ನನ್ನ ಬದುಕು ಗುಲಾಬಿ ತುಂಬಿದ ಹಾಸಿಗೆಯಾಗಿರಲಿಲ್ಲ. ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಆದರೆ ನನ್ನಲ್ಲಿ ಧೈರ್ಯ ತುಂಬಿ ಬದುಕು ಮುನ್ನಡೆಸಿದ ತಂದೆ ತಾಯಿಗೆ ಯಾವತ್ತು ಚಿರಋಣಿ ಎಂದು ಅನಂತ್ ಅಂಬಾನಿ ಭಾವುಕವಾಗಿ ಮಾತನಾಡಿದ್ದಾರೆ. ಈ ವೇಳೆ ತಂದೆ ಮುಕೇಶ್ ಅಂಬಾನಿ ಕಣ್ಣೀರಾದ ಘಟನೆ ನಡೆದಿದೆ.

ಮುಂಬೈ (ಸೆ.08) ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿಗೆ ಏನು ಕಡಿಮೆ? ಪ್ರತಿ ದಿನ ಕೋಟಿ ಕೋಟಿ ರೂಪಾಯಿ ಆದಾಯ, ಐಷಾರಾಮಿ ಮನೆ, ಕಾರು, ಕೆಲಸಕ್ಕೆ ಆಳು ಎಲ್ಲವೂ ಇದೆ. ಹುಟ್ಟಿದರೆ ಅನಂತ್ ಅಂಬಾನಿಯಾಗಿ ಹುಟ್ಟಬೇಕು ಅನ್ನೋ ಮಾತುಗಳು ಹಲವರ ಬಾಯಲ್ಲಿ ಕೇಳಿರುತ್ತೀರಿ. ಆದರೆ ಇದೇ ಅನಂತ್ ಅಂಬಾನಿ ತಮ್ಮ ಬದುಕು ಗುಲಾಬಿ ತುಂಬಿದ ಹಾಸಿಗೆಯಾಗಿರಲಿಲ್ಲ. ತಾನು ನೋವಿನ ದಿನ ಕಂಡಿದ್ದೇನೆ. ತೀವ್ರ ನೋವು ಅನುಭವಿಸಿದ್ದೇನೆ. ಧೈರ್ಯ ಕಳೆದುಕೊಂಡಿದ್ದೇನೆ, ಆತ್ಮವಿಶ್ವಾಸ ಕಳೆದುಕೊಂಡಿದ್ದೇನೆ. ಆದರೆ ಈ ಸಂದರ್ಭದಲ್ಲಿ ನನ್ನ ತಂದೆ ತಾಯಿ ನೀಡಿದ ಬೆಂಬಲ, ನನ್ನ ಜೊತೆಗಿದ್ದು ಮುನ್ನಡೆಸಿದ ರೀತಿಯಿಂದ ನಾನಲ್ಲಿದ್ದೇನೆ ಎಂದು ಅನಂತ್ ಅಂಬಾನಿ ಭಾವುಕರಾಗಿ ಮಾತನಾಡಿದ್ದಾರೆ. ಅನಂತ್ ಅಂಬಾನಿ ಮಾತು ಕೇಳಿಸಿಕೊಂಡ ತಂದೆ ಮುಕೇಶ್ ಅಂಬಾನಿ ಕಣ್ಣೀರಾದ ಘಟನೆ ನಡೆದಿದೆ.

ವೇದಿಕೆಯಲ್ಲಿ ಅನಂತ್ ಅಂಬಾನಿ ಭಾವುಕ ಭಾಷಣ

ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಮದುವೆ ಕೆಳದ ವರ್ಷ ಜಾಮ್‌ನಗರದಲ್ಲಿ ಅದ್ಧೂರಿಯಾಗಿ ನಡೆದಿತ್ತು. ದೇಶ ವಿದೇಶದ ಗಣ್ಯರು ಅನಂತ್ ಮದುವೆಗೆ ಆಗಮಿಸಿದ್ದರು. ಈ ವೇಳೆ ಮದುವೆಯಲ್ಲಿ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಜೊತೆ ವೇದಿಕೆಯಲ್ಲಿ ಮಾತನಾಡಿದ ವಿಚಾರ ಇದೀಗ ಬಯಲಾಗಿದೆ. ಅನಂತ್ ಅಂಬಾನಿ ಮಾತುಗಳನ್ನು ಕೇಳಿಸಿಕೊಂಡ ಮುಕೇಶ್ ಅಂಬಾನಿ ಕಣ್ಣೀರಿಟ್ಟ ಘಟನೆ ಬಹಿರಂಗವಾಗಿದೆ.

