Malaika Arjun : ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಜಿ ಲವ್ವರ್ ಎದುರು ಬಂದ್ರೆ ಏನೆಲ್ಲ ಕಷ್ಟವಾಗುತ್ತೆ ಅನ್ನೋದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ. 

ಎಕ್ಸ್ ಗರ್ಲ್ ಫ್ರೆಂಡ್ (Ex girlfriend) ಅಥವಾ ಬಾಯ್ ಫ್ರೆಂಡ್ (boyfriend) ಎದುರಿಗೆ ಬಂದ್ರೆ ಅವರನ್ನು ಎದುರಿಸೋದು ಕಷ್ಟ. ಮಾತನಾಡೋಕೂ ಆಗಲ್ಲ, ಬಿಡೋಕೂ ಆಗಲ್ಲ. ಏನು ಮಾಡ್ಬೇಕು ಗೊತ್ತಾಗೋದಿಲ್ಲ. ನಾನು ನಕ್ಕಾಗ ಅವ್ನು ನಕ್ಕಿಲ್ಲ ಅಂದ್ರೆ, ಶೇಮ್ ಆಗೋದು ನನಗೆ ಅಂತ ಅನೇಕರು ಭಾವಿಸ್ತಾರೆ. ಆದಷ್ಟು ಮಾಜಿಗಳು ಎದುರುಬದುರಾಗೋದನ್ನು ತಪ್ಪಿಸಿಕೊಳ್ತಾರೆ. ಕಾಮನ್ ಫ್ರೆಂಡ್ಸ್ ಮದುವೆ, ಕಾರ್ಯಕ್ರಮಕ್ಕೆ ಬರುವಾಗ್ಲೂ ಅವ್ನು ಬರ್ತಾಳಾ, ಅವಳು ಬರ್ತಾಳಾ ಅಂತ ಕೇಳಿನೇ ಫಂಕ್ಷನ್ ಗೆ ಹೋಗೋರಿದ್ದಾರೆ. ಜನಸಾಮಾನ್ಯರು ಹೇಗೋ ಈ ಮುಖಾಮುಖಿಯನ್ನು ಅವೈಡ್ ಮಾಡ್ಬಹುದು. ಆದ್ರೆ ಸೆಲೆಬ್ರಿಗಳಲ್ಲಿ ಕಷ್ಟ. ಒಂದೇ ಫಂಕ್ಷನ್ ಗೆ ಇಬ್ಬರನ್ನೂ ಇನ್ವೈಟ್ ಮಾಡಿರ್ತಾರೆ. ಅಂಥ ಸಂದರ್ಭದಲ್ಲಿ ಗೊತ್ತಿದ್ದೂ ಗೊತ್ತಿಲ್ಲದಂತೆ ತಪ್ಪಿಸಿಕೊಳ್ಳೋದು ವಿಪರೀತ ಕಷ್ಟ. ಮಲೈಕಾ ಅರೋರಾ (Malaika Arora) ಹಾಗೂ ಅರ್ಜುನ್ ಕಪೂರ್ (Arjun Kapoor) ವಿಡಿಯೋ ನೋಡಿದ್ರೆ ಇದು ದಿಟಾ ಅನ್ನಿಸುತ್ತೆ.

ನೋಡಿಯೂ ನೋಡದಂತೆ ಹೋದ ಅರ್ಜುನ್ ಕಪೂರ್- ಮಲೈಕಾ : 

ಒಂದ್ಕಾಲದಲ್ಲಿ ಜೋಡಿ ಹಕ್ಕಿಯಂತೆ ಓಡಾಡಿದ್ದ ಬಾಲಿವುಡ್ ಡಾನ್ಸರ್ ಮಲೈಕಾ ಅರೋರಾ ಹಾಗೂ ನಟ ಅರ್ಜುನ್ ಕಪೂರ್ ಈಗ ಮುಖ ತಿರುಗಿಸಿಕೊಂಡು ಹೋಗೋ ಸ್ಥಿತಿ ಬಂದಿದೆ. ಇಬ್ಬರ ಬ್ರೇಕ್ ಅಪ್ ಆಗಿ ವರ್ಷಗಳೇ ಕಳೆದಿದೆ. ಆದ್ರೆ ಇವರಿಬ್ಬರು ಒಂದೇ ಫಂಕ್ಷನ್ ಗೆ ಬಂದಾಗ ಕ್ಯಾಮರಾ ಕಣ್ಣು ಅವರನ್ನು ಫೋಕಸ್ ಮಾಡೋದು ಕಾಮನ್. ಈ ಬಾರಿಯೂ ಮುಂಬೈನಲ್ಲಿ ನಡೆದ ಹೋಮ್ಬೌಂಡ್ ಚಿತ್ರದ ಪ್ರಿಮಿಯರ್ ನಲ್ಲಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದಾರೆ. ಎದುರಿದ್ದ ಅರ್ಜುನ್ ಕಪೂರ್ ಅವರನ್ನು ಮಲೈಕಾ ಮಾತನಾಡಿಸಲು ಪ್ರಯತ್ನಿಸ್ತಿರುವಂತೆ ಕಾಣ್ತಿದೆ. ಆದ್ರೆ ಅರ್ಜುನ್ ಕಪೂರ್ ಇದನ್ನು ಸಂಪೂರ್ಣ ಇಗ್ನೋರ್ ಮಾಡ್ತಿದ್ದಾರೆ. ಮುಂದೆ ನಿಂತಿದ್ದ ನೇಹಾ ಧೂಪಿಯಾ ಅವ್ರನ್ನು ಮಾತನಾಡಿಸಿದ ಅರ್ಜುನ್, ಅವ್ರ ಪಕ್ಕದಲ್ಲೇ ಇದ್ದ ಮಲೈಕಾ ಅರೋರಾ ಅವ್ರನ್ನು ನೋಡೂ ಇಲ್ಲ. ಸ್ವಲ್ಪ ಸಮಯ ಅಲ್ಲೇ ನಿಂತಿದ್ದ ಮಲೈಕಾ, ನಿಧಾನವಾಗಿ ಅಲ್ಲಿಂದ ಹೋಗ್ತಾರೆ.

