ಕಾರವಾರದಲ್ಲಿ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿ ಶಿವರಾಮ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. 2011ರಲ್ಲಿ ಅಕ್ರಮ ಸಾರಾಯಿ ಮಾರಾಟ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಕಾರವಾರ, ಉತ್ತರ ಕನ್ನಡ (ಆಗಸ್ಟ್,20): ದೀರ್ಘಕಾಲದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಕಾರವಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಕಡಪಾ ನಿವಾಸಿಯಾದ ಶಿವರಾಮ ರೆಡ್ಡಿ ಎಂಬಾತನೇ ಬಂಧಿತ ಆರೋಪಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2011ರಲ್ಲಿ ಅಕ್ರಮವಾಗಿ ಗೋವಾ ಸಾರಾಯಿ ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಈತನನ್ನು ಮೊದಲು ಬಂಧಿಸಲಾಗಿತ್ತು. ಕಾರವಾರದ ಮಾಜಾಳಿ ಘೋಟ್ನೇಭಾಗ್ ಕೋಮಾರಪಂತ್ ಕ್ರಾಸ್ ಬಳಿ ಈತನ ಬಂಧನವಾಗಿತ್ತು. ಪೊಲೀಸರು ಆಗ ಶಿವರಾಮ ರೆಡ್ಡಿಯ ಬಳಿ ಸುಮಾರು 4000 ರೂಪಾಯಿ ಬೆಲೆಯ ವಿಸ್ಕಿ ಮತ್ತು ಬ್ರಾಂಡಿ ಬಾಟಲಿಗಳನ್ನು ಒಳಗೊಂಡ ಬ್ಯಾಗ್‌ವೊಂದನ್ನು ವಶಪಡಿಸಿಕೊಂಡಿದ್ದರು

ಇದನ್ನೂ ಓದಿ:. ಹಾವೇರಿ: ಪತ್ನಿಯ ಶೀಲ ಶಂಕಿಸಿ ಕುತ್ತಿಗೆ ಚಾಕು ಇರಿದ ಪಾಪಿ ಪತಿ! ಸಪ್ತಪದಿ ತುಳಿದವಳ ಸ್ಥಿತಿ ಚಿಂತಾಜನಕ!

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಶಿ ವರಾಮ ರೆಡ್ಡಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಹುಡುಕಾಟದಲ್ಲಿ ತೊಡಗಿದ್ದ ಕಾರವಾರ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ್ ವಾಲ್ಮೀಕಿ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮತ್ತೆ ಬಂಧಿಸಿದೆ.

ಈ ಘಟನೆಯಿಂದ ಕಾರವಾರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆಯ ಕಠಿಣ ಕ್ರಮದ ಬಗ್ಗೆ ಮತ್ತೊಮ್ಮೆ ಸಾಬೀತಾಗಿದೆ.