'ಹೊಸ ಕಾವ್ಯ' ಹೆಸರಿನ ಈ ಚಿತ್ರವು 1986ರಲ್ಲಿ ಬಿಡುಗಡೆಯಾಗಿದ್ದು, ಶಿವಚಂದ್ರನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಹಾಗೂ ನಿರ್ಮಾಪಕಿಯಾಗಿ ಲಕ್ಷ್ಮೀ ಅವರು ಸಹ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಪ್ರಭಾಕರ್, ಲಕ್ಷ್ಮಿ, ವಿನೋದ್ ಆಳ್ವ ಹಾಗೂ ಐಶ್ವರ್ಯಾ ನಟಿಸಿದ್ದಾರೆ.

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಮುಂದಿನ ಸಿನಿಮಾ ಬಗ್ಗೆ ಹಲವರಿಗೆ ಗೊತ್ತಿದೆ. ನಾಗಣ್ಣ (Naganna) ನಿರ್ದೇಶನದಲ್ಲಿ 'ಭಾರ್ಗವ' (Bhargava) ಚಿತ್ರದಲ್ಲಿ ನಟ ಉಪೇಂದ್ರ ನಟಿಸುತ್ತಿದ್ದಾರೆ. ಇದೀಗ ಹೇಳಲಿರುವ ಹೊಸ ಸುದ್ದಿ ಏನೆಂದರೆ, ಈ ಚಿತ್ರದಲ್ಲಿ ಖ್ಯಾತ ಸ್ಟಾರ್ ನಟಿ ಮಗಳು ಕನ್ನಡದಲ್ಲಿ ಮತ್ತೊಮ್ಮೆ ಬಣ್ಣಹಚ್ಚಲಿದ್ದಾರೆ. ಹೌದು, ಪಂಚಭಾಷಾ ತಾರೆ ಲಕ್ಷ್ಮೀ (Lakshmi) ಅವರ ಮಗಳು ಐಶ್ವರ್ಯಾ (Aishwarya Bhaskaran) ಅವರು ಬಹಳ ವರ್ಷಗಳ ಬಳಿಕ ಇದೀಗ ಕನ್ನಡ ಸಿನಿಮಾದಲ್ಲಿ ಮತ್ತೆ ನಟಿಸಲಿದ್ದಾರೆ.

ಜ್ಯೂಲಿ ಲಕ್ಷ್ಮೀ ಮಗಳು, ನಟಿ ಐಶ್ವರ್ಯಾ ಅವರು ಕನ್ನಡದಲ್ಲಿ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಹಾಗೆ ನೋಡಿದರೆ, ಅವರು ಮೊಟ್ಟಮೊದಲು ನಟಿಸಿದ್ದು ಕೂಡ ಕನ್ನಡ ಚಿತ್ರದಲ್ಲಿಯೇ ಎಂಬುದು ವಿಶೇಷ. ವಿನೋದ್ ಆಳ್ವಾ ನಾಯಕತ್ವದ 'ಹೊಸ ಕಾವ್ಯ' (Hosa Kavya) ಸಿನಿಮಾದಲ್ಲಿ ಐಶ್ವರ್ಯಾ ಅವರು ಮೊದಲ ಬಾರಿಗೆ ನಟಿಯಾದವರು.

