ಮೇರು ನಟಿ ಲಕ್ಷ್ಮೀ ಅವರಿಗೆ ಶಾಂತಮೀನಾ ಹೆಸರಿನ ಹೆಣ್ಣುಮಗಳು ಇದ್ದಾಳೆ. ಅವರು ಐಶ್ವರ್ಯಾ ಎಂಬ ಹೆಸರಿನ ಮೂಲಕ ದಕ್ಷಿಣ ಭಾರತದ ಎಲ್ಲಾ ಭಾಷೆಗಳೂ ಸೇರಿದಂತೆ ಬಾಲಿವುಡ್‌ನ ಒಂದು ಸಿನಿಮಾದಲ್ಲಿ ಸಹ ನಟಿಸಿದವರು. ಆದರೆ, ಅಮ್ಮನಂತೆ ಸ್ಟಾರ್ ನಟಿ ಆಗಲಿಲ್ಲ, ಬಣ್ಣದ ಬದುಕು ಅವರಿಗೆ ಆಗಿಬರಲಿಲ್ಲ.

ನಟಿ 'ಜೂಲಿ ಲಕ್ಷ್ಮೀ' ಯಾರಿಗೆ ಗೊತ್ತಿಲ್ಲ? ಹಿಂದೊಂದು ಕಾಲದಲ್ಲಿ ನಟಿ ಲಕ್ಷ್ಮೀ (Lakshmi) ಅವರು 'ಜೂಲಿ ಲಕ್ಷ್ಮೀ' ಎಂದೇ ಫೇಮಸ್ ಆಗಿದ್ದವರು. 1975ರಲ್ಲಿ ತೆರೆಗೆ ಬಂದಿದ್ದ ನಟಿ ಲಕ್ಷ್ಮೀ ನಟನೆಯ 'ಜೂಲಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಕಾಲದಲ್ಲಿ ಅತ್ಯಂತ ಸುಂದರಿ ಎನ್ನಲಾಗಿದ್ದ ದಕ್ಷಿಣ ಭಾರತದ ಸುಂದರ ನಟಿ ಲಕ್ಷ್ಮೀ ಅವರು ಹಿಂದಿಯ ಜೂಲಿ ಸಿನಿಮಾದಲ್ಲಿ ನಟಿಸಿ ಭಾರತದ ತುಂಬಾ ಖ್ಯಾತಿ ಪಡೆದಿದ್ದರು. ಅವರು ಪಂಚಭಾಷಾ ತಾರೆ ಎಂಬ ಹೆಗ್ಗಳಿಕೆ ಪಡೆದವರು.

ಇಂಥ ಮೇರು ನಟಿ ಲಕ್ಷ್ಮೀ ಅವರಿಗೆ ಶಾಂತಮೀನಾ ಹೆಸರಿನ ಹೆಣ್ಣುಮಗಳು ಇದ್ದಾಳೆ. ಅವರು ಐಶ್ವರ್ಯಾ ಎಂಬ ಹೆಸರಿನ ಮೂಲಕ ದಕ್ಷಿಣ ಭಾರತದ ಎಲ್ಲಾ ಭಾಷೆಗಳೂ ಸೇರಿದಂತೆ ಬಾಲಿವುಡ್‌ನ ಒಂದು ಸಿನಿಮಾದಲ್ಲಿ ಸಹ ನಟಿಸಿದವರು. ಆದರೆ, ಅಮ್ಮನಂತೆ ಸ್ಟಾರ್ ನಟಿ ಆಗಲಿಲ್ಲ, ಬಣ್ಣದ ಬದುಕು ಅವರಿಗೆ ಆಗಿಬರಲಿಲ್ಲ. ಸ್ಟಾರ್ ನಟಿ ಲಕ್ಷ್ಮೀ ಅವರ ಮಗಳು ಯಾಕೆ ಸ್ಟಾರ್ ಆಗಲಿಲ್ಲ? ಯಾಕೆ ಐಶ್ವರ್ಯಾ ಅವರು ಅಮ್ಮನಂತೆ ಚೆಂದ ಇಲ್ಲ? ಹೀಗಂತ ಮುಖಕ್ಕೆ ಹೊಡೆದಂತೆ ಮಾತನಾಡಿದವರೇ ಬಹಳಷ್ಟು ಜನರಂತೆ!

