Business ideas : ಹಣ ಸಂಪಾದನೆಗೆ ಸಾಕಷ್ಟು ಆಯ್ಕೆಗಳಿವೆ. ನೌಕರಿ ಜೊತೆ ನೀವೂ ಕೆಲ ಸೈಡ್ ಇನ್ ಕಮ್ ಬರುವ ಕೆಲ್ಸ ಮಾಡ್ಬಹುದು. ಹೆಚ್ಚು ಕಿರಿಕಿರಿ ಇಲ್ದೆ ಮಾಡಬಹುದಾದ ಕೆಲ್ಸಗಳ ಪಟ್ಟಿ ಇಲ್ಲಿದೆ. 

ತಿಂಗಳ ಸಂಬಳ (salary) ನೆಚ್ಗೊಂಡು ಜೀವನ ಮಾಡೋದು ಈಗಿನ ಕಾಲದಲ್ಲಿ ಇಂಪಾಸಿಬಲ್. ಯಾವಾಗ ದಿಢೀರ್ ಖರ್ಚು ಮೈಮೇಲೆ ಬರುತ್ತೆ ಹೇಳೋಕೆ ಸಾಧ್ಯವಿಲ್ಲ. ಕೈನಲ್ಲಿ ಎಮರ್ಜೆನ್ಸಿ ಹಣವಿದ್ರೆ ಸ್ವಲ್ಪ ಉಸಿರಾಡ್ಬಹುದು. ಬಂದ ಹಣವೆಲ್ಲ ಮನೆ, ದಿನಸಿ, ಬಿಲ್ ಗೆ ಖಾಲಿಯಾದ್ರೆ ಉಳಿಸೋದು ಎಲ್ಲಿ? ಜಾಬ್ ಜೊತೆ ಸೈಡ್ ಬ್ಯುಸಿನೆಸ್ ಅಥವಾ ಪಾರ್ಟ್ ಟೈಂ ಕೆಲ್ಸ ಇದ್ರೆ ಒಳ್ಳೆಯದು. ಜಾಬ್ (job) ಮಾಡ್ತಾ ಬ್ಯುಸಿನೆಸ್ ಮಾಡೋದು ಕಷ್ಟ. ಎರಡನ್ನೂ ಬ್ಯಾಲೆನ್ಸ್ ಮಾಡೋಕೆ ಆಗಲ್ಲ ಎಂಬ ಕಾರಣಕ್ಕೆ ಅನೇಕರು ಈ ಪ್ರಯತ್ನ ಮಾಡೋದೇ ಇಲ್ಲ. ಬಂದ ಹಣದಲ್ಲೇ ಒದ್ದಾಡಿಕೊಂಡು ಜೀವನ ಸಾಗಿಸ್ತಾರೆ. ಹೆಚ್ಚುವರಿ ಕೆಲ್ಸ ಮಾಡೋ ಮನಸ್ಸಿದ್ರೆ ನೀವು ನೌಕರಿ ಜೊತೆ ಕೆಲ ಕೆಲ್ಸ ಮಾಡ್ಬಹುದು.

ನೌಕರಿ ಜೊತೆ ಜೊತೆಗೆ ಇಲ್ಲೂ ಹಣ ಗಳಿಸಿ :

ರಿಯಲ್ ಎಸ್ಟೇಟ್ : ಒಂದು ನೌಕರಿಯಿಂದ ಬರೋ ಹಣ ಸಾಕಾಗ್ತಿಲ್ಲ ಅಂತಾದ್ರೆ ನೀವು ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ ನಲ್ಲಿ ಹಣ ಇನ್ವೆಸ್ಟ್ ಮಾಡ್ಬಹುದು. 10 ರಿಂದ 20 ಸಾವಿರ ಹಣ ಇನ್ವೆಸ್ಟ್ ಮಾಡ್ಬೇಕಾಗುತ್ತೆ. ಹೂಡಿಕೆದಾರರು ಇಂಥ ಕಂಪನಿಗಳಿಂದ ಶೇಕಡಾ 90ರಷ್ಟು ಲಾಭ ಪಡೀತಾರೆ.

ಇಂದಿನಿಂದ Paytm UPI ಸ್ಥಗಿತ ಮೆಸೇಜ್ ನಿಮಗೂ ಬಂತಾ? ಯಾರಿಗೆಲ್ಲಾ ಇದು ಅನ್ವಯ? ಡಿಟೇಲ್ಸ್​ ಇಲ್ಲಿದೆ...

ಇ ಕಾಮರ್ಸ್ ಮೂಲಕ ಗಳಿಕೆ : ಇತ್ತೀಚಿನ ದಿನಗಳಲ್ಲಿ ಇ ಕಾಮರ್ಸ್ ಬ್ಯುಸಿನೆಸ್ ಗಳಿಕೆಗೆ ಒಳ್ಳೆ ಅವಕಾಶ ನೀಡ್ತಿದೆ. ಸಾಕಷ್ಟು ಇ ಕಾಮರ್ಸ್ ಕಂಪನಿಗಳು ತಲೆ ಎತ್ತಿವೆ. ಅಮೆಜಾನ್, ಫ್ಲಿಪ್ಕಾರ್ಟ್, ಮೀಶೋ ಅಥವಾ ಇನ್ಸ್ಟಾಗ್ರಾಮ್ ಮೂಲಕ ನೀವು ವಸ್ತುಗಳನ್ನು ಖರೀದಿ ಮಾಡ್ಬಹುದು ಹಾಗೆ ಮಾರಾಟ ಮಾಡ್ಬಹುದು. ಫ್ಯಾಕ್ಟರಿಯಿಂದ ವಸ್ತುಗಳನ್ನು ಖರೀದಿ ಮಾಡಿ ಇ ಕಾಮರ್ಸ್ ವೆಬ್ಸೈಟ್ ನಲ್ಲಿ ಮಾರಾಟ ಮಾಡಬಹುದು. ಇಲ್ಲವೆ ಇ ಕಾಮರ್ಸ್ ವೆಬ್ ಸೈಟ್ ನಿಂದ ಖರೀದಿ ಮಾಡಿ, ಸೋಶಿಯಲ್ ಮೀಡಿಯಾ ಅಥವಾ ಮನೆಯಲ್ಲೇ ಮಾರಾಟ ಮಾಡ್ಬಹುದು.