'ಹೊಸ ಕಾವ್ಯ' ಹೆಸರಿನ ಈ ಚಿತ್ರವು 1986ರಲ್ಲಿ ಬಿಡುಗಡೆಯಾಗಿದ್ದು, ಶಿವಚಂದ್ರನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಹಾಗೂ ನಿರ್ಮಾಪಕಿಯಾಗಿ ಲಕ್ಷ್ಮೀ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಪ್ರಭಾಕರ್, ಲಕ್ಷ್ಮಿ, ವಿನೋದ್ ಆಳ್ವ ಹಾಗೂ ಐಶ್ವರ್ಯಾ ನಟಿಸಿದ್ದಾರೆ. ಈ ಹೊಸ ಕಾವ್ಯ ಸಿನಿಮಾದ ಬಳಿಕ ಲಕ್ಷ್ಮೀ ಮಗಳು ಐಶ್ವರ್ಯಾ ಅವರು ಸಾಲುಸಾಲಾಗಿ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಐಶ್ವರ್ಯಾ ಭಾಸ್ಕರನ್ ಅವರು ಕನ್ನಡದಲ್ಲಿ 'ಹೊಸ ಕಾವ್ಯ' ಮಾತ್ರವಲ್ಲ, 'ಪಾಂಡವರು', ಮತ್ತು 'ಒಗ್ಗರಣೆ' ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ನಟಿಸಿರುವ ಅವರು ಹಿಂದಿಯ ಒಂದು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. 'ಗ್ಯಾಂಗ್‌ಸ್ಟರ್' ಮತ್ತು 'ಡಿಯರ್ ಯು ಬ್ರದರ್ ಯು' ವೆಬ್ ಸರಣಿಗಳಲ್ಲೂ ಸಹ ಕಾಣಿಸಿಕೊಂಡಿದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 50ಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಲಿದ್ದಾರೆ.

ಈ ಬಗ್ಗೆ ಅವರೇನು ಹೇಳಿದ್ದಾರೆ? 'ನಾನು ನನ್ನ ಸಿನಿಮಾ ನಟನೆ ಶುರು ಮಾಡಿದ್ದೇ ಕನ್ನಡ ಸಿನಿಮಾ ಮೂಲಕ. ನನ್ನ ಅಮ್ಮನ ನಿರ್ಮಾಣದ 'ಹೊಸ ಕಾವ್ಯ' ಸಿನಿಮಾದಲ್ಲಿ ನಟಿಸಿದ್ದೇನೆ. ಬಳಿಕ ಸೌತ್ ಇಂಡಿಯಾದ ಎಲ್ಲಾ ಭಾಷೆಗಳ ಜೊತೆಗೆ, ಹಿಂದಿಯಲ್ಲಿ ಕೂಡ ನಟಿಸಿದ್ದೇನೆ. ಆದರೆ, ಕುಟುಂಬದಲ್ಲಿ ಒಬ್ಬರೇ ಲೆಜೆಂಡ್ ಆಗೋದಕ್ಕೆ ಸಾಧ್ಯ ಅಂತಾರೆ, ನಮ್ಮ ಕುಟುಂಬದಲ್ಲಿ ನನ್ನಮ್ಮ ಮಾತ್ರ ಲೆಜೆಂಡ್.

ಅವರು ಭಾರತದ ಸ್ಟಾರ್ ನಟಿ. ಆದರೆ ನಾನು ಇಲ್ಲಿ ಹೋರಾಟದ ಬದುಕು ನಡೆಸುತ್ತಿರುವ ನಟಿ.

ನನಗೆ ನನ್ನಿಷ್ಟದಂತೆ ಲಾಯರ್ ಆಗಲು ಸಾಧ್ಯವಾಗಲಿಲ್ಲ. ಸಿನಿಮಾದಲ್ಲಿ ಕೂಡ ಅಂದುಕೊಂಡಷ್ಟು ಬೆಳಯಲಿಲ್ಲ. ಸೀರಿಯಲ್‌ಗಳು ಕೂಡ ಬಯಸಿದಷ್ಟು ಸಿಗಲಿಲ್ಲ. ಇದೀಗ ಕನ್ನಡದಲ್ಲಿ ಮತ್ತೆ ನಟಿಸಲು ಅವಕಾಶ ದೊರಕಿದೆ. ನನಗೆ ಸ್ವಲ್ಪವೇ ಎನ್ನುವಷ್ಟು ಕನ್ನಡದಲ್ಲಿ ಅಭಿಮಾನಿಗಳು ಇದ್ದಾರೆ. ಇಲ್ಲಿ ಇನ್ನೂ ಹೆಚ್ಚು ಹೆಚ್ಚು ಅವಕಾಶಗಳು ಸಿಕ್ಕರೆ ನಾನು ಖುಷಿಯಿಂದ ನಟಿಸಲಿದ್ದೇನೆ' ಎಂದಿದ್ದಾರೆ ನಟಿ ಐಶ್ವರ್ಯಾ ಭಾಸ್ಕರನ್.