯ’ದಿಂದ ಪ್ರಾರಂಭಿಸಿದ ಸಾಹಿತ್ಯ ಯಾನದಲ್ಲಿ, ತತ್ವಶಾಸ್ತ್ರ, ಇತಿಹಾಸ, ಧರ್ಮ ಮತ್ತು ಮಾನವ ಮೌಲ್ಯಗಳ ಮೇಲೆ ಸುದೀರ್ಘ ಚಿಂತನೆಯಲ್ಲಿ ತೊಡಗಿದ್ದರು. ಧರ್ಮಶ್ರೀ, ಮತದಾನ, ವಂಶವೃಕ್ಷ ಮತ್ತು ಪರ್ವ ಕೃತಿಗಳಲ್ಲಿ ಅವರ ಕಠಿಣ ವಿಶ್ಲೇಷಣೆ ಮತ್ತು ಪ್ರಶ್ನಿಸುವ ಸಾಹಸ ಕಂಡುಬರುತ್ತದೆ.
ಡಾ ಎಸ್‌ಎಲ್ ಭೈರಪ್ಪನವರ ಬಗ್ಗೆ ಪ್ರಕಾಶ್ ಬೆಳವಾಡಿ ಹೇಳಿದ್ದೇನು?
ಡಾ. ಎಸ್.ಎಲ್. ಭೈರಪ್ಪ (Dr S.L Bhyrappa) ಅವರ ಅತ್ಯಂತ ಪ್ರಸಿದ್ಧ ಕೃತಿ "ಪರ್ವ" ಈಗ ಸಂಪೂರ್ಣವಾಗಿ ರಂಗಭೂಮಿಯಲ್ಲಿ ನಾಟಕದ ರೂಪದಲ್ಲಿ ಜೀವಂತವಾಗಿದೆ. ಖ್ಯಾತ ನಿರ್ದೇಶಕ ಪ್ರಕಾಶ್ ಬೆಳವಾಡಿ (Prakash Belawadi) ನಿರ್ದೇಶನ ಒಳಗೊಂಡಿರುವ ಈ ನಾಟಕವು ಎಂಟು ಗಂಟೆಗಳ (8 ಗಂಟೆ) ಅಮೋಘ ಪ್ರದರ್ಶನವಾಗಿದೆ. ಒಕ್ಕಲಿಗ ದಂತಕಥೆಯಂತಹ ಈ ಕೃತಿಯನ್ನು ಕನ್ನಡದಲ್ಲಿ, ಮೈಸೂರಿನಲ್ಲಿ ಮೊದಲಿನ ಒಂದು ಆವೃತ್ತಿಯಲ್ಲಿ ನಾಟಕ ರೂಪದಲ್ಲಿ ಭೈರಪ್ಪನವರು ನೋಡಿದ್ದರು.
ಆದರೆ, ಇದರ ಇಂಗ್ಲಿಷ್ ರೂಪಾಂತರವನ್ನು ವೀಕ್ಷಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಕಳೆದ ವರ್ಷ ಭೈರಪ್ಪನವರು, ಈ ನಾಟಕದ ಇಂಗ್ಲಿಷ್ ಭಾಷಾಂತರವನ್ನು ನೋಡಲು ಬಂದಿದ್ದರು. ಇದು ಅವರ ಕೊನೆಯ ಸಾರ್ವಜನಿಕ ಉಪಸ್ಥಿತಿಗಳಲ್ಲಿ ಒಂದಾಗಿತ್ತು. ನಾಟಕದ ಇಂಗ್ಲಿಷ್ ಆವೃತ್ತಿಯನ್ನು ವೀಕ್ಷಿಸಿದ ಸಾಹಿತಿ ಎಸ್‌ಎಸಲ್ ಭೈರಪ್ಪನವರು ಹೇಗೆ ಪ್ರತಿಕ್ರಿಯೆ ನೀಡಿದ್ದರು ಎಂಬುದನ್ನು ಅದೇ ಕೃತಿಯ ನಾಟಕದ ಕರ್ತೃ, ನಿರ್ದೇಶಕ ಪ್ರಕಾಶ್ ಬೆಳವಾಡಿಯವರು ಹಂಚಿಕೊಂಡಿದ್ದಾರೆ. ಇದನ್ನು 'ಟೈಮ್ಸ್' ಸಂದರ್ಶನದಿಂದ ಆಯ್ದುಕೊಳ್ಳಲಾಗಿದೆ.
