Tragic Accident in Koppal: ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಹಿಟ್ನಾಳ ಟೋಲ್ ಬಳಿ ಗೋವುಗಳ ಸಾಗಿಸುತ್ತಿದ್ದ ಕಂಟೇನರ್ ವಾಹನ ಪಲ್ಟಿಯಾಗಿ 8 ಗೋವುಗಳು ಸಾವನ್ನಪ್ಪಿವೆ. ಮಹಾರಾಷ್ಟ್ರದಿಂದ ಬೆಂಗಳೂರಿಗೆ  34 ಗೋವುಗಳನ್ನು ಸಾಗಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಕೊಪ್ಪಳ,(ಅ.21): ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಹಿಟ್ನಾಳ ಟೋಲ್ ಬಳಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್ ವಾಹನವೊಂದು ಮಗುಚಿ ಬಿದ್ದು ದುರಂತ ಸಂಭವಿಸಿದೆ.

8 ಗೋವುಗಳು ಸಾವು:

ಈ ಘಟನೆಯಲ್ಲಿ 8 ಗೋವುಗಳು ಸಾವನ್ನಪ್ಪಿವೆ. ಮಹಾರಾಷ್ಟ್ರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಂಟೇನರ್‌ನಲ್ಲಿ ಸುಮಾರು 34 ಗೋವುಗಳನ್ನು ಸಾಗಿಸಲಾಗುತ್ತಿತ್ತು ಎಂದು ಮಾಹಿತಿ ದೊರೆತಿದೆ. ಘಟನೆ ಬಳಿಕ ಕಂಟೇನರ್ ಚಾಲಕ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಚಿತ್ರದುರ್ಗ: ಅಜ್ಜಿಗೆ ಫೋನ್ ಮಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದ ಶಿಕ್ಷಕ! ವಿಡಿಯೋ ವೈರಲ್ ಆಗ್ತಿದ್ದಂತೆ ನಾಪತ್ತೆ

ಸ್ಥಳಕ್ಕೆ ಪೊಲೀಸರು ಬೇಟಿ, ಪರಿಶೀಲನೆ:

ಘಟನೆಯ ಮಾಹಿತಿ ತಿಳದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಗೋವುಗಳ ಸಾಗಾಟದ ಸಂದರ್ಭದಲ್ಲಿ ಸೂಕ್ತ ಕಾಳಜಿ ವಹಿಸದಿರುವುದು, ರಸ್ತೆ ನಿಯಮ ಪಾಲಿಸದಿರುವುದು, ಈ ದುರಂತಕ್ಕೆ ಕಾರಣವಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ದುರಂತ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ನಂಜನಗೂಡು: ಅಕ್ರಮ ಜಾನುವಾರು ಸಾಗಾಟ, ಸಿನಿಮೀಯ ಶೈಲಿಯಲ್ಲಿ ಚೇಸ್, ಪೊಲೀಸರಿಂದ 20 ಕರುಗಳ ರಕ್ಷಣೆ