ರಕ್ಷಿತ್ ಶೆಟ್ಟಿ ಒಂಥರಾ ಸೈಲೆಂಟ್‌ಗೆ ಸರಿದಿದ್ದಾರೆ ಎನ್ನಬಹುದು. 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದ ಸೈಡ್ ಎ ಹಾಗೂ ಸೈಡ್ ಬಿ ಬಳಿಕ ರಕ್ಷಿತ್ ಶೆಟ್ಟಿಯವರು ಅಕ್ಷರಶಃ ಕಳೆದೇ ಹೋಗಿದ್ದಾರಾ? ಇಲ್ಲ.. ಸದ್ಯ ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಸಿನಿಮಾದ ಪ್ರೀಕ್ವೆನಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗ್ತಿದೆ.

'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದ ಸೈಡ್ ಎ ಹಾಗೂ ಸೈಡ್ ಬಿ ಬಳಿಕ ರಕ್ಷಿತ್ ಶೆಟ್ಟಿಯವರು ಎಲ್ಲಿ?

ಕನ್ನಡದ ನಟ-ನಿರ್ದೇಶಕ, ಸಿಂಪಲ್ ಸ್ಟಾರ್ ಖ್ಯಾತಿಯ ರಕ್ಷಿತ್ ಶೆಟ್ಟಿಯವರು (Rakshit Shetty) ಒಂಥರಾ ಸೈಲೆಂಟ್‌ಗೆ ಸರಿದಿದ್ದಾರೆ ಎನ್ನಬಹುದು. 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದ ಸೈಡ್ ಎ ಹಾಗೂ ಸೈಡ್ ಬಿ ಬಳಿಕ ರಕ್ಷಿತ್ ಶೆಟ್ಟಿಯವರು ಅಕ್ಷರಶಃ ಕಳೆದೇ ಹೋಗಿದ್ದಾರೆ ಎಂಬುದು ಹಲವರ ಅನಿಸಿಕೆ. ಆದ್ರೆ ಸಿಕ್ಕ ಮಾಹಿತಿ ಪ್ರಕಾರ, ರಕ್ಷಿತ್ ಶೆಟ್ಟಿಯವರು ಈ ಮೊದಲು ತೆರೆಗೆ ಬಂದಿದ್ದ 'ಉಳಿದವರು ಕಂಡಂತೆ' ಸಿನಿಮಾದ ಪ್ರೀಕ್ವೆಲ್ 'ರಿಚರ್ಡ್ ಆಂಟನಿ'ಯ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ದೀಪಾವಳಿಯ ಬಳಿಕ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎನ್ನಲಾಗುತ್ತಿದೆ.

ಅದು ಸಿನಿಮಾ ಸಂಗತಿಯಾಯ್ತು. ಇದೀಗ ರಕ್ಷಿತ್ ಶೆಟ್ಟಿಯವರ ಡೈಲಾಗ್‌ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಅವರು 'ನಿದ್ದೆ' ಬಗ್ಗೆ ಮಾತನ್ನಾಡಿದ್ದಾರೆ. ಅದು ಸಿನಿಮಾದ ರೀಲ್ ಡೈಲಾಗ್ ಆಗಿದ್ದರೂ ರಿಯಲ್ ಲೈಫ್‌ನಲ್ಲಿ ಕೂಡ ಅದು ನಿಜವಾದ ಸಂಗತಿ ಎಂಬುದನ್ನು ಯಾರಾದರೂ ಅರ್ಥ ಮಾಡಿಕೊಳ್ಳುವಂತಿದೆ. ರಕ್ಷಿತ್ ಶೆಟ್ಟಿಯವರ ಆ ಡೈಲಾಗ್‌ ಈಗ ಭಾರೀ ವೈರಲ್ ಆಗುತ್ತಿದೆ. ಅದನ್ನು ಕೇಳಿದ ಬಳಿಕ ಅವರ ಫ್ಯಾನ್ಸ್ ಸೇರಿದಂತೆ, ಅನೇಕರು ಮಧ್ಯರಾತ್ರಿ ಕಳೆದ ಮೇಲೆ ಮಲಗುವವರು ಆದಷ್ಟೂ ಬೇಗ ಮಲಗುವ ಮನಸ್ಸು ಮಾಡುತ್ತಿದ್ದಾರೆ ಎಂಬ ಮಾತಿದೆ.

