ಅಮೆರಿಕದ ತೆರಿಗೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತದ ಜವಳಿ ಉದ್ಯಮವನ್ನು ಪುನಶ್ಚೇತನಗೊಳಿಸಲು ಭಾರತ 40 ಹೊಸ ರಾಷ್ಟ್ರಗಳ ಜೊತೆ ವ್ಯಾಪಾರ ಆರಂಭಿಸಲು ಮುಂದಾಗಿದೆ. ಯುರೋಪಿಯನ್ ಯೂನಿಯನ್ ಬಳಿ ಕಾರ್ಬನ್ ಸುಂಕದಲ್ಲಿ ರಿಯಾಯಿತಿಗಾಗಿ ಭಾರತ ಮನವಿ ಮಾಡಿದೆ.

ನವದೆಹಲಿ (ಆ.29): ಅಮೆರಿಕ ಹೇರಿರುವ ಶೇ.50ರಷ್ಟು ತೆರಿಗೆಯಿಂದ ಭಾರತದ ಜವಳಿ ಉದ್ಯಮ ಭಾರೀ ಹೊಡೆತ ತಿನ್ನುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್‌ಗೆ ಟಕ್ಕರ್‌ ಕೊಡಲು ಮುಂದಾಗಿರುವ ಭಾರತ, ಅನ್ಯ 40 ದೇಶಗಳ ಮಾರುಕಟ್ಟೆಗಳತ್ತ ತನ್ನ ಜವಳಿ ಉದ್ಯಮವನ್ನು ತಿರುಗಿಸಿ ವಿಸ್ತರಿಸಲು ಯತ್ನಿಸುತ್ತಿದೆ.

ಇದಕ್ಕಾಗಿ ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೊ, ಪೋಲೆಂಡ್, ರಷ್ಯಾ, ದಕ್ಷಿಣ ಕೊರಿಯಾ, ಟರ್ಕಿ, ಯುಎಇ, ಬ್ರಿಟನ್‌ ಸೇರಿ 40 ರಾಷ್ಟ್ರಗಳಲ್ಲಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಆಮದು ಕುಸಿದ ಕಾರಣ ದೇಶದ ಪ್ರಮುಖ ಜವಳಿ ಉತ್ಪಾದಕರು ಬಾಗಿಲು ಹಾಕಿರುವ ಹೊತ್ತಿನಲ್ಲಿ ಅವರ ರಕ್ಷಣೆಗೆ ಭಾರತ ಈ ಹೆಜ್ಜೆ ಇಡುತ್ತಿದೆ.

ಇದನ್ನೂ ಓದಿ: 'ಭಾರತದ ಮೇಲೆ ಪರಮಾಣು ಬಾಂಬ್ ಹಾಕಿ..' ಅಮೆರಿಕ ಶಾಲೆಯ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

ಭಾರತದ ಒಟ್ಟು ಜವಳಿ ರಫ್ತಿನಲ್ಲಿ ಶೇ.29ರಷ್ಟನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿದ್ದರೆ, ಈ 40 ರಾಷ್ಟ್ರಗಳು ಶೇ.5-6ರಷ್ಟು ತರಿಸಿಕೊಳ್ಳುತ್ತಿವೆ. ಈಗ ಇದನ್ನು ಇನ್ನಷ್ಟು ಹೆಚ್ಚಿಸುವ ಗುರಿಯಿದೆ.

indias first counter to Trump tariffs textile exports pushed 40 countries focus

ತೆರಿಗೆ ರಿಯಾಯಿತಿಗೆಇಯು ಬಳಿ ಕೋರಿಕೆ

ಅಮೆರಿಕದ ತೆರಿಗೆ ಜಾರಿಯಾಗಿರುವ ಹೊತ್ತಿನಲ್ಲಿ, ಯುರೋಪಿಯನ್‌ ಯೂನಿಯನ್‌ ಬಳಿ ಭಾರತ ಕಾರ್ಬನ್‌ ಸುಂಕದಲ್ಲಿ ರಿಯಾಯಿತಿಗಾಗಿ ಬೇಡಿಕೆ ಇಡಬಹುದು ಎಂದು ವರದಿಯಾಗಿದೆ. ಇಯು ಈಗಾಗಲೇ ಅಮೆರಿಕಕ್ಕೆ ಕೊಂಚ ತೆರಿಗೆ ವಿನಾಯಿತಿ ನೀಡಿದೆ. ಅದೇ ಮಾದರಿಯಲ್ಲಿ ಭಾರತಕ್ಕೂ ರಿಯಾಯಿತಿ ನೀಡುವಂತೆ ಭಾರತ ಕೋರಿದ್ದು, ಈ ಸಂಬಂಧ ಯೂನಿಯನ್‌ನ ವ್ಯಾಪಾರ ಮತ್ತು ಆರ್ಥಿಕ ಭದ್ರತೆಯ ಆಯುಕ್ತರು, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್‌ ಅವರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದೆ.