ಲಕ್ಷ್ಮೀ ಬಾರಮ್ಮ ಲಕ್ಷ್ಮೀ ಉರ್ಫ್ ಭೂಮಿಕಾ ರಮೇಶ್ ಅವರು ತಮ್ಮ ಸೌಂದರ್ಯದ ಗುಟ್ಟನ್ನು ರಿವೀಲ್ ಮಾಡಿದ್ದಾರೆ. ಮುಖಕ್ಕೆ ಹೊಳಪು ಬರಲು ಮತ್ತು ಟ್ಯಾನ್ ತೆಗೆಯಲು ಅವರು ಹೇಳಿದ್ದೇನು?
ಲಕ್ಷ್ಮೀ ಬಾರಮ್ಮ ಸೀರಿಯಲ್ ಮುಗಿದು ತಿಂಗಳೇ ಕಳೆದಿದೆ. ಆದರೂ ಇದರ ಪಾತ್ರಧಾರಿಗಳನ್ನು ವೀಕ್ಷಕರು ಮರೆಯುತ್ತಿಲ್ಲ. ಅದರಲ್ಲಿಯೂ ಲಕ್ಷ್ಮೀ ಪಾತ್ರ ಜನರಿಗೆ ಅಚ್ಚುಮೆಚ್ಚಾಗಿತ್ತು. ಲಕ್ಷ್ಮೀ ಪಾತ್ರದ ಮೂಲಕ ಎಲ್ಲರ ಮನಸ್ಸನ್ನು ಗೆದ್ದವರು, ಭೂಮಿಕಾ ರಮೇಶ್. ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ ಆಗಿದ್ದಾರೆ ಭೂಮಿಕಾ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್. ಇವರು ಶಾಸ್ತ್ರೀಯ ನೃತ್ಯ ಮಾಡಲು ನಿಂತರೆ ಎಂಥವರೂ ಮೋಡಿಗೆ ಒಳಗಾಗುವುದು ಇದೆ. ಇಂತಿಪ್ಪ ನಟಿ ಇದೀಗ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು, ಮುಖಕ್ಕೆ ಹೊಳಪು ಬರಲು ಮನೆಯಲ್ಲಿಯೇ ಏನೇನು ಮಾಡ್ತೇವೆ ಎಂದು ಹೇಳಿದ್ದಾರೆ.
ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ, ಜೇನುತುಪ್ಪ, ಕಡ್ಲೆಹಿಟ್ಟು, ಕಾಫಿ ಪುಡಿ ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ ಮಿಕ್ಸ್ ಮಾಡಿಕೊಂಡು ಹಚ್ಚಿಕೊಳ್ತೇನೆ. ಇದರಿಂದ ಟ್ಯಾನ್ ರಿಮೂವ್ ಆಗುತ್ತದೆ ಎಂದಿದ್ದಾರೆ. ಇನ್ನು ಕಡಲೆಹಿಟ್ಟು ಮತ್ತು ಅರಿಶಿಣದ ಲೇಪನದಿಂದ ಮುಖಕ್ಕೆ ಗ್ಲೋ ಬರುತ್ತದೆ ಎಂದಿದ್ದಾರೆ. ಡ್ರೈ ಸ್ಕಿನ್ ಇದ್ದವರು ಕಡಲೆಹಿಟ್ಟಿನ ಬದಲು ಜೇನುತುಪ್ಪ ಮತ್ತು ಅರಿಶಿಣ ಹಚ್ಚಬಹುದು ಎಂದು ಭೂಮಿಕಾ ರಮೇಶ್ ಹೇಳಿದ್ದಾರೆ. ಇನ್ನು ಶೀಗೇಕಾಯಿಯನ್ನು ಸ್ವಲ್ಪವೇ ಉಜ್ಜಿ ತಲೆಗೆ ಮತ್ತು ಮುಖಕ್ಕೆ ಹಚ್ಚುವುದಾಗಿ ಹೇಳಿದ್ದಾರೆ. ಇದನ್ನು ತುಂಬಾ ಉಜ್ಜಿದರೆ ಉರಿಯುವ ಕಾರಣ, ಸ್ವಲ್ಪವೇ ಉಜ್ಜುವಂತೆಯೂ ನಟಿ ಸಲಹೆ ಕೊಟ್ಟಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್. 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್.