ಪ್ರಕಾಶ್ ಬೆಳವಾಡಿ ಹೇಳಿಕೆ ಪ್ರಕಾರ, 'ನಾಟಕದ ಮೊದಲ ದಿನ ತಾಂತ್ರಿಕ ಸಮಸ್ಯೆಗಳಿಂದ ನಾಟಕ ಶುರುವಾದ ಸ್ವಲ್ಪವೇ ಹೊತ್ತಿನಲ್ಲಿ ನಿಲ್ಲುವಂತಾಯಿತು. ಆ ಸಮಯದಲ್ಲಿ ಅದರಲ್ಲಿ ಪಾಲ್ಗೊಂಡಿದ್ದ ಎಲ್ಲ ಕಲಾವಿದರಲ್ಲಿ ತೀವ್ರ ಆತಂಕ, ನಿರಾಸೆ ಮನೆಮಾಡಿತು. ಭೈರಪ್ಪನವರ ಎದುರಲ್ಲಿ ಹೀಗಾಗಿಹೋಯ್ತಲ್ಲ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿತ್ತು.
ಆದರೆ ಭೈರಪ್ಪರು ಆ 'ಪರ್ವ'ದ ನಿರ್ದೇಶಕರಾದ ಪ್ರಕಾಶ್ ಬೆಳವಾಡಿಯವರಿಗೆ ಕೈಮುಗಿದು, ಅವರಿಗೆ ಧೈರ್ಯ ತುಂಬಿದ್ದು ಮಾತ್ರವಲ್ಲ, ಅಲ್ಲಿದ್ದ ಎಲ್ಲ ಕಲಾವಿದರ ಬಳಿಗೆ ಹೋಗಿ ಸಾಂತ್ವನ ಹೇಳಿದ್ದರು. ಮತ್ತೆ ಮರುನಾಟಕ ಏರ್ಪಡಿಸಿದಾಗ ಖುಷಿಯಿಂದ ಮತ್ತೆ ಬಂದ ಭೈರಪ್ಪನವರು, ನಾಟಕವನ್ನು ಕೊನೆಯವರೆಗೂ ನೋಡಿ, ಅದರಲ್ಲಿ ಅಭಿನಯಿಸಿದ ಎಲ್ಲ ಕಲಾವಿದರುಗಳನ್ನು ಒಬ್ಬೊಬ್ಬರನ್ನಾಗಿ ಭೇಟಿಯಾಗಿ ಅವರೆಲ್ಲರಿಗೂ ನಮನ ಸಲ್ಲಿಸಿದ್ದರು. ಬಹುಶಃ ಅದೇ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವೂ ಆಗಿತ್ತು' ಎಂದಿದ್ದಾರೆ ನಿರ್ದೇಶಕ ಪ್ರಕಾಶ್ ಬೆಳವಾಡಿ.
