2024 ರ ರಾಜಕೀಯ ದಂಗೆಯ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ( ಬಿಎನ್‌ಪಿ) ಅಭೂತಪೂರ್ವ ಗೆಲುವು ದಾಖಲಿಸಿದ್ದು, 200 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವಿನ ಜಯಭೇರಿ ಬಾರಿಸಿದೆ. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ 13 ನೇ ಸಂಸತ್ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದ್ದಾರೆ. ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಪುತ್ರ ರೆಹಮಾನ್ ಅವರು ತಾಯಿಯ ನಿಧನದ ನಂತರ ಜನವರಿ 9 ರಂದು ಪಕ್ಷದ ಅಧ್ಯಕ್ಷರಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡಿದ್ದರು. ಭರ್ಜರಿ ಗೆಲುವು ಸಾಧಿಸಿದ ರೆಹಮಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
10:53 PM (IST) Feb 13
10:51 PM (IST) Feb 13
ವ್ಯಕ್ತಿಯ ಜಾತಿಯು ಹುಟ್ಟಿನಿಂದಲೇ ನಿರ್ಧರಿಸಲ್ಪಡುತ್ತದೆ ಮತ್ತು ಮದುವೆ ಅಥವಾ ಮತಾಂತರದಿಂದ ಬದಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೇರೆ ಸಮುದಾಯದ ವ್ಯಕ್ತಿಯನ್ನು ವಿವಾಹವಾದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರ ಪ್ರಕರಣದಲ್ಲಿ, ನ್ಯಾಯಾಲಯ ತೀರ್ಪು ನೀಡಿದೆ.
10:42 PM (IST) Feb 13
Shocker: Daughter Burns Mother Alive After Giving Sleeping Pills ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿಯಲ್ಲಿ ರಮಾದೇವಿ ಎಂಬ ಮಹಿಳೆಯ ಸಾವು ಶಾರ್ಟ್ ಸರ್ಕ್ಯೂಟ್‌ನಿಂದಾದ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯಿಂದ ಇದು ಕೊಲೆ ಎಂದು ತಿಳಿದುಬಂದಿದೆ.
10:01 PM (IST) Feb 13
ವಿವಾದಗಳ ರಾಣಿ ರಾಖಿ ಸಾವಂತ್, ಯಶಸ್ಸು ಗಳಿಸಲು ಜ್ಯೋತಿಷಿಯೊಬ್ಬರ ಸಲಹೆಯಂತೆ ತಾನು ಒಳ ಉಡುಪುಗಳನ್ನು ಧರಿಸುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮರಾಠಿ ಬಿಗ್‌ಬಾಸ್‌ಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿರುವ ರಾಖಿ, ಈ ಹಿಂದೆ ಮುಕೇಶ್ ಅಂಬಾನಿಯನ್ನು ಮದುವೆಯಾಗುವುದಾಗಿಯೂ ಹೇಳಿದ್ದರು.
08:52 PM (IST) Feb 13
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಮದುವೆಗೆ ಬಂದ ಅತಿಥಿಗಳಿಗೆ ಸಿಗರೇಟ್, ಬೀಡಿ ಮತ್ತು ಗುಟ್ಕಾಗಳನ್ನು ನೀಡಿ ಸ್ವಾಗತಿಸಲಾಗುತ್ತಿದೆ. ಈ ವಿಚಿತ್ರ ಪದ್ಧತಿಯು ಭಾರತದ ಕೆಲವು ಗ್ರಾಮೀಣ ಭಾಗಗಳಲ್ಲಿ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಆತಿಥ್ಯದ ಸಂಕೇತವೆಂದು ಪರಿಗಣಿಸಲಾಗಿದೆ.
08:48 PM (IST) Feb 13
Bollywood Producer Rajan Lall Wins ₹8 Crore Dubai Jackpot ದುಬೈ ಮೂಲದ ಭಾರತೀಯ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ ರಾಜನ್ ಲಾಲ್ ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲಿಯನೇರ್ ರಾಫೆಲ್‌ನಲ್ಲಿ $1 ಮಿಲಿಯನ್ (₹8-9 ಕೋಟಿ) ಗೆದ್ದಿದ್ದಾರೆ.
