ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ನೋಡಬೇಕು ಅನ್ನೋ ಅನ್ನೋ ಕುತೂಹಲ ಇಬ್ಬರ ಫಾಲೋವರ್ಸ್​ಗು ಇದೆ. ಹಾಗಾದ್ರೆ ಈ ಜೋಡಿ ಎಲ್ಲಿ ಮ್ಯಾರೇಜ್ ಆಗ್ತಾರೆ. ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕಾ ಒಡನಾಟ ಹೇಗಿದೆ ಅಂತ ನೋಡೋಣ ಬನ್ನಿ.

ಶ್ರೀವಲ್ಲಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ಹೇಗಿರುತ್ತೆ..? ಇಬ್ಬರು ಎಲ್ಲಿ ಮ್ಯಾರೇಜ್ ಆಗ್ತಾರೆ.? ಈ ಜೋಡಿ ಮದುವೆ ನೋಡಬೇಕು ಅನ್ನೋ ಅನ್ನೋ ಕುತೂಹಲ ಇಬ್ಬರ ಫಾಲೋವರ್ಸ್​ಗು ಇದೆ. ಹಾಗಾದ್ರೆ ಈ ಜೋಡಿ ಎಲ್ಲಿ ಮ್ಯಾರೇಜ್ ಆಗ್ತಾರೆ. ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕಾ ಒಡನಾಟ ಹೇಗಿದೆ ಅಂತ ನೋಡೋಣ ಬನ್ನಿ. ವಿಜಯ್ ರಶ್ಮಿಕಾರದ್ದು ಡೆಸ್ಟಿನೇಷನ್​ ಮ್ಯಾರೇಜ್ ಅಂತೆ. ಅಂದ್ರೆ ಊರು ಬಿಟ್ಟು ಪರ ಊರಿಗೆ ಹೋಗಿ ಮಾಡಿಕೊಳ್ಳೋ ಮದುವೆ. ಈ ಜೋಡಿ ತಮ್ಮ ಮದುವೆಗೆ ಇಟಲಿಯನ್ನ ಆಯ್ಕೆ ಮಾಡಿಕೊಂಡಿದೆ ಅಂತ ಹೇಳಲಾಗ್ತಿದೆ. ಮದುವೆ ವಿಚಾರಕ್ಕೆ ಬಂದ್ರೆ ಬೆಸ್ಟ್ ಲೊಕೇಷನ್ ಇಟಲಿ.

ಅಲ್ಲಿ ಮದುವೆ ಹೇಳಿ ಮಾಡಿಸಿದಂತ ಜಾಗಗಳಿವೆ. ಹೀಗಾಗೆ ಬಾಲಿವುಡ್​ನ ಹಲವು ತಾರೆಯರು ಇಟಲಿಯಲ್ಲಿ ಮ್ಯಾರೇಜ್ ಆಗಿದ್ದಾರೆ. ರಶ್ಮಿಕಾಗೂ ಅದೇ ಆಸೆ ಇದೆ ಅಂತ ಹೇಳಲಾಗ್ತಿದೆ. ಗರ್ಲ್​ ಫ್ರೆಂಡ್ ರಶ್ಮಿಕಾಗೆ ವಿಜಯ್​​ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ಕಾರಣ ಇಬ್ಬರು ಮಿಡಲ್​ಕ್ಲಾಸ್​ ಕುಟುಂಬದಿಂದ ಬಂದವರು ಅನ್ನೋದು. ಕಷ್ಟ ಏನು ಅಂತ ಇಬ್ಬರಿಗೂ ಗೊತ್ತು. ಹೀಗಾಗಿ ವಿಜಯ್ ಸೋಲು ಗೆಲುವಿನ ಜತೆ ರಶ್ಮಿಕಾ ನಿಲ್ತಾರೆ. ರಶ್ಮಿಕಾ ಪ್ರತಿ ಹೆಜ್ಜೆಗೂ ವಿಜಯ್ ಸಪೋರ್ಟ್ ಮಾಡ್ತಾರೆ. ಹಿಗಾಗೆ ರಶ್ಮಿಕಾ ಇಂದು ದೇಶದ ನಂಬರ್​-01 ನಟಿಯಾಗಿ ಬೆಳೆಯಲು ಸಾಧ್ಯವಾಗಿದ್ದು. ರಶ್ಮಿಕಾ ಕೆಲಸದಲ್ಲಿ ಬ್ಯುಸಿ ಆಗಿದ್ರೆ, ವಿಜಯ್ ದೇವರಕೊಂಡ ಮುಂಬೈಗೆ ಹುಡುಕಿಕೊಂಡು ಹೋಗ್ತಾರೆ. ರಶ್ಮಿಕಾ ಫ್ರೀ ಮಾಡಿಕೊಂಡು ಹೈದರಾಬಾದ್​ಗೆ ವಿಜಯ್​ರನ್ನ ಕುಡುಕಿಕೊಂಡು ಬರ್ತಾರೆ.

