ಶಕುಂತಲಾ ತನಗೆ ಮಾಡಿರುವ ಮೋಸದ ಅರಿವಾಗಿ ಪತ್ನಿ-ಮಗನನ್ನು ಹುಡುಕಿ ಗೌತಮ್​ ಎಲ್ಲಾ ಆಸ್ತಿ ಬಿಟ್ಟು ಹೊರಟಿದ್ದಾನೆ. ಡ್ರೈವರ್​ ಆಗಿ ಕೆಲಸಕ್ಕೆ ಸೇರಿದ್ದಾನೆ. ಇದೀಗ ಕೊಡಗಿನ ಸಿರಿಯಲ್ಲಿ ಅಮೃತಧಾರೆ ಸೀರಿಯಲ್​ ಪಾರ್ಟ್​-2 ಶುರುವಾಗಲಿದೆ. ಏನಿದು? 

ಅಮೃತಧಾರೆಯ (Amruthadhaare) ಭೂಮಿಕಾ ಮನೆಬಿಟ್ಟಾಗಿದೆ. ಅವಳಿ ಮಕ್ಕಳ ಸತ್ಯ ಗೊತ್ತಾಗುತ್ತಿದ್ದಂತೆಯೇ ಅತ್ತೆ ಮೇಲಿನ ಮಾತಿಗೆ ಭೂಮಿಕಾ ಗೌತಮ್​ಗೂ ಹೇಳದೇ ಮನೆ ಬಿಟ್ಟು ಹೋಗಿದ್ದಾಳೆ. ಶಕುಂತಲಾ ವಿರುದ್ಧ ಸಿಡಿದು ನಿಂತು ಬುದ್ಧಿ ಕಲಿಸುತ್ತಾಳೆ ಎಂದುಕೊಂಡರೆ ಗಂಡನನ್ನೇ ದೂರ ಮಾಡಿ ಮನೆಬಿಟ್ಟು ಹೋಗಿಯೇ ಬಿಟ್ಟಿದ್ದಾಳೆ! ಪಾಪಿ ಶಕುಂತಲಾಗೆ ಸದ್ಯ ಜಯ ಸಿಕ್ಕಿದೆ. ಅತ್ತ ಗೌತಮ್​ಗೂ ವಿಷಯ ಗೊತ್ತಾಗಿ, ಆಸ್ತಿಗಾಗಿ ಹೀಗೆಲ್ಲಾ ಮಾಡ್ತಿರೋದು ತಿಳಿದು ಎಲ್ಲಾ ಆಸ್ತಿಯನ್ನೂ ಶಕುಂತಲಾಗೇ ಬರೆದು ಕೊಟ್ಟು ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಐದು ವರ್ಷಗಳಿಂದ ಅಲೆದೂ ಅಲೆದೂ ಸುಸ್ತಾಗಿದ್ದಾನೆ ಗೌತಮ. ಐದು ವರ್ಷ ಕಳೆದರೂ ಆತನಿಗೆ ಭೂಮಿಕಾ ಮತ್ತು ಮಗ ಸಿಕ್ಕಿಲ್ಲ.

ಡ್ರೈವರ್​ ಆದ ಗೌತಮ್​

ಅದರ ನಡುವೆಯೇ ಡ್ರೈವರ್​ ಕೆಲಸದ ನಿಮಿತ್ತ ಗೌತಮ್​ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಹೋಗಿದ್ದಾನೆ. ಸಹಸ್ರಾರು ಕೋಟಿ ರೂಪಾಯಿ ಒಡೆಯನಾಗಿರುವ ಗೌತಮ್​, ಇದೀಗ ಡ್ರೈವರ್​ ಆಗಿ ಕೆಲಸಕ್ಕೆ ಸೇರಿಕೊಂಡಿರುವುದು ಅಭಿಮಾನಿಗಳಿಗೆ ಸಹಿಸಲು ಆಗುತ್ತಿಲ್ಲ. ಅಷ್ಟೂ ಆಸ್ತಿಯನ್ನು ಶಕುಂತಲಾಗೆ ಬರೆದುಕೊಟ್ಟು ಹೆತ್ತ ಅಮ್ಮನನ್ನೇ ಬಿಟ್ಟು ಬಂದಿರುವುದಕ್ಕೆ ಗೌತಮ್​ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ ನೆಟ್ಟಿಗರು. ಆದರೆ ಸೀರಿಯಲ್​ ಮುಂದೆ ಹೋಗಬೇಕಲ್ಲಾ? ಅದಕ್ಕಾಗಿ ಟ್ವಿಸ್ಟ್​ ಕೊಟ್ಟಾಗಿದೆ.