ಇಂತಹ ಅನೇಕ ಸಂಗತಿಗಳನ್ನು ನಟಿ ಲಕ್ಷ್ಮೀ ಮಗಳು ಐಶ್ವರ್ಯಾ ಅವರು 'ರಘುರಾಮ್ (Raghuram)' ಯೂಟ್ಯೂಬ್‌ ಚಾನೆಲ್‌ಗೆ ಕೊಟ್ಟಿರುವ ಸಂದರ್ಶನದಲ್ಲಿ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೊಂದು 'ಸ್ಟಾರ್ ನಾಟಿ ಮಗಳು ನೀವು, ಯಾಕೆ ಕಷ್ಟ ಪಡ್ತಾ ಇದೀರ'..? ಎಂಬ ಪ್ರಶ್ನೆಗೆ ಅವರು ಕೊಟ್ಟಿರುವ ಉತ್ತರ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ. ಆ ಪ್ರಶ್ನೆ ಕೇಳಿದ ರಘುರಾಮ್ ಅವರು 'ಇದು ನನ್ನ ಪ್ರಶ್ನೆಯಲ್ಲ, ಬದಲಿಗೆ ಸಿನಿಮಾ ಪ್ರೇಕ್ಷಕರ ಪ್ರಶ್ನೆ' ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಅದಕ್ಕೆ ನಟಿ, ಸ್ಟಾರ್ ನಟಿ-ಲಕ್ಷ್ಮೀ ಮಗಳು ಐಶ್ವರ್ಯಾ ಕೊಟ್ಟ ಉತ್ತರ ಮಾರ್ಮಿಕವಾಗಿದೆ.

ನಿಜ ಹೇಳುಬೇಕು ಎಂದರೆ ನಮ್ಮಮ್ಮ ಲೆಜೆಂಡ್, ಅವರು ಮಾತ್ರ ಸ್ಟಾರ್ ನಟಿ. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಹೋರಾಟ ಮಾಡುತ್ತಿರುವವಳು. ಅಷ್ಟು ದೊಡ್ಡ ಸ್ಟಾರ್ ನಟಿ, ಪಂಚಭಾಷಾ ತಾರೆ ಅಮ್ಮನ ಮಗಳಾಗಿ ನಾನು ಹೋಲಿಕೆ ಮೂಲಕ ಸಿನಿಮಾ ಉದ್ಯಮದಲ್ಲಿ ಎಲ್ಲಾ ಕಡೆ ಸಾಕಷ್ಟು ಟೀಕೆ ಎದುರಿಸಿದ್ದೇನೆ. ಇವಳ ಮೂಗು ಲಕ್ಷ್ಮೀ ತರ ಇಲ್ಲ, ಇವಳ ಮುಖ ಲಕ್ಷ್ಮೀ ತರ ಇಲ್ಲ, ಇವಳಿಗೆ ಲಕ್ಷ್ಮೀ ತರ ನಟನೆ ಬರಲ್ಲ, ಹಾಗೆ ಹೀಗೆ ಅಂತೆಲ್ಲಾ ನನ್ನ ಎದುರಿಗೇ ಆಡಿಕೊಂಡಿದ್ದಾರೆ. ಅವೆಲ್ಲಾ ನನಗೂ ಗೊತ್ತು, ಆದರೆ ಅದಕ್ಕೆ ನಾನೇನು ಮಾಡಲು ಸಾಧ್ಯ?

