ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಇಂದು ಭಾರತ-ಪಾಕ್ ಸೂಪರ್ ಪಂದ್ಯ. ವಿವಾದಗಳ ನಡುವೆ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ಮುಖಾಮುಖಿ. ಈ ಪಂದ್ಯವನ್ನು ಭಾರತ ಮತ್ತು ಇತರ ದೇಶಗಳಲ್ಲಿ ನೇರಪ್ರಸಾರದಲ್ಲಿ ಹೇಗೆ ವೀಕ್ಷಿಸಬಹುದು?

ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಇಂದು ಭಾರತ-ಪಾಕಿಸ್ತಾನ ಸೂಪರ್ ಸಂಡೇ. ರಾಜಕೀಯ ವಿವಾದಗಳ ನಡುವೆ ಎರಡೂ ತಂಡಗಳು ಏಷ್ಯಾ ಕಪ್‌ನ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿರುವುದು ಪಂದ್ಯದ ಕುತೂಹಲವನ್ನು ಹೆಚ್ಚಿಸಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಟಿ20 ಪಂದ್ಯ ಆರಂಭವಾಗಲಿದೆ. 7.30ಕ್ಕೆ ಟಾಸ್ ನಡೆಯಲಿದೆ. ಏಷ್ಯಾ ಕಪ್‌ನ ಭಾರತ-ಪಾಕ್ ಪಂದ್ಯವನ್ನು ಅಭಿಮಾನಿಗಳು ನೇರಪ್ರಸಾರದಲ್ಲಿ ಟಿವಿ ಮತ್ತು ಸ್ಟ್ರೀಮಿಂಗ್ ಮೂಲಕ ಹೇಗೆ ವೀಕ್ಷಿಸಬಹುದು ಎಂದು ನೋಡೋಣ.

ಭಾರತ-ಪಾಕಿಸ್ತಾನ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಿ

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಗಳನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಸಾರ ಮಾಡುತ್ತಿದೆ. ಸೋನಿಲಿವ್ ಮತ್ತು ಫ್ಯಾನ್‌ಕೋಡ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ದೂರದರ್ಶನ ಮತ್ತು ಜಿಯೋ ಟಿವಿಯಲ್ಲಿ ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸುವ ಅವಕಾಶವೂ ಇದೆ. ಅದೇ ರೀತಿ ಭಾರತ-ಪಾಕಿಸ್ತಾನ ಪಂದ್ಯವನ್ನು ಸಹ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ಅಭಿಮಾನಿಗಳು ನೇರಪ್ರಸಾರದಲ್ಲಿ ವೀಕ್ಷಿಸಬಹುದು. 

ಭಾರತ-ಪಾಕ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಟೆನ್ 1, ಸೋನಿ ಸ್ಪೋರ್ಟ್ಸ್ ಟೆನ್ 1 ಹೆಚ್‌ಡಿ, ಸೋನಿ ಸ್ಪೋರ್ಟ್ಸ್ ಟೆನ್ 5, ಸೋನಿ ಸ್ಪೋರ್ಟ್ಸ್ ಟೆನ್ 5 ಹೆಚ್‌ಡಿ ಟಿವಿಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಅಮೆರಿಕ ಮತ್ತು ಕೆನಡಾದಲ್ಲಿ ವಿಲ್ಲೋ ಟಿವಿ, ಯುಕೆ ಮತ್ತು ಐರ್ಲೆಂಡ್‌ನಲ್ಲಿ ಟಿಎನ್‌ಟಿ ಸ್ಪೋರ್ಟ್ಸ್ 1, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಯಪ್ ಟಿವಿ ಏಷ್ಯಾ ಕಪ್ ಪಂದ್ಯಗಳ ಪ್ರಸಾರ ಹಕ್ಕುಗಳನ್ನು ಹೊಂದಿವೆ.

ತಂಡಗಳು

ಟೀಮ್ ಇಂಡಿಯಾ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ, ರಿಂಕು ಸಿಂಗ್, ಅರ್ಶ್‌ದೀಪ್ ಸಿಂಗ್, ಹರ್ಷಿತ್ ರಾಣ.

ಪಾಕಿಸ್ತಾನ: ಸಲ್ಮಾನ್ ಆಘಾ (ನಾಯಕ), ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಫಖರ್ ಜಮಾನ್, ಹಸನ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮುಖೀಮ್, ಅಬ್ರಾರ್ ಅಹ್ಮದ್, ಹುಸೇನ್ ತಲಾತ್, ಹಸನ್ ಅಲಿ, ಶುಶ್ದಿಲ್ ಷಾ, ಹ್ಯಾರಿಸ್ ರೌಫ್, ಮೊಹಮ್ಮದ್ ವಸೀಮ್ ಜೂನಿಯರ್, ಸಲ್ಮಾನ್ ಮಿರ್ಜಾ.