20,000 ರೂಪಾಯಿಗಿಂತ ಮೇಲ್ಪಟ್ಟ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ವಿಳಂಭವಾಗುತ್ತಿರುವುದೇಕೆ? ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದರೂ ಇನ್ನೂ ರೀಫಂಡ್ ಆಗಿಲ್ಲವೇ? ನಿಮ್ಮ ರೀಫಂಡ್ ಮೊತ್ತ 20,000 ರೂಪಾಯಿಗಿಂತ ಮೇಲಿದೆಯಾ? ಈ ಬಾರಿ ಎದುರಾಗಿರುವ ತೊಡಕೇನು? ಪರಿಹಾರವೇನು?

ನವದೆಹಲಿ (ಸೆ.19) ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆ ಮಾಡಿದ ಬಳಿಕ ಕೆಲ ದಿನಗಳಲ್ಲಿ ರೀಫಂಡ್‌ ಆಗಲಿದೆ. ಆದರೆ ಈ ಬಾರಿ ಹಲವರು ಆದಾಯ ತೆರಿಗೆ ಪಾವತಿದಾರರಿಗೆ ರೀಫಂಡ್ ಮೊತ್ತ ಇನ್ನೂ ಕೈಸೇರಿಲ್ಲ. ಅವಧಿಗೂ ಮೊದಲೇ ಸಲ್ಲಿಕೆ ಮಾಡಿ ಕಾಯುತ್ತಿದ್ದರೂ ಇನ್ನೂ ಬಂದಿಲ್ಲ ಎಂದು ಹಲವರು ದೂರು, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅದರಲ್ಲೂ ಪ್ರಮುಖವಾಗಿ 20,000 ರೂಪಾಯಿ ಒಳಗಿನ ಐಟಿಆರ್ ರೀಫಂಡ್ ಮೊತ್ತ ಯಾವುದೇ ಅಡೆ ತಡೆ ಇಲ್ಲದೆ ಬಂದಿದೆ. ಆದರೆ 20,000 ರೂಪಾಯಿಗಿಂತ ಮೇಲ್ಪಟ್ಟ ರೀಫಂಡ್ ಮೊತ್ತ ಇನ್ನೂ ಖಾತೆಗೆ ಜಮೆ ಆಗಿಲ್ಲ. ಇದಕ್ಕೆ ಕೆಲ ಕಾರಣಗಳೂ ಇವೆ. ಜೊತೆಗೆ ಪರಿಹಾರವೂ ಇದೆ.

ಈ ಬಾರಿ ಕಠಿಣ ಪರಿಶೀಲನೆ

ಪ್ರತಿ ವರ್ಷ ಆದಾಯ ತೆರಿಗೆ ಇಲಾಖೆಗೆ ಐಟಿಆರ್ ಸಲ್ಲಿಕೆ ಮಾಡಿದ ಬಳಿಕ ನಿರ್ದಿಷ್ಟ ದಿನಗಳಲ್ಲಿ ಮೊತ್ತ ಅದೆಷ್ಟೇ ಇದ್ದರೂ ರೀಫಂಡ್ ಆಗುತ್ತಿತ್ತು. ಆದರೆ ಈ ಬಾರಿ ಹಲವು ಸುತ್ತಿನ ಪರಿಶೀಲನೆ ನಡೆಯುತ್ತಿದೆ. 20,000 ರೂಪಾಯಿಗಿಂತ ಮೇಲ್ಪಟ್ಟ ತೆರಿಗೆ ಪಾವತಿದಾರರ ರೀಫಂಡ್ ವೆರಿಫಿಕೇಶನ್ ಕಠಿಣ ಮಾಡಲಾಗಿದೆ. ಡೇಟಾ ಮಿಸ್‌ಮ್ಯಾಚ್ ಆಗಿದ್ದರೆ, ಇತರ ವೆರಿಫಿಕೇಶನ್‌ಗಳಾದ, ಬ್ಯಾಂಕ್ ಖಾತೆ, ಹೆಸರು ಸೇರಿದಂತೆ ಪ್ರತಿಯೊಂದು ದಾಖಲೆ ವೆರಿಫಿಕೇಶನ್ ಆದ ಬಳಿಕವೂ ರೀಫಂಡ್ ಆಗಲಿದೆ. ಸಮಸ್ಯೆ ಇದ್ದಲ್ಲಿ ರೀಫಂಡ್ ಆಗುವುದಿಲ್ಲ. ಈ ವೇಳೆ ಮತ್ತೆ ತಪ್ಪುಗಳನ್ನು ಸರಿಪಡಿಸಿ ಸಲ್ಲಿಸಬೇಕಿದೆ. ಈ ಮೂಲಕ ಸುಳ್ಳು ದಾಖಲೆ ನೀಡಿ ರೀಫಂಡ್ ಪಡೆಯುವ ಪರಿಪಾಠಕ್ಕೆ ಅಂತ್ಯಹಾಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಇನ್ನೂ ಇ ವೆರಿಫಿಕೇಶನ್ ಮಾಡದಿದ್ದರೂ ರೀಫಂಡ್ ವಿಳಂಬವಾಗಲಿದೆ.

