ಚಿನ್ನ ಮತ್ತು ಬೆಳ್ಳಿ ದರಗಳು ದಾಖಲೆ ಮಟ್ಟ ತಲುಪಿವೆ. ಬೆಂಗಳೂರಿನಲ್ಲಿ ಸೋಮವಾರ ಚಿನ್ನದ ದರ 10 ಗ್ರಾಂಗೆ ದಾಖಲೆಯ 1,10,000 ರು.ಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 1,32,100 ರು. ತಲುಪಿದೆ. ಶನಿವಾರ ಚಿನ್ನದ ಬೆಲೆ 1.08 ಲಕ್ಷ ರು. ಮತ್ತು ಬೆಳ್ಳಿಯ ಬೆಲೆ 1,28,000 ರು.ನಷ್ಟು ಇತ್ತು.

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೇ ಚಿನ್ನ ಮತ್ತು ಬೆಳ್ಳಿ ದರಗಳು ದಾಖಲೆ ಮಟ್ಟ ತಲುಪಿವೆ. ಬೆಂಗಳೂರಿನಲ್ಲಿ ಸೋಮವಾರ ಚಿನ್ನದ ದರ 10 ಗ್ರಾಂಗೆ ದಾಖಲೆಯ 1,10,000 ರು.ಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 1,32,100 ರು. ತಲುಪಿದೆ. ಶನಿವಾರ ಚಿನ್ನದ ಬೆಲೆ 1.08 ಲಕ್ಷ ರು. ಮತ್ತು ಬೆಳ್ಳಿಯ ಬೆಲೆ 1,28,000 ರು.ನಷ್ಟು ಇತ್ತು.

ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸತತ 6 ದಿನದಿಂದ ಏರಿಕೆ ಹಾದಿಯಲ್ಲಿವೆ. ಸೋಮವಾರ ದೆಹಲಿಯಲ್ಲಿ ಶೇ.99.9 ಶುದ್ಧತೆಯ ಚಿನ್ನ 10 ಗ್ರಾಂಗೆ ದಾಖಲೆಯ 1,05,670 ರು.ಗೆ ತಲುಪಿದರೆ, ಆಭರಣ ಚಿನ್ನವು (ಶೇ.99.5 ಶುದ್ಧತೆ) 800 ರು. ಏರಿಕೆಯೊಂದಿಗೆ 1,04,800 ರು.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಶನ್ ತಿಳಿಸಿದೆ.

ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಮತ್ತು ಅಮೆರಿಕದ ಸುಂಕನೀತಿಯು ಬಂಗಾರದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಹಬ್ಬದ ಋತುವಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೇಡಿಕೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

6 ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಭಾರತದಲ್ಲಿ ಬಂಗಾರದ ಕಿರಣದ ಹೊಳಪು

ನವದೆಹಲಿ: ಚಿನ್ನದ ಬೆಲೆ (Gold Price in India) ಗಗನಕ್ಕೇರುತ್ತಿರುವ ಸಂದರ್ಭದಲ್ಲಿಯೇ ಭಾರತಕ್ಕೆ (India) ಗುಡ್‌ನ್ಯೂಸ್ ಸಿಕ್ಕಿದೆ. ರಾಜ್ಯವೊಂದರ 6 ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪವಿರೋದನ್ನು ಭಾರತದ ಭೌಗೋಳಿಕ ಸಮೀಕ್ಷೆಗೆ ಖಚಿತಪಡಿಸಿದೆ ಎಂದು ವರದಿಯಾಗಿದೆ. ಹೌದು, ಒಡಿಶಾದಲ್ಲಿ (Odisha) 6 ಚಿನ್ನದ ಖಜಾನೆ ದೊರೆತಿರುವ ವಿಷಯವನ್ನು ವಿಜ್ಞಾನಿಗಳು (Geological Survey of India) ಖುಷಿಯಿಂದ ಹಂಚಿಕೊಂಡಿದ್ದಾರೆ. ಈ ಆರು ಸ್ಥಳಗಳಲ್ಲಿ ಸುಮಾರು 20 ಮೆಟ್ರಿಕ್ ಟನ್ ಚಿನ್ನವಿರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಖನಿಜ ಸಂಪತ್ತಿನಿಂದಲೇ ಗುರುತಿಸಿಕೊಂಡಿರುವ ಒಡಿಶಾ ಇದೀಗ ಚಿನ್ನದ ನಿಕ್ಷೇಪಗಳಿಂದಾಗಿ ಸುದ್ದಿಯಾಗುತ್ತಿದೆ.

ಚಿನ್ನ ನಿಕ್ಷೇಪ ಪತ್ತೆಯಾಗಿರುವ 6 ಪ್ರದೇಶಗಳು ಯಾವವು?

ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ತನ್ನ ಇತ್ತೀಚಿನ ರಿಪೋರ್ಟ್‌ನಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರುವ ಮಾಹಿತಿಯನ್ನು ಉಲ್ಲೇಖಿಸಿದೆ. ಒಡಿಶಾದ ದೇವಗಢ, ಸುಂದರಗಢ, ನವರಂಗಪುರ, ಕಿಯೋಂಜರ್, ಅನುಗುಲ್ ಮತ್ತು ಕೊರಾಪುಟ್ ಎಂಬಲ್ಲಿ ಚಿನ್ನದ ನಿಕ್ಷೇಪವಿರೋ ಸಾಧ್ಯತೆಗಳಿವೆ ಎಂದು ಜಿಎಸ್‌ಐ ಹೇಳಿದೆ. ಇಲ್ಲಿಯ ಚಿನ್ನದ ನಿಕ್ಷೇಪಗಳನ್ನು ಶೀಘ್ರದಲ್ಲಿಯೇ ಹರಾಜು ಮಾಡಲಾಗುವ ಸುಳಿವನ್ನು ಒಡಿಶಾ ಸರ್ಕಾರ ನೀಡಿದೆ.