ರಶ್ಮಿಕಾ ವಿಜಯ್ ದೇವರಕೊಂಡ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ..? ರಕ್ಷಿತ್ ಜೊತೆಗಿನ ಎಂಗೇಜ್ಮೆಂಟ್ ಮುರಿದು ಬಿದ್ದಿದ್ದು ಯಾಕೆ. ರಶ್ಮಿಕಾ ವಾಪಸ್ ಬರ್ತಾಳೆ ರಕ್ಷಿತ್​ಗೆ ಸಿಕ್ಕೇ ಸಿಕ್ತಾಳೆ ಅಂತ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಒಂದು ಆಸೆ.

ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯಾ.. ಈ ಹಾಡು ಈಗ ರಶ್ಮಿಕಾ ಹಾಗು ರಕ್ಷಿತ್​ರನ್ನ ಇಷ್ಟ ಪಡುವವರ ನೋವಿನ ಗೀತೆ ಆಗಿದೆ. ಯಾಕಂದ್ರೆ ರಶ್ಮಿಕಾ ವಿಜಯ್ ಅಧಿಕೃತವಾಗಿ ಎಂಗೇಜ್ ಆಗಿದ್ದು, ರಕ್ಷಿತ್ ರಶ್ಮಿಕಾ ಒಂದಾಗುತ್ತಾರೆ ಅಂತ ಕಾಯ್ತಿದ್ದವರ ಹೃದಯ ಭಗ್ನವಾಗುವಂತೆ ಮಾಡಿದ್ದಾರೆ. ಹಾಗಾದ್ರೆ ರಶ್ಮಿಕಾ ವಿಜಯ್ ದೇವರಕೊಂಡ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ..? ರಕ್ಷಿತ್ ಜೊತೆಗಿನ ಎಂಗೇಜ್ಮೆಂಟ್ ಮುರಿದು ಬಿದ್ದಿದ್ದು ಯಾಕೆ. ರಶ್ಮಿಕಾ ವಾಪಸ್ ಬರ್ತಾಳೆ ರಕ್ಷಿತ್​ಗೆ ಸಿಕ್ಕೇ ಸಿಕ್ತಾಳೆ ಅಂತ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಒಂದು ಆಸೆ. ಇತ್ತು. ರಶ್ಮಿಕಾರ ಕೆಲ ಫ್ಯಾನ್ಸ್​ಗೂ ರಕ್ಷಿತ್​ರನ್ನೇ ಮದುವೆ ಆಗ್ಲಿ ಅನ್ನೋ ಇರಾದೆ ಇತ್ತು.

ಆದ್ರೆ ರಶ್ಮಿಕಾ ಕೊನೆಗೂ ರಕ್ಷಿತ್​ ಬಳಿ ಬರಲೇ ಇಲ್ಲ. ಇದನ್ನ ನೋಡಿದ ರಕ್ಷಿತ್ ಅಭಿಮಾನಿಗಳ ಹೃದಯ ಭಗ್ನ ಆಗಿದೆ. ಹಾಗ್ ನೋಡಿದ್ರೆ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಇಂದು ಕನ್ನಡದ ಹುಡುಗ ರಕ್ಷಿತ್ ಶೆಟ್ಟಿಯ ಹೆಂಡತಿ ಆಗ ಬೇಕಿತ್ತು. ಯಾಕಂದ್ರೆ ಕಿರಿಕ್​ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾಗೆ ನಾಯಕಿ ನಟಿಯಾಗಲು ಚಾನ್ಸ್ ಕೊಟ್ಟಿದ್ದ ರಕ್ಷಿತ್ ಶೆಟ್ಟಿ, ರಶ್ಮಿಕಾರನ್ನ ತುಂಬಾ ಡೀಪ್ ಆಗಿ ಲವ್ ಮಾಡುತ್ತಿದ್ರು. ಇಬ್ಬರು ಕಿರಿಕ್ ಪಾರ್ಟಿ ಸಿನಿಮಾ ಸಕ್ಸಸ್ ಆಗ್ತಿದ್ದಂತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ರು. ಇವರಿಬ್ಬರ ಪ್ರೀತಿ ಎಷ್ಟು ಗಟ್ಟಿಯಾಗಿತ್ತು ಅಂದ್ರೆ ಕೂರ್ಗ್​ನಲ್ಲಿ ಎರಡೂ ಕುಟುಂಬ ಮತ್ತು ಫ್ರೆಂಡ್ಸ್​ ಮಧ್ಯೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ್ರು, ಆದ್ರೆ ಆ ನಿಶ್ಚಿತಾರ್ಥಕ್ಕೆ ಆಯಸ್ಸು ಇದ್ದಿದ್ದು ಕೇವಲ ಒಂದು ವರ್ಷ ಮಾತ್ರ.

