'ಹೇಗಿದ್ದೀರಾ? ತುಂಬಾ ಖುಷಿಯಾಯ್ತು ನೀವು ಕನ್ನಡದವರು ಅಂತ ತಿಳಿದು' ಅಂದಿದ್ದಾರೆ ಶ್ರೀನಿಧಿ ಶೆಟ್ಟಿ. ಅದಕ್ಕೆ ಆ ಕನ್ನಡಿಗ ಸಿಂಗರ್, 'ಹೌದು ನಾನು ಕನ್ನಡದವನು. ಇಲ್ಲಿ ಬಂದು ವಾಸಿಸಲು ಶುರು ಮಾಡಿದ ಮೇಲೆ ಇಲ್ಲಿನ ತೆಲುಗು ಭಾಷೆ ಕಲಿತು ಅದರಲ್ಲೇ ಹಾಡುತ್ತಿದ್ದೇನೆ' ಎಂದಿದ್ದಾರೆ.
ಕನ್ನಡದ ಹುಡುಗಿ, ಕೆಜಿಎಫ್ ಬೆಡಗಿ ನಟಿ ಶ್ರೀನಿಧಿ ಶೆಟ್ಟಿ!
ಕನ್ನಡದ ಹುಡುಗಿ, ಕೆಜಿಎಫ್ ಬೆಡಗಿ ನಟಿ ಶ್ರೀನಿಧಿ ಶೆಟ್ಟಿಯವರು (Srinidhi Shetty) ಸದ್ಯ ತೆಲುಗು ನೆಲದಲ್ಲಿ ಮಿಂಚುತ್ತಿದ್ದಾರೆ. ಏನೆನೋ ಅರ್ಥ ಮಾಡಿಕೊಳ್ಳೋದು ಬೇಡ, ಶ್ರೀನಿಧಿ ಅಲ್ಲಿ ತೆಲುಗು ರಿಯಾಲಿಟಿ ಶೋ 'ತೆಲುಗು ಇಂಡಿಯನ್ ಐಡಲ್' ಶೋದಲ್ಲಿ ಭಾಗವಹಿಸಿದ್ದಾರೆ. ಅಚ್ಚರಿ ಏನೆಂದರೆ, ಅವರಲ್ಲಿ ಕನ್ನಡಲ್ಲಿ ಮಾತನ್ನಾಡಿದ್ದಾರೆ. ತೆಲುಗು ಶೋದಲ್ಲಿ ಅವರು ಕನ್ನಡದಲ್ಲಿ ಮಾತನ್ನಾಡಲು ಕಾರಣರಾಗಿದ್ದು ಅಲ್ಲಿನ ಸ್ಪರ್ಧಿ ಕನ್ನಡಿಗ ಹುಡುಗ ಎಂಬುದು ವಿಶೇಷ!
ತೆಲುಗು ಇಂಡಿಯನ್ ಐಡಲ್!
ಹೌದು, ತೆಲುಗು ಇಂಡಿಯನ್ ಐಡಲ್‌ನಲ್ಲಿ, ಕನ್ನಡದ ಹುಡುಗ ತೆಲುಗು ಭಾಷೆಕಲಿತು ಹಾಡುತ್ತಿದ್ದಾರಂತೆ. ಈ ಸಂಗತಿಯನ್ನು ನಟಿ ಶ್ರೀನಿಧಿ ಶೆಟ್ಟಿಯವರ ಮುಂದೆ ಅದೇ ಸಿಂಗರ್ ಹೇಳಿಕೊಂಡಿದ್ದಾರೆ. ನಿರೂಪಕರು ಅಲ್ಲಿ ಶ್ರೀನಿಧಿ ಶೆಟ್ಟಿಯವರ ಜೊತೆ ಮಾತನ್ನಾಡುತ್ತ 'ಹಾಯ್ ಶ್ರೀನಿಧಿ ಶೆಟ್ಟಿಯವರೇ, ಇಲ್ಲಿ ನಮ್ಮ ತೆಲುಗು ಶೋದಲ್ಲಿ ಈಗಷ್ಟೇ ನೀವು ಕೇಳಿದ ಹಾಡು ಹಾಡಿದ್ದು ನಿಮ್ಮ ಕನ್ನಡದ ಹುಡುಗ' ಎಂದಿದ್ದಾರೆ. ಅದನ್ನು ಕೇಳಿ ಮುಖವರಳಿಸಿದ ನಟಿ ಶ್ರೀನಿಧಿ ಶೆಟ್ಟಿ ಆ ಸ್ಪರ್ಧಿ ಜೊತೆ ಮಾತುಕತೆ ನಡಸಿದ್ದಾರೆ.
