'ಚೆನ್ನೈನಲ್ಲಿ ಒಬ್ಬಂಟಿಯಾಗಿ ದುಡಿಯುತ್ತ, ನನ್ನಿಷ್ಟದ ಬದುಕು ಸಾಗಿಸುತ್ತಿದ್ದೇನೆ. 'ಈಶಾದ ಸದ್ಗುರುಗಳಿಂದ ಇನ್ನರ್ ಇಂಜಿನಿಯರಿಂಗ್ ಕಲಿತು, ಅದನ್ನು ಅಳವಡಿಸಕೊಂಡು ನನ್ನ ಲೈಫನ್ನು ನನ್ನ ಕಂಟ್ರೋಲ್‌ಗೆ ತೆಗೆದುಕೊಂಡಿದ್ದೇನೆ ಎನ್ನಬಹುದು' ಎಂದಿದ್ದಾರೆ ಲಕ್ಷ್ಮೀ ಮಗಳು, ನಟಿ ಐಶ್ವರ್ಯಾ ಭಾಸ್ಕರನ್.
ದಕ್ಷಿಣ ಭಾರತದ ಸುಂದರಿ, 'ಜೂಲಿ' ಸಿನಿಮಾ ಖ್ಯಾತಿಯ ನಟಿ ಲಕ್ಷ್ಮೀ (Julie Lakshmi) ಅವರು ಪಂಚಭಾಷಾ ತಾರೆ. ಅವರು ಅದೆಷ್ಟೋ ನೂರು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಎನ್ನಿಸಿಕೊಂಡಿರುವ ಲೆಜೆಂಡ್ ನಟಿ. ಅಂಥ ನಟಿಯ ಮಗಳು ಐಶ್ವರ್ಯಾ ಕೂಡ ನಟಿಯಾಗಿ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ನಟಿಸಿದ್ದಾರೆ, ನಟಿಸುತ್ತಿದ್ದಾರೆ. ಕನ್ನಡದಲ್ಲಿ ಯೂಟ್ಯೂಬರ್ ರಘುರಾಮ್ ಅವರ ಸಂದರ್ಶನವೊಂದರಲ್ಲಿ ನಟಿ-ಲಕ್ಷ್ಮೀ ಮಗಳು ಐಶ್ವರ್ಯಾ ಭಾಸ್ಕರನ್ (Aishwarya Bhaskaran) ಅವರು ತಮ್ಮ ವೃತ್ತಿ, ಪ್ರವೃತ್ತಿ ಹಾಗೂ ಲೈಫ್ ಬಗ್ಗೆ ಮಾತನ್ನಾಡಿದ್ದಾರೆ. ಅವರು ಆ ಸಂದರ್ಶನದಲ್ಲಿ ಹತ್ತು ಹಲವು ಸಂಗತಿಗಳ ಬಗ್ಗೆ ಮಾತನ್ನಾಡಿದ್ದು, ಇಲ್ಲಿ ಕೆಲವು ಸಂಗತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮೊಟ್ಟಮೊದಲನೆಯದಾಗಿ, ಲಕ್ಷ್ಮೀ ಅವರ ಮಗಳಿಗೆ ಈ ಬಣ್ಣದ ಬದುಕು ಇಷ್ಟವಿರಲಿಲ್ಲವಂತೆ. ಅವರು ಲಾ ಓದಿ ಲಾಯರ್ ಆಗಬೇಕು ಎಂದುಕೊಂಡು ಅದೇ ದಾರಿಯಲ್ಲಿ ಸಾಗಲು ಪ್ಲಾನ್ ಕೂಡ ಮಾಡಿಕೊಂಡಿದ್ದರು. ಆದರೆ, ಸ್ಟಾರ್ ನಟಿಯಾಗಿರುವ ಲಕ್ಷ್ಮೀ ಅವರು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಮಗಳು ಐಶ್ವರ್ಯಾ ಅವರನ್ನು ಕನ್ನಡ ಸಿನಿಮಾ ಮೂಲಕ ತಮ್ಮಂತೆ ಸಿನಿಮಾಕ್ಷೇತ್ರಕ್ಕೆ ಕರೆತಂದರು. 'ಹೊಸ ಕಾವ್ಯ' ಹೆಸರಿನ ಕನ್ನಡ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಐಶ್ವರ್ಯಾ.