ಹಾಗಿದ್ದರೆ ಅದೇನು? ಮನೆಯವರು, ಹಿತೈಷಿಗಳು ಹಾಗೂ ಡಾಕ್ಟರ್ ಹೇಳಿದಾಗಲೂ ಅರ್ಥವಾಗದ ಕೆಲವರು ಈಗ ಎಚ್ಚರಗೊಂಡಿದ್ದಾರಾ? ಅದರಲ್ಲಿ ರಕ್ಷಿತ್ ಶೆಟ್ಟಿ 'ಡಾಕ್ಟರ್ ಹೇಳ್ತಾ ಇದ್ರು, ನೀವ್ ನಿದ್ದೆನೇ ಸರಿಯಾಗಿ ಮಾಡ್ತಿಲ್ಲ ಅಂತ.. ದೇಹಕ್ಕೆ ನಿದ್ದೆನೇ ಬೆಸ್ಟ್ ಮೆಡಿಸಿನ್ ಅಂತ ಹೇಳ್ತಾರೆ.. ನಾವೆಲ್ಲರೂ ಬೆಳಿಗ್ಗೆ ಏಳೋದಕ್ಕೆ ಅಲಾರಾಂ ಇಟ್ಕೋತೀವಿ.. ಆದ್ರೆ ರಾತ್ರಿ ಮಲ್ಗೋದಕ್ಕೆ ಯಾರೂ ಅಲಾರಾಂ ಇಟ್ಕೊಳಲ್ಲ. ಏಳೋದ್ ಎಷ್ಟು ಇಂಪಾರ್ಟೆಂಟೋ ಕರೆಕ್ಟ್ ಟೈಂಗೆ ಮಲಗೋದೂ ಅಷ್ಟೇ ಇಂಪಾರ್ಟೆಂಟ್ ಬಾಸ್..' ಎಂದಿದ್ದಾರೆ. ಅವರ ಹೇಳಿರುವ ಶೈಲಿಯೋ ಅಥವಾ ಅವರೊಟ್ಟಿಗೆ ಇರುವಕನೆಕ್ಷನ್ನೋ ಏನೋ ಎಂಬಂತೆ ಈ ಡೈಲಾಗ್ ಈಗ ಕೆಲವರಿಗೆ ಕರೆಕ್ಟ್ ಆಗಿ ಕೆಲಸ ಮಾಡುತ್ತಿದೆಯಂತೆ. ಹಾಗಾದರೆ ಸಂತೋಷವೇ ಬಿಡಿ!

ಆ ವಿಡಿಯೋಗೆ ಬಹಳಷ್ಟು ಕಾಮೆಂಟ್ ಬಂದಿವೆ. 'ನಾನ್ ಸರಿಯಾಗಿ ನಿದ್ದೆ ಮಾಡಿ ಯಾವ್ದೋ ಕಾಲ ಆಗೋಗಿದೆ' ಎಂದು ಒಬ್ಬರು ಹೇಳಿದ್ದರೆ ಇನ್ನೊಬ್ಬರು 'ಚಿಂತೆ ಒಂದು ಕಡೆ ಆದ್ರೆ, ನಮ್ಮವರೇ ನಮ್ಮನ್ನು ಅರ್ಥ ಮಾಡ್ಕೊಳ್ಳದೇ ಹೋದಾಗ ಆಗುವ ನೋವೂ ಕೂಡಾ ನಿದ್ದೆ, ಹಸಿವು ಎಲ್ಲವನ್ನು ನುಂಗಿಬಿಡುತ್ತೆ' ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು 'ಗಂಡ್ ಮಕ್ಕಳ ಮನಸ್ಥಿತಿ, ‌ ಅವರ ನೋವಿಗೆ ಮದ್ದಿಲ್ಲ..' ಎಂದಿದ್ದರೆ ಮಗದೊಬ್ಬರು 'ನೆಮ್ಮದಿ ಯಾವಾಗ ಸಿಗುತ್ತೋ ದೇವರೇ..!' ಎಂದು ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ವಿಭಿನ್ನ ರೀತಿಯ ಕಾಮೆಂಟ್‌ಗಳು ಅಲ್ಲಿ ಲಭ್ಯವಿವೆ.

ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಯಾವುದು?