"ಪರ್ವ" ನಾಟಕವು ಮಹಾಭಾರತದ ಕಥಾವಸ್ತುವನ್ನು ಆಧರಿಸಿ, ಕನ್ನಡದಲ್ಲಿ ಮಾತ್ರವಲ್ಲ ಇಂಗ್ಲಿಷ್ ಹಾಗೂ ಬೇರೆ ಭಾಷೆಗಳಲ್ಲೂ ಜನಸಾಮಾನ್ಯರ ಹೃದಯಗಳನ್ನು ಗೆದ್ದಿದೆ. ಈ ನಾಟಕದ ಕಥೆ ಮಹಾಭಾರತದ ಪ್ರಮುಖ ಪಾತ್ರಧಾರಿಗಳಾದ ಕುಂತಿ, ದ್ರೌಪದಿಯನ್ನು ಕೇಂದ್ರವಾಗಿಸಿಕೊಂಡಿದ್ದು ಭೌತಿಕ, ಮಾನಸಿಕ ಸಂಕಟಗಳ ಸಂಕಲನವಾಗಿದೆ. ನಾಟಕದ ಮೂಲಕ, ಸಂಕೀರ್ಣ ಮಾನವೀಯ, ಧಾರ್ಮಿಕ ಮತ್ತು ನೈತಿಕ ವಿಚಾರಗಳನ್ನು ಹೊರಜಗತ್ತಿಗೆ ಅನಾವರಣ ಮಾಡಲಾಗಿದೆ.
ಎಸ್.ಎಲ್. ಭೈರಪ್ಪ 1958ರ ಭೀಮಕಾಯದಿಂದ ಪ್ರಾರಂಭಿಸಿದ ತಮ್ಮ ಸಾಹಿತ್ಯ ಯಾನದಲ್ಲಿ, ತತ್ವಶಾಸ್ತ್ರ, ಇತಿಹಾಸ, ಧರ್ಮ ಮತ್ತು ಮಾನವ ಮೌಲ್ಯಗಳ ಮೇಲೆ ಸುದೀರ್ಘ ಚಿಂತನೆಯಲ್ಲಿ ತೊಡಗಿದ್ದರು. ಧರ್ಮಶ್ರೀ, ಮತದಾನ, ವಂಶವೃಕ್ಷ ಮತ್ತು ಪರ್ವ ಹಿಂದಿನ ಪಶ್ಚಾತ್ತಾಪ ಮಾಡುವ ಕೃತಿಗಳಲ್ಲೂ ಭೈರಪ್ಪನವರ ಕಠಿಣ ವಿಶ್ಲೇಷಣೆ ಮತ್ತು ಪ್ರಶ್ನಿಸುವ ಸಾಹಸ ಕಂಡುಬರುತ್ತದೆ.
ಭೈರಪ್ಪರು 94 ವರ್ಷ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಅವರ ಸಾಹಿತ್ಯವು ಕನ್ನಡ ಸಾಹಿತ್ಯದ ಮಹತ್ವದ ಸ್ತಂಭವಾಗಿಯೇ ಉಳಿದಿವೆ. ಅವರು ಪಡೆದ ಪ್ರಮುಖ ಗೌರವಗಳು ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಪದ್ಮಶ್ರೀ ಮತ್ತು ಪದ್ಮಭೂಷಣ ಸೇರಿದಂತೆ ಬಹಳಷ್ಟು ಇವೆ. ಅವರ ಬರಹಗಳು ಮನಸ್ಸನ್ನು ಸ್ಪರ್ಶಿಸುವ, ಪ್ರಚೋದಿಸುವ ಮತ್ತು ಸಾಂಸ್ಕೃತಿಕ ಅನುಭವಗಳಿಗೆ ಮಾರ್ಗದರ್ಶನ ನೀಡುವ ನೈತಿಕತೆ ಮತ್ತು ತತ್ವಶಾಸ್ತ್ರವನ್ನು ಒಳಗೊಂಡಿವೆ.
