Actress Bipasha Basu: ಬಾಲಿವುಡ್ ನಟಿ ಬಿಪಾಶಾ ಬಸು ಅವರು ವಿವಾದಾತ್ಮಕ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಚುಂಬಿಸಿದಂತೆ ಕಂಡ ಫೋಟೋದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಕಿಸ್ ಮಾಡಿಲ್ಲ ಎಂದಿದ್ದಾರೆ.

ಮುಂಬೈ: ಬಾಲಿವುಡ್ ಅಂಗಳದ ಕೃಷ್ಣ ಸುಂದರಿ, ಬಂಗಾಳಿ ಚೆಲುವೆ ಬಿಪಾಶಾ ಬಸು ಸಿನಿಮಾಗಳಿಂದ ದೂರವಾಗಿದ್ದು, ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಸಿನಿಮಾದಿಂದಲೂ ಬಿಪಾಶಾ ಬಸು ಹೆಸರು ಹಲವು ನಟರೊಂದಿಗೆ ಕೇಳಿ ಬರುತ್ತಲೇ ಇತ್ತು. ಜಾನ್ ಅಬ್ರಾಹಂ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿಯೂ ಬಿಪಾಶಾ ಬಸು ಇದ್ದರು. ಜಾನ್ ಜೊತೆಗಿನ ಬ್ರೇಕಪ್ ಬಳಿಕ ಕರಣ್ ಸಿಂಗ್ ಗ್ರೋವರ್ ಜೊತೆ ಮದುವೆಯಾಗಿದ್ದಾರೆ. ಬಿಪಾಶಾ-ಜಾನ್ ದಂಪತಿಗೆ ದೇವಿ ಹೆಸರಿನ ಮುದ್ದಾದ ಮಗಳಿದ್ದಾಳೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿಪಾಶಾ ಬಸು ಸಂದರ್ಶನದ ಹಳೆ ವಿಡಿಯೋ ಮುನ್ನಲೆಗೆ ಬಂದಿದೆ.

ಈ ಸಂದರ್ಶನದಲ್ಲಿ ಖ್ಯಾತ ಫುಟ್ಬಾಲ್ ತಾರೆ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಬಿಪಾಶಾ ಬಸು ಮುಕ್ತವಾಗಿ ಮಾತನಾಡಿದ್ದಾರೆ. ನನಗೆ ಆ ಆಟಗಾರ ಅಂದ್ರೆ ತುಂಬಾ ಇಷ್ಟ. ಹಾಗಂತ ನಾನು ಕಿಸ್ ಮಾಡಿಲ್ಲ. ವೈರಲ್ ಆಗಿರೋದು ಕಿಸ್ ಮಾಡುವ ರೀತಿಯಲ್ಲಿ ಮಾತ್ರ ಕಾಣಿಸುತ್ತಿದೆ ಎಂದು ಬಿಪಾಶಾ ಬಸು ಹೇಳಿದ್ದಾರೆ. ಯಾರು ಆ ಪುಟ್ಭಾಲ್ ಆಟಗಾರ ಎಂದು ನೋಡೋಣ ಬನ್ನಿ.

ಸಂದರ್ಶನದಲ್ಲಿ ಬಿಪಾಶಾ ಬಸು ಹೇಳಿದ್ದೇನು?

ನಾನು ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊಅವರ ದೊಡ್ಡ ಅಭಿಮಾನಿ. ಎಲ್ಲಾ ಅಭಿಮಾನಿಗಳಂತೆ ಕ್ರಿಸ್ಟಿಯಾನೋ ರೊನಾಲ್ಡ್ ಅವರನ್ನು ಭೇಟಿಯಾಗಿ ಜರ್ಸಿ ಮೇಲೆ ಆಟೋಗ್ರಾಫ್ ಪಡೆದುಕೊಳ್ಳಬೇಕು ಅನ್ನೋದು ನನ್ನ ಆಸೆಯಾಗಿತ್ತು. ಫೋರ್ಚುಗಲ್‌ನಲ್ಲಿ Seven Wonder Of World ಕಾರ್ಯಕ್ರಮದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಯೊಂದನ್ನು ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ ನಾನೇ ನೀಡಿದ್ದೆ. ಇದಾದ ಬಳಿಕ ಎಲ್ಲರಿಗೂ ಪಾರ್ಟಿ ಆಯೋಜಿಸಲಾಗಿತ್ತು.