ಇಬ್ಬರ ರಿಲೇಷನ್​ ಶಿಪ್ ಮುರಿದು ಬಿತ್ತು. ರಕ್ಷಿತ್ ಒಬ್ಬೊಂಟಿ ಆದ್ರು. ರಶ್ಮಿಕಾ ಹೈದರಾಬಾದ್​​ನ ವಿಜಯ್ ದೇವರಕೊಂಡ ಹೃದಯ ಸೇರಿದ್ಲು. ರಕ್ಷಿತ್ ಶೆಟ್ಟಿಯ ಪ್ರೀತಿಗೆ ರಶ್ಮಿಕಾ ಬೆಂಕಿ ಇಟ್ಟು ಹೋಗೋಕೆ ಕಾರಣ ತೆಲುಗು ಹುಡುಗ ವಿಜಯ್ ದೇವರಕೊಂಡ ಗೀತಾ ಗೋವಿಂದಂ ಸಿನಿಮಾದಲ್ಲಿ ನಟಿಸೋ ವೇಳೆ ರಶ್ಮಿಕಾ ಮತ್ತು ವಿಜಯ್ ನಡುವೆ ಆಪ್ತತೆ ಬೆಳೆದಿತ್ತು. ಆಲ್ ರೆಡಿ ರಕ್ಷಿತ್ ಜೊತೆ ಎಂಗೇಜ್ ಆಗಿದ್ದ ರಶ್ಮಿಕಾ ವಿಜಯ್ ದೇವರಕೊಂಡಗೆ ಮನಸೋತಿದ್ಳು. ವಿಜಯ್​ ಮುತ್ತಿನ ಮತ್ತಲ್ಲಿ ತೇಲಾಡಿದ್ಲು. ವಿಜಯ್ ದೇವರಕೊಂಡ ಜೊತೆಗೆ ಗೀತಾ ಗೋವಿಂದಂ ಸಿನಿಮಾದ ಹಸಿ ಬಿಸಿ ದೃಶ್ಯ ರಕ್ಷಿತ್ ಹೃದಯ ಒಡೆದು ಚೂರಾಗುವಂತೆ ಮಾಡಿತ್ತು.