"ಪರ್ವ" ನಾಟಕವು ಯಶಸ್ವಿ ಪ್ರದರ್ಶನ ಕಂಡಿದ್ದು, ಅದರಲ್ಲಿ ಬಹಳಷ್ಟು ಸಮಯ ಹಾಗೂ ಶ್ರಮ ಹೂಡಲಾಗಿದೆ. ಪ್ರಕಾಶ್ ಬೆಳವಾಡಿಯ ನಿರ್ದೇಶನದಲ್ಲಿ ಈ ನಾಟಕ ಮೊದಲು ಕನ್ನಡದಲ್ಲಿ ಆರಂಭವಾಯಿತು. ನಂತರ ಇಂಗ್ಲಿಷ್ ಭಾಷೆಗೆ ಪರಿವರ್ತಿಸಲಾಯಿತು. ಈ ನಾಟಕವು ಪ್ರಮುಖ ನಾಟಕ ಸಂಗೀತಗಾರರ ಸಹಾಯದಿಂದ ನೃತ್ಯ ಹಾಗೂ ಸಂಗೀತದ ರೂಪದಲ್ಲಿ ಇದೆ. ಪ್ರೇಕ್ಷಕರು ಆಳವಾದ ತಾತ್ವಿಕ ಮತ್ತು ಮಾನವೀಯ ಅನುಭವಗಳೊಂದಿಗೆ ನಾಟಕವನ್ನು ಅನುಭವಿಸಿ ಮೆಚ್ಚಿಕೊಂಡಿದ್ದಾರೆ.
ಕನ್ನಡಿಗರಿಗೆ ಮಾತ್ರವಲ್ಲದೆ, ಬೇರೆ ಭಾಷಾ ಜನರಿಗೂ ಕನ್ನಡ ಸಾಹಿತ್ಯ ಉಣಬಡಿಸಿದೆ!
ಈ ನಾಟಕವು ಕನ್ನಡಿಗರಿಗಾಗಿ ಮಾತ್ರವಲ್ಲದೆ, ಬೇರೆ ಭಾಷಾ ಜನರಿಗೂ ಕನ್ನಡ ಸಾಹಿತ್ಯದ ಧ್ರುವ ತಾರೆ ಎಸ್.ಎಲ್. ಭೈರಪ್ಪನವರ ಮಹತ್ವ ಮತ್ತು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ತಲುಪಿಸುವ ಪ್ರಮುಖ ಸಾಧನೆ ಹಾಗೂ ಸಾಧನವಾಗಿದೆ. ಇದು ಭೈರಪ್ಪನವರ ಸಾಹಿತ್ಯ ಸೃಷ್ಟಿಗೆ ಮಾನ್ಯತೆ ಹಾಗೂ ಸಾಂಸ್ಕೃತಿಕ ಒಡನಾಟದ ರೂಪಕದಂತಿದೆ.
ಡಾ ಎಸ್‌ಎಲ್ ಭೈರಪ್ಪನವರು ಎಂದೆಂದಿಗೂ ಜೀವಂತ!
ಈ ನಾಟಕದ ಮೂಲಕ ಭೈರಪ್ಪ ಅವರ ಸಾಹಿತ್ಯ ಪ್ರಪಂಚವನ್ನು ಸುಲಭವಾಗಿ ಜಗತ್ತಿಗೆ ತಲುಪಿಸುವ ಪ್ರಯತ್ನವಾಗಿದ್ದು ಎಲ್ಲರ ಗಮನ ಸೆಳೆದಿದೆ. ಆ ಮೂಲಕ ಕನ್ನಡ ನಾಟಕಕ್ಕೂ, ಸಾಹಿತ್ಯಕ್ಕೂ ಹೊಸ ಹೊಳಹು ಆರಂಭವಾಯಿತು ಎನ್ನಬಹುದು. ಅದರೆ, ಈಗ ಕನ್ನಡದ ಮೇರು ಸಾಹಿತಿ ಎಸ್‌ಎಲ್ ಭೈರಪ್ಪನವರು ಇಹಲೋಕ ತ್ಯಜಿಸಿದ್ದಾರೆ. ಆದರೆ, ಅವರು ತಮ್ಮ ಬರಹದ, ಬಹಳಷ್ಟು ಮೇರು ಕೃತಿಗಳ ಮೂಲಕ ಎಂದೆಂದಿಗೂ ಜೀವಂತವಾಗಿರುತ್ತಾರೆ.
