ಬಾಲಿವುಡ್ ನಟ ಸಂಜಯ್ ದತ್ ಹೊಸ ಐಷಾರಾಮಿ ಕಾರ್ ಖರೀದಿ ಮಾಡಿದ್ದಾರೆ. 4 ಕೋಟಿ ಮೌಲ್ಯದ ಕಾರು ಸಂಜಯ್ ದತ್ ಮನೆ ಸೇರಿದೆ.
ಬಾಲಿವುಡ್ ನಟ ಸಂಜಯ್ ದತ್ (Bollywood actor Sanjay Dutt) ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಸಂಜಯ್ ದತ್ ಹೊಸ ಐಷಾರಾಮಿ ಎಸ್ಯುವಿ ಖರೀದಿಸಿದ್ದಾರೆ. ಇದು ಯಾವುದೋ ಸಾಮಾನ್ಯ ಕಾರಲ್ಲ. ನವೀಕರಿಸಿದ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 (Mercedes-Maybach GLS 600). ಸಂಜಯ್ ದತ್ ಈ ಕಾರನ್ನು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಖರೀದಿಸಿದ್ದಾರೆ. ಈ ಎಸ್ಯುವಿ ಮರ್ಸಿಡಿಸ್-ಬೆನ್ಜ್ ಅನ್ನು ಭಾರತದಲ್ಲಿ ಅತ್ಯುತ್ತಮ ಐಷಾರಾಮಿ ಮಾಡೆಲ್ ಎಂದು ನಂಬಲಾಗಿದೆ. ಈ ಕಾರ್ ಈಗಾಗಲೇ ಅನೇಕ ಬಾಲಿವುಡ್ ಸ್ಟಾರ್ಸ್ ಬಳಿ ಇದೆ. ಅಜಯ್ ದೇವಗನ್, ರಣವೀರ್ ಸಿಂಗ್, ಅರ್ಜುನ್ ಕಪೂರ್ ಮತ್ತು ಶಿಲ್ಪಾ ಶೆಟ್ಟಿಯಂತ ಸ್ಟಾರ್ಸ್ ಈ ಕಾರನ್ನು ಖರೀದಿ ಮಾಡಿದ್ದಾರೆ.
ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಸ್ಪೇಷಾಲಿಟಿ ಏನು? : ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಡಿಸೈನ್ ಸಾಕಷ್ಟು ರಾಯಲ್ ಆಗಿದೆ. ಇದು ದೊಡ್ಡ ಕ್ರೋಮ್ ಗ್ರಿಲ್ ಹೊಂದಿದೆ. ಅದರ ಮೇಲೆ ಮರ್ಸಿಡಿಸ್ ಲೋಗೋ ಶೈನ್ ಆಗುತ್ತೆ. ಈ ಎಸ್ಯುವಿ ವಿಶೇಷ ಮೇಬ್ಯಾಕ್ ಮಿಶ್ರಲೋಹದ ವೀಲ್ಸ್ ಮೇಲೆ ಓಡುತ್ತೆ. ಅಟ್ರ್ಯಾಕ್ಟಿವ್ ಮೇಬ್ಯಾಕ್ ಲೋಗೋ ಡಿ-ಪಿಲ್ಲರ್ನಲ್ಲಿ ಕಂಡುಬರುತ್ತದೆ. ಇದು ಆಟೋ-ಸ್ಲೈಡಿಂಗ್ ಫುಟ್ಸ್ಟೆಪ್ ಹೊಂದಿದೆ. ಇದ್ರಿಂದ ಕಾರಿನ ಒಳಗೆ ಮತ್ತು ಹೊರಗೆ ಹೋಗೋದು ತುಂಬಾ ಸುಲಭ. ರಸ್ತೆ ಮೇಲೆ ಈ ಕಾರ್ ಓಡ್ತಿದ್ರೆ ಎಲ್ಲರ ಕಣ್ಣು ಅದ್ರ ಮೇಲೆ ಬೀಳೋದು ಗ್ಯಾರಂಟಿ. ಹಾಗಾಗೇ ಇದಕ್ಕೆ ಸೆಲೆಬ್ರಿಟಿ ಕಾರು ಎಂಬ ಟ್ಯಾಗ್ ನೀಡಲಾಗಿದೆ.
