ರಶ್ಮಿಕಾ ಮಂದಣ್ಣ ಈಗ ವೈಯಕ್ತಿಕ ವಿಷ್ಯಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಅವ್ರ ರಿಂಗ್ ಸದ್ಯ ಚರ್ಚೆಯ ಕೇಂದ್ರಬಿಂದು. ವಿಜಯ್ ಜೊತೆ ರಶ್ಮಿಕಾ ಎಂಗೇಜ್ ಆದ್ರಾ? 

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National crush Rashmika Mandanna) ಸದ್ಯ ಎಂಗೇಜ್ಮೆಂಟ್ (Engagement) ವಿಷ್ಯಕ್ಕೆ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಕೈನಲ್ಲಿ ಹೊಳೆಯುತ್ತಿರುವ ರಿಂಗ್ ಎಲ್ಲರ ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ, ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾರೆ ಎನ್ನುವ ಚರ್ಚೆ ಜೋರು ಪಡೆದಿದೆ. ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) 2025 ರ ರೆಡ್ ಕಾರ್ಪೆಟ್ ಮೇಲೆ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಅದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ನೀಲಿ ಪ್ಯಾಂಟ್ ಮತ್ತು ಬಿಳಿ ಶರ್ಟ್ ನಲ್ಲಿ ಸರಳ ಲುಕ್ ನಲ್ಲಿ ರಶ್ಮಿಕಾ ಮಂದಣ್ಣ ಎಲ್ಲರ ಗಮನ ಸೆಳೆದ್ರು. ಅವರ ಬೆರಳಿನಲ್ಲಿ ಹೊಳೆಯುತ್ತಿದ್ದ ರಿಂಗ್ ಎಲ್ಲರ ಕಣ್ಣನ್ನು ಅರಳಿಸಿತು.

ವಿಜಯ್ ದೇವರಕೊಂಡ (Vijay Devarakonda) ಜೊತೆ ರಶ್ಮಿಕಾ ಎಂಗೇಜ್ ಮೆಂಟ್? : ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಏರ್ ಪೋರ್ಟ್ ನಲ್ಲಿ ಕಾರಿನಿಂದ ಇಳಿದ ರಶ್ಮಿಕಾ ಮಂದಣ್ಣ, ಕ್ಯಾಮೆರಾಗಳಿಗೆ ಕೈ ಬೀಸಿ, ಫೋಟೋಕ್ಕೆ ಫೋಸ್ ನೀಡಿದ್ದಾರೆ. ಈ ಸಮಯದಲ್ಲಿ ರಶ್ಮಿಕಾ ಬೆರಳಿನಲ್ಲಿದ್ದ ಉಂಗುರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಈ ಫೋಟೊ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ, ಗೆಳೆಯ ವಿಜಯ್ ದೇವರಕೊಂಡ ಅವರೊಂದಿಗೆ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ ಅಂತ ಫ್ಯಾನ್ಸ್ ಪ್ರಶ್ನೆ ಮಾಡೋಕೆ ಶುರು ಮಾಡಿದ್ದಾರೆ.

ಆ ನಟನ ಜೊತೆ ಏರ್ಪೋರ್ಟ್‌ನಲ್ಲಿ ಒಟ್ಟಿಗೆ ಸಿಕ್ಕಿಬಿದ್ದ ಮೀನಾಕ್ಷಿ ಚೌಧರಿ: ಡೇಟಿಂಗ್ ಸುದ್ದಿ ವೈರಲ್!

ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಲವ್ ಸ್ಟೋರಿ : ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂ ಡ ಡೇಟ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹಳೇದು. ಅನೇಕ ತಿಂಗಳಿಂದ ಅವರಿಬ್ಬರು ಮದುವೆ ಆಗ್ತಾರೆ ಎನ್ನುವ ಬಗ್ಗೆ ಚರ್ಚೆ ಆಗ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ, ನಾವಿಬ್ಬರು ಪ್ರೀತಿ ಮಾಡ್ತಿದ್ದೇವೆ ಅಂತ ಎಲ್ಲೂ ಹೇಳಿಕೊಂಡಿಲ್ಲ. ಆದ್ರೆ ಇಂಟರ್ವ್ಯೂ ಒಂದರಲ್ಲಿ, ಸಿನಿ ಉದ್ಯಮದ ಹುಡುಗಿ ಜೊತೆ ಡೇಟ್ ಮಾಡ್ತಿದ್ದೇನೆ ಅಂತ ವಿಜಯ್ ಒಪ್ಪಿಕೊಂಡಿದ್ದರು. ರಶ್ಮಿಕಾ ಕೂಡ, ನಾನು ಯಾರನ್ನು ಪ್ರೀತಿ ಮಾಡ್ತಿದ್ದೇನೆ ಅನ್ನೋದು ನಿಮಗೆಲ್ಲ ಗೊತ್ತು, ಅದ್ರ ಬಗ್ಗೆ ಮತ್ತೆ ಹೇಳ್ಬೇಕಾಗಿಲ್ಲ ಅಂತ ಈ ಹಿಂದೆ ಹೇಳಿಕೆ ನೀಡಿದ್ರು. ನ್ಯೂಯಾರ್ಕ್ನಲ್ಲಿ ನಡೆದ ಇಂಡಿಯಾ ಡೇ ಪೆರೇಡ್ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬಹಿರಂಗವಾಗಿ ಪರಸ್ಪರ ಕೈ ಹಿಡಿದುಕೊಂಡಿದ್ದರು. ಅಂದಿನಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪ್ರೇಮ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿತ್ತು. ರಶ್ಮಿಕಾ ಮತ್ತು ವಿಜಯ್ ಇಬ್ಬರೂ SIIMA ಪ್ರಶಸ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿದ್ದಾರೆ. ಇಬ್ಬರು ಆಗಾಗ ಸಾರ್ವಜನಿಕ ಪ್ರದೇಶದಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿರೋದ್ರಿಂದ ಪ್ರೀತಿ, ಮದುವೆಗೆ ಬಂದು ನಿಂತಿದೆ ಎಂಬ ಚರ್ಚೆ ಹುಟ್ಟು ಹಾಕಿದೆ.

Baaghi 4 ಚಿತ್ರಕ್ಕಾಗಿ ಟೈಗರ್ ಶ್ರಾಫ್ ಫಿಟ್‌ನೆಸ್ ತಯಾರಿ ಹೇಗಿತ್ತು? ಡಯಟ್​ ಪ್ಲ್ಯಾನ್​ ಬಹಿರಂಗ!

ಸೀರೆಯಲ್ಲಿ ಮಿಂಚಿದ ಬೆಡಗಿ : ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025ರಲ್ಲಿ ರಶ್ಮಿಕಾ ಮಂದಣ್ಣ ಸೀರೆಯಲ್ಲಿ ಮಿಂಚಿದ್ದಾರೆ. ಅವರ ನಗು, ಸೀರೆಯುಟ್ಟ ರಶ್ಮಿಕಾ ಸೌಂದರ್ಯವನ್ನು ಡಬಲ್ ಮಾಡಿದೆ. ಅಭಿಮಾನಿಗಳಿಗೆ ಕೈ ಬೀಡಿ, ಶೇಕ್ ಹ್ಯಾಂಡ್ ಮಾಡಿದ ರಶ್ಮಿಕಾ, ಸೆಲ್ಫಿ ಕೂಡ ತೆಗೆಸಿಕೊಂಡಿದ್ದಾರೆ.

ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ರಶ್ಮಿಕಾ ಮತ್ತು ವಿಜಯ್ : ರಶ್ಮಿಕಾ ಮತ್ತು ವಿಜಯ್ ಜೋಡಿ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ. ರಶ್ಮಿಕಾ ಮತ್ತು ವಿಜಯ್ ಚಿತ್ರಕ್ಕೆ ಸದ್ಯ VD14 ಎಂದು ನಾಮಕರಣ ಮಾಡಲಾಗಿದೆ.

Scroll to load tweet…