08:47 PM (IST) Feb 13
Mahashivratri 2026: ಈ ಬಾರಿಯ ಮಹಾಶಿವರಾತ್ರಿ ಹಬ್ಬವನ್ನು ಪಂಚಗ್ರಹಿ ಯೋಗದಲ್ಲಿ ಆಚರಿಸಲಾಗುತ್ತೆ. ಈ ಅಪರೂಪದ ಯೋಗದಿಂದ 5 ರಾಶಿಯವರಿಗೆ ಹೆಚ್ಚು ಲಾಭವಾಗಲಿದೆ. ಹಣ, ಪ್ರಮೋಷನ್, ಗೌರವದ ಜೊತೆಗೆ ಇವರಿಗೆ ಇನ್ನೂ ಅನೇಕ ಲಾಭಗಳು ಸಿಗಬಹುದು.
07:18 PM (IST) Feb 13
ಯುವತಿಗೆ ಫ್ರೀ ರೈಡ್ ಜೊತೆಗೆ ಸರ್ಪ್ರೈಸ್ ಗಿಫ್ಟ್ , ಉಬರ್ ರೈಡರ್ ಮೋಡಿಗೆ ಮರುಳಾದ ಯುವತಿ ಪ್ರೀತಿಯಿಂದ ಹಗ್ ಮಾಡಿದ್ದಾಳೆ. ಇಷ್ಟೇ ಅಲ್ಲ, ಇದರ ನಡುವಿನ ಮಾತುಕತೆಯಲ್ಲಿ ಉಬರ್ ರೈಡರ್ ಹೇಳಿದ ಮಾತೊಂದು ಭಾರಿ ವೈರಲ್ ಆಗಿದೆ.
07:12 PM (IST) Feb 13
Bajrang Dal Attacks Indore College Over Valentine's Day Event ಇಂದೋರ್‌ನಲ್ಲಿರುವ ನರ್ಸೀ ಮುಂಜಿ ಇನ್‌ಸ್ಟಿಟ್ಯೂಟ್ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪ್ರೇಮಿಗಳ ದಿನಾಚರಣೆಗಾಗಿ ನಿರ್ಮಿಸಿದ್ದ ವೇದಿಕೆಯನ್ನು ಧ್ವಂಸಗೊಳಿಸಿ, 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ್ದಾರೆ.
06:51 PM (IST) Feb 13
Mamta Mohandas: The Actress Who Defeated Cancer Twice ನಟಿ ಮಮತಾ ಮೋಹನ್ ದಾಸ್ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಎರಡು ಬಾರಿ ಕ್ಯಾನ್ಸರ್ ಮತ್ತು ನಂತರ ವಿಟಿಲಿಗೋವನ್ನು ಎದುರಿಸಿದ ಹೋರಾಟಗಾರ್ತಿ. ಕನ್ನಡದಲ್ಲಿ ಸುದೀಪ್ ಜೊತೆ 'ಗೂಳಿ' ಚಿತ್ರದಲ್ಲಿ ಇವರು ನಟಿಸಿದ್ದರು.
06:01 PM (IST) Feb 13
Australia’s Downfall: Is the World Cup Trophy Insult Haunting Aussies ವಿಶ್ವಕಪ್ ಗೆದ್ದ ಬಳಿಕ ಟ್ರೋಫಿಗೆ ಅಗೌರವ ತೋರಿದ್ದ ಆಸ್ಟ್ರೇಲಿಯಾ ತಂಡವು ಅಂದಿನಿಂದ ಸರಣಿ ಸೋಲುಗಳನ್ನು ಅನುಭವಿಸುತ್ತಿದೆ. ಪಾಕಿಸ್ತಾನ, ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿದೆ.
05:24 PM (IST) Feb 13
ಯುವಕನೊಂದಿಗೆ ಹೊಟೆಲ್ ರೂಂ ಹೊಕ್ಕ ಯುವತಿ, ಕೆಲ ಹೊತ್ತಿನ ಬಳಿಕ 20ರ ಹರೆಯದ ಯುವಿತಿ ಹೊಟೆಲ್‌ನ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾಳೆ. ತಕ್ಷಣವೇ ಯುವತಿಯನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.