ಆದ್ರೆ ರಕ್ಷಿತ್ ಪ್ರೀತಿಯನ್ನ ಅರ್ಥ ಮಾಡಿಕೊಳ್ಳದ ರಶ್ಮಿಕಾ ವಿಜಯ್ ತೆಕ್ಕೆಯಲ್ಲಿ ಬಂದಿಯಾಗಿದ್ರು. ಅಲ್ಲಿಗೆ ರಕ್ಷಿತ್ ಪ್ರೀತಿಯ ಪಾರಿವಾಳ ರಶ್ಮಿಕಾ ರಕ್ಷಿತ್​ಗೆ ಕೈಗೆ ಸಿಗದಷ್ಟು ದೂರ ಹಾರಿ ಹೋಗಿತ್ತು. ಈ ವಿಚಾರವಾಗಿ ರಶ್ಮಿಕಾನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ರು. ಈಗಲೂ ಮಾಡ್ತಾನೇ ಇರ್ತಾರೆ. ರಶ್ಮಿಕಾ ರಕ್ಷಿತ್​ಗೆ ಮೋಸ ಮಾಡಿದಳು, ಈಕೆ ಮೋಸಗಾತಿ, ಮಾಟಗಾತಿ , ಮಾಯಾಜಿಂಕೆ, ಚಿಟ್ಟೆ ಅಂತೆಲ್ಲಾ ರಶ್ಮಿಕಾನ ಟ್ರೋಲ್ ಮಾಡಲಾಗುತ್ತೆ. ಆದ್ರೆ ಈ ಹೆಣ್ಣಿನ ಹೃದಯದಲ್ಲಿ ನಡೆದಿದ್ದೇನು,,? ಎಲ್ಲರೆದರು ಎಂಗೇಜ್ ಆಗಿದ್ದ ಗೆಳೆಯನನ್ನ ಬಿಟ್ಟು ನಡೆದಿದ್ದೇಕೆ..? ಮತ್ತೊಬ್ಬ ಹುಡುಗ ಹೃದಯದಲ್ಲಿ ಸ್ಥಾನ ಪಡೆದಿದ್ದೇಕೆ. ಅಂತ ರಶ್ಮಿಕಾ ಸಂದರ್ಶನವೊಂದರಲ್ಲಿ ಸೂಕ್ಷ್ಮವಾಗಿ ಉತ್ತರ ಕೊಟ್ಟಿದ್ರು. ನಾನು ಒಬ್ಬ ಗಂಡಸಿನಲ್ಲಿ ಇಷ್ಟಪಡುವ ಗುಣ ಅಂದ್ರೆ ಆತನ ಕಣ್ಣುಗಳು. ಕಣ್ಣುಗಳು ಒಬ್ಬ ಮನುಷ್ಯನ ಆತ್ಮದ ಕಿಟಕಿ ಅಂತ ನಾನು ಭಾವಿಸುತ್ತೇನೆ.

ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ

ನಾನು ಯಾವಾಗಲೂ ನಗುನಗುತ್ತಾ ಇರ್ತೇನೇ. ಆತನೂ ಹಾಗೇ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಸುತ್ತಲೂ ಇರುವ ವ್ಯಕ್ತಿಗಳಿಗೆ ಗೌರವ ಕೊಡಬೇಕು ಅದೇ ಯಾರೇ ಆಗಿದ್ದರೂ ಗೌರವ ನೀಡಬೇಕು. ಎಲ್ಲರನ್ನೂ ಗೌರವಿಸುವ ವ್ಯಕ್ತಿಯನ್ನ ನಾನು ಗೌರವಿಸುತ್ತೇನೆ. ಹೌದು ರಶ್ಮಿಕಾ ಹೇಳಿರೋ ಈ ಮಾತುಗಳಲ್ಲಿ ಬಹಳಾನೇ ಅರ್ಥ ಇದೆ. ಮನುಷ್ಯ ಶುದ್ಧ ಹೃದಯದವನಾಗಿರಬೇಕು. ಮನಸಾರೆ ನಗಬೇಕು. ಎಲ್ಲರನ್ನೂ ಗೌರವಿಸಬೇಕು. ವಿಜಯ್ ಅಂಥಾ ವ್ಯಕ್ತಿ. ಅದಕ್ಕೆ ನನಗೆ ಅವನಿಷ್ಟ ಅನ್ನೋದು ರಶ್ ಮಾತು. ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಏನ್ ಗೊತ್ತಾ.? ರಶ್ಮಿಕಾ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ಆದ ದಿನವೇ ನಟ ರಕ್ಷಿತ್ ಶೆಟ್ಟಿ ಬೆಸ್ಟ್ ಆಕ್ಟರ್ ಅಂತ ರಾಜ್ಯ ಪ್ರಶಸ್ತಿ ಸಿಕ್ಕಿದೆ. 2021ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಮಾಡಲಾಗಿದ್ದು 777 ಚಾರ್ಲಿ ಸಿನಿಮಾದ ನಟನೆಗೆ ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಈ ಕಡೆ ರಶ್ಮಿಕಾ ಹೊಸ ಜೀವನದ ಕಡೆ ಹೆಜ್ಜೆ ಇಟ್ಟಿದ್ದಾರೆ.