ಪತ್ನಿ ರಾಧಿಕಾ ಜೊತೆ ಹರಿದ್ವಾರದಲ್ಲಿ ಗಂಗಾ ಪೂಜೆಯಲ್ಲಿ ಪಾಲ್ಗೊಂಡ ಅನಂತ್ ಅಂಬಾನಿ

ನಾನು ಕಷ್ಟ ಅನುಭವಿಸಿದ್ದೇನೆ, ನೋವು ಕಂಡಿದ್ದೇನೆ

ಎಲ್ಲರ ಆಗಮನದಿಂದ ಜಾಮ್‌ನಗರ ನನಗೆ ಹಾಗೂ ರಾಧಿಕಾಗೆ ವಿಶೇಷವಾಗಿದೆ. ಈ ದಿನವನ್ನು ನಿಮ್ಮೆಲ್ಲರ ಉಪಸ್ಥಿತಿಯಿಂದ ಮತ್ತಷ್ಟು ವಿಶೇಷವಾಗಿಸಿದೆ. ನೀವು ತೋರಿದ ಪ್ರೀತಿಗೆ ಹೃದಯ ತುಂಬಿದ ಧನ್ಯವಾದ. ಇದೇ ವೇಳೆ ನಮ್ಮಿಂದ ಏನಾದರು ಸಮಸ್ಯೆಗಳಾಗಿದ್ದರೆ, ತೊಂದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಅನಂತ್ ಅಂಬಾನಿ ಮಾತು ಆರಂಭಿಸಿದ್ದರು. ಎಲ್ಲರೂ ಅಂದುಕೊಂಡಿದ್ದಾರೆ, ಅನಂತ್ ಅಂಬಾನಿ ಲೈಫ್ ಗುಲಾಬಿ ಹೂವುಗಳ ತುಂಬಿದ ಹಾಸಿಗೆ ಎಂದು. ನಡೆದಾಡುವ ದಾರಿಯೂ ಹೂವಿನ ದಳ ತುಂಬಿದ ಮೆತ್ತಗಿನ ಹಾಗೂ ಸಂತೋಷದ ಬದುಕು ಎಂದುಕೊಂಡಿದ್ದಾರೆ. ಆದರೆ ಹಾಗಲ್ಲ. ನಾನು ಬದುಕಿನಲ್ಲಿ ಅತೀವ ನೋವು, ಸಂಕಷ್ಟ, ತೊಳಲಾಟ ಅನುಭವಿಸಿದ್ದೇನೆ. ಜೀವನದಲ್ಲಿ ಆತ್ಮಸ್ಥರ್ಯ ಕಳೆದುಕೊಂಡಿದ್ದೇನೆ. ಜೀವನದ ಪ್ರತಿ ಹೆಜ್ಜೆ ಭಾರವಾಗಿಟ್ಟ ಅನುಭವ ಹೊಂದಿದ್ದೇನೆ. ನಾನು ಬಾಲ್ಯದಿಂದಲೇ ಹಲವು ಆರೋಗ್ಯ ಸಮಸ್ಯೆ ಎದುರಿಸಿದ್ದೇನೆ. ನನ್ನ ನಗುವನ್ನೇ ಕಳೆದುಕೊಂಡಿದ್ದೆ. ಎಲ್ಲವೂ ಇದ್ದು ಆರೋಗ್ಯವೇ ಇಲ್ಲ ಎಂದರೆ ಏನು ಪ್ರಯೋಜನ. ಎಲ್ಲರಂತೆ ಬದುಕಲು ನನಗೆ ಆರೋಗ್ಯ ಅನುಮತಿಸುತ್ತಿಲ್ಲ ಎಂದು ನಾನು ನೋವು ಅನುಭವಿಸಿದ್ದೇನೆ. ಆದರೆ ನನ್ನ ತಂದೆ ಹಾಗೂ ತಾಯಿ ನನ್ನ ಜೊತೆ ನಿಂತು ಬೆಂಬಲ ನೀಡಿದರು. ಈ ಎಲ್ಲಾ ನೋವುಗಳಿಂದ ಹೊರಬರುವಂತೆ ಮಾಡಿದರು. ನಾನು ಅನುಭವಿಸಿದ ಅಪಮಾನ, ನೋವುಗಳಿಂದ ಹೊರಬರುವಂತೆ ಪೋಷಕರು ಧೈರ್ಯ ತುಂಬಿ ನನ್ನನ್ನು ಬೆಳೆಸಿದರು ಎಂದು ಅನಂತ್ ಅಂಬಾನಿ ಭಾವುಕರಾಗಿ ಮಾತನಾಡಿದ್ದರು.

ತಂದೆ ತಾಯಿಯಿಂದ ಹೊಸ ಬದುಕು

ನೋವಿನಲ್ಲಿ ನಾನು ಅಲ್ಲೇ ಉಳಿದುಕೊಳ್ಳಲಿಲ್ಲ. ನನ್ನ ಪೋಷಕರ ಬೆಂಬಲದಿಂದ ನಾನು ಅದರಿಂದ ಹೊರಬಂದೆ, ಜೀವನವನ್ನು ಹೊಸದಾಗಿ ಆಲೋಚಿಸಲು, ಹೊಸದಾಗಿ ಬರೆಯಲು ನನಗೆ ನರೆವಾದರು. ಹೊಸ ಬದುಕು ಕಟ್ಟಿಕೊಳ್ಳಲು ನನಗೆ ನೆರವಾದರು. ಪೋಷಕರು ಹೆಜ್ಜೆ ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತ ಪರಿಣಾಮ ನಾನು ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಅನಂತ್ ಅಂಬಾನಿ ಭಾಷಣದಲ್ಲಿ ಹೇಳಿದ್ದರು. ಈ ಮಾತುಗಳನ್ನು ಕೇಳಿಸಿಕೊಂಡ ತಂದೆ ಮುಕೇಶ್ ಅಂಬಾನಿ ಕಣ್ಣೀರಾಗಿದ್ದರು.

ಟ್ಯಾಕ್ಸ್ ಫೈಲಿಂಗ್ ಮಾಡುವವರಿಗೆ ಗುಡ್ ನ್ಯೂಸ್, ಜಿಯೋಫೈನಾನ್ಸ್‌ನಲ್ಲಿ ಕೇವಲ 24 ರೂಗೆ ಟ್ಯಾಕ್ಸ್ ಫೈಲ್