'ಸಲ್ಮಾನ್ ಖಾನ್‌ಗೆ ಕೂಡ ಮಗನಿದ್ದಾನೆ. ಅವನು ಕೂಡ ದೊಡ್ಡ ಸ್ಟಾರ್ ಆಗಬೇಕು. ಅದಕ್ಕಾಗಿಯೇ ನಾವು ಕೆಲಸ ಮಾಡುತ್ತಿದ್ದೇವೆ' ಎಂದು ಶಾರುಖ್ ಖಾನ್ ಅವರು ತಮಾಷೆಯಾಗಿ ಹೇಳಿದ್ದಾರೆ. ಶಾರುಖ್ ಖಾನ್ ಮಾತನ್ನು ಕೇಳಿ ಅಲ್ಲಿಯೇ ಇದ್ದ ಆಮೀರ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರೂ ನಗಲು ಶುರುಮಾಡಿದ್ದಾರೆ.

ಏಕತೆ ಮೆರೆಯುತ್ತಾರೆ, ಭಿನ್ನತೆಯನ್ನಲ್ಲ!

ಬಾಲಿವುಡ್ ಬಿಗ್ ತಾರೆಗಳಾದ ಸಲ್ಮಾನ್ ಖಾನ್ (Salman Khan) ಹಾಗೂ ಶಾರುಖ್ ಖಾನ್ (Shah Rukh Khan) ಅವರುಗಳು ಯಾವತ್ತೂ ಒಬ್ಬರನ್ನೊಬ್ಬರು ಎಂದೂ ಬಿಟ್ಟುಕೊಡೋದಿಲ್ಲ. ಅವರಿಬ್ಬರೂ ಸ್ಟೇಜ್‌ ಮೇಲೆ ಎಲ್ಲೋ ಒಟ್ಟಿಗೆ ಕಾಣಿಸಿಕೊಂಡಾಗ ಅಥವಾ, ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ರಿಪ್ಲೈ ಕೊಡುವಾಗ, ಎಲ್ಲದರಲ್ಲೂ ಅವರಿಬ್ಬರೂ ಏಕತೆ ಮೆರೆಯುತ್ತಾರೆ, ಭಿನ್ನತೆಯನ್ನಲ್ಲ. ಅದೇ ರೀತಿ, ಇದೀಗ ಸ್ಟೇಜ್ ಒಂದರ ಮೇಲೆ ಕೂಡ ನಟ ಶಾರುಖ್ ಖಾನ್ ಅವರು ಸಲ್ಲೂವನ್ನು ಬಿಟ್ಟುಕೊಟ್ಟಿಲ್ಲ. ಅದು ಹೇಗೆ ಅಂತ ನೋಡಿ..

ಇತ್ತೀಚೆಗೆ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ಭವ್ಯವಾದ ಜಾಯ್ ಫೋರಂ 2025 ರಲ್ಲಿ ಭಾಗವಹಿಸಿ, ಚಿತ್ರರಂಗದಲ್ಲಿನ ತಮ್ಮ ಪಯಣದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾರುಖ್ ಖಾನ್, ಅಮೀರ್ ಮತ್ತು ಸಲ್ಮಾನ್ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜೊತೆಗೆ, ಮೇಲ್ನೋಟಕ್ಕೆ ಎಲ್ಲರೂ ಬೇರೆಬೇರೆ ದಿಕ್ಕು ಅಂತ ಅನ್ನಿಸಿದರೂ ನಾವೆಲ್ಲರೂ ಒಂದೇ ಎಂಬ ಮಂತ್ರವನ್ನು ಜಗತ್ತಿಗೆ ತೋರಿಸಿದ್ದಾರೆ ಈ ಖಾನ್‌ ತ್ರಿಮೂರ್ತಿಗಳು.

ಅಮೀರ್ ಕೂಡ ಅಷ್ಟೇ, ಅವರ ಸಾಧನೆ ಕೂಡ ಅಮೊಘ

"ನಾನು ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರನ್ನು ಆದರ್ಶವಾಗಿ ನೋಡುತ್ತೇನೆ. ನನ್ನನ್ನೇ ನೋಡಿ, ನಾನು ಈಗಲೂ ಸಲ್ಮಾನ್‌ರನ್ನು ಆದರ್ಶವಾಗಿ ನೋಡುತ್ತೇನೆ. ಅವರು ಎದುರಿಸಿದ ಏಳುಬೀಳುಗಳು, ಅವರು ಮಾಡಿದ ಕೆಲಸ, ಮೊದಲಿನಿಂದ ಪ್ರಾರಂಭಿಸಿ ಈ ಹಂತಕ್ಕೆ ಬಂದ ರೀತಿಗಾಗಿ ನಾನು ಅವರನ್ನು ಆದರ್ಶವಾಗಿ ನೋಡುತ್ತೇನೆ. ಈ ಜನರು ಆಕಾಂಕ್ಷೆ ಮತ್ತು ಸ್ಫೂರ್ತಿದಾಯಕರು, ಮತ್ತು ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ನಿಜವಾಗಿಯೂ ಕೃತಜ್ಞತೆ ಇದೆ ಎಂದು ಎಲ್ಲೋ ಒಂದು ಕಡೆ ಅನಿಸುತ್ತದೆ. ಅಮೀರ್ ಕೂಡ ಅಷ್ಟೇ, ಅವರ ಸಾಧನೆ ಕೂಡ ಅಮೊಘ" ಎಂದಿದ್ದಾರೆ ಶಾರುಖ್ ಖಾನ್.