ಕ್ರಿಯೆಟಿವಿಟಿಯಿಂದ ಹಣ ಸಂಪಾದನೆ : ನೀವು ಉತ್ತಮ ಹವ್ಯಾಸ ಹೊಂದಿದ್ರೆ ಅದ್ರಿಂದಲೂ ಸಂಪಾದನೆ ಶುರು ಮಾಡ್ಬಹುದು. ಕ್ಯಾಂಡಲ್ ಮೇಕಿಂಗ್, ಕೇಕ್ ಮೇಕಿಂಗ್, ಹೊಲಿಗೆ, ಅಡುಗೆ ಅಥವಾ ಕರಕುಶಲ ವಸ್ತುಗಳ ತಯಾರಿಯಲ್ಲಿ ಆಸಕ್ತಿ ಇದ್ರೆ, ನಿಮ್ಮ ಬಿಡುವಿನ ಟೈಂನಲ್ಲಿ ನೀವು ಇದನ್ನು ತಯಾರಿಸಿ ಮಾರಾಟ ಮಾಡ್ಬಹುದು.

ಡ್ರೈವಿಂಗ್ ಕೆಲ್ಸ : ನೌಕರಿ ಜೊತೆ ಸಾಕಷ್ಟು ಹಣ ಗಳಿಸುವ ಕೆಲ್ಸಗಳಲ್ಲಿ ಇದೂ ಸೇರಿದೆ. ನಿಮ್ಮ ಬಳಿ ಬೈಕ್ ಅಥವಾ ಕಾರಿದ್ರೆ ನೀವು ಇದನ್ನು ಹಣ ಗಳಿಕೆಗೆ ಬಳಸಿಕೊಳ್ಬಹುದು. ಆಫೀಸ್ ನಿಂದ ಬರುವಾಗ ಅಥವಾ ಹೋಗುವಾಗ ರೈಡ್ ಶೇರ್ ಡ್ರೈವರ್ ಆಗಿ ಕೆಲ್ಸ ಮಾಡ್ಬಹುದು. ಮಾರ್ನಿಂಗ್, ಇವನಿಂಗ್ ಶಿಫ್ಟ್ ನಲ್ಲಿ ಕೆಲ್ಸ ಮಾಡುವ ಅನೇಕರು, ಡ್ರೈವಿಂಗ್ ಕೆಲ್ಸವನ್ನು ಪಾರ್ಟ್ ಟೈಂ ಆಗಿ ಆಯ್ಕೆ ಮಾಡ್ಕೊಳ್ತಿದ್ದಾರೆ.

ಪೆಪ್ಸಿಯಿಂದ ಮ್ಯಾಕ್‌ಡೋನಲ್ಡ್‌ವರೆಗೆ: ಟ್ರಂಪ್ ತೆರಿಗೆಯಿಂದಾಗಿ ಅಮೆರಿಕನ್ ಕಂಪನಿಗಳಿಗೆ ಭಾರತೀಯರ ಸ್ವದೇಶಿ ಬಿಸಿ

ಬ್ಲಾಗರ್ : ಅತಿ ಬೇಗ ಹಣ ಗಳಿಸುವ ಮೂಲ ಸೋಶಿಯಲ್ ಮೀಡಿಯಾ ಎನ್ನಲಾಗ್ತಿದೆ. ನೀವು ಚೆನ್ನಾಗಿ ಮಾತನಾಡ್ತಿದ್ರೆ ಬ್ಲಾಗರ್ ಆಗ್ಬಹುದು. ನಿಮ್ಮ ಬ್ಲಾಗನ್ನು ಯುಟ್ಯೂಬ್, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಹಣ ಸಂಪಾದನೆ ಮಾಡ್ಬಹುದು.

ಈ ಕೆಲ್ಸಕ್ಕೂ ಇದೆ ಹೆಚ್ಚಿನ ಬೇಡಿಕೆ : ವಿಡಿಯೋ ಆಡಿಟಿಂಗ್, ಗ್ರಾಫಿಕ್ ಡಿಸೈನಿಂಗ್, ಸ್ಕ್ರಿಪ್ಟ್ ರೈಟಿಂಗ್ ನಂತ ಕೆಲ್ಸ ನಿಮಗೆ ಬಂದರೆ ಬಿಡುವಿನ ಟೈಂನಲ್ಲಿ ಇದನ್ನು ಮಾಡಿ ಹಣ ಗಳಿಸ್ಬಹುದು. ಟ್ಯೂಷನ್ ಕೂಡ ಅನೇಕರ ಆದಾಯದ ಎರಡನೇ ಮೂಲವಾಗ್ತಿದೆ.