'ಹೊಸ ಕಾವ್ಯ' ಹೆಸರಿನ ಈ ಚಿತ್ರವು 1986ರಲ್ಲಿ ಬಿಡುಗಡೆಯಾಗಿದ್ದು, ಶಿವಚಂದ್ರನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಹಾಗೂ ನಿರ್ಮಾಪಕಿಯಾಗಿ ಲಕ್ಷ್ಮೀ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಪ್ರಭಾಕರ್, ಲಕ್ಷ್ಮಿ, ವಿನೋದ್ ಆಳ್ವ ಹಾಗೂ ಐಶ್ವರ್ಯಾ ನಟಿಸಿದ್ದಾರೆ. ಈ ಹೊಸ ಕಾವ್ಯ ಸಿನಿಮಾದ ಬಳಿಕ ಲಕ್ಷ್ಮೀ ಮಗಳು ಐಶ್ವರ್ಯಾ ಅವರು ಸಾಲುಸಾಲಾಗಿ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದರು. ಈ ಸಿನಿಮಾ ನಟನೆ ಮೂಲಕ ಐಶ್ವರ್ಯಾ ಅವರ ಲಾಯರ್ ಆಗುವ ಕನಸಿಗೆ ಕಲ್ಲು ಬಿತ್ತಂತೆ!
ಹೌದು.. ಸ್ಟಾರ್ ನಟಿ ಲಕ್ಷ್ಮೀ ಮಗಳು ರಘುರಾಮ್ ನಡೆಸಿದ ಇಂಟರ್‌ವ್ಯೂದಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದಾರೆ. ನಾನು ನಟಿಯಾಗಬೇಕೆಂದು ಬಯಸಿರಲಿಲ್ಲ, ನಾನು ವಿದೇಶದಲ್ಲಿ ಲಾ ಓದಿ ಲಾಯರ್ ಆಗುವ ಕನಸು ಕಂಡಿದ್ದೆ. ಇನ್ನೇನು ನಾನು ಲಾ ಕೋರ್ಸ್ ಓದಲು ಇಂಗ್ಲೆಂಡ್‌ಗೆ ಹೋಗಬೇಕು, ಅಷ್ಟರಲ್ಲಿ ನನ್ನ ಅಮ್ಮ ಲಕ್ಷ್ಮೀ ಅವರು ಕನ್ನಡದಲ್ಲಿ ಹೊಸ ಕಾವ್ಯ ಸಿನಿಮಾ ನಿರ್ಮಿಸಿ, ಆ ಮೂಲಕ ನನ್ನನ್ನು ನಟಿಯಾಗಿ ಮಾಡಿಬಿಟ್ಟರು. ಅಲ್ಲಿಂದ ಮುಂದೆ ನಾನು ಕನ್ನಡ ಸೇರಿದಂತೆ, ತಮಿಳು, ಮಲಯಾಳಂ, ತೆಲುಗು, ಹಿಂದಿ ಹೀಗೆ ಎಲ್ಲಾ ಭಾಷೆಗಳ ಸಿನಿಮಾದಲ್ಲಿ ನಟಿಸುವಂತಾಯಿತು.
