ದೀಪಿಕಾ ಪಡುಕೋಣೆ ಇತ್ತೀಚಿಗೆ ಸಿನಿರಂಗದಲ್ಲಿ ಶಿಫ್ಟ್ ವ್ಯವಸ್ತೆ ಬರಬೇಕು ಅಂತ ಹೇಳಿದ್ದರ ಬಗ್ಗೆ ದೊಡ್ಡ ಚರ್ಚೆ ನಡೀತಾ ಇದೆ. ಈ ನಡುವೆ ದೀಪಿಕಾ ಪರ ಕಿರಿಕ್ ಬ್ಯೂಟಿ ರಶ್ಮಿಕಾ ಬ್ಯಾಟ್ ಬೀಸಿದ್ದಾರೆ. ದೀಪಿಕಾ ಪಡುಕೋಣೆ ಹೇಳಿದ 8 ಗಂಟೆ ಕೆಲಸದ ನೀತಿಯನ್ನು ರಶ್ಮಿಕಾ ಮಂದಣ್ಣ ಬಲವಾಗಿ ಬೆಂಬಲಿಸಿದ್ದಾರೆ.
ದೀಪಿಕಾ ಪರ ಬ್ಯಾಟ್ ಬೀಸಿದ ರಶ್ಮಿಕಾ..!
ದೀಪಿಕಾ ಪಡುಕೋಣೆ ಇತ್ತೀಚಿಗೆ ಸಿನಿರಂಗದಲ್ಲಿ ಶಿಫ್ಟ್ ವ್ಯವಸ್ತೆ ಬರಬೇಕು ಅಂತ ಹೇಳಿದ್ದರ ಬಗ್ಗೆ ದೊಡ್ಡ ಚರ್ಚೆ ನಡೀತಾ ಇದೆ. ಈ ನಡುವೆ ದೀಪಿಕಾ ಪರ ಕಿರಿಕ್ ಬ್ಯೂಟಿ ರಶ್ಮಿಕಾ ಬ್ಯಾಟ್ ಬೀಸಿದ್ದಾರೆ. ದೀಪಿಕಾ ಪಡುಕೋಣೆ ಹೇಳಿದ 8 ಗಂಟೆ ಕೆಲಸದ ನೀತಿಯನ್ನು ರಶ್ಮಿಕಾ ಮಂದಣ್ಣ ಬಲವಾಗಿ ಬೆಂಬಲಿಸಿದ್ದಾರೆ. ಕಾರ್ಪೊರೇಟ್ ವಲಯದಂತೆ ಸಿನಿಮಾ ರಂಗದಲ್ಲೂ 5 ದಿನ, 8 ಗಂಟೆ ಕೆಲಸದ ವ್ಯವಸ್ಥೆ ಜಾರಿಗೆ ಬರಬೇಕು ಅಂತ ರಶ್ಮಿಕಾ ಪ್ರತಿಪಾದಿಸಿದ್ದಾರೆ. ಇದರಿಂದ ಕಲಾವಿದರು, ತಂತ್ರಜ್ಞರಿಗೆ ಕುಟುಂಬ, ವೈಯಕ್ತಿಕ ಜೀವನಕ್ಕೆ ಸಮಯ ಸಿಗುತ್ತೆ ಅನ್ನೋದು ರಶ್ಮಿಕಾ ವಾದ.
***
ರಾಜೇಶ್ ಧ್ರುವ ‘ಪೀಟರ್' ಟೀಸರ್ ರಿಲೀಸ್..
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ನಟ ರಾಜೇಶ್ ಧ್ರುವ ಹೀರೋ ಆಗಿ ಅಭಿನಯಿಸಿರುವ ಹೊಸ ಸಿನಿಮಾ ಪೀಟರ್. ಈಗಾಗಲೆ ಪೋಸ್ಟರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಕುತೂಹಲಕಾರಿ ಟೀಸರ್ ಬಿಡುಗಡೆಯಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಹಾಗೂ ಫ್ಯಾಮಿಲಿ ಕಂಟೆಂಟ್ ಜೊತೆ ಈ ಸಿನಿಮಾ ಬರುತಿದ್ದೆ. ರಾಜೇಶ್ ಧ್ರುವ, ಪ್ರತಿಮಾ ನಾಯಕ್ , ಜಾನ್ವಿ ರಾಯಲ, ರಘು ಪಾಂಡೇಶ್ವರ ಇಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೂರದರ್ಶನ’ ಚಿತ್ರ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ.
