'ನೀವ್ಯಾಕೆ ಸುಮ್ನೆ ಟೈಂ ಪಾಸ್ ಮಾಡ್ತೀರಾ? ನೀವು ಆದಷ್ಟೂ ಬೇಗ 'ಕೆಜಿಎಫ್-3' ಸಿನಿಮಾ ಮಾಡಿ.. ನೀವು ಅದು ಬಿಟ್ಟು ಇನ್ನೇನು ಮಾಡೋಕೆ ಸಾಧ್ಯ?' ಇನ್ನೇನಿದ್ದರೂ ನಿಮಗೆ 'ಕೆಜಿಎಫ್-3' ಬಿಟ್ಟರೆ ಬೇರೆ ಆಯ್ಕೆ ಇಲ್ಲ..' ಈ ಮಾತುಗಳಿಗೆ ಕೋಪಗೊಂಡು ಗುಡುಗಿದೆ ನಟ ಯಶ್ ಹೇಳಿರೋದು ಹೀಗೆ…

ರಾಕಿಂಗ್ ಸ್ಟಾರ್ ಯಶ್ ಗುಡುಗು!

ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರು ಈಗ ಇಂಟರ್‌ನ್ಯಾಷನಲ್ ಪ್ರಸಿದ್ಧಿ ಪಡೆದು ಸಖತ್ ಮಿಂಚುತ್ತಿರೋ ನಟ. ಕೆಜಿಎಫ್ ಖ್ಯಾತಿಯ ನಟ ಯಶ್ ಅವರು ಸದ್ಯಕ್ಕೆ ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್' ಹಾಗೂ ಬಾಲಿವುಡ್ ಸಿನಿಮಾ 'ರಾಮಾಯಣ ಪಾರ್ಟ್-1' ನಲ್ಲಿ ನಟಿಸುತ್ತಿದ್ದಾರೆ. ರಾಮಾಯಣ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಯಶ್ ಅವರು ಕೆಜಿಎಫ್ ಸಿನಿಮಾ ಮೂಲಕ ಕನ್ನಡದ ನಟ ಎಂಬ ಹಣೆಪಟ್ಟಿಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದವರು. ಇಂದು ಯಶ್ ಮಾರುಕಟ್ಟೆ ಬಹಳಷ್ಟು ದೊಡ್ಡದಿದೆ.

ಯಶ್ ಈವೆಂಟ್‌ಗಳಿಗೆ ಜನ ಕಿಕ್ಕಿರಿದು ಸೇರುತ್ತಾರೆ!

