ಜನರ ಆಲೋಚನೆ ಭಿನ್ನವಾಗ್ತಿದೆ. ಬ್ಯುಸಿನೆಸ್ ಮಾಡುವ ರೀತಿ ಬದಲಾಗಿದೆ. ಇಲ್ಲೊಬ್ಬ ಮಹಿಳೆ ಹೆಸರು ಹೇಳಿ ಹಣ ಸಂಪಾದನೆ ಮಾಡ್ತಿದ್ದಾರೆ. ಅವರ್ಯಾರು, ಬ್ಯುಸಿನೆಸ್ ಏನು? ಮಾಹಿತಿ ಇಲ್ಲಿದೆ.
ಮಕ್ಕಳ (children) ಪ್ಲಾನ್ ಮಾಡ್ತಿದ್ದಂತೆ ದಂಪತಿ, ಯಾವ ಮಗು ಬೇಕು, ಮಗುವಿಗೆ ಏನು ಹೆಸರಿಡಬೇಕು ಎಂಬ ಆಲೋಚನೆ ಶುರು ಮಾಡ್ತಾರೆ. ಪ್ರೆಗ್ನೆಂಟ್ ಆಗ್ತಿದ್ದಂತೆ ಒಂದಿಷ್ಟು ಬೆಸ್ಟ್ ಹೆಸರುಗಳನ್ನು ಜನರು ಸರ್ಚ್ ಮಾಡ್ತಾರೆ. ಮಗು ಹುಟ್ಟಿದ್ಮೇಲೆ, ಸ್ನೇಹಿತರು, ಸಂಬಂಧಿಕರಿಗೆ ಮೆಸ್ಸೇಜ್ ರವಾನೆಯಾಗುತ್ತೆ. ಇಂಟರ್ನೆಟ್ ನಲ್ಲಿ ಅತಿ ಟ್ರೆಂಡಿಂಗ್ ಇರುವ, ಅಪರೂಪದ ಹೆಸರುಗಳನ್ನು ಜನರು ಹುಡುಕ್ತಾರೆ. ಮಕ್ಕಳಿಗೆ ಹೆಸರಿಡೋದೇ ಒಂದು ಸಂಭ್ರಮ. ಹೆಸರು (Name) ಬರೀ ವ್ಯಕ್ತಿಯ ಗುರುತಲ್ಲ. ಅದು ಅವನ ವ್ಯಕ್ತಿತ್ವದ ಜೊತೆ ನಂಟು ಹೊಂದಿದೆ. ಜ್ಯೋತಿಷ್ಯ, ಸಂಖ್ಯಾಶಾಸ್ತ್ರಗಳನ್ನು ನಂಬುವ ಜನರು, ತಮ್ಮ ಮಕ್ಕಳ ಜಾತಕಕ್ಕೆ ಹೊಂದುವ ಅಕ್ಷರ, ಅಂಕಿಗಳ ಆಧಾರದ ಮೇಲೆ ಹೆಸರಿಡುತ್ತಾರೆ. ಇಷ್ಟು ದಿನ ನಿಮ್ಮ ಆಪ್ತರ ಮಕ್ಕಳಿಗೆ ಪುಕ್ಕಟ್ಟೆ ಹೆಸರು ಸೂಚಿಸ್ತಿದ್ದು, ನೀವು ಹೇಳಿದ ಒಂದಿಷ್ಟು ಹೆಸರು ಸೆಲೆಕ್ಟ್ ಆಗಿದೆ ಎಂದಾದ್ರೆ ಇನ್ಮುಂದೆ ಅದ್ರ ಬಗ್ಗೆ ಸ್ವಲ್ಪ ಗಂಭೀರವಾಗಿ ಯೋಚನೆ ಮಾಡಿ. ಹೆಸರು ಸೂಚಿಸುವ ಬ್ಯುಸಿನೆಸ್ ನೀವೂ ಮಾಡ್ಬಹುದು. ಇಲ್ಲೊಬ್ಬ ಮಹಿಳೆ, ಪಾಲಕರಿಗೆ ಸೂಕ್ತ ಹೆಸರನ್ನು ಹೇಳಿ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾಳೆ.
ಭಿನ್ನವಾಗಿದೆ ಈಕೆ ಬ್ಯುಸಿನೆಸ್ ಐಡಿಯಾ (Business Idea) :
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಲಹೆಗಾರ್ತಿ ಟೇಲರ್ ಎ. ಹಂಫ್ರೆ ಹೊಸ ಬ್ಯುಸಿನೆಸ್ ಮಾಡ್ತಿದ್ದಾರೆ. ಪರಿಪೂರ್ಣ ಹೆಸರನ್ನು ಮಕ್ಕಳಿಗಿಡಲು ಪಾಲಕರಿಗೆ ಸೂಚನೆ ನೀಡೋದೇ ಹಂಫ್ರೆ ಬ್ಯುಸಿನೆಸ್. 37 ವರ್ಷದ ಹಂಫ್ರೆ ಒಂದು ದಶಕದ ಹಿಂದೆ ಮಗುವಿಗೆ ಹೆಸರು ಸೂಚಿಸೋ ಈ ಬ್ಯುಸಿನೆಸ್ ಮಾಡ್ತಿದ್ದಾರೆ. ಮೊದಲು ಸೋಶಿಯಲ್ ಮೀಡಿಯಾದಲ್ಲಿ ಹೆಸರುಗಳನ್ನು ಸೂಚಿಸ್ತಿದ್ದ ಹಂಫ್ರೆ ಈಗ ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಹಂಫ್ರೆ.
