‘ಕಾಂತಾರ ಚಾಪ್ಟರ್ 1’ ಎಂಬ ಅದ್ಭುತ ಮಾಂತ್ರಿಕ ಜಗತ್ತು ಕಟ್ಟಿಕೊಟ್ಟಂತಹ ಸಿನಿಮಾ ಕೊಟ್ಟು ಸಕ್ಸಸ್ ಸಂಭ್ರಮದಲ್ಲಿರುವ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಸದ್ಯ ವಾಸವಿರುವ ಮನೆ ಗ್ರಾಂಡ್ ಅಲ್ಲದಿದ್ದರೂ ಅದು ಸಾಂಸ್ಕೃತಿಕ ಕಲಾಕೃತಿಯಂತಿದೆ.
ರಿಷಬ್ ಶೆಟ್ಟಿ ವಾಸವಿರುವ ಮನೆ ಕಲೆ, ತಂತ್ರಜ್ಞಾನದ ಮೇಳ!
'ಕಾಂತಾರ: ಚಾಪ್ಟರ್ 1' ಅಕ್ಟೋಬರ್ 2, 2025 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ನಡುವೆಯೇ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ವಾಸವಿರುವ ಈ ಮನೆ ಕೇವಲ ಒಂದು ಕಟ್ಟಡದಂತಿಲ್ಲ, ಬದಲಿಗೆ ಅದು ಕಲೆ, ಸಂಸ್ಕೃತಿ, ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಂಗಮವಾಗಿದೆ. ಈ ಮನೆ, ರಿಷಬ್ ಶೆಟ್ಟಿ ಅವರ ವ್ಯಕ್ತಿತ್ವದ ಪ್ರತಿಬಿಂಬದಂತಿದೆ.

ಸಾಂಪ್ರದಾಯಿಕ ಸ್ವಾಗತ, ಸ್ಮರಣೀಯ ಒಳಾಂಗಣ:
ಆ ಮನೆಗೆ ಕಾಲಿಡುತ್ತಿದ್ದಂತೆ ಅಲ್ಲಿ ನಮಗೆ ಪಾಸಿಟಿವಿಟಿ ವೈಬ್ ಟಚ್ ಆಗುತ್ತದೆ. ಕಾರಣ, ಆ ಮನೆಯನ್ನು ಅವರು ನಿರ್ವಹಿಸಿರುವ ರೀತಿ ಆ ರೀತಿಯಲ್ಲಿದೆ. ಆ ಮನೆಯಲ್ಲಿ ಸಹಜವಾಗಿ ಎಲ್ಲ ಹಿಂದೂಗಳ ಮನೆಗಳಲ್ಲಿ ಇರುವಂತೆ ತುಳಸಿಕಟ್ಟೆ, ದೇವರ ಮನೆ ಎಲ್ಲವೂ ಸುಸಜ್ಜಿತವಾಗಿರುವುದು ಮಾತ್ರವಲ್ಲ, ಮನೆಯಲ್ಲಿ ವಾಸವಿರುವವರು ಸುಸಂಕೃತ ಕುಟುಂಬ ಎಂಬುದು ಮನದಟ್ಟಾಗುವಂತಿದೆ.

