ನೆಟ್‌ಫ್ಲಿಕ್ಸ್ ಸರಣಿಯಲ್ಲಿ ತನ್ನ ಬಗ್ಗೆ ಮಾನಹಾನಿಕರವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಸಮೀರ್ ವಾಂಖೆಡೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಮೀರ್ ತನ್ನ ಅರ್ಜಿಯಲ್ಲಿ, 'ಈ ಶೋದ ಒಂದು ನಿರ್ದಿಷ್ಟ ದೃಶ್ಯವು ತನ್ನನ್ನು 'ಅಪಹಾಸ್ಯ' ಮಾಡುತ್ತದೆ ಎಂದು ಆರೋಪಿಸಿದ್ದಾರೆ.

ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ದಿ ಬಾ***ಡ್ಸ್ ಆಫ್ ಬಾಲಿವುಡ್' (The Bads of Bollywood) ನಲ್ಲಿ ಸಮೀರ್ ವಾಂಖೆಡೆ (Sameer Wankhade) ಮತ್ತು ಡ್ರಗ್ ಪ್ರಕರಣದ ಬಗ್ಗೆ ಹಾಸ್ಯಾಸ್ಪದವಾಗಿ ಟೀಕಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಹಾಗೂ ಆರ್ಯನ್‌ ವಿರುದ್ಧ ವಾಂಖಡೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ದೆಹಲಿ ಹೈಕೋರ್ಟ್‌ನಲ್ಲಿ "ಶಾರುಖ್ ಖಾನ್ ಮತ್ತು ಗೌರಿ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ಶಾಶ್ವತ ಮತ್ತು ಕಡ್ಡಾಯ ತಡೆಯಾಜ್ಞೆ, ಘೋಷಣೆ ಮತ್ತು ಹಾನಿ" ರೂಪದಲ್ಲಿ ಪರಿಹಾರಗಳನ್ನು ಕೋರಿ ಸಮೀರ್ ವಾಂಖೆಡೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನೆಟ್‌ಫ್ಲಿಕ್ಸ್ ಸರಣಿಯಲ್ಲಿ ತನ್ನ ಬಗ್ಗೆ ಮಾನಹಾನಿಕರವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಸಮೀರ್ ವಾಂಖೆಡೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಮೀರ್ ತನ್ನ ಅರ್ಜಿಯಲ್ಲಿ, 'ಈ ಶೋದ ಒಂದು ನಿರ್ದಿಷ್ಟ ದೃಶ್ಯವು ತನ್ನನ್ನು 'ಅಪಹಾಸ್ಯ' ಮಾಡುತ್ತದೆ ಎಂದು ಆರೋಪಿಸಿದ್ದು, ತನ್ನ ಖ್ಯಾತಿಗೆ ಹಾನಿ ಮಾಡುವ ಗುರಿಯನ್ನು ಹೊಂದಿರುವ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟಕರ ವಿಷಯವನ್ನು ಒಳಗೊಂಡಿದೆ" ಎಂದು ಹೇಳಿದ್ದಾರೆ.

ಆರ್ಯನ್ ಖಾನ್ ನಿರ್ದೇಶನದ ಈ ವೆಬ್‌ ಸೀರಿಸ್‌ "ಮಾದಕವಸ್ತು ವಿರೋಧಿ ಜಾರಿ ಸಂಸ್ಥೆಗಳನ್ನು" ನಕಾರಾತ್ಮಕ ಬೆಳಕಿನಲ್ಲಿ ಚಿತ್ರಿಸುತ್ತದೆ ಮತ್ತು "ಕಾನೂನು ಜಾರಿ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ನಾಶಪಡಿಸುತ್ತದೆ" ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ. 'ಸತ್ಯಮೇವ ಜಯತೇ" ಎಂಬ ಘೋಷಣೆಯನ್ನು ಪಠಿಸಿದ ನಂತರ ಪಾತ್ರವೊಂದು ಮಧ್ಯದ ಬೆರಳನ್ನು ತೋರಿಸುವ ಮೂಲಕ ಅಶ್ಲೀಲ ಸನ್ನೆ ಮಾಡುವುದನ್ನು ಈ ಮೊಕದ್ದಮೆಯಲ್ಲಿ ಪ್ರಶ್ನಿಸಲಾಗಿದೆ". ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ದೇಣಿಗೆ ನೀಡಲು ₹ 2 ಕೋಟಿ ಪರಿಹಾರ ನೀಡಬೇಕೆಂದು ಮೊಕದ್ದಮೆಯಲ್ಲಿ ಕೋರಲಾಗಿದೆ.

