ಬರೋಬ್ಬರಿ 149 ಕೋಟಿ ರೂಗೆ 186 ಲಕ್ಷುರಿ ಕಾರು ಖರೀದಿಸಿದ ಜೈನ್ಸ್, ಸಿಕ್ಕಿತು 21 ಕೋಟಿ ರೂ ಡಿಸ್ಕೌಂಟ್ , ವಿಶೇಷ ಅಂದರೆ ಈ ರೀತಿ ಏಕಕಾಲಕ್ಕೆ 186 ಐಷಾರಾಮಿ ಕಾರು ಖರೀದಿಸಿದ ಕಾರಣ ಒಟ್ಟು 21 ಕೋಟಿ ರೂಪಾಯಿ ಡಿಸ್ಕೌಂಟ್ ಸಿಕ್ಕಿದೆ.
ಅಹಮ್ಮದಾಬಾದ್ (ಅ.19) ಶ್ರೀಮಂತರು, ಉದ್ಯಮಿಗಳು ಒಟ್ಟಿಗೆ ಒಂದೆರಡು ಕಾರು ಖರೀದಿಸುವುದು ಹೊಸದೇನಲ್ಲ. ಇನ್ನು ಕಂಪನಿಗಳು, ಸಂಘ ಸಂಸ್ಥೆಗಳು ಒಟ್ಟಿಗೆ ಹಲವು ಕಾರು ಖರೀದಿಸುವುದು ಸಾಮಾನ್ಯ. ಆದರೆ ಇಲ್ಲಿ ಜೈನರು ಒಟ್ಟಿಗೆ 186 ಐಷಾರಾಮಿ ಕಾರು ಖರೀದಿಸಿದ್ದಾರೆ. ಇದರ ಒಟ್ಟು ಬೆಲೆ 149 ಕೋಟಿ ರೂಪಾಯಿ. ಹೀಗೆ ಏಕಕಾಲಕ್ಕೆ 186 ಕಾರು ಖರೀದಿಸಿದ ಕಾರಣ ಇವರಿಗೆ 21.22 ಕೋಟಿ ರೂಪಾಯಿ ಡಿಸ್ಕೌಂಟ್ ಲಭ್ಯವಾಗಿದೆ. ಏಕಾಕಲಕ್ಕೆ 189 ಕಾರು ಖರೀದಿಸುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.
ಜನ ಸಮುದಾಯದ ಮಹತ್ವದ ನಡೆ
ಗುಜರಾತ್‌ನಲ್ಲಿರವ ಜನರು ಜೈನ್ ಇಂಟರ್‌ನ್ಯಾಶನಲ್ ಟ್ರೇಡ್ ಆರ್ಗನೈಜೇಶನ್ ( JITO) ಸಂಸ್ಥೆಯನ್ನು ಕಟ್ಟಿದ್ದಾರೆ. ಇದರಲ್ಲಿ ಜೈನ ಸಮುದಾಯದ ಮಂದಿ ಸ್ವಯಂ ಇಚ್ಚೆಯಿಂದ ಸೇರಿಕೊಳ್ಳುತ್ತಿದ್ದಾರೆ. ಇದು ಜೈನರ ಸಮುದಾಯವನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೇರಿದಂತೆ ಎಲ್ಲಾ ರೀತಿಯಿಂದಲೂ ಬಲಪಡಿಸಲು ಹುಟ್ಟಿಕೊಂಡ ಸಂಘ. ಸದ್ಯ ಭಾರತದಾದ್ಯಂತ ಈ ಸಂಸ್ಥೆಯಲ್ಲಿ 65,000 ಸದಸ್ಯರಿದ್ದಾರೆ. ಈ ಪೈಕಿ ಬಹುತೇಕರು ಅಹಮ್ಮಬಾದ್ ಮೂಲದವರು. ದೇಶದ ಎಲ್ಲಾ ಕಡೆಗಳಲ್ಲಿ ಈ ಸಂಸ್ಥೆಯ ಶಾಖೆ ಇದೆ. ಇದರ ವಿಶೇಷ ಅಂದರೆ ತಮ್ಮ ಸಮುದಾಯದ ಯಾರಿಗಾದರೂ ವಾಹನ ಖರೀದಿ, ಆಭರಣ ಖರೀದಿ ಸೇರಿದಂತೆ ಯಾವುದೇ ದುಬಾರಿ ವಸ್ತುಗಳ ಖರೀದಿ ಇದ್ದರೆ ತಿಳಿಸಬೇಕು. ಉದಾಹರಣೆಗೆ ಕಾರು ಖರೀದಿಸಲು ಪ್ಲಾನ್ ಮಾಡಿದ್ದರೆ ತಿಳಿಸಬೇಕು. ಹೀಗೆ ಎಲ್ಲರೂ ತಿಳಿಸಿದಾಗ ಒಟ್ಟು ಹಲವು ಕಾರುಗಳು ಒಂದೇ ಬಾರಿಗೆ ಬುಕ್ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಭಾರಿ ಡಿಸ್ಕೌಂಟ್ ಹಾಗೂ ಪ್ರಯೋಜನಗಳು ಲಭ್ಯವಾಗುತ್ತದೆ.