ಇಬ್ಬರು ಹೈದರಾಬಾದ್​ನಲ್ಲಿ ಉಳಿದುಕೊಳ್ಳೋಕೆ ಹೊಸ ಮನೆ ಖರೀದಿಸಿದ್ದಾರೆ ಅಂತಲೂ ಹೇಳಲಾಗಿದೆ. ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ಮಂದಣ್ಣ ಮನೆ ಮಗಳಂತಿದ್ದಾರೆ. ಅದರಲ್ಲೂ ವಿಜಯ್ ತಮ್ಮ ಆನಂದ್​ ದೇವರಕೊಂಡಗೆ ಸದಾ ಬೆನ್ನು ತಟ್ಟೊ ರಶ್ಮಿಕಾ ವಿಜಯ್​ರ ತಂದೆ ತಾಯಿಗೂ ಫೇವರಿಟ್ ಆಗಿದ್ದಾರೆ. ಹೀಗಾಗಿ ವಿಜಯ್ ಮನೆಯಲ್ಲಿ ನಡೆಯೋ ಯಾವ ಹಬ್ಬವನ್ನ ರಶ್ಮಿಕಾ ಮಿಸ್ ಮಾಡಿಕೊಳ್ಳಲ್ಲ. ರಶ್ಮಿಕಾ ತನ್ನ ಪ್ರತಿ ಹೆಜ್ಜೆಯಲ್ಲೂ ವಿಜಯ್ ದೇವರಕೊಂಡ ಕುಟುಂಬವನ್ನ ಕರೆದುಕೊಂಡು ಹೋಗ್ತಾರೆ. ಪುಷ್ಪ ಸಿನಿಮಾಗಳು ಬಿಡುಗಡೆ ಆದಾಗ ವಿಜಯ್ ದೇವರಕೊಂಡ ಕುಟುಂಬಕ್ಕೆ ಸ್ಪೆಷಲ್ ಶೋ ಹಾಕಿ ತೋರಿಸಿದ್ರು, ವಿಜಯ್ ದೇವರಕೊಂಡನ ತಮ್ಮ ಆನಂದ್​​​​ ದೇವರಕೊಂಡನ ಸಿನಿಮಾದ ಮಹೂರ್ಥದಲ್ಲಿ ಭಾಗಿ ಆಗಿ ಶುಭ ಹಾರೈಸಿದ್ರು.

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ

ಅಷ್ಟೆ ಅಲ್ಲ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ನಾನು ಹೈದರಾಬ್​​ನವಳು ಅಂತ ಹೇಳಿ ದೊಡ್ಡ ವಿವಾದಕ್ಕೆ ಕಾರಣ ಆಗಿದ್ರು. ಆದ್ರೆ ಈಗ ಹೈದರಾಬಾದ್​​ ಹುಡುಗ ವಿಜಯ್ ಜೊತೆ ಎಂಗೇಜ್ಮೆಂಟ್ ಆಗಿರೋದನ್ನ ನೋಡಿದ್ರೆ ರಶ್ಮಿಕಾ ಹೇಳಿದ್ರಲ್ಲೇನು ತಪ್ಪಿಲ್ಲ. ಯಾಕಂದ್ರೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಹಾಗೆ ರಶ್ಮಿಕಾ ಹೈದರಾಬಾದ್​ನ ಸೊಸೆ ಆಗ್ತಿದ್ದಾರೆ. ಒಟ್ಟಾರೆ ತನ್ನ ಲೈಫ್ ಪಾರ್ಟನರ್ ಯಾರಾಗಬೇಕು ಅನ್ನೋದನ್ನ ನಿರ್ಧರಿಸೋ ಹಕ್ಕು ರಶ್ಮಿಕಾಗೆ ಸೇರಿದ್ದು. ಅದನ್ನ ಯಾರೂ ಪ್ರಶ್ನೆ ಮಾಡೋದಕ್ಕೆ ಆಗೋದಿಲ್ಲ. ಈಗ ಶ್ರೀವಲ್ಲಿ ತನ್ನ ಜೀವನದ ಮತ್ತೊಂದು ಪ್ರಮುಖ ಘಟ್ಟಕ್ಕೆ ಬಂದು ನಿಂತಿದ್ದಾರೆ. ರಶ್ಮಿಕಾ ವಿಜಯ್ ಜೊತೆ ಮದುವೆ ಆಗಿ ಹೊಸ ಜೀವನ ಕಟ್ಟಿಕೊಳ್ಳೋ ಹಂಬಲದಲ್ಲಿದ್ದಾರೆ.