ನನಗೆ ಸಿನಿಮಾ ನಟಿಯಾಗಲು ಇಷ್ಟವೇ ಇರಲಿಲ್ಲ. ಆದರೆ, ಬಣ್ಣದ ಲೋಕವೇ ನನ್ನನ್ನು ಕೈ ಬೀಸಿ ಕರೆಯಿತು. ಆದರೆ, ಇಲ್ಲಿ ಬಂದ ಎಲ್ಲರೂ ನನ್ನ ಅಮ್ಮ ಲಕ್ಷ್ಮೀ ಅವರಂತೆ ಸ್ಟಾರ್ ನಟಿಯಾಗಿ, ಲಜೆಂಡ್ ಆಗಲು ಸಾಧ್ಯವಿಲ್ಲ. ನನ್ನಮ್ಮ ನಮ್ಮ ಕುಟುಂಬದಲ್ಲಿ ಕೂಡ ಏಕೈಕ ಲೆಜೆಂಡ್. ಆದರೆ ನಾನು ಇಲ್ಲಿ ನಟಿಯಾಗಿ ಹೋರಾಟದ ಜೀವನ ನಡೆಸುತ್ತಿದ್ದೇನೆ. ಕನ್ನಡದ ಹೊಸ ಕಾವ್ಯ ಸಿನಿಮಾದ ಮೂಲಕ ಈ 'ಮೇಕಪ್ ಲೋಕ'ಕ್ಕೆ ಬಂದಿರುವ ಬಗ್ಗೆ ನನಗೆ 'ರೀಗ್ರೆಟ್' ಇದೆ. ಈ ಬಗ್ಗೆ ನಿಜವಾಗಿಯೂ ನನಗೆ ಅತೀವ ಪಶ್ಚಾತ್ತಾಪ ಇದೆ. ಕಾರಣ, ಇದು ನನ್ನಿಷ್ಟದ ಕ್ಷೇತ್ರ ಅಲ್ಲ.
ಆದರೆ, ನನ್ನ ಜೀವನ ಅಂದು ನನ್ನ ಇಷ್ಟದಂತೆ ನಡೆಯಲಿಲ್ಲ ಎನ್ನಬೇಕು. ಕೆಲವು ತಪ್ಪು ಆಯ್ಕೆಗಳು ಹಾಗೂ ತರಾತುರಿಯ ನಿರ್ಧಾರದಿಂದ ನಾನು ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸುವಂತಾಯ್ತು. ಆದರೆ, ಈಗ ನಾನು ನಿಧಾನವಾಗಿ ಅವೆಲ್ಲವುಗಳಿಂದ ಹೊರಗೆ ಬಂದು, ನನ್ನದೇ ಆದ ಜೀವನ ಕಟ್ಟಿಕೊಂಡಿದ್ದೇನೆ. ನನಗೊಬ್ಬಳು ಮಗಳಿದ್ದಾಳೆ, ಅವಳು ಮದುವೆಯಾಗಿ ಈಗ ವಿದೇಶದಲ್ಲಿದ್ದಾಳೆ. ನಾನಿಲ್ಲಿ ಚೆನ್ನೈನಲ್ಲಿ ಒಬ್ಬಂಟಿಯಾಗಿ ದುಡಿಯುತ್ತ, ನನ್ನ ಪಾಲಿೆ ನನ್ನಿಷ್ಟದ ಬದುಕು ಸಾಗಿಸುತ್ತಿದ್ದೇನೆ. 'ಈಶಾದ ಸದ್ಗುರುಗಳಿಂದ ಇನ್ನರ್ ಇಂಜಿನಿಯರಿಂಗ್ ಕಲಿತು, ಅದನ್ನು ಅಳವಡಿಸಕೊಂಡು ನನ್ನ ಲೈಫನ್ನು ನನ್ನ ಕಂಟ್ರೋಲ್‌ಗೆ ತೆಗೆದುಕೊಂಡಿದ್ದೇನೆ ಎನ್ನಬಹುದು' ಎಂದಿದ್ದಾರೆ ಲಕ್ಷ್ಮೀ ಮಗಳು, ನಟಿ ಐಶ್ವರ್ಯಾ ಭಾಸ್ಕರನ್.