ಕೆಲ ದಿನಗಳ ಹಿಂದೆ ತಮ್ಮ ಭಾವಿ ಪತಿ ಹೇಗಿರಬೇಕು ಎಂದು ತಿಳಿಸುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದವರು ನಟಿ. ನನಗೆ ಫ್ಯಾಮಿಲಿ ತುಂಬಾ ಮುಖ್ಯ. ಆದ್ದರಿಂದ ನನ್ನ ಪತಿಯಾಗುವವನೂ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಅದು ಎಷ್ಟರಮಟ್ಟಿಗೆ ಎಂದರೆ,, ಯಾವುದೋ ಒಂದು ಸಂದರ್ಭದಲ್ಲಿ, ನಾನು ಅಥವಾ ಯಾರಾದರೂ ಒಂದು ಕಡೆ ನನ್ನ ಮತ್ತು ಅವನ ಅಮ್ಮನನ್ನು ನಿಲ್ಲಿಸಿಕೊಂಡು ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡು ಎಂದಾಗ, ಅವನ ಆಯ್ಕೆ ಅಮ್ಮ ಆಗಿರಬೇಕೇ ವಿನಾ ನಾನಲ್ಲ ಎಂದಿರುವ ನಟಿ ಅದಕ್ಕೆ ಕಾರಣವನ್ನೂ ನೋಡಿದ್ದಾರೆ. ಒಂದು ವೇಲೆ ಅವನಿಗೆ ಏನಾದ್ರೂ ನಾನು ಮುಖ್ಯ ಎನ್ನುವುದಾಗಿದ್ದರೆ ಖಂಡಿತಾ ಮುಂದೊಂದು ದಿನಾ ಅವನು ನನ್ನನ್ನೂ ಬಿಟ್ಟು ಬಿಡುತ್ತಾನೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ, ಮೊದಲಿನಿಂದಲೂ ಜೊತೆಗಿರುವ ಅಮ್ಮನನ್ನು ಬಿಟ್ಟು ಆಗ ನಡುವೆ ಕಟ್ಟಿಕೊಂಡಿರುವ ಹೆಂಡತಿಯ ಪರ ನಿಲ್ಲುತ್ತಾರೆ ಎಂದರೆ, ಭವಿಷ್ಯದಲ್ಲಿ ಆತ ಸಂದರ್ಭ ಬಂದರೆ ನನ್ನನ್ನೂ ಬಿಡುವುದಕ್ಕೆ ಹಿಂಜರಿಯುವುದಿಲ್ಲ ಎಂದಿದ್ದರು.
ಆದ್ದರಿಂದ ಮೊದಲು ಆತ ಅಪ್ಪ-ಅಮ್ಮನಿಗೆ ರಿಸ್ಪೆಕ್ಟ್ ಕೊಡಬೇಕು. ಫ್ಯಾಮಿಲಿ ಹುಡುಗ ಆಗಿರಬೇಕು. ಫ್ಯಾಮಿಲಿಗೆ ಸಮಯ ಕೊಡಬೇಕು. ಮುಂದೊಂದು ದಿನ ನನ್ನ ಅಪ್ಪ-ಅಮ್ಮನಿಗೆ ವಯಸ್ಸಾದಾಗ ಅವರನ್ನು ಮಕ್ಕಳ ರೀತಿ ನೋಡಿಕೊಳ್ಳಬೇಕಾದ ಸಮಯ ಬರುತ್ತದೆ. ಆಗ ನಾನು ನನ್ನ ಅಪ್ಪ-ಅಮ್ಮನಿಗೆ ತಾಯಿಯಾದರೆ ಆತ ತಂದೆ ಸ್ಥಾನ ಕೊಡುವವನಾಗಿರಬೇಕು ಎಂದು ನಟಿ ಹೇಳಿದ್ದರು.