ಅಂದಹಾಗೆ, ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಯಾವುದು? ಉಳಿದವರು ಕಂಡಂತೆ ಮೂವಿಯ ಪ್ರಿಕ್ವೆಲ್ ರಿಚರ್ಡ್ ಆ್ಯಂಟನಿಯನ್ನ ರಕ್ಷಿತ್ ತೆರೆಗೆ ತರಲಿದ್ದಾರೆ. ಮೂರು ವರ್ಷದ ಹಿಂದೆಯೇ ಇದನ್ನ ಅನೌನ್ಸ್ ಮಾಡಿದ್ದ ರಕ್ಷಿತ್ ಈಗ ಪೂರ್ಣ ತಯಾರಿ ಮಾಡಿಕೊಂಡು ದೀಪಾವಳಿ ಯಿಂದ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಇದರ ಬಳಿಕವೂ ರಕ್ಷಿತ್ ಅಕೌಂಟ್ ನಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸೋ ಎರಡು ವರ್ಷ ಕಾಣೆಯಾದ ಸಿಂಪಲ್ ಸ್ಟಾರ್ ಮುಂದಿನ ದಿನಗಳಲ್ಲಿ ಬಿಗ್ ಪ್ರಾಜೆಕ್ಟ್ ಗಳ ಮೂಲಕ ಫ್ಯಾನ್ಸ್ ಮುಂದೆ ಬರಲಿದ್ದಾರೆ ಎನ್ನಲಾಗುತ್ತಿದೆ.

'ನಮ್ ಏರಿಯಾದಲ್ಲಿ ಒಂದ್ ದಿನ' ಸಿನಿಮಾ ಮೂಲಕ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟ ರಕ್ಷಿತ್ ಶೆಟ್ಟಿ, ಬಳಿಕ ತುಘಲಕ್, ಉಳಿದವರು ಕಂಡಂತೆ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (Simple ag ondu love story), ವಾಸ್ತು ಪ್ರಕಾರ, ರಿಕ್ಕಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ ಎ ಮತ್ತು ಬಿ' ಸಿನಿಮಾಗಳಲ್ಲಿ ನಟಿಸಿದ್ದಾರೆ

ಇವುಗಳಲ್ಲಿ ಉಳಿದವರು ಕಂಡಂತೆ ಮತ್ತು ಅವನೇ ಶ್ರೀಮನ್ನಾರಾಯಣ ಸಿನಿಮಾಗಳು ರಕ್ಷಿತ್ ನಿರ್ದೇಶನದ ಸಿನಿಮಾಗಳು. ಉಳಿದವರು ಕಂಡಂತೆ (Ulidavaru Kandante) ಸಿಕ್ಕಾಪಟ್ಟೆ ಹಿಟ್ ಆಗಿತ್ತು, ಆದರೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಹಲವು ವರ್ಷಗಳ ಶೂಟಿಂಗ್ ಬಳಿಕ ಬಹು ನಿರೀಕ್ಷೆ ಹುಟ್ಟಿಸಿ ಬಿಡುಗಡೆಯಾಗಿದ್ದರೂ ಅಷ್ಟೊಂದು ಯಶಸ್ಸು ಕಾಣಲಿಲ್ಲ.

ಪುಣ್ಯಕೋಟಿ ಸಿನಿಮಾ ಯಾವಾಗ?

ರಕ್ಷಿತ್ ಶೆಟ್ಟಿ ಕೊನೆಯದಾಗಿ 2022 ರಲ್ಲಿ '777 ಚಾರ್ಲಿ' ಮತ್ತು 2023ರಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಎ ಮತ್ತು ಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಬೇರೆ ಯಾವುದೇ ಸಿನಿಮಾಗಳಲ್ಲೂ ರಕ್ಷಿತ್ ನಟಿಸಿಲ್ಲ. ಸಪ್ತಸಾಗರದಾಚೆ ಬಳಿಕ ರಕ್ಷಿತ್ ಎಲ್ಲೂ ಕಾಣಿಸಿಕೊಂಡಿಲ್ಲ. ಇದೀಗ, 'ರಿಚರ್ಡ್ ಆಂಟನಿ' ಹಾಗೂ ಮುಂದೆ 'ಪುಣ್ಯಕೋಟಿ' ಸಿನಿಮಾಗಳು ಬರಲಿವೆ ಎನ್ನಲಾಗುತ್ತಿದೆ.

View post on Instagram