ಈ ಕಾರ್ಯಕ್ರಮದ ಒಂದು ಪಾತ್ರವು ಮಾಜಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಯಂತೆಯೇ ಕಾಣುವುದನ್ನು, ಈ ಹಿಂದೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಿಸಿದ್ದರು. ಮೊದಲ ಕಂತಿನಲ್ಲಿಯೇ ಈ ಪಾತ್ರವನ್ನು ಪರಿಚಯಿಸಲಾಗುತ್ತದೆ. ಒಬ್ಬ ಜೋರಾಗಿ ಮಾತನಾಡುವ ಮತ್ತು ನಿಷ್ಠುರ ಅಧಿಕಾರಿ ಪೊಲೀಸ್ ಜೀಪಿನಿಂದ ಇಳಿದು ಮಾದಕ ದ್ರವ್ಯಗಳ ವಿರುದ್ಧದ ಯುದ್ಧದ ಬಗ್ಗೆ ಕೂಗಾಡುತ್ತಾ, ಇಡೀ ಚಲನಚಿತ್ರೋದ್ಯಮವು ಮಾದಕ ದ್ರವ್ಯಗಳ ಸಮಸ್ಯೆಯಿಂದ ತುಂಬಿದೆ ಎಂದು ಕರೆದರು.

ಮಾದಕ ದ್ರವ್ಯಗಳ ವಿರುದ್ಧದ ಯುದ್ಧ!

ಅವರು 'ಮಾದಕ ದ್ರವ್ಯಗಳ ವಿರುದ್ಧದ ಯುದ್ಧ' ಮತ್ತು 'NCG' ಯ ಭಾಗವೆಂದು ಹೇಳಿಕೊಳ್ಳುತ್ತಾರೆ. ಅವರು ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾರೆ, ತೆಳ್ಳಗಿನ ಮೈಕಟ್ಟು ಮತ್ತು ಸಣ್ಣ ಕೂದಲನ್ನು ಹೊಂದಿದ್ದಾರೆ. ಇದು ವಾಂಖೆಡೆ ಅವರಂತೆಯೇ ತೋರುತ್ತದೆ. ಅಕ್ಟೋಬರ್ 2021 ರಲ್ಲಿ, ಮುಂಬೈ ಕರಾವಳಿಯಲ್ಲಿ ಗೋವಾಕ್ಕೆ ತೆರಳುತ್ತಿದ್ದ ಕಾರ್ಡೆಲಿಯಾ ಎಂಪ್ರೆಸ್ ಕ್ರೂಸ್ ಹಡಗಿನಲ್ಲಿ ನಡೆದ ರೇವ್ ಪಾರ್ಟಿಯ ಮೇಲೆ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ದಾಳಿ ಮಾಡಿದ ನಂತರ, ಆರ್ಯನ್ ಹೆಸರು ಕೇಳಿ ಬಂದಿತ್ತು.

ಸಿನಿಮಾ ಮಾಡಿದರೆ ಸೆನ್ಸರ್ ಮಂಡಳಿಯ ರೂಲ್ಸ್ ಫಾಲೋ ಮಾಡಬೇಕಾಗುತ್ತದೆ!

ಸದ್ಯ ಈ ಸಂಗತಿ ತೀವ್ರ ಕುತೂಹಲ ಕೆರಳಿಸಿದೆ. ಆರ್ಯನ್ ಖಾನ್ ಬೇಕಂತಲೇ ಈ ವಿಷಯವನ್ನು ವೆಬ್ ಸಿರೀಸ್‌ಗೆ ಆಯ್ಕೆ ಮಾಡಿಕೊಂಡು, ಅದನ್ನು ವೆಬ್ ಸಿರೀಸ್ ಮೂಲಕ ಜಗತ್ತಿನ ಮುಂದೆ ಇಟ್ಟಿದ್ದಾರೆ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಕಾರಣ, ಸಿನಿಮಾ ಮಾಡಿದರೆ ಸೆನ್ಸರ್ ಮಂಡಳಿಯ ರೂಲ್ಸ್ ಫಾಲೋ ಮಾಡಬೇಕಾಗುತ್ತದೆ. ಆದರೆ, ವಬ್ ಸಿರೀಸ್‌ನಲ್ಲಿ ಆ ಸಮಸ್ಯೆ ಇಲ್ಲ. ಹೀಗಾಗಿಯೇ ಆರ್ಯನ್ ಖಾನ್ ಈ ದಾರಿ ಹಿಡಿದು, ಸಮೀರ್ ವಾಂಖೆಡೆ ಅವರ ವಿರುದ್ಧ ಈ ಹಿಂದಿನ ಘಟನೆಯ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮುಂದೆ ಈ ಕೇಸ್ ಯಾವ ದಾರಿ ಹಿಡಿಯಲಿದೆ ಎಂಬುನ್ನು ಕಾದು ನೋಡಬೇಕಿದೆ!