ಇನ್ನು, ಮುಖ್ಯವಾಗಿ 'ಸ್ಟಾರ್ ನಟಿಯ ಮಗಳಾಗಿ ನಾನು ಯಾಕೆ ಕಷ್ಟ ಪಡ್ತಾ ಇದೀನಿ, ಲಕ್ಷ್ಮೀಮಗಳಾಗಿಯೂ ನಾನ್ಯಾಕೆ ಸೋಪ್ ಮಾರುತ್ತಾ ಜೀವನ ಸಾಗಿಸ್ತಾ ಇದೀನಿ' ಅನ್ನೋ ಪ್ರಶ್ನೆಗೆ ನಾನು ಹೇಳುವುದಿಷ್ಟೇ.. ಮಕ್ಕಳು ಪೋಷಕರನ್ನು ನೋಡಿಕೊಳ್ಳಬೇಕು. ಅಪ್ಪ-ಅಮ್ಮ ಮಕ್ಕಳನ್ನು ನೋಡಿಕೊಳ್ಳುವುದು ಸರಿಯಲ್ಲ. ಅಷ್ಟಕ್ಕೂ 18 ವಯಸ್ಸು ದಾಟಿದ ಪ್ರತಿಯೊಬ್ಬ ಮಕ್ಕಳೂ ಪೋಷಕರಿಂದ ಏನನ್ನೂ ನಿರೀಕ್ಷೆ ಪಡಬಾರದು. ಅಪ್ಪ-ಅಮ್ಮನಿಗೆ ನಮ್ಮ ಸಹಾಯದ ಅಗತ್ಯವಿಲ್ಲ ಎಂದರೆ ಅವರನ್ನು ಸಾಕುವ ಕೆಲಸ ಮಾಡಬೇಕಿಲ್ಲ. ಆದರೆ, ಅವರಿಂದ ಪಡೆಯುತ್ತಲೇ ಇರುವುದು ಸರಿಯಲ್ಲ. 'ನನ್ನ ಜೀವನ ನನ್ನಮ್ಮನ ಜವಾಬ್ಧಾರಿ ಅಲ್ಲ' ಎಂದಿದ್ದಾರೆ.

ಜೊತೆಗೆ, ನಾನು ಲಕ್ಷ್ಮೀ ಮಗಳಾಗಿದ್ದರೂ, ಅವರಲ್ಲಿ ಸಿನಿಮಾ ನಿರ್ಮಾಣವನ್ನೂ ಮಾಡುವಷ್ಟು ಹಣವಿದ್ದರೂ, ನಾನು ಅವರಿಂದ ಸಹಾಯ ಬಯಸಿ ಸುಮ್ಮನೇ ಕುಳಿತುಕೊಂಡು ತಿನ್ನುವ ಮನಸ್ಥಿತಿ ಇರುವ ಹೆಣ್ಣುಮಗಳಲ್ಲ. ನನ್ನ ಜೀವನ ನಾನು ಮಾಡಬೇಕು, ನನ್ನನ್ನು ನಾನು ಸಾಕಿಕೊಳ್ಳಬೇಕು. ನನ್ನಿಂದ ಆದಷ್ಟೂ ಇತರರಿಗೆ ಸಹಾಯ ಅಗುತ್ತಿರಬೇಕು. ಇಂತಹ ಮನಸ್ಸು, ಬಯಕೆ ಹಾಗು ನಿರ್ಧಾರ ನನ್ನದು. ಅದು ಬಿಟ್ಟು ನಾನು ಸ್ಟಾರ್ ನಟಿ, ಈಗಲೂ ಅವಕಾಶ ಪಡೆಯುತ್ತಿರುವ ಲಕ್ಷ್ಮೀ ಮಗಳು ಎನ್ನುವ ಹಣೆಪಟ್ಟಿ ಹೊತ್ತು ಬದುಕಬಾರದು' ಎಂದಿದ್ದಾರೆ ಲಕ್ಷ್ಮೀಯವರ ಒಬ್ಬಳೇ ಮಗಳು ಐಶ್ವರ್ಯಾ.

"ನನ್ನ ಜೀವನ ನನ್ನಮ್ಮನ ಜವಾಬ್ದಾರಿ ಅಲ್ಲ...." ಲಕ್ಷ್ಮಿ ಅವರ ಮಗಳು ಐಶ್ವರ್ಯ ಜೊತೆ ಮಾತುಕತೆ (ಭಾಗ-4)