ಡಾ ರಾಜ್‌ಕುಮಾರ್ ನಟನೆಯ ಅನೇಕ ಚಿತ್ರಗಳು ಕಾದಂಬರಿ ಆಧಾರಿತವಾಗಿವೆ. ಅಂದಿನ ಕಾಲದಲ್ಲಿ ಕಾದಂಬರಿ ಬರೆಯುವುದು ಹಾಗೂ ಅದನ್ನು ಓದುವುದು ಒಂಥರಾ ಸಂಸ್ಕಾರ, ಸಂಸ್ಕೃತಿ ಎಂಬಂತಿತ್ತು. ಕಾದಂಬರಿ ಆಧಾರಿತ ಸಿನಿಮಾಗಳು ಎಂದರೆ ಅವುಗಳಿಗೆ ಸಾಮಾಜಿಕ ಹಾಗೂ ಸಾಂಪ್ರದಾಯಿಕ ಮೌಲ್ಯ ಹೆಚ್ಚು ಎಂಬಂಥ ವಾತಾವರಣ ಇತ್ತು.
ಕನ್ನಡ ಸಿನಿಮಾರಂಗದಲ್ಲಿ ಮೆರು ನಟ ಡಾ ರಾಜ್‌ಕುಮಾರ್ (Dr Rajkumar) ಹೆಸರು ಅಜರಾಮರ. ಸ್ಯಾಂಡಲ್‌ವುಡ್ ಆಳಿದ ಮೇರುನಟರಲ್ಲಿ ಡಾ ರಾಜ್‌ಕುಮಾರ್ ಅವರು ಮೊದಲಿಗರು. ಅವರ ಬಳಿಕ ನಟ ವಿಷ್ಣುವರ್ಧನ್, ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್ ಹೀಗೆ ಹಲವರು ಆ ಸ್ಥಾನದವನ್ನು ಅಲಂಕರಿಸಿದ್ದಾರೆ. ಡಾ ರಾಜ್‌ಕುಮಾರ್ ಅವರು ಅತಿ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ ದಾಖಲೆ ಹೊಂದಿದ್ದಾರೆ. ಅವರನ್ನು ಪ್ರೀತಿಯಿಂದ ಕನ್ನಡ ಸಿನಿರಸಿಕರು 'ಅಣ್ಣಾವ್ರು' ಎಂದು ಕರೆಯುತ್ತಾರೆ.
ಡಾ ರಾಜ್‌ಕುಮಾರ್ ನಟನೆಯ ಅನೇಕ ಚಿತ್ರಗಳು ಕಾದಂಬರಿ ಆಧಾರಿತವಾಗಿವೆ. ಅಂದಿನ ಕಾಲದಲ್ಲಿ ಕಾದಂಬರಿ ಬರೆಯುವುದು ಹಾಗೂ ಅದನ್ನು ಓದುವುದು ಒಂಥರಾ ಸಂಸ್ಕಾರ, ಸಂಸ್ಕೃತಿ ಎಂಬಂತಿತ್ತು. ಕಾದಂಬರಿ ಆಧಾರಿತ ಸಿನಿಮಾಗಳು ಎಂದರೆ ಅವುಗಳಿಗೆ ಸಾಮಾಜಿಕ ಹಾಗೂ ಸಾಂಪ್ರದಾಯಿಕ ಮೌಲ್ಯ ಹೆಚ್ಚು ಎಂಬಂಥಹ ವಾತಾವರಣ ಇತ್ತು. ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಕೂಡ ಕಾದಂಬರಿ ಆಧಾರಿತ ಸಿನಿಮಾಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದ್ದರು.
ಜನಪ್ರಿಯ ಕಾದಂಬರಿಯನ್ನೇ ಸಿನಿಮಾ ಮಾಡಲಾಗಿದೆ!
