PM Modi Birthday : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ಸೆಪ್ಟೆಂಬರ್ 17 ರಂದು 75ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಮುಂದಿನ ವರ್ಷ ಹೇಗಿರಲಿದೆ ಎಂಬುದನ್ನು ಜ್ಯೋತಿಷಿಗಳು ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಇದೇ ಸೆಪ್ಟೆಂಬರ್ 17 ರಂದು 75ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ದೇಶದಲ್ಲಿ ತಯಾರಿ ಜೋರಾಗಿದೆ. ನರೇಂದ್ರ ಮೋದಿ,1950ನೇ ಇಸವಿಯಲ್ಲಿ ಸೆಪ್ಟೆಂಬರ್ 17ರ ಮಧ್ಯಾಹ್ನ 12.09ಕ್ಕೆ ಗುಜರಾತಿನ ಮೆಹ್ಸಾನ್ ಜಿಲ್ಲೆಯ ವಡ್ನಗರ ಗ್ರಾಮದಲ್ಲಿ ಜನಿಸಿದ್ರು. 75ನೇ ವರ್ಷಕ್ಕೆ ಕಾಲಿಡ್ತಿರುವ ನರೇಂದ್ರ ಮೋದಿಯ ಮುಂದಿನ ಒಂದು ವರ್ಷ ಹೇಗಿರಲಿದೆ ಎಂಬುದನ್ನು ಜಾತಕ ನೋಡಿ ಹೇಳಲಾಗಿದೆ.
ನರೇಂದ್ರ ಮೋದಿ ಜಾತಕ (Horoscope) ಹೀಗಿದೆ : ನರೇಂದ್ರ ಮೋದಿ ಜಾತಕದ ಮೊದಲ ಮನೆಯಲ್ಲಿ ಮಂಗಳ ಮತ್ತು ಚಂದ್ರರು ನೆಲೆಸಿದ್ದಾರೆ. ಮಂಗಳ ಮತ್ತು ಚಂದ್ರರ ಸಂಯೋಗವು ಮಹಾಲಕ್ಷ್ಮಿ ಯೋಗವನ್ನು ಸೃಷ್ಟಿಸುತ್ತಿದೆ. ಲಗ್ನದ ಅಧಿಪತಿಯಾದ ಮಂಗಳನು ತನ್ನ ರಾಶಿಚಕ್ರ ಚಿಹ್ನೆಯ ಮಧ್ಯದಲ್ಲಿದ್ದು 'ರುಚಕ್' ಎಂಬ ಪಂಚ ಮಹಾಪುರುಷ ರಾಜ್ಯಯೋಗವನ್ನು ಸೃಷ್ಟಿಸುತ್ತಿದ್ದಾನೆ.
2026 ನರೇಂದ್ರ ಮೋದಿಗೆ ಹೇಗಿರಲಿದೆ? : ಜಾತಕದ ಪ್ರಕಾರ, ಸೆಪ್ಟೆಂಬರ್ 2026 ರವರೆಗೆ ನರೇಂದ್ರ ಮೋದಿ ಅವರು ತಮ್ಮ ಕ್ಷೇತ್ರದಲ್ಲಿ ಶ್ರಮಿಸಬೇಕಾಗುತ್ತದೆ. ಈ ಕಠಿಣ ಪರಿಶ್ರಮದ ಫಲ ನಂತ್ರ ಅವರಿಗೆ ಸಿಗಲಿದೆ. ಇದು ಮುಂದೆ ಸರ್ವತೋಮುಖ ಪ್ರಗತಿ ಮತ್ತು ಉತ್ತಮ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅವರು ತಮ್ಮ ವಿರೋಧಿಗಳನ್ನು ಸೋಲಿಸಲು ಸಾಧ್ಯವಾಗುತ್ತದೆ. ಅವರ ಗೌರವ ಇನ್ನಷ್ಟು, ಮತ್ತಷ್ಟು ಹೆಚ್ಚಾಗುತ್ತದೆ. ಅವರ ಆರೋಗ್ಯ ಸುಧಾರಿಸುತ್ತದೆ. ಅವರು ಆರ್ಥಿಕವಾಗಿ ಹೆಚ್ಚು ಸಮೃದ್ಧರಾಗುತ್ತಾರೆ ಎನ್ನಲಾಗಿದೆ.