ಕಾಂತಾರ ಸಿನಿಮಾ ನೋಡಿದ ಯಾರೇ ಆಗಲಿ, ಆ ಮನೆಯೊಳಗೆ ಹೋದರೆ, ರಿಷಬ್ ಶೆಟ್ಟಿಯವರು ಸದ್ಯ ವಾಸವಿರುವ ಆ ಮನೆಯಲ್ಲಿ ಕಾಂತಾರದ ಪಾಸಿಟಿವ್ ಎನರ್ಜಿಯ ಅನುಭವ ಆಗುತ್ತದೆ. ಅಷ್ಟರಮಟ್ಟಿಗೆ ಆ ಮನೆಯಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿ ಸಾಕಷ್ಟು ಪೂಜೆ-ಪುನಸ್ಕಾರಗಳು ನಡೆಯುತ್ತಲೇ ಇರುತ್ತವೆ ಎನ್ನೋದು ಎಂಥವರಿಗೂ ಅರ್ಥವಾಗುವಂತಿದೆ.
ಅಡುಗೆಮನೆ:
ಕನ್ನಡದ ಸ್ಟಾರ್ ನಟ-ನಿರ್ದೇಶಕರಾದ ರಿಷಬ್ ಶೆಟ್ಟಿಯವರು ವಾಸವಿರುವ ಆ ಮನೆಯ ಅಡುಗೆ ಮನೆ ಕೂಡ ಮೇಲ್ನೋಟಕ್ಕೆ ತುಂಬಾ ನಾರ್ಮಲ್ ಎನ್ನುವಂತಿದ್ದರೂ ಅದರೊಳಗೆ ಕೂಡ ಶಿಸ್ತು ಹಾಗೂ ಅಚ್ಚುಕಟ್ಟುತನ ಎದ್ದುಕಾಣುವಂತಿದೆ. ಶುಚಿತ್ವ ಹಾಗೂ ಚಿಕ್ಕಚಿಕ್ಕ ಸಂಗತಿಗಳಿಗೂ ಗಮನಕೊಟ್ಟು ಆ ಮನೆಯನ್ನು ರಿಷಬ್ ಶೆಟ್ಟಿಯವರ ಸಂಸಾರ ನಿರ್ವಹಿಸಿದೆ ಎಂಬುದು ಗಮನಿಸಬೇಕಾದ ಹಾಗೂ ಮೆಚ್ಚಬೇಕಾದ ಸಂಗತಿ.

ಮನೆಯ ಮೂಲೆಯನ್ನೂ ನಿರ್ವಹಿಸಿರುವ ರೀತಿಯನ್ನು ಗಮನವಿಟ್ಟು ನೋಡಿದರೆ, ಅಲ್ಲಿ ವಾಸವಿರುವ ಕುಟುಂಬ ಸಾಕಷ್ಟು ದೇವರು-ದೈವಗಳಲ್ಲಿ ನಂಬಿಕೆ ಉಳ್ಳವರು ಎಂಬುದನ್ನು ಧಾರಾಳವಾಗಿ ಹೇಳಬಹುದು. ಜೊತೆಗೆ, ಆ ಮನೆಯವರು ಸಂಸ್ಕಾರವಂತರು ಎಂಬುದು ಕೂಡ ಅರ್ಥವಾಗುವಂತಿದೆ.

ರಿಷಬ್ ಶೆಟ್ಟಿಯವರು ಸಹಜವಾಗಿಯೇ ದೈವ ಭಕ್ತರು, ಭೂತಾರಾಧನೆಗಳಲ್ಲಿ, ತುಳು ನಾಡಿನ ಸಂಪ್ರದಾಯ ಆಚರಣೆಗಳಲ್ಲಿ ತುಂಬಾ ನಂಬಿಕೆ ಉಳ್ಳವರು. ಜೊತೆಗೆ, ಅವರು ಶ್ರದ್ಧಾ-ಭಕ್ತಿಯಿಂದ ದಿನನಿತ್ಯ ಆಚರಣೆಯಲ್ಲಿ ಕೂಡ ತೊಡಗಿಸಿಕೊಂಡವರು.

ಪ್ರತಿಯೊಂದು ಹಬ್ಬ-ಹರಿದಿನಗಳಲ್ಲಿ ಅವರ ಸಂಸಾರ ಮನೆಯಲ್ಲಿ ಮಾತ್ರವಲ್ಲದೇ ಕೆಲವು ದೇವಸ್ಥಾನಗಳಿಗೂ ಹೋಗಿ ಪೂಜೆ, ಹವನಗಳಲ್ಲಿ ಭಾಗಿಯಾಗುತ್ತಾರೆ. ಅದಕ್ಕೆ ಸಂಬಂಧಪಟ್ಟ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲೂ ಓಡಾಡುತ್ತ ಹಲವರ ಮೆಚ್ಚುಗೆ ಗಳಿಸಿಕೊಳ್ಳುತ್ತವೆ.

