ದುಬಾರಿ ಬಿಸ್ಪೋಕ್ RR ಖರೀದಿಸಿದ ಅನಂತ್ ಅಂಬಾನಿ, ಇದು ಭಾರತದ ಐಕಾನಿಕ್ ಕಾರು ಯಾಕೆ? ಇದರ ಬೆಲೆ ಹಾಗೂ ವಿಶೇಷತೆಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಈ ಕಾರು ಹಾಗೂ ಭಾರತದ ಇತಿಹಾಸಕ್ಕೂ ಇರುವ ಸಂಬಂಧ ಏನು?

ಮುಂಬೈ (ಅ.28) ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಇದೀಗ ತಮ್ಮ ಕಾರು ಸಂಗ್ರಹಕ್ಕೆ ಮತ್ತೊಂದು ಕಾರು ಸೇರ್ಪಡೆ ಮಾಡಿದ್ದಾರೆ. ಈ ಬಾರಿ ಅನಂತ್ ಅಂಬಾನಿ ಖರೀದಿಸಿದ್ದು ಬಿಸ್ಪೋಕ್ ರೋಲ್ಸ್ ರಾಯ್ಸ್ ಕಾರು. ಇದು ಅತ್ಯಂತ ದುಬಾರಿ ಕಾರು ಮಾತ್ರವಲ್ಲ, ಭಾರತದ ಇತಿಹಾಸದಲ್ಲೂ ಈ ಕಾರು ಪ್ರಮುಖ ಸ್ಥಾನದಲ್ಲಿದೆ. ರಾಯಲ್ ಕಾರು ಎಂದೇ ಗುರುತಿಸಿಕೊಂಡಿರುವ ಈ ಬಿಸ್ಪೋಕ್ ರೋಲ್ಸ್ ರಾಯ್ಸ್ ಕಾರಿನ ವಿಶೇಷತೆ ಹಾಗೂ ಬೆಲೆ ಎಲ್ಲರನ್ನು ಅಚ್ಚರಿಗೊಳಿಸುತ್ತದೆ.

ಬಿಸ್ಪೋಕ್ ರೋಲ್ಸ್ ರಾಯ್ಸ್ ಕಾರಿನ ಬೆಲೆ

ಈ ವಿಶೇಷ ಬಿಸ್ಪೋಕ್ ರೋಲ್ಸ್ ರಾಯ್ಸ್ ಕಾರಿನ ಬೆಲೆ 10.50 ಕೋಟಿ ರೂಪಾಯಿ. ಭಾರತದಲ್ಲಿ ರೋಲ್ಸ್ ರಾಯ್ಸ್ ಕಂಪನಿಯ ಹಲವು ದುಬಾರಿ ಕಾರುಗಳಿವೆ. ಇನ್ನು ಬುಗಾಟಿ ಸೇರಿದಂತೆ ಇತರ ಕಾರಗಳು ಲಭ್ಯವಿದೆ. ಆದರೆ ರೋಲ್ಸ್ ರಾಯ್ಸ್ ಹೆಚ್ಚು ಐಷಾರಾಮಿತನ ಮಾತ್ರವಲ್ಲ, ರಾಯಲ್ ಸ್ಟೇಟಸ್ ನೀಡುತ್ತದೆ.

