Property Investment : ಸೋಶಿಯಲ್ ಮೀಡಿಯಾ ಪೋಸ್ಟ್ ಒಂದು ವೇಗವಾಗಿ ವೈರಲ್ ಆಗಿದೆ. ಮನೆ ಕೆಲ್ಸದ ಮಹಿಳೆ ಖರೀದಿ ಮಾಡಿದ ಮನೆ ಈಗ ಸುದ್ದಿಯಲ್ಲಿದೆ. ಅತಿ ಕಡಿಮೆ ಸಾಲ ಮಾಡಿ ದೊಡ್ಡ ಬೆಲೆಯ ಮನೆ ಖರೀದಿ ಮಾಡಿದ್ದೇ ಇಲ್ಲಿಯ ವಿಶೇಷ. 

ನಗರ ದೊಡ್ಡದಿರ್ಲಿ, ಚಿಕ್ಕದಿರ್ಲಿ ಮನೆ ಖರೀದಿ ಮಾಡೋದು ಸುಲಭದ ಮಾತಲ್ವೇ ಅಲ್ಲ. ಜೀವನ ಪರ್ಯಂತ ಹಣ ಕೂಡಿಟ್ರೂ ಸುಂದರ ಮನೆ ಖರೀದಿ ಕಷ್ಟ. ಮನೆ ಕೆಲಸ ಮಾಡುವ, ಕೂಲಿ ಕೆಲ್ಸ ಮಾಡುವ, ತರಕಾರಿ, ಟೀ ಮಾರಾಟ ಮಾಡುವ ಸಣ್ಣ ವ್ಯಾಪಾರಸ್ಥರಿಗೆ ಇದು ನೆರವೇರದ ಕನಸು ಅಂತ ನಾವೆಲ್ಲ ಭಾವಿಸಿದ್ದೇವೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್ ಒಂದು ನಮ್ಮ ನಂಬಿಕೆ ಸುಳ್ಳು ಮಾಡಿದೆ. ಕೆಲ್ಸ ಯಾವುದಾದ್ರೇನು, ಹಣವನ್ನು ಹೇಗೆ ಹೂಡಿಕೆ ಮಾಡ್ಬೇಕು ಎನ್ನುವ ಜ್ಞಾನವಿದ್ರೆ ಕೂಲಿ ಕೆಲಸದವರು ಕೂಡ ಮನೆ ಕಟ್ಟಿಸ್ಬಹುದು, ಸೈಟ್ ಖರೀದಿ ಮಾಡ್ಬಹುದು.

10 ಲಕ್ಷ ಸಾಲ ಮಾಡಿ 60 ಲಕ್ಷದ ಮನೆ (Home) ಖರೀದಿ ಮಾಡಿದ ಕೆಲಸದಾಕೆ : 

ಸೋಶಿಯಲ್ ಮೀಡಿಯಾದಲ್ಲಿ ನಳಿನಿ ಉನಾಗರ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಳಿಗ್ಗೆ ನಮ್ಮ ಮನೆ ಕೆಲ್ಸದಾಕೆ ಬಹಳ ಖುಷಿಯಿಂದ ಬಂದ್ರು. ಏನಾಯ್ತು ಅಂತ ಕೇಳಿದ್ದಕ್ಕೆ, ಸೂರತ್ ನಲ್ಲಿ 60 ಲಕ್ಷ ಮೌಲ್ಯದ 3 ಬೆಡ್ ರೂಮ್ ಫ್ಲಾಟ್ ಖರೀದಿ ಮಾಡಿದ್ದೇನೆ. ಫರ್ನಿಚರ್ ಗೆ 4 ಲಕ್ಷ ಖರ್ಚು ಮಾಡಿದ್ದೇನೆ ಎಂದು ಮಹಿಳೆ, ಇದಕ್ಕೆ ತಾನು ಪಡೆದಿದ್ದು ಬರೀ 10 ಲಕ್ಷ ರೂಪಾಯಿ ಎಂದಿದ್ದಾರೆ. ಇದನ್ನು ಕೇಳಿದ ನಳಿನಿ ಉನಾಗರ್ ಗೆ ಶಾಕ್ ಆಗಿದೆ. 10 ಲಕ್ಷ ಸಾಲ ಮಾಡಿ 60 ಲಕ್ಷದ ಮನೆ ಹೇಗೆ ಖರೀದಿ ಮಾಡ್ದೆ ಎನ್ನುವ ಪ್ರಶ್ನೆ ಕೇಳಿದಾಗ ಮತ್ತೊಂದಿಷ್ಟು ಆಸಕ್ತಿಕರ ವಿಷ್ಯ ಹೊರ ಬಿದ್ದಿದೆ. ನಳಿನಿ ಮನೆ ಕೆಲಸದ ಮಹಿಳೆ ಮನೆ ಖರೀದಿ ಮಾಡಿದ್ದು ಇದೇ ಮೊದಲಲ್ಲ. ಅವರ ಹೆಸರಿನಲ್ಲಿ ಮನೆ ಹಾಗೂ ಅಂಗಡಿ ಇದೆ. ಗುಜರಾತ್ನ ವೆಲಂಜಾದಲ್ಲಿ ಅವರು ಎರಡು ಫ್ಲೋರ್ ನ ಮನೆ ಮತ್ತೆ ಅಂಗಡಿ ಹೊಂದಿದ್ದಾರೆ. ಇವೆರಡನ್ನೂ ಬಾಡಿಗೆಗೆ ನೀಡಿದ್ದಾರೆ. ಇದನ್ನು ಕೇಳಿ ನಾನು ಶಾಕ್ ಆದೆ ಅಂತ ನಳಿನಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಅಬುಧಾಬಿ ಟೂರಿಸಂ ಜಾಹೀರಾತಿಗಾಗಿ ಹಿಜಾಬ್ ಧರಿಸಿದ ದೀಪಿಕಾ ಪಡುಕೋಣೆ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ : 