ನಿಮ್ಮ ಆದಾಯ ವಿನಾಯಿತಿ ಮಿತಿ ಒಳಗಿದ್ದರೂ ಐಟಿಆರ್ ಸಲ್ಲಿಕೆ ಮಾಡಲೇಬೇಕು ಯಾಕೆ?

ಸಾಮಾನ್ಯವಾಗ 4 ರಿಂದ 5 ವಾರಗಳಲ್ಲಿ ಐಟಿಆರ್ ರೀಫಂಡ್ ಮೊತ್ತ ಖಾತೆಗೆ ಜಮೆ ಆಗಲಿದೆ. ಆದರೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ವೆರಿಫಿಕೇಶನ್ ಪ್ರೊಸೆಸ್ ಅಥವಾ ಸಲ್ಲಿಕೆಯಲ್ಲಿ ಆಗಿರುವ ತಪ್ಪುಗಳು ಕಾರಣವಾಗಿರುತ್ತದೆ. ಸೆಪ್ಟೆಂಬರ್ 16ಕ್ಕೆ ಐಟಿಆರ್ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಇದಕ್ಕೂ ಮೊದಲೇ ಸಲ್ಲಿಕೆ ಮಾಡಿರುವ ಹಲವರು ರೀಫಂಡ್ ಮೊತ್ತಕ್ಕಾಗಿ ಕಾಯುವಂತಾಗಿದೆ.

ರೀಫಂಡ್ ವಿಳಂಬಕ್ಕೆ ಸಾಮಾನ್ಯ ಕಾರಣಗಳು

  • ಪಾನ್, ಆಧಾರ್, ಬ್ಯಾಂಕ್ ಖಾತೆ ವಿವರದಲ್ಲಿನ ಸಮಸ್ಯೆ, ತಪ್ಪು
  • ಬ್ಯಾಂಕ್ ಖಾತೆ ಇ ಪೋರ್ಟಲ್ ಮೂಲಕ ಇ ವೆರಿಫೈ ಮಾಡದೇ ಸಲ್ಲಿಕೆ
  • ಐಟಿಆರ್ ಇ ವೆರಿಫಿಕೇಶನ್ ಮಾಡದೇ ಇರುವುದು
  • 26AS, AIS ಹಾಗೂ ಟಿಡಿಎಸ್ ವಿವರದಲ್ಲಿ ಡೇಟಾ ಮಿಸ್‌ಮ್ಯಾಚ್
  • ಮ್ಯಾನ್ಯುಯೆಲ್ ಪರಿಶೀಲನೆ ಆಯ್ಕೆ
  • ಕಳದೆ ವರ್ಷಗಳ ಬಾಕಿ ಉಳಿದ ತೆರಿಗೆ ಪಾವತಿ
  • ರೀಫಂಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ
  • www.incometax.gov.in ಅಧಿಕೃತ ವೆಬ್‌ಸೈಟ್ ಕ್ಲಿಕ್ ಮಾಡಿ
  • ಪಾನ್ ನಂಬರ್ ಹಾಕಿ ಲಾಗಿನ್ ಆಗಿ
  • ಫೈಲ್‌ನಲ್ಲಿ ಇನ್‌ಕಮ್ ಟ್ಯಾಕ್ಸಿ ರಿಟರ್ನ್ಸ್ ಕ್ಲಿಕ್ ಮಾಡಿ ವೀವ್ಯೂ ಫಿಲ್ಲಡ್ ರಿಟರ್ನ್ಸ್
  • ಲೇಟೆಸ್ಟ್ ರಿಟರ್ನ್ಸ್ ಕ್ಲಿಕ್ ಮಾಡಿ ವೀವ್ಯೂ ಡಿಟೇಲ್ಸ್ ಮೂಲಕ ರೀಫಂಡ್ ಸ್ಟೇಟಸ್ ಚೆಕ್ ಮಾಡಿ

ನಿಮ್ಮ ಹೆಸರಿನಲ್ಲಿ Joint Bank Account ಇದೆಯಾ? ನಿಮಗೂ IT ನೋಟಿಸ್ ಬರಬಹುದು, ಎಚ್ಚರ!