ಈ ಪಾರ್ಟಿಗೆ ಕ್ರಿಸ್ಟಿಯಾನೋ ರೊನಾಲ್ಡ್ ಸೇರಿದಂತೆ ಎಲ್ಲರೂ ಬಂದಿದ್ದರು. ಅದು ಡಿಸ್ಕೋ ಆಗಿದ್ದರಿಂದ ತುಂಬಾ ಜೋರಾಗಿ ಮ್ಯೂಸಿಕ್ ಪ್ಲೇ ಮಾಡಿದ್ದರು. ರೊನಾಲ್ಡೊ ತುಂಬಾ ಎತ್ತರವಾಗಿದ್ದಾರೆ. ಹಾಗಾಗಿ ಯಾರ ಜೊತೆಯಲ್ಲಾದ್ರೂ ಮಾತಾಡಬೇಕಾದರೂ ಕ್ರಿಸ್ಟಿಯಾನೋ ರೊನಾಲ್ಡೊ ಭಾಗಿ ಕಿವಿ ಹತ್ತಿರ ಬಂದು ಹೇಳುತ್ತಿದ್ದರು. ಅದೇ ರೀತಿಯಲ್ಲಿಯೇ ರೊನಾಲ್ಡೊ ನನ್ನೊಂದಿಗೆ ಭಾಗಿಯೇ ಕಿವಿ ಹತ್ತಿರ ಬಂದು ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಪರಾಜಿಗಳಿಗೆ ಅನುಮತಿ ನೀಡಿರಲಿಲ್ಲ. ಆದ್ರೆ ಅಲ್ಲಿದ್ದ ಜನರು ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದರು.

ಆ ಫೋಟೋ ಯಾಕೆ ಬಂದಿಲ್ಲ?

ನಾನು ಮತ್ತು ರೊನಾಲ್ಡೊ ಮಾತನಾಡುತ್ತಿರೋದನ್ನು ಯಾರು ಕ್ಲಿಕ್ ಮಾಡಿದ್ದಾರೆ. ಈ ಫೋಟೋ ನೋಡುಗರಿಗೆ ಕಿಸ್ ಮಾಡುವಂತೆ ಕಾಣಿಸಿದೆ. ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ. ಈ ಫೋಟೋ ಬಂದಿದೆ ಅಂದ್ರೆ ಕಿಸ್ ಕೊಡುತ್ತಿರುವ ಫೋಟೋ ಬಂದಿಲ್ಲ ಯಾಕೆ ಎಂದು ಬಿಪಾಶಾ ಬಸು ಪ್ರಶ್ನೆ ಮಾಡಿದ್ದಾರೆ.

ನನ್ನ ಫ್ರೆಂಡ್‌ ಫೋಟೋ ಬಗ್ಗೆ ಹೇಳಿದಾಗ ನನಗೂ ಸಹ ಶಾಕ್ ಆಯ್ತು. ಇದು ನಾನು ಅತ್ಯಂತ ಮುಜುಗರಕ್ಕೊಳಗಾದ ಘಟನೆ ಎಂದು ವೈರಲ್ ಫೋಟೋ ಬಗ್ಗೆ ಬಿಪಾಶಾ ಬಸು ಸ್ಪಷ್ಟನೆ ನೀಡಿದ್ದಾರೆ. ಕಿಸ್ ಮಾಡಿಲ್ಲ ಎಂದು ಹೇಳುತ್ತಿದ್ದಂತೆ ನಿರೂಪಕ, ನನ್ನ ಬಳಿ ಆ ಫೋಟೋ ಇದೆ. ಅದನ್ನು ಡಿಸ್‌ಪ್ಲೇಯಲ್ಲಿ ಹಾಕಲಾ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಬಿಪಾಶಾ ನಾನು ಆ ಫೋಟೋ ನೋಡಲು ಇಷ್ವಪಡಲ್ಲ ಎಂದರು.

ವದಂತಿ ಏನು?

Seven Wonder Of World ಕಾರ್ಯಕ್ರಮದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಜೊತೆ ಬಿಪಾಶಾ ಬಸು ತುಂಬಾ ಕ್ಲೋಸ್ ಆಗಿ ಮೂವ್ ಮಾಡಿದ್ದರು. ಇಡೀ ರಾತ್ರಿ ಇಬ್ಬರು ಜೊತೆಯಾಗಿ ಕಳೆದಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸಂದರ್ಶನದಲ್ಲಿ ಆ ರೀತಿ ಏನು ಆಗಿಲ್ಲ ಎಂದು ಬಿಪಾಶಾ ಹೇಳಿದ್ದಾರೆ.

View post on Instagram