ಕರ್ನಾಟಕದ ಈ ದೇವಸ್ಥಾನದಿಂದ ಕತ್ರಿನಾ ಕೈಫ್‌ಗೆ ಸಂತಾನ ಭಾಗ್ಯ; 42ನೇ ವರ್ಷಕ್ಕೆ ಗರ್ಭಿಣಿ, 6 ತಿಂಗಳಲ್ಲಿ ಫಲ

ಕೊನೆಗೂ ಅಪ್ಪಿಕೊಂಡ ಜೋಡಿ : 

ಅರ್ಜುನ್ ಕಪೂರ್ ಇಗ್ನೋರ್ ಮಾಡ್ತಿದ್ದಂತೆ ಮುಂದೆ ಹೋಗಿದ್ದ ಮಲೈಕಾ ಅರೋರಾ, ಎರಡನೇ ಬಾರಿ ಮತ್ತೆ ಅರ್ಜುನ್ ಕಪೂರ್ ಮುಂದೆ ಬಂದಿದ್ದಾರೆ. ಆ ಟೈಂನಲ್ಲಿ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ತಬ್ಬಿಕೊಂಡಿದ್ದಾರೆ. ನಂತ್ರ ಇಬ್ಬರೂ ಮಾತನಾಡಿರೋದನ್ನು ವಿಡಿಯೋದಲ್ಲಿ ನೋಡ್ಬಹುದು.

ಏನು ಹೇಳ್ತಾರೆ ಬಳಕೆದಾರರು? : 

ಸೋಶಿಯಲ್ ಮೀಡಿಯಾದಲ್ಲಿ ಎರಡೂ ವಿಡಿಯೋ ವೈರಲ್ ಆಗಿದೆ. ಅರ್ಜುನ್ ಕಪೂರ್ ಇಗ್ನೋರ್ ಮಾಡಿದ್ದನ್ನು ನೋಡಿದ ಫ್ಯಾನ್ಸ್, ಮಲೈಕಾ ಮೇಲೆ ಕರುಣೆ ತೋರಿಸಿದ್ರು. ಮಾಜಿ ಲವ್ವರ್ ಎದುರು ಬಂದ್ರೆ ಅವರನ್ನು ಎದುರಿಸೋದು ಕಷ್ಟ ಅಂತ ಕಮೆಂಟ್ ಮಾಡಿದ್ದಾರೆ.

Neem Karoli Baba: ರಾಜ್ ಶೆಟ್ಟಿ, ಮನೋಜ್ ಬಾಜಪೇಯಿ ಇಬ್ಬರನ್ನೂ ಬೆಸೆದ ಬಾಬಾ!

ಅರ್ಜುನ್ – ಮಲೈಕಾ ಲವ್ ಸ್ಟೋರಿ : 

ಅರ್ಜುನ್ ಹಾಗೂ ಮಲೈಕಾ 2018ರಲ್ಲಿ ಡೇಟಿಂಗ್ ಶುರು ಮಾಡಿದ್ರು. ಆರಂಭದಲ್ಲಿ ತಮ್ಮ ಸಂಬಂಧವನ್ನು ಮುಚ್ಚಿಟ್ಟಿದ್ದ ಜೋಡಿ ನಂತ್ರ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ರು. 2024ರಲ್ಲಿ ಇಬ್ಬರು ಬೇರೆಯಾದ್ರು. ಸಿಂಗಮ್ ಅಗೇನ್ ಸಿನಿಮಾ ಪ್ರಚಾರದ ವೇಳೆ ನಾನು ಸಿಂಗಲ್ ಅಂತ ಅರ್ಜುನ್ ಕಪೂರ್ ಅನೌನ್ಸ್ ಮಾಡುವ ಮೂಲಕ, ಮಲೈಕಾ ಸಂಬಂಧ ಮುರಿದುಕೊಂಡಿರೋದನ್ನು ಹೇಳಿದ್ರು. ಅದಾದ್ಮೇಲೆ ಒಂದೆರಡು ಬಾರಿ ಅರ್ಜುನ್ ಹಾಗೂ ಮಲೈಕಾ ಎದುರಾಗಿದ್ದಾರೆ. ಆರಂಭದಲ್ಲಿ ಅರ್ಜುನ್ ಸಂಪೂರ್ಣ ಮಲೈಕಾರನ್ನು ಇಗ್ನೋರ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಮಲೈಕಾ ತಂದೆ ಸಾವಿನ ಟೈಂನಲ್ಲಿ ಮನೆಗೆ ಬಂದಿದ್ದ ಅರ್ಜುನ್, ಸಾಂತ್ವಾನ ಹೇಳಿದ್ರು.

View post on Instagram