ಕೆಜಿಎಫ್ ಸಿನಿಮಾದ ಬಳಿಕ ನಟ ಯಶ್ ಅವರು ಜಗತ್ತಿನ ಸಾಕಷ್ಟು ಸಂದರ್ಶನಗಳಲ್ಲಿ ಮಾತನ್ನಾಡಿದ್ದಾರೆ. ಕನ್ನಡ ಭಾಷೆಗೆ ಸೀಮಿತವಾಗಿದ್ದ ನಟ ಯಶ್ ಅವರು 'ಕೆಜಿಎಫ್ ಪಾರ್ಟ್ 1' ಹಾಗೂ 'ಕೆಜಿಎಫ್ ಪಾರ್ಟ್ 2' ಸಿನಿಮಾದ ಬಳಿಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದರು. ಅಲ್ಲಿಂದ ಮುಂದೆ ಯಶ್ ಸಂದರ್ಶನಗಳು ಹಾಗೂ ಯಶ್ ಈವೆಂಟ್‌ಗಳಿಗೆ ಜನ ಕಿಕ್ಕಿರಿದು ಸೇರುತ್ತಾರೆ. ಯಶ್ ಮಾತಿಗೆ ಚಪ್ಪಾಳೆ ತಟ್ಟಿ ತಲೆದೂಗುತ್ತಾರೆ. ಅಂಥದ್ದೇ ಸಂದರ್ಶನದಲ್ಲಿ ನಟ ಯಶ್ ಅವರು ಈ ಹಿಂದೆ ಆಡಿರೋ ಮಾತು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಅದೆಷ್ಟೋ ಜನರು ನನಗೆ ಈಗಲೂ ಕೇಳುತ್ತಾರೆ.. 'ನೀವ್ಯಾಕೆ ಸುಮ್ನೆ ಟೈಂ ಪಾಸ್ ಮಾಡ್ತೀರಾ? ನೀವು ಆದಷ್ಟೂ ಬೇಗ 'ಕೆಜಿಎಫ್-3' ಸಿನಿಮಾ ಮಾಡಿ.. ನೀವು ಅದು ಬಿಟ್ಟು ಇನ್ನೇನು ಮಾಡೋಕೆ ಸಾಧ್ಯ?' ಇನ್ನೇನಿದ್ದರೂ ನಿಮಗೆ 'ಕೆಜಿಎಫ್-3' ಬಿಟ್ಟರೆ ಬೇರೆ ಆಯ್ಕೆ ಇಲ್ಲ. ಯಾಕಂದ್ರೆ, ಜನರು ನಿಮ್ಮನ್ನು ಅದೇ ಪಾತ್ರ ಹಾಗು ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಒಪ್ಪಿಕೊಂಡಿದ್ದಾರೆ. ನೀವೀಗ ಅದು ಬಿಟ್ಟು ಬೇರೆ ಸಿನಿಮಾ ಮಾಡಿದ್ರೆ ಜನರು ಒಪ್ಪೋದು ಕಷ್ಟ. ಆದ್ರೆ, ನೀವೀಗ ಗಡ್ಡ ತೆಗೆದುಬಿಟ್ಟಿದೀರಾ, ಸಿನಿಮಾ ಪ್ರೇಕ್ಷಕರು ಗಡ್ಡ ಇಲ್ಲದೇ ನಿಮ್ಮನ್ನು ಒಪ್ಪಕೊಳ್ಳೊದು ಕಷ್ಟ..' ಹೀಗೇ ಜನರ, ಆಪ್ತರ ಮಾತುಗಳು ಸಾಗುತ್ತವೆ.

ಫ್ರೆಂಡ್ಸ್‌ ಸರ್ಕಲ್‌ನಿಂದಲೇ ಇಂತಹ ಮಾತುಗಳು ಪದೇಪದೇ ಕೇಳಿಬರುತ್ತವೆ!

ಅದರಲ್ಲೂ ಮುಖ್ಯವಾಗಿ, ನನ್ನ ಫ್ರೆಂಡ್ಸ್‌ ಸರ್ಕಲ್‌ನಿಂದಲೇ ಇಂತಹ ಮಾತುಗಳು ಪದೇಪದೇ ಕೇಳಿಬರುತ್ತವೆ. ನನಗೆ ಇಂತಹ ಮಾತುಗಳನ್ನು ಕೇಳಿದಾದ ತುಂಬಾ ಆಶ್ಚರ್ಯವಾಗುತ್ತೆ. ಕಾರಣ, ನಾನು ನನ್ನ ಸಕ್ಸಸ್‌ ಎಂಜಾಯ್ ಮಾಡಿಕೊಂಡು ಕುಳಿತುಕೊಂಡಿರಲು ಅಥವಾ ಅದನ್ನು ಎನ್‌ಕ್ಯಾಶ್ ಮಾಡಿಕೊಂಡಿರಲು ಬಂದಿಲ್ಲ. ನನ್ನ ಉದ್ದೇಶವೇನಿದ್ದರೂ ಹೊಸದನ್ನು ಹುಡುಕಿಕೊಂಡು ಹೋಗುವುದು, ಯಾರೂ ನುಗ್ಗದೇ ಇರುವಲ್ಲಿ ನುಗ್ಗಿ ಹೊಡೆಯೋದು. ಅದು ಬಿಟ್ಟು ನಾನು ಇರೋದನ್ನೇ ಅಡ್ಮಿನಿಸ್ಟ್ರೇಷನ್ ಮಾಡಿಕೊಂಡಿರಲು ಬಂದವನಲ್ಲ. ನನಗೆ ಹೊಸ ಆವಿಷ್ಕಾರ ಮಾಡಬೇಕಿದೆ' ಎಂದಿದ್ದಾರೆ ಪ್ರಪಂಚವೇ ತಿರುಗಿ ನೋಡುವಂತೆ ಬೆಳೆದ ನಟ ರಾಕಿಂಗ್ ಸ್ಟಾರ್ ಯಶ್.