'ಹೇಗಿದ್ದೀರಾ? ತುಂಬಾ ಖುಷಿಯಾಯ್ತು ನೀವು ಕನ್ನಡದವರು ಅಂತ ತಿಳಿದು' ಅಂದಿದ್ದಾರೆ ಶ್ರೀನಿಧಿ ಶೆಟ್ಟಿ. ಅದಕ್ಕೆ ಆ ಕನ್ನಡಿಗ ಸಿಂಗರ್, 'ಹೌದು ನಾನು ಕನ್ನಡದವನು. ಇಲ್ಲಿ ಬಂದು ವಾಸಿಸಲು ಶುರು ಮಾಡಿದ ಮೇಲೆ ಇಲ್ಲಿನ ತೆಲುಗು ಭಾಷೆ ಕಲಿತು ಅದರಲ್ಲೇ ಹಾಡುತ್ತಿದ್ದೇನೆ' ಎಂದಿದ್ದಾರೆ. ಅದನ್ನು ಕೇಳಿ ಖುಷಿಯಿಂದ ನಟಿ ಶ್ರೀನಿಧಿ ಶೆಟ್ಟಿಯವರು 'ನಮ್ಮ ಕನ್ನಡದ ಹುಡುಗರು ಎಲ್ಲಿದ್ರೂ ' ನಮ್ಮ ಕನ್ನಡ ಬಾಯ್ಸ್ ಮೇಕಿಂಗ್ ಪ್ರೌಡ್ ಎವ್ರಿವೇರ್' ಎಂದು ಹೇಳಿ 'ಜೈ' ಎನ್ನುವಂತೆ ಕೈ ಎತ್ತಿ ಹೇಳಿದ್ದಾರೆ ಶ್ರೀನಿಧಿ ಶೆಟ್ಟಿ.
ತೆಲುಗು ಹಾಗೂ ತಮಿಳಿನಲ್ಲೂ ಅವಕಾಶ!
ಅಂದಹಾಗೆ, ನಟಿ ಶ್ರೀನಿಧಿ ಶೆಟ್ಟಿಯವರು ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್' ಸಿನಿಮಾದ ಎರಡೂ ಚಾಪ್ಟರ್‌ಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಇದೀಗ ತೆಲುಗು ಹಾಗೂ ತಮಿಳಿನಲ್ಲೂ ಅವಕಾಶ ಪಡೆಯುತ್ತಿದ್ದಾರೆ. ಮುಂದೆ, ಕನ್ನಡದ ಸ್ಟಾರ್, ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಅವರಂತೇ ನ್ಯಾಷನಲ್ ಲೆವೆಲ್‌ನಲ್ಲಿ ಮಿಂಚಿದರೂ ಅಚ್ಚರಿಯಲ್ಲ. ಈಗಾಗಲೇ ಅವರು ಪ್ಯಾನ್ ಇಂಡಿಯಾ ನಟಿಯೇ ಹೌದು! ಆದರೆ, ಸದ್ಯಕ್ಕೆ ಅವರು ಬಾಲಿವುಡ್ ಸಿನಿಮಾದಲ್ಲಿ ನಟಿಸಿಲ್ಲ.