ಪ್ರಸ್ತುತ ಗ್ರಹ ಸಂಚಾರ :
ರಾಹು: ಕುಂಭ ಲಗ್ನದಲ್ಲಿ
ಶನಿ: ಎರಡನೇ ಮನೆಯಲ್ಲಿ
ಗುರು: ಐದನೇ ಮನೆಯಲ್ಲಿ
ಚಂದ್ರ: ಆರನೇ ಮನೆಯಲ್ಲಿ
ಶುಕ್ರ ಮತ್ತು ಕೇತು: ಏಳನೇ ಮನೆಯಲ್ಲಿ
ಮಂಗಳ: ತುಲಾ ರಾಶಿಯಲ್ಲಿ
ಜ್ಯೋತಿಷ್ಯ ಸ್ಥಾನ : ಲಾಲ್ ಕಿತಾಬ್ ಜ್ಯೋತಿಷ್ಯದ ಪ್ರಕಾರ, ಶನಿಯ ಮಹಾದಶಾ ಸೆಪ್ಟೆಂಬರ್ 17, 2020 ರಿಂದ ಸೆಪ್ಟೆಂಬರ್ 17, 2026 ರವರೆಗೆ ನಡೆಯಲಿದೆ. ಆ ಸಮಯದಲ್ಲಿ ಶನಿಯ ಅಂತರದಶಾ ನಡೆಯಲಿದೆ. ಇದರ ನಂತ್ರ, ರಾಹುವಿನ ದಶಾ ಪ್ರಾರಂಭವಾಗಿ ಸೆಪ್ಟೆಂಬರ್ 17, 2032 ರವರೆಗೆ ಇರಲಿದೆ.
ವೈದಿಕ ಜ್ಯೋತಿಷ್ಯ ಏನು ಹೇಳುತ್ತೆ? : ವೈದಿಕ ಜ್ಯೋತಿಷ್ಯದ ಪ್ರಕಾರ, ಮಂಗಳನ ಮಹಾದಶಾ ಡಿಸೆಂಬರ್ 7, 2020 ರಿಂದ ಆರಂಭವಾಗಲಿದ್ದು, ಇದು ಮೇ 7, 2027 ರವರೆಗೆ ಇರಲಿದೆ. ಪ್ರಸ್ತುತ, ಮಂಗಳ ಗ್ರಹವು ಶುಕ್ರನ ಅಂತರದಶಾದಲ್ಲಿದೆ, ಇದು ಜನವರಿ 1, 2027 ರವರೆಗೆ ಇರುತ್ತದೆ. ನಂತ್ರ ಸೂರ್ಯನ ಅಂತರದಶಾ ಮೇ 7, 2027 ರವರೆಗೆ ಇರಲಿದೆ.
ದಶಫಲ : ಈ ದಶಾ 2027 ರ ವೇಳೆಗೆ ಪ್ರಧಾನಿ ಮೋದಿಯವರ ಶಕ್ತಿ ಮತ್ತು ಭಾರತದ ಗೌರವವನ್ನು ಪ್ರಪಂಚದಾದ್ಯಂತ ಹೆಚ್ಚಿಸಲಿದೆ. ಇದರರ್ಥ 2027 ರವರೆಗೆ ಯಾರೂ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಆದ್ರೆ 2026 ರಲ್ಲಿ ಕೇಂದ್ರ ಸರ್ಕಾರ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಅನೇಕ ಸಾಮೂಹಿಕ ಚಳುವಳಿ ನಡೆಯಲಿದೆ, ಪ್ರಪಂಚದಾದ್ಯಂತ ನರಮೇಧ ನಡೆಯಲಿದೆ ಎನ್ನಲಾಗಿದ್ದು, ಆ ಸಮಯದಲ್ಲಿ ಕೇಂದ್ರ ಕೆಲ ಕಠೀನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಜಾತಕದಲ್ಲಿ ಗ್ರಹಗಳ ಸಂಯೋಜನೆ ಮತ್ತ ಅದರ ಅರ್ಥ ಏನು? :
• ಚಂದ್ರ-ಕುಜ ಸಂಯೋಗ: ಈ ಸಂಯೋಗವು ಯಶಸ್ವಿ ನಾಯಕ, ವಕೀಲ, ವೈದ್ಯ ಅಥವಾ ಆಡಳಿತ ಅಧಿಕಾರಿಯನ್ನಾಗಿ ಮಾಡುತ್ತದೆ.
• ರುಚಕ್ ರಾಜ್ಯಯೋಗ : ಮಂಗಳ ತನ್ನದೇ ಆದ ರಾಶಿಯಲ್ಲಿ ಇರುವುದರಿಂದ ರುಚಕ್ ರಾಜ್ಯಯೋಗವನ್ನು ರೂಪಿಸುತ್ತಿದೆ.
• ಗುರು ಮತ್ತು ಶನಿ ನಾಲ್ಕನೇ ಮನೆಯಲ್ಲಿ ಕುಂಭ ರಾಶಿಯಲ್ಲಿದ್ದಾಗ ಇದು ಜನಪ್ರಿಯತೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತದೆ.
• ಶುಕ್ರ-ಶನಿ ಸಂಯೋಗ: ಈ ಸಂಯೋಗವು ಹತ್ತನೇ ಮನೆಯಲ್ಲಿದ್ದರೆ, ವ್ಯಕ್ತಿಯ ಜೀವನಶೈಲಿ ರಾಜನಂತೆಯೇ ಇರುತ್ತದೆ.