ಇದೇ ವೇಳೆ ಮಾತನ್ನಾಡಿದ ನಟ ಸಲ್ಮಾನ್ ಖಾನ್ ಅವರು 'ಶಾರುಖ್‌ ಗ್ರೇಟ್‌ನೆಸ್‌ ಬಗ್ಗೆ ನಾನು ಮಾತನಾಡಬೇಕಾಗಿಯೇ ಇಲ್ಲ. ಅದರೆ ನನಗೆ ಶಾರುಖ್ ಮಗ ಆರ್ಯನ್‌ ಖಾನ್ ಬಗ್ಗೆ ಅತೀವ ಆಸಕ್ತಿ ಹುಟ್ಟಿದೆ. ಆತ ಇತ್ತೀಚೆಗೆ ಬಾಲಿವುಡ್ ಬ್ಯಾಡ್ ಬಾಯ್ಸ್‌ ಎಂಬ ವೆಬ್‌ ಸರಣಿ ನಿರ್ದೇಶಿಸಿ ಸಾಕಷ್ಟು ಜನಪ್ರಿಯ ಆಗಿದ್ದಾನೆ. ಆತನ ನಿರ್ದೇಶನದ ಕಲೆಯನ್ನು ಸಿನಿಪ್ರಿಯರು ಮೆಚ್ಚಿದ್ದಾರೆ. ಆದರೆ ನಾನು ಆತನನ್ನು ತಂದೆಯಂತೆ ತೆರೆಯೆ ಮೇಲೆ ಸ್ಟಾರ್ ಆಗಿ ಕಾಣಿಸಿಕೊಳ್ಳುವುದನ್ನು ಬಯಸುತ್ತೇನೆ' ಎಂದಿದ್ದಾರೆ.

ಸಲ್ಮಾನ್ ಖಾನ್‌ಗೆ ಕೂಡ ಮಗನಿದ್ದಾನೆ

ಆ ಬಳಿಕ ಮಾತನ್ನಾಡಿದ ನಟ ಶಾರುಖ್ ಖಾನ್ ಅವರು 'ಸಲ್ಮಾನ್ ಖಾನ್‌ಗೆ ಕೂಡ ಮಗನಿದ್ದಾನೆ. ಅವನು ಕೂಡ ದೊಡ್ಡ ಸ್ಟಾರ್ ಆಗಬೇಕು. ಅದಕ್ಕಾಗಿಯೇ ನಾವು ಕೆಲಸ ಮಾಡುತ್ತಿದ್ದೇವೆ' ಎಂದು ಶಾರುಖ್ ಖಾನ್ ಅವರು ತಮಾಷೆಯಾಗಿ ಹೇಳಿದ್ದಾರೆ. ಶಾರುಖ್ ಖಾನ್ ಮಾತನ್ನು ಕೇಳಿ ಅಲ್ಲಿಯೇ ಇದ್ದ ಆಮೀರ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರೂ ನಗಲು ಶುರುಮಾಡಿದ್ದಾರೆ. ಆದರೆ, ಎಲ್ಲರಿಗೂ ಅಚ್ಚರಿ ಆಗಿದೆ. ಏಕೆಂದರೆ, ಸಲ್ಮಾನ್ ಖಾನ್‌ಗೆ ಮದುವೆಯೇ ಆಗಿಲ್ಲ, ಸೋ ಮಗನನ್ನು ದತ್ತು ಪಡೆದುಕೊಂಡಿರುವ ಸುದ್ದಿಯೂ ಇಲ್ಲ. ಹೀಗಿರುವಾಗ 'ಶಾರುಖ್ ಖಾನ್ ಅವರ ಮಾತಿನ ಅರ್ಥವೇನು?' ಎಂದು ಹಲವರು ತಲೆ ಕೆರೆದುಕೊಂಡಿದ್ದಾರೆ.

ಸೋಷಿಯಲ್ ಮೀಡಯಾದಲ್ಲಿ ಕಾಮೆಂಟ್!

ಆದರೆ, ಈ ‘ಖಾನ್‌ ತ್ರಯ’ರನ್ನು ಬಲ್ಲವರಿಗೆ ಅದು ಅರ್ಥವಾಗಿದೆ. ಅವರು ತಮ್ಮ ಮೂವರಲ್ಲೂ ಬೇಧಭಾವ ಮಾಡಿಕೊಳ್ಳುವುದಿಲ್ಲ. ಶಾರುಖ್ ಮಗನನ್ನು ತಮ್ಮ ಮಗನೆಂದು ಸಲ್ಮಾನ್ ಖಾನ್ ಹೇಳಲಿ ಎಂದು ಶಾರುಖ್ ಖಾನ್ ಬಯಸಿರಬಹುದು. ಅದನ್ನೇ ಪರೋಕ್ಷವಾಗಿ ಸೂಚ್ಯವಾಗಿ ನಟ ಶಾರುಖ್ ಹೇಳಿರುತ್ತಾರೆ ಎಂದಿದ್ದಾರೆ ಹಲವರು. ಅದನ್ನು ಬಿಟ್ಟು ಬೇರೆ ಅರ್ಥ ಆ ಮಾತಿಗೆ ಇಲ್ಲ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಅಭಿಪ್ರಾಯ ಏನು ಅಂತ ಕಾಮೆಂಟ್ ಮಾಡಿ..