- Home
- Sports
- Cricket
- ಏಷ್ಯಾಕಪ್ 2025: ಭಾರತ-ಪಾಕಿಸ್ತಾನ ಮ್ಯಾಚ್ ಎಷ್ಟು ಗಂಟೆಗೆ ಆರಂಭವಾಗತ್ತೆ? ಮೊಬೈಲ್‌ನಲ್ಲಿ ಲೈವ್ ನೋಡಿ
ಏಷ್ಯಾಕಪ್ 2025: ಭಾರತ-ಪಾಕಿಸ್ತಾನ ಮ್ಯಾಚ್ ಎಷ್ಟು ಗಂಟೆಗೆ ಆರಂಭವಾಗತ್ತೆ? ಮೊಬೈಲ್‌ನಲ್ಲಿ ಲೈವ್ ನೋಡಿ
ದುಬೈ: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿನ ಬಹುನಿರೀಕ್ಷಿತ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯದ ಕಂಪ್ಲೀಟ್ ಅಪ್ಡೇಟ್ಸ್ ಇಲ್ಲಿದೆ ನೋಡಿ.

ಇಂಡೋ-ಪಾಕ್ ಮ್ಯಾಚ್
ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್ ಇದೇ ಸೆಪ್ಟೆಂಬರ್ 14ರಂದು ನಡೆಯಲಿದೆ. ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳ ನಡುವಿನ ಕಾದಾಟ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ದುಬೈನಲ್ಲಿ ನಡೆಯಲಿರುವ ಮ್ಯಾಚ್
ಈ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದ್ದು, ಭಾನುವಾರ ಸಂಜೆ 8 ಗಂಟೆಗೆ ಪಂದ್ಯಾಟ ಆರಂಭವಾಗಲಿದೆ. ಇನ್ನು ಇದಕ್ಕೂ ಅರ್ಧಗಂಟೆ ಮೊದಲು ಅಂದರೆ 7.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಟೀಂ ಇಂಡಿಯಾ ಶುಭಾರಂಭ
ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ತಾನಾಡಿದ ಮೊದಲ ಪಂದ್ಯದಲ್ಲಿ ಯುಎಇ ಎದುರು 9 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ಪಾಕ್‌ಗೆ ಅಗ್ನಿ ಪರೀಕ್ಷೆ
ಇನ್ನೊಂದೆಡೆ ಪಾಕಿಸ್ತಾನ ತಂಡವು ಓಮಾನ್ ಎದುರು ಸುಲಭ ಜಯ ದಾಖಲಿಸಿದ್ದು, ಇದೀಗ ಭಾರತದ ಸವಾಲನ್ನು ಎದುರು ನೋಡುತ್ತಿದೆ.
ಸೋನಿ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ
ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿದೆ. ಟಿವಿಯಲ್ಲಿ ಸೋನಿ ಸ್ಪೋರ್ಟ್ಸ್ ಹಾಗೂ ಓಟಿಟಿಯಲ್ಲಿ ಸೋನಿ ಲಿವ್‌ನಲ್ಲಿ ನೇರಪ್ರಸಾರದ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
ರೋಚಕ ಪೈಪೋಟಿ ನಿರೀಕ್ಷೆ
ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡವು ಬಹುತೇಕ ಸೂಪರ್ 4 ಹಂತಕ್ಕೆ ಲಗ್ಗೆಯಿಡಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.