05:18 PM (IST) Feb 13
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 2026ರ ಐಪಿಎಲ್ ಟೂರ್ನಿಗೆ ತಂಡದ ನೂತನ ನಾಯಕನ ಹೆಸರು ಘೋಷಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.
04:54 PM (IST) Feb 13
2026 Winter Olympics: 10,000 Condoms Gone in 3 Days ಮಿಲನ್-ಕೊರ್ಟಿನಾ ಚಳಿಗಾಲದ ಒಲಿಂಪಿಕ್ಸ್ ಸ್ಪೋರ್ಟ್ಸ್ ವಿಲೇಜ್‌ನಲ್ಲಿ ಕೇವಲ ಮೂರೇ ದಿನಗಳಲ್ಲಿ ಫ್ರೀ ಕಾಂಡೋಮ್ ಖಾಲಿಯಾಗಿದೆ ಎಂದು ವರದಿಯಾಗಿದೆ. ಬೇಡಿಕೆ ಹೆಚ್ಚಾದಂತೆ ಸಂಘಟಕರು ಹೊಸ ಕಾಂಡೋಮ್ ಸ್ಟಾಕ್ ಅನ್ನು ಭರವಸೆ ನೀಡಿದ್ದಾರೆ.
04:10 PM (IST) Feb 13
03:58 PM (IST) Feb 13
Wipro Salary Hike: Pay Raise for Employees Starting March 1 ವಿಪ್ರೋ ತನ್ನ ಉದ್ಯೋಗಿಗಳಿಗೆ ಮಾರ್ಚ್ 1 ರಿಂದ ವೇತನ ಹೆಚ್ಚಳವನ್ನು ಜಾರಿಗೆ ತರಲಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
03:47 PM (IST) Feb 13
ಮಹಿಳಾ ಪೊಲೀಸ್ ಪೇದೆ ಜೊತೆ ಹೆಡ್ ಕಾನ್ಸ್‌ಸ್ಟೇಬಲ್ ಮಂಚದಾಟ ವಿಡಿಯೋ ಲೀಕ್, ಈ ಪೊಲೀಸ್ ಪೇದೆಗಳ ವಿಡಿಯೋ ಎಲ್ಲರ ಮೊಬೈಲ್ ಮೂಲಕ ಹರಿದಾಡಿದೆ. ಇಬ್ಬರು ಪೊಲೀಸ್ ಸೇವೆಗಿಂತ ಮಂಚದ ಸೇವೆಯೇ ಹೆಚ್ಚಾಗಿತ್ತು.
03:00 PM (IST) Feb 13
ಪ್ರೇಮಿಗಳ ದಿನಾಚರಣೆ ಜೋಶ್‌ನಲ್ಲಿ ಗಂಡನ ಜೊತೆ ರೋಸ್ ಡೇ, ಪತಿ ಹಾಗೂ ಪತ್ನಿ ರೋಸ್ ಡೇ ಆಚರಿಸಿದರೆ ಪೊಲೀಸರಿಗೆ ಏನು ಕಷ್ಟ? ಆದರೆ ಗಂಡನಿಗೆ ರೋಸ್ ಜೊತೆಗೆ ನೀಡಿದ ವಸ್ತುವಿನ ಪೊಲೀಸರ ಕಣ್ಣು ಬಿದ್ದಿದೆ.
02:25 PM (IST) Feb 13
ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಮತ್ತು ರಣವೀರ್ ಸಿಂಗ್ ಅವರ 'ಧುರಂಧರ್-2' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ದೊಡ್ಡ ಬಾಕ್ಸಾಫೀಸ್ ಕ್ಲ್ಯಾಶ್ ಸೃಷ್ಟಿಯಾಗಿದೆ. ಈ ಆರ್ಟಿಕಲ್ ಎರಡೂ ಸಿನಿಮಾದ ಮೊದಲ ದಿನದ ಗಳಿಕೆಯ ನಿರೀಕ್ಷೆಗಳನ್ನು ವಿವರಿಸುತ್ತದೆ.
02:08 PM (IST) Feb 13
11 ಕ್ಲಾಸ್ ವಿದ್ಯಾರ್ಥಿನಿ ಮೇಲೆ ನಾಲ್ಕು ಕಾರಿನಲ್ಲಿ ಅತ್ಯಾ**ಚಾರ, ಅಪ್ರಾಪ್ತ ಬಾಲಕಿಯ ಮೇಲೆ ಎರಗಿದ ಆರೋಪಿ ಅಸೌಫ್ ಆಲಿ ಖಾನ್ ಸೇರಿದಂತೆ ಇತರ ಮೂವರು ಕೃತ್ಯ ಎಸಗಿದ್ದಾರೆ. ಆರೋಪಿಗಳು ವಿಡಿಯೋ ರೆಕಾರ್ಡ್ ಬ್ಲಾಕ್‌ಮೇಲ್ ಮಾಡಿದ ಘಟನೆ ನಡೆದಿದೆ.
01:06 PM (IST) Feb 13
ಗೆಳತಿ ಜೊತೆ ಪಿಯುಸಿ ವಿದ್ಯಾರ್ಥಿ ಸ್ಪೀಡ್ ಡ್ರೈವ್, ಒಂದೆಡೆ ಪಾರ್ಟಿ ಮತ್ತು, ಮತ್ತೊಂದೆಡೆ ಗೆಳತಿಯ ಸಾಥ್, ಸ್ವರ್ಗಕ್ಕೆ ಮೂರೇ ಗೇಣು ಎಂದು ವೇಗವಾಗಿ ಕಾರು ಚಲಾಯಿಸಿದವ ಪಾದಾಚಾರಿಗಳ ಮೇಲೆ ಕಾರು ಹರಿಸಿ 6 ವರ್ಷದ ಬಾಲಕನ ಬಲಿತೆಗೆದುಕೊಂಡಿದ್ದಾನೆ. ಐವರು ಗಂಭೀರ.
12:48 PM (IST) Feb 13
2024ರ ದಂಗೆಯ ನಂತರ ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ನೇತೃತ್ವದ ಬಿಎನ್‌ಪಿ ಗೆದ್ದಿದೆ. ಈ ರಾಜಕೀಯ ಬದಲಾವಣೆಯು ಭಾರತದ ಮೇಲೆ ಬೀರಬಹುದಾದ ಪರಿಣಾಮಗಳು, ವಿಶೇಷವಾಗಿ ಪಾಕಿಸ್ತಾನ-ಚೀನಾ-ಬಾಂಗ್ಲಾ ಮೈತ್ರಿಯ ಸಾಧ್ಯತೆ ಮತ್ತು ಭದ್ರತಾ ಸವಾಲುಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..
12:04 PM (IST) Feb 13
11:52 AM (IST) Feb 13
ಕಾಂಬೋಡಿಯಾದಲ್ಲಿ ಭಾರತೀಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಬೃಹತ್ ಡಿಜಿಟಲ್ ಅರೆಸ್ಟ್ ವಂಚನಾ ಜಾಲವನ್ನು ಅಧಿಕಾರಿಗಳು ಭೇದಿಸಿದ್ದಾರೆ. ಮುಂಬೈ ಪೊಲೀಸ್ ಠಾಣೆಯಂತೆ ಸೃಷ್ಟಿಸಲಾದ, ಭಾರತದ ಧ್ವಜ, ಗಾಂಧಿ-ಅಂಬೇಡ್ಕರ್ ಚಿತ್ರಗಳಿದ್ದವು. ಸುಮಾರು 200 ಕೇಂದ್ರಗಳಿಗೆ ಬೀಗ, ದಾಳಿ ವೇಳೆ ಆರೋಪಿಗಳು ಪರಾರಿ.
11:31 AM (IST) Feb 13
ವಂದೇ ಮಾತರಂ ಕಡ್ಡಾಯಗೊಳಿಸುವ ಕೇಂದ್ರದ ನಿರ್ದೇಶನಕ್ಕೆ ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಅರ್ಷದ್ ಮದನಿ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಉತ್ತರ ಪ್ರದೇಶ ಸಚಿವ ಓಪಿ ರಾಜ್‌ಭರ್, ಶಿಕ್ಷಣ ಮತ್ತು ರಾಜಕೀಯದತ್ತ ಗಮನಹರಿಸಿ ಎಂದು ಮದನಿಗೆ ಹೇಳಿದ್ದಾರೆ.