ಸ್ಟಾರ್ ಆಫ್ ಇಂಡಿಯಾ ಆರೇಂಜ್

ಬಿಸ್ಪೋಕ್ ರೋಲ್ಸ್ ರಾಯ್ಸ್ ಕಾರಿಗೂ ಭಾರತದ ಇತಿಹಾಸಕ್ಕೂ ಸಂಬಂಧವಿದೆ. ಇದು ಸ್ವಾತಂತ್ರ್ಯ ಪೂರ್ವದಲ್ಲಿದ್ದ ಭಾರತದ ಏಕೈಕ ಅತ್ಯಂತ ಲಕ್ಷುರಿ ಕಾರು. ಇದೇ ಕಾರಿನ ಅತ್ಯಾಧುನಿಕ ವರ್ಶನ್ ಅನಂತ್ ಅಂಬಾನಿ ಖರೀದಿಸಿದ್ದಾರೆ. ಅನಂತ್ ಅಂಬಾನಿ ತಮ್ಮ ಖರೀದಿಯಲ್ಲೂ ಇತಿಹಾಸ ನೆನೆಪಿಸಿದ್ದಾರೆ. ಕಾರಣ 1934 ರಾಜ್‌ಕೋಟ್ ಮಹಾರಾಜ ಮೊದಲ ಬಾರಿಗೆ ಈ ಕಾರನ್ನು ಭಾರತದಲ್ಲಿ ಖರೀದಿಸಿದ್ದರು. ಇದು ಅಂದಿನ ಅತ್ಯಂತ ಶ್ರೀಮಂತಿಕೆಯ ಸಂಕೇತದ ಕಾರಾಗಿತ್ತು. ಐಷಾರಾಮಿ ಕಾರಾಗಿರುವ ಕಾರಣ ರೋಲ್ಸ್ ರಾಯ್ಸ್ ಈ ಕಾರನ್ನು ಆರೇಂಜ್ ಬಣ್ಣದಲ್ಲಿ ಬಿಡುಗಡೆ ಮಾಡಿತ್ತು. ಇದು ಸ್ಟಾರ್ ಆಫ್ ಇಂಡಿಯಾ ಆರೇಂಜ್ ಎಂದೇ ಗುರುತಿಸಿಕೊಂಡಿತ್ತು. ಇದೀಗ ಅನಂತ್ ಅಂಬಾನಿ ಕೂಡ ಇದೇ ಬಣ್ಣದ ಕಾರನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಭಾರತದ ಇತಿಹಾಸ ಪೂರ್ವದ ಕಾರಿನ ನೆನಪು ಕಟ್ಟಿಕೊಟ್ಟಿದ್ದಾರೆ.

ಹೊಸ ಕಾರು ಇದೀಗ ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಂಡಿದೆ. ಅನಂತ್ ಅಂಬಾನಿ ಹೊಸ ಕಾರು ಇದೀಗ ಎಲ್ಲರ ಗಮನಸೆಳೆಯುತ್ತಿದೆ. ದುಬಾರಿ ಕಾರು, ಐಷಾರಾಮಿತನ, ರಾಜ್‌ಕೋಟ್ ರಾಜ ಬಳಸಿದ ಅದೇ ಬಣ್ಣ, ಅದೇ ಗತ್ತಿನ ಕಾರು ಇದೀಗ ಮುಂಬೈ ಬೀದಿಯಲ್ಲಿ ಆರ್ಷಕಿತ ಕಾರಾಗಿದೆ.

ಮಾಲೀಕನ ಆಸಕ್ತಿಗೆ ಅನುಗುಣವಾಗಿ ಉತ್ಪಾದನೆ

ಈ ಕಾರಿನ ಮತ್ತೊಂದು ವಿಶೇಷತೆ ಎಂದರೆ ಕಸ್ಟಮೈಸೇಶನ್. ಮಾಲೀಕ ಯಾವ ರೀತಿ ಬೇಕು ಅನ್ನೋದಕ್ಕೆ ಅನುಗುಣವಾಗಿ ಕಾರು ಉತ್ಪಾದನೆ ಮಾಡಲಾಗುತ್ತದೆ. ಕಾರಿನ ಬಣ್ಣ ಯಾವುದು ಇರಬೇಕು, ಹೇಗಿರಬೇಕು, ಬ್ಯಾಡ್ಜ್ ಏನಿರಬೇಕು, ಕಾರಿನ ಒಳಗಿನ ಕ್ಯಾಬಿನ್, ಬಣ್ಣ ಸೇರಿದಂತೆ ಪ್ರತಿಯೊಂದು ಕಸ್ಟಮೈಸೇಶನ್ ಮಾಡಲಾಗುತ್ತದೆ. ಮಾಲೀಕನ ಆಸಕ್ತಿ, ಆಸೆಗಳಿಗೆ ತಕ್ಕಂತೆ ಕಾರು ಉತ್ಪಾದನೆ ಮಾಡಲಾಗುತ್ತದೆ.