ಡಾ ರಾಜ್‌ಕುಮಾರ್ ನಟನೆಯಲ್ಲಿ ಮೂಡಿಬಂದಿದ್ದ ಹೆಚ್ಚಿನ ಸಿನಿಮಾಗಳಲ್ಲಿ ಸಾಕಷ್ಟು ಸಿನಿಮಾಗಳು ಕಾದಂಬರಿ ಆಧಾರಿತವಾಗಿದ್ದು, ಬಹಳಷ್ಟು ಜನಪ್ರಿಯತೆ ಪಡೆದಿವೆ. ಅವುಗಳಲ್ಲಿ ಅನೇಕ ಸಿನಿಮಾಗಳು ಜನಪ್ರಿಯ ಕಾದಂಬರಿಯನ್ನೇ ಸಿನಿಮಾ ಮಾಡಲಾಗಿದೆ. ಒಟ್ಟಿನಲ್ಲಿ ಜನಪ್ರಿಯ ಕಾದಂಬರಿ ಹಾಗೂ ಜನಪ್ರಿಯ ಸಿನಿಮಾ ಈ ಎರಡರ ಮೂಲಕವೂ ಸಂಬಂಧಪಟ್ಟ ಕಾದಂಬರಿಗಳು ಹಾಗೂ ಸಿನಿಮಾಗಳು ಕನ್ನಡಿಗರ ಹಾಗೂ ಪರಭಾಷಿಕರ ಮನಸ್ಸನ್ನು ಮುಟ್ಟಿವೆ.
ಡಾ ರಾಜ್‌ಕುಮಾರ್ ನಟನೆಯ, ಕಾದಂಬರಿ ಆಧಾರಿಯ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ..
ಬಂಗಾರದ ಮನುಷ್ಯ (ಟಿಕೆ ರಾಮರಾವ್- ಬಂಗಾರದ ಮನುಷ್ಯ ಕಾದಂಬರಿ)
ಮಯೂರ (ದೇವುಡು ನರಸಿಂಹ ಶಾಸ್ತ್ರಿ- ಮಯೂರ ಕಾದಂಬರಿ)
ಹುಲಿಯ ಹಾಲಿನ ಮೇವು (ಭಾರತಿಸುತ-ಹುಲಿಯ ಹಾಲಿನ ಮೇವು ಕಾದಂಬರಿ)
ಹೊಸ ಬೆಳಕು (ವಾಣಿ-ಹೊಸ ಬೆಳಕು ಕಾದಂಬರಿ)
ಸಮಯದ ಗೊಂಬೆ (ಚಿತ್ರಲೇಖಾ- ಸಮಯದ ಗೊಂಬೆ ಕಾದಂಬರಿ)
ಗಿರಿಕನ್ಯೆ (ಭಾರತಿಸುತ- ಗಿರಿಕನ್ನಿಕ ಕಾದಂಬರಿ)
ಸನಾದಿ ಅಪ್ಪಣ್ಣ (ಕೃಷ್ಣಮೂರ್ತಿ ಪುರಾಣಿಕ್- ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ)
ಸಿಪಾಯಿ ರಾಮು (ನುಗ್ಗೆಹಳ್ಳಿ ಪಂಕಜ- ಬರಲೇ ಇನ್ನು ಯಮುನೆ ಕಾದಂಬರಿ)
ಎರಡು ಕನಸು (ವಾಣಿ- ಎರಡು ಕನಸು)
ಜೀವನ ಚೈತ್ರ (ವಿಶಾಲಾಕ್ಷಿ ದಕ್ಷಿಣಾಮೂರ್ತಿ- ವ್ಯಾಪ್ತಿ ಪ್ರಾಪ್ತಿ ಕಾದಂಬರಿ)
ಇನ್ನೂ ಹಲವು ಸಿನಿಮಾಗಳು ಕಾದಂಬರಿ ಆಧಾರಿತವಾಗಿವೆ!
ಇವೆಲ್ಲಾ ಸೇರಿದಂತೆ, ಡಾ ರಾಜ್‌ಕುಮಾರ್ ನಟನೆಯ ಇನ್ನೂ ಹಲವು ಸಿನಿಮಾಗಳು ಕಾದಂಬರಿ ಆಧಾರಿತವಾಗಿವೆ. ಸೂಪರ್ ಹಿಟ್ ಸಿನಿಮಾಗಳಲ್ಲದೇ ಅಣ್ಣಾವ್ರ ನಟನೆಯ ಕಾದಂಬರಿ ಆಧಾರಿತ ಹಲವು ಸಿನಿಮಾಗಳು ಅಷ್ಟೇನೂ ಯಶಸ್ವಿಯಾಗಿಲ್ಲ. ಒಟ್ಟಾರೆಯಾಗಿ ಹೇಳಬೇಕು ಎಂದರೆ, ಡಾ ರಾಜ್‌ಕುಮಾರ್ ನಟನೆಯ ಹಲವು ಸಿನಿಮಾಗಳನ್ನು ಪ್ರಖ್ಯಾತ ಕಾದಂಬರಿ ಆಧರಿಸಿಯೇ ಚಿತ್ರಕತೆ ಬರೆಯಲಾಗಿದೆ.