***
ಮಹಾಕಾಳಿಯಾದ ಭೂಮಿ ಶೆಟ್ಟಿ..!
ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಜೈ ಹನುಮಾನ್ ಜೊತೆಗೆ ಬಾಲಯ್ಯನ ಪುತ್ರ ಮೋಕ್ಷಜ್ಞರನ್ನ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್‌ಹೀರೋ ಯೂನಿವರ್ಸ್‌ನ ಮೂರನೇ ಸಿನಿಮಾ ಘೋಷಣೆ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ವರ್ಮಾ. ಇದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಕಥೆಯನ್ನ ಹೊಂದಿರಲಿದೆ. ಈ ಚಿತ್ರಕ್ಕೆ ಮಹಾಕಾಳಿ ಎಂಬ ಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ. ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಇಲ್ಲಿ ಮಹಾಕಾಳಿ ಅವತಾರವೆತ್ತಿದ್ದಾರೆ. ಮಹಾಕಾಳಿ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಮಹಿಳಾ ನಿರ್ದೇಶಕಿ ಪೂಜಾ ಅಪರ್ಣಾ ಕೊಲ್ಲೂರು ನಿರ್ದೇಶನ ಮಾಡುತ್ತಿದ್ದಾರೆ.
***
‘ಆಪರೇಷನ್ ಡ್ರೀಮ್ ಥಿಯೇಟರ್'ನಲ್ಲಿ ಅಣ್ಣಾವ್ರ ಛಾಯೆ
ಹೇಮಂತ್ ರಾವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ನಲ್ಲಿ 1970ರ ದಶಕದ ಚಿತ್ರಗಳಲ್ಲಿ ಬಳಸುತ್ತಿದ್ದ ವಸ್ತ್ರ ವಿನ್ಯಾಸದಿಂದ ಹಿಡಿದು ಆ ಕಾಲದ ಲೆನ್ಸ್‌ಗಳನ್ನೂ ಬಳಸಿ ಶೂಟಿಂಗ್ ಮಾಡಲಾಗುತ್ತಿದೆ. 1970–1980ರ ದಶಕದಲ್ಲಿ ಡಾ.ರಾಜ್‌ಕುಮಾರ್ ಅವರ ಅನೇಕ ಚಿತ್ರಗಳಲ್ಲಿ ಪರಿಚಯಿಸಲಾದ ‘ವಿಂಟೇಜ್ ಲೊಮೋಸ್’ ಕ್ಯಾಮೆರಾವನ್ನ ಬಳಸಿ ಚಿತ್ರೀಕರಿಸಿರುವ ತಂಡ ಈಗಾಗಲೇ ಎರಡು ಹಂತಗಳ ಶೂಟಿಂಗ್ ಪೂರ್ಣಗೊಳಿಸಿದೆ. ಪ್ರತಿಯೊಂದು ಶಾಟ್, ಬೆಳಕು, ಸೆಟ್ ಎಲ್ಲವೂ ಅಣ್ಣಾವ್ರ ಬಾಂಡ್ ಚಿತ್ರಗಳಾದ ‘ಆಪರೇಷನ್ ಡೈಮಂಡ್ ರಾಕೆಟ್’ ಮತ್ತು ‘ಜೇಡರ ಬಲೆ’ ಚಿತ್ರಗಳ ತರ ಕಾಣ್ಬೇಕು ಅಂತ ಈ ನಿರ್ಧಾರ ಮಾಡಿದ್ದಾರೆ. ಶಿವರಾಜ್ ಕುಮಾರ್, ಧನಂಜಯ್ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಡಾ. ವೈಶಾಖ್ ಜೆ ಗೌಡ ನಿರ್ಮಾಣ ಮಾಡ್ತಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..
