Viral Reddit Post Water Bill : ಸಿಲಿಕಾನ್ ಸಿಟಿ ಬೆಂಗಳೂರಿನ ವಾಟರ್ ಬಿಲ್ ಪೋಸ್ಟ್ ವೈರಲ್ ಆಗಿದೆ. ಇಬ್ಬರಿರುವ ಮನೆಗೆ ಇಷ್ಟೊಂದು ಬಿಲ್ ಬಂದಿದ್ದು ನೋಡಿ ನೆಟ್ಟಿಗರು ದಂಗಾಗಿದ್ದಾರೆ.
ಮನೆಯಲ್ಲಿರೋರು ಇಬ್ರು, ಅದ್ರಲ್ಲಿ ಬಹುತೇಕ ಟೈಂ ಆಫೀಸ್ ನಲ್ಲಿ ಇರ್ತಾರೆ ಅಂದ್ಮೇಲೆ ಎಷ್ಟು ನೀರು (water) ಮನೆಯಲ್ಲಿ ಖರ್ಚಾಗ್ಬಹುದು? ಸ್ನಾನ, ನಿತ್ಯದ ಕೆಲ್ಸ ಬಿಟ್ರೆ ಬಟ್ಟೆ ವಾಶ್ ಅಷ್ಟೆ. ತಿಂಗಳಿಗೆ ಹೆಚ್ಚು ಅಂದ್ರೆ 500 ರೂಪಾಯಿ ವಾಟರ್ ಬಿಲ್ ಬರ್ಬಹುದು. ಆದ್ರೆ ಬೆಂಗಳೂರಿನ ವ್ಯಕ್ತಿಯೊಬ್ಬರ ಮನೆಗೆ ಬರೋಬ್ಬರಿ 1 ಲಕ್ಷದ 65 ಸಾವಿರ ಲೀಟರ್ ನೀರು ಖರ್ಚು ಮಾಡಿದ ಬಿಲ್ (Bill) ಬಂದಿದೆ. ರೆಡ್ಡಿಟ್ (Reddit) ನಲ್ಲಿ ಬಿಲ್ ಪೋಸ್ಟ್ ಮಾಡಿದ ವ್ಯಕ್ತಿ, ಪರಿಹಾರ ಕೇಳಿದ್ದಾರೆ.
ವಾಟರ್ ಬಿಲ್ ನೋಡಿ ದಂಗಾದ ವ್ಯಕ್ತಿ : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಯಿಂದ ಪಡೆದ ಹೆಚ್ಚುವರಿ ನೀರಿನ ಬಿಲ್ ಅನ್ನು ಅವರು ಪೋಸ್ಟ್ ಮಾಡಿದ್ದಾರೆ. 1,65,000 ಲೀಟರ್ ನೀರನ್ನು ಬಳಸಿದ್ದಕ್ಕಾಗಿ ಬಳಕೆದಾರರಿಗೆ ಸುಮಾರು 15,800 ರೂಪಾಯಿ ಬಿಲ್ ಬಂದಿದೆ. ಬೆಂಗಳೂರಿನಲ್ಲಿ ನಾವಿಬ್ಬರೇ ವಾಸ ಮಾಡ್ತಿದ್ದೇವೆ. ಹೆಚ್ಚಿನ ಸಮಯವನ್ನು ನಾವು ಕಚೇರಿಯಲ್ಲಿ ಕಳೆಯುತ್ತೇವೆ. ವಾರದಲ್ಲಿ ಎರಡು ಮೂರು ದಿನ ಸರಿಯಾಗಿ ನೀರೂ ಬರೋದಿಲ್ಲ. ಇಷ್ಟಾದ್ರೂ ಪ್ರತಿ ತಿಂಗಳು ನಮಗೆ 10 ಸಾವಿರ ರೂಪಾಯಿ ವಾಟರ್ ಬಿಲ್ ಬರುತ್ತೆ.ಈ ಬಾರಿ 16 ಸಾವಿರ ವಾಟರ್ ಬಿಲ್ ಬಂದಿದೆ. ಈ ಬಗ್ಗೆ ಅನೇಕ ಬಾರಿ ಧ್ವನಿ ಎತ್ತಿದ್ದೇನೆ. ಆದ್ರೆ ಅವರು ತಮ್ಮದೇ ವಾದ ಮಾಡ್ತಾರೆ ಎಂದು ಬಳಕೆದಾರ ಪೋಸ್ಟ್ ನಲ್ಲಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ದೆ, ಪೋಸ್ಟ್ ಕೊನೆಯಲ್ಲಿ, ಇಂಥ ಪರಿಸ್ಥಿತಿಯಲ್ಲಿ ನಾನು ಏನು ಮಾಡ್ಬೇಕು ಅಂತ ಬಳಕೆದಾರರು ಪ್ರಶ್ನೆ ಕೇಳಿದ್ದಾರೆ.
BMTCಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್, ನೂತನ ಮಾರ್ಗದಲ್ಲಿ ಸಂಚರಿಸಲಿದೆ ಬಸ್
ಅತಿಯಾಗಿ ಬರುತ್ತೆ ನೀರಿನ ಬಿಲ್ : r/bangalore ನ ರೆಡ್ಡಿಟ್ ಪೇಜ್ ನಲ್ಲಿ @ananttodani ಅವರು ತಮ್ಮ ನೀರಿನ ಬಿಲ್ನ ಫೋಟೋ ಪೋಸ್ಟ್ ಮಾಡಿ, ʻನನ್ನ ಮನೆಮಾಲೀಕರು ಪ್ರತಿ ತಿಂಗಳು ನನಗೆ ಅತಿಯಾದ BWSSB ನೀರಿನ ಶುಲ್ಕವನ್ನು ವಿಧಿಸುತ್ತಾರೆ' ಎಂಬ ಶೀರ್ಷಿಕೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ 450 ಕ್ಕೂ ಹೆಚ್ಚು ಲೈಕ್ಸ್ ಹಾಗೂ ಸುಮಾರು 100 ಕಾಮೆಂಟ್ ಬಂದಿದೆ.
ವೀಕೆಂಡ್‌ನಲ್ಲಿ ಬೆಂಗಳೂರಿಗರಿಗೆ ಡಬಲ್ ಶಾಕ್, ನೀರು ಇಲ್ಲ, ಕರೆಂಟೂ ಇಲ್ಲ!
ರೆಡ್ಡಿಟ್ ಬಳಕೆದಾರರ ಪ್ರತಿಕ್ರಿಯೆ ಏನು? : ರೆಡ್ಡಿಟ್ ಬಳಕೆದಾರರು ನೀರಿನ ಬಿಲ್ ನೋಡಿ ಆಘಾತಕ್ಕೊಳಗಾಗಿದ್ದಾರೆ. ನಾಲ್ಕು ಜನರ ಕುಟುಂಬಕ್ಕೂ ಇಷ್ಟೊಂದು ಬಿಲ್ ಬರುವುದಿಲ್ಲ. ಏನೋ ತಪ್ಪಾಗಿದೆ. ನಿಮ್ಮ ನೆರೆಹೊರೆಯವರೊಂದಿಗೆ ಈ ಬಗ್ಗೆ ಮಾತನಾಡಿ, ಅವರ ಬಿಲ್ ಬಗ್ಗೆ ತಿಳಿದುಕೊಳ್ಳಿ ಅಂತ ಒಬ್ಬರು ಸಲಹೆ ನೀಡಿದ್ದಾರೆ. ಇಷ್ಟೊಂದು ಬಿಲ್ ಏಕೆ ಕಟ್ಟುತ್ತಿದ್ದೀರಿ. ಮನೆ ಖಾಲಿ ಮಾಡಿ ಅಂತ ಮತ್ತೊಬ್ಬರು ಸಲಹೆ ನೀಡಿದ್ದಾರೆ. ಇದು ಗೂಂಡಾಗಿರಿ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ರೆ ಮತ್ತೊಬ್ಬರು ಇಂಥ ಬಿಲ್ ಬರಲು ಸಾಧ್ಯವೇ ಇಲ್ಲ. ಮೀಟರ್ ನಲ್ಲಿ ಸಮಸ್ಯೆ ಇರಬಹುದು. ಅದನ್ನು ಚೆಕ್ ಮಾಡಿ, ಸರಿ ಮಾಡ್ಕೊಳ್ಳಿ ಎಂದಿದ್ದಾರೆ. ಇಬ್ಬರಿರುವ ಕುಟುಂಬಕ್ಕೆ 300 ರೂಪಾಯಿಗಿಂತ ಕಡಿಮೆ ವಾಟರ್ ಬಿಲ್ ಬರುತ್ತೆ. ದಯವಿಟ್ಟು ಶೀಘ್ರವೇ ಬಿಡಬ್ಲ್ಯೂಎಸ್ಎಸ್ಬಿ ಗೆ ಸಂಪರ್ಕಿಸಿ, ಸಮಸ್ಯೆ ಬಗೆಹರಿಸಿಕೊಳ್ಳಿ ಅಂತ ಮತ್ತೊಬ್ಬರು ಹೇಳಿದ್ದಾರೆ.