ಸಮುದಾಯ ಸದಸ್ಯರ ಬೇಡಿಕೆಯಂತೆ 149 ಹೈಎಂಡ್ ಕಾರು ಖರೀದಿ
ಜೈನ ಸಮುದಾಯದ 149 ಮಂದಿ ಕಾರು ಖರೀದಿಗೆ ಬಯಸಿದ್ದರು. ಇವರೆಲ್ಲರನ್ನು ಒಗ್ಗೂಡಿಸಿ ಏಕಾಕಲಕ್ಕೆ ಒಂದೇ ಡೀಲರ್ ಬಳಿ ಬುಕ್ ಮಾಡಲಾಗಿದೆ. ಅವರವರ ಆಯ್ಕೆಯ ಕಾರುಗಳನ್ನೇ ಬುಕ್ ಮಾಡಲಾಗಿದೆ. ಆಡಿ, ಮರ್ಸಿಡೀಸ್ ಬೆಂಜ್ ಸೇರಿದಂತೆ 60 ಲಕ್ಷ ರೂಪಾಯಿಯಿಂದ ಹಿಡಿದು 1.34 ಕೋಟಿ ರೂಪಾಯಿವರೆಗಿನ ಕಾರುಗಳನ್ನು ಬುಕ್ ಮಾಡಲಾಗಿದೆ. ಒಂದೇ ಬಾರಿಗೆ ಇಷ್ಟು ಕಾರು ಬುಕಿಂಗ್ ಮಾಡುವ ಕಾರಣ ಒಟ್ಟು ಮೊತ್ತದಲ್ಲಿ ಭಾರಿ ಡಿಸ್ಕೌಂಟ್ ಸಿಗುತ್ತದೆ. ಇದರಿಂದ ಸಮುದಾಯದ ಎಲ್ಲಾ ಸದಸ್ಯರಿಗೆ ಅತೀ ಕಡಿಮೆ ಬೆಲೆಯಲ್ಲಿ ಕಾರು ಅಥವಾ ಯಾವುದೇ ವಸ್ತುಗಳು ಲಭ್ಯವಾಗುತ್ತಿದೆ. 189 ಐಷಾರಾಮಿ ಕಾರುಗಳನ್ನು 149 ಕೋಟಿ ರೂಪಾಯಿಗೆ ಬುಕ್ ಮಾಡಲಾಗಿದೆ. ಇದರಿಂದ ಒಟ್ಟು 21.22 ಕೋಟಿ ರೂಪಾಯಿ ಡಿಸ್ಕೌಂಟ್ ಲಭ್ಯವಾಗಿದೆ.
JITO ಸಂಸ್ಥೆಯಲ್ಲಿ ಕಮ್ಯೂನಿಟಿ ಬೈಯಿಂಗ್ ಅನ್ನೋ ಪ್ರತ್ಯೇಕ ವಿಭಾಗ ಇದೆ. ಈ ವಿಭಾದದಲ್ಲಿ ಸದಸ್ಯರು ತಮ್ಮ ಖರೀದಿ ವಸ್ತುಗಳ ಕುರಿತು ಮಾಹಿತಿ ನೀಡಬೇಕು. ಸಂಸ್ಥೆಯ ಸಿಬ್ಬಂದಿಗಳು ಇದೇ ರೀತಿಯ ಇತರ ಸದಸ್ಯರ ಆಸಕ್ತಿಯ ಖರೀದಿ ಲಿಸ್ಟ್ ಮಾಡಿ ಗ್ರೂಪ್ ಮಾಡುತ್ತಾರೆ. ಅಂದರೆ ಕಾರು ಖರೀದಿಯ ಗ್ರೂಪ್, ಆಭರಣ ಖರೀದಿಯ ಗ್ರೂಪ್, ನಿವೇಷನ, ಮನೆ ಖರೀದಿಯ ಗ್ರೂಪ್ ಸೇರಿದಂತೆ ಪ್ರತ್ಯೇಕ ಗ್ರೂಪ್ ಮಾಡಲಾಗುತ್ತದೆ. ಈ ಪ್ರಯತ್ನದಿಂದ ಜೈನ ಸಮುದಾಯದ ಸದಸ್ಯರಿಗೆ ಅತೀ ಕಡಿಮೆ ಬೆಲೆಯಲ್ಲಿ ಖರೀದಿ ಸಾಧ್ಯವಾಗುತ್ತಿದೆ. ಈ ಸಂಸ್ಥೆ ಇದೀಗ ದೇಶಾದ್ಯಂತ ಬೆಳೆಯುತ್ತಿದೆ.
ಯುವಕರಿಗೆ ಸ್ವಉದ್ಯೋಗ ಸೇರಿದಂತೆ ಹಲವು ರೀತಿಯಿಂದ ಸಂಸ್ಥೆ ನೆರವಾಗುತ್ತಿದೆ ಎಂದು JITO ಸಂಸ್ಥೆ ಹೇಳಿದೆ. ನಮ್ಮ ಸಮುದಾಯದ ಮೂಲಕ ಹಲವರು ಜೆಸಿಬಿ ಸೇರಿದಂತೆ ಇತರ ಮಶಿನ್ ಖರೀದಿಸಿದ್ದಾರೆ. ಇವರಿಗೆ ಶೂನ್ಯ ಮುಂಗಡ ಪಾವತಿ ಮೂಲಕ ಜೆಸಿಬ ಒದಗಿಸಲಾಗಿದೆ. ಒಟ್ಟಿಗೆ 121 ಜೆಸಿಬಿ ಖರೀದಿ ಮಾಡಿದ್ದೇವೆ. ಇದರಿಂದ 3.3 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಕ್ಕಿತ್ತು ಎಂದಿದೆ.