ಮರ್ಸಿಡಿಸ್-ಮೇಬ್ಯಾಕ್ GLS600 ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದ್ಲೂ ಐಷಾರಾಮಿಯಾಗಿದೆ. ಇದ್ರಲ್ಲಿ ಮಸಾಜ್ ಫಂಕ್ಷನ್ ಸೀಟ್ ನೀಡಲಾಗಿದೆ. ಇದು ಪ್ರಯಾಣವನ್ನು ತುಂಬಾ ಆರಾಮದಾಯಕವಾಗಿಸುತ್ತದೆ. ಕಾರು ಮಲ್ಟಿ-ಸನ್ರೂಫ್ ಮತ್ತು ಹಿಂಭಾಗದ ಸನ್ಬ್ಲೈಂಡ್ ಹೊಂದಿದೆ. ಇದು ಕ್ಯಾಬಿನ್ಗೆ ಇನ್ನಷ್ಟು ಪ್ರೀಮಿಯಂ ಲುಕ್ ನೀಡುತ್ತದೆ. ಇದರ ಅಡಾಪ್ಟಿವ್ ಏರ್ ಸಸ್ಪೆನ್ಷನ್ ಯಾವ್ದೆ ರಸ್ತೆಯಲ್ಲಾದ್ರೂ ಸುಗಮವಾಗಿ ಮತ್ತು ಆರಾಮದಾಯಕ ಚಲಿಸುತ್ತೆ. ಇದರ ಹೊರತಾಗಿ, 27-ಸ್ಪೀಕರ್ ಹೈ-ಫಿಡೆಲಿಟಿ ಸೌಂಡ್ ಸಿಸ್ಟಮ್ ಅತ್ಯುತ್ತಮ ಮ್ಯೂಜಿಕ್ ಗುಣಮಟ್ಟ ನೀಡುತ್ತೆ. ಕಾರು 64 ಬಣ್ಣಗಳ ಆಂಬಿಯೆಂಟ್ ಲೈಟಿಂಗ್ ಆಪ್ಷನ್ ಹೊಂದಿದೆ. ಇದ್ರಲ್ಲಿರುವ 12.3-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ , ಮಾಡರ್ನ್ ಮತ್ತು ಟೆಕ್ ಫ್ರೆಂಡ್ಲಿಯಾಗಿದೆ. ಮರ್ಸಿಡಿಸ್-ಮೇಬ್ಯಾಕ್ GLS600 4.0-ಲೀಟರ್ V8 ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 560 bhp ಪವರ್ ಮತ್ತು 730 Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ.
ಬೆಲೆ : ಮರ್ಸಿಡಿಸ್-ಮೇಬ್ಯಾಕ್ GLS600 ನ ಬೆಲೆ ನಗರಕ್ಕೆ ತಕ್ಕಂತೆ ಬದಲಾಗುತ್ತೆ. ನೋಯ್ಡಾದಲ್ಲಿ ಇದರ ಆನ್-ರೋಡ್ ಬೆಲೆ ಸುಮಾರು 3.91 ಕೋಟಿ ರೂಪಾಯಿಗಳಾಗಿದ್ದರೆ, ಮುಂಬೈನಲ್ಲಿ ಈ ಬೆಲೆ 4 ಕೋಟಿ ರೂಪಾಯಿಗಳಿಗಿಂತ ಹೆಚ್ಚು.
ಸಂಜಯ್ ದತ್ ಬಳಿ ಇದೆ ಈ ಎಲ್ಲ ಕಾರು : ಸಂಜಯ್ ದತ್ ಬಳಿ ಸಾಕಷ್ಟು ಕಾರಿದೆ. ಸುಮಾರು 5 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್, ಸಂಜಯ್ ಅವರ ಪ್ರೀಮಿಯಂ ಕಾರುಗಳಲ್ಲಿ ಒಂದಾಗಿದೆ. ಕೆಂಪು ಬಣ್ಣದಲ್ಲಿರುವ ಫೆರಾರಿ 599 GTB, ಸುಮಾರು 3.7 ಕೋಟಿ ಮೌಲ್ಯದ ಸ್ಪೋರ್ಟಿ ಕಾರನ್ನು ಸಂಜಯ್ ದತ್ ಹೊಂದಿದ್ದಾರೆ. ಸಂಜಯ್ ದತ್ ಬಳಿ ರೇಂಜ್ ರೋವರ್ ಕಾರಿದೆ. ಅದರ ಬೆಲೆ ಸುಮಾರು 2.1 ಕೋಟಿ.