ಕುಶಾಲನಗರದಲ್ಲಿ ಮಿಲನ

ಕೊನೆಗೊಂದು ಸಮಾಧಾನದ ಸಂಗತಿ ಎಂದರೆ, ಕುಶಾಲನಗರದಲ್ಲಿಯೇ ಭೂಮಿಕಾ ಮಗನ ಜೊತೆ ಇರುವಂತೆ ತೋರಿಸಲಾಗಿದೆ. ಅಲ್ಲಿಗೆ ಕೊಡಗಿನ ಸಿರಿಯಲ್ಲಿ ಅಮೃತಧಾರೆ ಪಾರ್ಟ್​-2 (Amruthadhaare Part-2) ಶುರುವಾಗುವುದು ತಿಳಿಯುತ್ತಿದೆ. ಈ ಹಿಂದೆ ವಾಹಿನಿ ಬಿಡುಗಡೆ ಮಾಡಿದ್ದ ಪ್ರೊಮೋದಲ್ಲಿ ಗೌತಮ್​ಗೆ ಭೂಮಿಕಾ ಮತ್ತು ಮಗ ಸಿಕ್ಕಿರುವಂತೆ ತೋರಿಸಲಾಗಿತ್ತು. ಆದರೆ ಗಂಡನನ್ನು ನೋಡಿದ್ದ ಭೂಮಿಕಾ ಕೋಪ ಮಾಡಿಕೊಂಡಿದ್ದಳು. ಈ ಕೋಪ ಹೇಗೋ ಶಾಂತವಾಗುತ್ತೆ ಬಿಡಿ. ಒಟ್ಟಿನಲ್ಲಿ ಇಬ್ಬರ ಜೀವನದ 2ನೇ ಅಧ್ಯಾಯ ಕೊಡಗಿನ (Kodagu) ಪರಿಸರದಲ್ಲಿ ಶುರುವಾಗುವುದು ನಿಚ್ಚಳವಾಗಿದೆ.

ಐದು ವರ್ಷಗಳ ಬಳಿಕ ಮುಖಾಮುಖಿ

ಐದು ವರ್ಷಗಳ ಬಳಿಕ ಪತಿ-ಪತ್ನಿ ಮುಖಾಮುಖಿಯಾದಾಗ ಏನಾಗುತ್ತದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಎಲ್ಲಿಯೂ ಬೋರಾಗದಂತೆ ಧಾರಾವಾಹಿಯ ಪ್ರಸಾರ ಆಗ್ತಿರೋದರಿಂದ ವೀಕ್ಷಕರು ಕೂಡ ಸಕತ್​ ಖುಷಿ ಪಟ್ಟುಕೊಂಡು ವೀಕ್ಷಿಸುತ್ತಿದ್ದಾರೆ. ಶಕುಂತಲಾ ಮತ್ತು ಜೈದೇವನ ಆಸ್ತಿಯನ್ನು ಕಿತ್ತುಕೊಂಡು ಅವರನ್ನು ಬೀದಿಪಾಲು ಮಾಡಿ ಬರಬೇಕಿತ್ತು ಎಂದು ಹಲವರು ಡೈರೆಕ್ಷನ್​ ನೀಡುತ್ತಿದ್ದಾರೆ. ಮಾಡಿದ ಮೋಸಕ್ಕೆ ಅವರನ್ನು ಜೈಲಿಗೆ ಅಟ್ಟಿ ಬರಬೇಕಿತ್ತು ಎನ್ನುವುದು ಸೀರಿಯಲ್​ ಪ್ರೇಮಿಗಳ ಆಸೆಯಾಗಿದೆ. ಆದರೆ ಗೌತಮ್​ ಪತ್ನಿಯಾಗಿ ಅಷ್ಟು ವರ್ಷಗಳ ನಂತರ ಸಿಕ್ಕ ಅಮ್ಮ, ತಂಗಿಯನ್ನೂ ಬಿಟ್ಟು ಬಂದಿರುವುದು ಯಾಕೋ ಅರಗಿಸಿಕೊಳ್ಳಲು ಆಗುತ್ತಿಲ್ಲ ವೀಕ್ಷಕರಿಗೆ. ಆದರೂ ಕೊನೆಗೆ ಸೀರಿಯಲ್​ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

View post on Instagram