ಅದಾನಿ ಹಿಂದಿಕ್ಕಿದ ಅಂಬಾನಿ ಈಗ ನಂ.1 ಶ್ರೀಮಂತ, ಮಹಿಳೆಯರ ಪೈಕಿ ರೋಶನಿ ನಾಡರ್‌ಗೆ ಪಟ್ಟ
ಟೇಲರ್ ಎ. ಹಂಫ್ರೆ ಗಳಿಕೆ ಎಷ್ಟು? :
ಪೋಷಕರು ಮಕ್ಕಳಿಗೆ ಹೆಸರಿಡುವ ಮುನ್ನ ಹಂಫ್ರೆಯನ್ನು ಸಂಪರ್ಕಿಸ್ತಾರೆ. ಹಂಫ್ರೆ ಈ ಬಗ್ಗೆ ಸ್ಟಡಿ ಮಾಡಿ ಸೂಕ್ತವಾದ ಹೆಸರನ್ನು ಹೇಳ್ತಾರೆ. ಹಂಫ್ರೆ 30,000 ಡಾಲರ್ ಅಂದ್ರೆ ಸುಮಾರು 2.5 ಲಕ್ಷ ರೂಪಾಯಿ ಚಾರ್ಜ್ ಮಾಡ್ತಾರೆ.
ನೇಮ್ ಲವ್ವರ್ ಎಂದೇ ಪ್ರಸಿದ್ಧಿ ಪಡೆದಿರುವ ಹಂಫ್ರೆ :
ಕುಟುಂಬಗಳಿಗೆ ಸೂಚಿಸಿದ 500 ಕ್ಕೂ ಹೆಚ್ಚು ಹೆಸರುಗಳು ಪೋರ್ಟ್ಫೋಲಿಯೊದಲ್ಲಿದೆ. ಹಂಫ್ರೆ ತಮ್ಮನ್ನು ನೇಮ್ ಲವ್ವರ್ ಎಂದೇ ಕರೆದುಕೊಳ್ತಾರೆ. ಹಂಫ್ರೆ ಬರೀ ಯಾವುದೋ ಒಂದು ಹೆಸರನ್ನು ಹೇಳೋದಿಲ್ಲ. ಸರಿಯಾದ ಅರ್ಥ, ಹೆಸರಿನ ಮೂಲ, ಉತ್ಸಾಹ ಎಲ್ಲವನ್ನು ಗಮನಿಸಿ, ಸೂಚಿಸುತ್ತಾರೆ. ಹಂಫ್ರೆ ಆರಂಭಿಕ ಬೆಲೆ 200 ಡಾಲರ್ ನಿಂದ ಶುರುವಾಗುತ್ತೆ. ಹೆಸರಿನ ಅರ್ಥ, ಜನಪ್ರಿಯತೆಯ ಹೆಸರುಗಳ ಇ ಮೇಲನ್ನು ಹಂಫ್ರೆ ಕಳಿಸ್ತಾರೆ.
Breaking: ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಬಂಪರ್ ಘೋಷಣೆ: DA, DR ಏರಿಕೆಗೆ ಮೋದಿ ಸಂಪುಟ ಅಸ್ತು!
ಟೇಲರ್ ಎ. ಹಂಫ್ರೆ ವಿಐಪಿ ಪ್ಯಾಕೇಜ್ ನಲ್ಲಿ ಏನಿದೆ? :
ಹಂಫ್ರೆ ವಿಐಪಿ ಪ್ಯಾಕೇಜ್ ನೀಡ್ತಾರೆ. ವಂಶಾವಳಿ ಸಂಶೋಧನೆಯಿಂದ ಹಿಡಿದು ಮಗುವಿನ ಹೆಸರಿನ ಬ್ರ್ಯಾಂಡಿಂಗ್ ಅಭಿಯಾನದವರೆಗೆ ಎಲ್ಲವನ್ನೂ ಇದು ಒಳಗೊಂಡಿರುತ್ತದೆ. ಇದು 10,000 ಡಾಲರ್ ನಿಂದ 30,000 ಡಾಲರ್ ಪ್ಯಾಕೇಜ್ ಆಗಿರುತ್ತದೆ. ನಾನು ಹೆಸರನ್ನು ಮಾತ್ರ ನಿರ್ಧರಿಸೋದಿಲ್ಲ. ನಾನು ಥೆರಪಿಸ್ಟ್ ಆಗಿ, ಅಪ್ಪ – ಅಮ್ಮನ ಮಧ್ಯವರ್ತಿಯಾಗಿಯೂ ಕೆಲ್ಸ ಮಾಡ್ತೇನೆ ಎಂದು ಟೇಲರ್ ಎ. ಹಂಫ್ರೆ ಹೇಳಿದ್ದಾರೆ.
