ಕನ್ನಡ ಸಿನಿಮಾರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಇದೀಗ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ಇಷ್ಟು ಕಾಲ ಹೆಚ್ಚಾಗಿ ಕಾಮಿಡಿ ಥ್ರಿಲ್ಲರ್ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸುತ್ತಿದ್ದ ರಾಜ್ ಬಿ ಶೆಟ್ಟಿ ಇದೀಗ ಹೊಸ ದಾರಿ ಹುಡುಕಿಕೊಂಡಿದ್ದಾರೆ.
ಹೊಸ ಸಾಹಸಕ್ಕೆ ಕೈ ಹಾಕಿದ ರಾಜ್ ಬಿ ಶೆಟ್ಟಿ
ಸು ಫ್ರಂ ಸೋ (Su from So) ಮೂಲಕ ಕನ್ನಡ ಸಿನಿಮಾರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿಯವರು (Raj B Shetty) ಇದೀಗ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ಇಷ್ಟು ಕಾಲ ಹೆಚ್ಚಾಗಿ ಕಾಮಿಡಿ ಥ್ರಿಲ್ಲರ್ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸುತ್ತಿದ್ದ ರಾಜ್ ಬಿ ಶೆಟ್ಟಿ ಇದೀಗ ಹೊಸ ದಾರಿ ಹುಡುಕಿಕೊಂಡಿದ್ದಾರೆ. ಹಾಗಿದ್ದರೆ ಅದೇನು? ಮುಂದೆ ನೋಡಿ..
ಹೌದು, ಸು ಫ್ರಂ ಸೋ ಬಳಿಕ ರಾಜ್ ಬಿ ಶೆಟ್ಟಿಯವರು ಸಸ್ಪೆನ್ಸ್-ಥ್ರಿಲ್ಲರ್ ಸ್ಟೋರಿಯೊಂದನ್ನು ಸಿನಿಮಾ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಹೆಚ್ಚಾಗಿ ಹೊರಗಡೆ ಎಲ್ಲೂ ಕಾಣಿಸಿಕೊಳ್ಳದೇ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರೆಯಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬರವಣಿಗೆ ಮುಗಿಸಿ ಮುಂದಿನ ವರ್ಷ, ಅಂದರೆ 2026ರ ಜನವರಿ ಅಥವಾ ಫೆಬ್ರವರಿಯಲ್ಲಿ ತಮ್ಮ ಸಿನಿಮಾದ ಶೂಟಿಂಗ್ ಶುರುಮಾಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಜ್ ಬಿ ಶೆಟ್ಟಿಯವರು ತಮ್ಮ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಈ ಬಾರಿಯೂ ತಾವೇ ನಟಿಸಲಿದ್ದು, ಉಳಿದ ಪಾತ್ರಗಳಿಗೆ ಸೂಕ್ತ ಕಲಾವಿದರನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಈ ಮೊದಲಿನಂತೆ ತುಳು ಮೂಲ, ಮಂಗಳೂರು ಮೂಲದ ಕಲಾವಿದರಿಗೇ ಹೆಚ್ಚಾಗಿ ಮಣೆ ಹಾಕುತ್ತಾರೋ ಅಥವಾ ಬೇರೆ ಕಲಾವಿದರಿಗೂ ಅವಕಾಶ ಸಿಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. ಅವರ ಸಿನಿಮಾಗೆ ಅವರದೇ ಆಯ್ಕೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ!
ರಾಜ್ ಬಿ ಶೆಟ್ಟಿ: ‘ಸು ಫ್ರಂ ಸೋ’ ಬಳಿಕ ಮುಂದೇನು?
ಒಂದು ಮೊಟ್ಟೆಯ ಕಥೆಯ ಮೂಲಕ ಕನ್ನಡದ ನಟ-ನಿರ್ದೇಶಕರಾಗಿ ಗಮನ ಸೆಳೆದ ರಾಜ್ ಬಿ ಶೆಟ್ಟಿಯವರು, ಬಳಿಕ ಗರುಡ ಗಮನ ವೃಷಭ ವಾಹನ, ಟೋಬಿ, ಸ್ವಾತಿ ಮುತ್ತಿನ ಮಳೆ ಹನಿಯೇ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಜೊತೆ ಅರ್ಜುನ್ ಜನ್ಯರ ಮೊಟ್ಟಮೊದಲ ನಿರ್ದೇಶನದ '45' ಸಿನಿಮಾದಲ್ಲೂ ನಟಿಸಿದಿದ್ದಾರೆ.
ಸಸ್ಪೆನ್ಸ್ -ಥ್ರಿಲ್ಲರ್ ಝೋನರ್!
ಸು ಫ್ರಂ ಸೋ ಸಿನಿಮಾ ಮೂಲಕ ಹೊಸ ಸಂಚಲನ ಸೃಷ್ಟಿಸಿ ಮತ್ತೆ ತಮ್ಮ ಇಮೇಜ್ ಹಾಗೂ ಕ್ರೇಜ್ ಹೆಚ್ಚಿಸಿಕೊಂಡಿರುವ ರಾಜ್ ಬಿ ಶೆಟ್ಟಿಯವರು ಇದೀಗ ಹೊಸ ಸಿನಿಮಾಗೆ ಸ್ಕೆಚ್ ಹಾಕಿದ್ದಾರೆ. ಮುಂಬರುವ ಅವರ ನಿರ್ದೇಶನದ ಸಿನಿಮಾ ಹೊಸ ಜೋನರ್, ಅಂದರೆ ಸಸ್ಪೆನ್ಸ್ ಥ್ರಿಲ್ಲರ್ ಆಗಲಿದ್ದು, ಅದಕ್ಕಾಗಿ ಬಹಳಷ್ಟು ತಯಾರಿ ನಡೆಸುತ್ತಿದ್ದಾರೆ. 'ಸು ಫ್ರಂ ಸೋ' ಸಿನಿಮಾ ಮೂಲಕ 100 ಕೋಟಿ ರೂ.ಗೂ ಅಧಿಕ ಲಾಭ ಮಾಡಿ, ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿರುವ ರಾಜ್ ಬಿ ಶೆಟ್ಟಿಯವರ ಮುಂದಿನ ಹೆಜ್ಜೆ ಬಗ್ಗೆ ಇದೀಗ ತೀವ್ರ ಕುತೂಹಲ ಸೃಷ್ಟಿಯಾಗಿದೆ.