ಸೋಶಿಯಲ್ ಮೀಡಿಯಾದಲ್ಲಿ ನಳಿನಿ ಪೋಸ್ಟ್ ವೈರಲ್ ಆಗಿದೆ. 750,000 ಬಾರಿ ಈ ಪೋಸ್ಟ್ ವೀಕ್ಷಿಸಲಾಗಿದೆ. 6,000 ಹೆಚ್ಚು ಇದನ್ನು ಲೈಕ್ ಮಾಡಿದ್ದಾರೆ. 580ಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಹಣವನ್ನು ಹೇಗೆ ಬಳಸ್ಬೇಕು ಎಂಬುದಕ್ಕೆ ಇವರು ಉತ್ತಮ ನಿದರ್ಶನ ಅಂತ ಬಳಕೆದಾರರು ಹೇಳಿದ್ದಾರೆ. ಇದು ಯಾವುದೇ ಅದೃಷ್ಟವಲ್ಲ, ಮ್ಯಾಜಿಕ್ ಅಲ್ಲ. ವಿವೇಕದ ಉಳಿತಾಯ ಹಾಗೂ ಅನಗತ್ಯ ಖರ್ಚುಗಳನ್ನು ತಪ್ಪಿಸಿದ್ರಿಂದ ಸಿಕ್ಕ ಫಲ ಎಂದಿದ್ದಾರೆ. ಮನೆ ಕೆಲ್ಸದವರನ್ನು ಅನೇಕರು ಬಡವರು ಅಂತ ಪರಿಗಣಿಸ್ತಾರೆ, ಆದ್ರೆ ಅವರು ಹಣವನ್ನು ಚೆನ್ನಾಗಿ ಉಳಿಸ್ತಾರೆ. ಕೆಫೆ, ಗ್ಯಾಜೆಟ್, ಟೂರ್ ಅಂತ ಹಣ ಖರ್ಚು ಮಾಡ್ದೆ ಕೂಡಿಡ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

WhatsApp Business: ವಾಟ್ಸಪ್ ಬ್ಯುಸಿನೆಸ್‌ನ ಈ 5 ತಂತ್ರ ತಿಳಿದರೆ ತಿಂಗಳಿಗೆ ಲಕ್ಷ ಲಕ್ಷ ಆದಾಯ!

ಕಮೆಂಟ್ ನಲ್ಲಿ ಅನೇಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮನೆ ಪಕ್ಕದಲ್ಲಿ ಟೀ ಮಾರಾಟ ಮಾಡುವ ವ್ಯಕ್ತಿ ಎರಡು ಮನೆ ಹೊಂದಿದ್ದಾರೆ. ಮಕ್ಕಳನ್ನು ವಿದೇಶದಲ್ಲಿ ಓದಿಸ್ತಿದ್ದಾರೆ. ಆದ್ರೂ ಟೀ ಮಾರಾಟ ಬಿಟ್ಟಿಲ್ಲ, ಸಹಜ ಜೀವನ ಬಿಟ್ಟಿಲ್ಲ. ಶ್ರೀಮಂತರೆಲ್ಲ ನಾವು ಶ್ರೀಮಂತರು ಅಂತ ತೋರಿಸಿಕೊಳ್ಳೊ ಅಗತ್ಯ ಇಲ್ಲ ಎಂದು ಜನರು ಕಮೆಂಟ್ ಮಾಡಿದ್ದಾರೆ. ಶಿಸ್ತು ಮತ್ತು ಸ್ಥಿರತೆ ಇದ್ದಲ್ಲಿ ಎಲ್ಲವೂ ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ.