ವಿಶ್ವದ ಅತ್ಯಂತ ಹಿರಿಯ ಮಹಿಳೆ ಲುಸಿಲ್ ರಾಂಡನ್, 118ನೇ ವಯಸ್ಸಿನಲ್ಲಿ ನಿಧನ

By Vinutha PerlaFirst Published Jan 18, 2023, 9:44 AM IST
Highlights

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ, ಫ್ರೆಂಚ್ ಸನ್ಯಾಸಿನಿ ಸಿಸ್ಟರ್ ಆಂಡ್ರೆ, ಪ್ಯಾರಿಸ್‌ನ ದಕ್ಷಿಣದ ನಗರವಾದ ಟೌಲೋನ್‌ನಲ್ಲಿ ನಿಧನರಾದರು. ಅವರಿಗೆ 118 ವಯಸ್ಸಾಗಿತ್ತು. ನಗರದ ಮೇಯರ್, ಹ್ಯೂಬರ್ಟ್ ಫಾಲ್ಕೊ ಅವರು ಟ್ವಿಟ್ಟರ್‌ನಲ್ಲಿ ಅವರ ಸಾವಿನ ಸುದ್ದಿಯನ್ನು ತಿಳಿಸಿದರು.

ಪ್ಯಾರಿಸ್: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಅವರು ತಮ್ಮ 118ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೇಂಟ್ ಕ್ಯಾಥರೀನ್ ಲೇಬರ್ ನರ್ಸಿಂಗ್ ಹೋಮ್‌ನ ವಕ್ತಾರ ಡೇವಿಡ್ ತವೆಲ್ಲಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಸ್ಟರ್ ಆಂಡ್ರೆ ಎಂದು ಕರೆಯಲ್ಪಡುತ್ತಿದ್ದ ರಾಂಡನ್ ಅವರು, ಫೆಬ್ರವರಿ 11,1904ರಂದು ಜನಿಸಿದರು. ದಕ್ಷಿಣ ಫ್ರಾನ್ಸ್‌ನಲ್ಲಿ ಮೊದಲ ಮಹಾಯುದ್ಧ ಆರಂಭಕ್ಕೂ ಒಂದು ದಶಕಕ್ಕೂ ಮುನ್ನ ಅವರು ಹುಟ್ಟಿದ್ದರು.

ಟೌಲೋನ್‌ನಲ್ಲಿರುವ ತಮ್ಮ ನರ್ಸಿಂಗ್ ಹೋಮ್‌ನಲ್ಲಿ ನಿದ್ರೆಯಲ್ಲಿದ್ದಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಬೆಳಗಿನ ಜಾವ 2 ಗಂಟೆಗೆ ನಿಧನ (Death)ರಾದರು ಎಂದು ವಕ್ತಾರ ಡೇವಿಡ್ ತಿಳಿಸಿದ್ದಾರೆ. 'ಅವರ ಸಾವಿನ ಬಗ್ಗೆ ಬಹಳ ದುಃಖವಿದೆ. ಆದರೆ, ತಮ್ಮ ಪ್ರೀತಿಯ ಸಹೋದರನನ್ನು ಸೇರುವುದು ಅವರ ಬಯಕೆಯಾಗಿತ್ತು. ಅವರಿಗೆ ಈ ಸಾವು ಒಂದು ವಿಮೋಚನೆಯಾಗಿದೆ' ಎಂದು ಅವರು ತಿಳಿಸಿದ್ದಾರೆ.

Latest Videos

ವಿಧಿ ಬರಹ ಎಂಥ ಘೋರ..ಸಾವಿನಲ್ಲೂ ಒಂದಾದ ಅವಳಿ ಅಣ್ತಮ್ಮ..!

1904ರಲ್ಲಿ ಫ್ರೆಂಚ್‌ನಲ್ಲಿ ಜನಿಸಿದ ಲುಸಿಲ್ ರಾಂಡನ್
ಸಿಸ್ಟರ್ ಆಂಡ್ರೆ ಎಂದೂ ಕರೆಯಲ್ಪಡುವ ಲುಸಿಲ್ ರಾಂಡನ್ 1904ರಲ್ಲಿ ಫ್ರೆಂಚ್ ಪಟ್ಟಣವಾದ ಅಲೇಸ್‌ನಲ್ಲಿ ಜನಿಸಿದರು. 1918ರಲ್ಲಿ ಸ್ಪ್ಯಾನಿಷ್ ಜ್ವರ ಸಾಂಕ್ರಾಮಿಕ ಮತ್ತು ಎರಡು ವಿಶ್ವ ಯುದ್ಧಗಳ (World war) ಕಾಲಘಟ್ಟವನ್ನು ನೋಡಿದ್ದರು. 19 ವರ್ಷವಿದ್ದಾಗ ಕ್ಯಾಥೊಲಿಕ್ ಧರ್ಮಕ್ಕೆ ಮತಾಂತರಗೊಂಡರು ಮತ್ತು ಎಂಟು ವರ್ಷಗಳ ನಂತರ ಸನ್ಯಾಸಿ (Nun)ಯಾದರು. ತನ್ನ ಕಿರಿಯ ವರ್ಷಗಳಲ್ಲಿ, ಸಹೋದರಿ ಆಂಡ್ರೆ ಶಿಕ್ಷಕಿ (Teacher) ಮತ್ತು ಆಡಳಿತಗಾರರಾಗಿ ಕೆಲಸ ಮಾಡಿದರು ಮತ್ತು ಎರಡನೆಯ ಮಹಾಯುದ್ಧದ ಹೆಚ್ಚಿನ ಸಮಯವನ್ನು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.

ಕಳೆದ ವರ್ಷ 119ವರ್ಷ ವಯಸ್ಸಿನ ಜಪಾನ್‌ನ ಕೇನ್ ತನಕಾ ಅವರ ಮರಣಕ್ಕೂ ಮೊದಲು ಲುಸಿಲ್ ರಾಂಡನ್ ಅತ್ಯಂತ ಹಿರಿಯ ಯುರೋಪಿಯನ್ ಎಂದು ಕರೆಯಲ್ಪಡುತ್ತಿದ್ದರು. ಕೇನ್ ನಿಧನದ ಬಳಿಕ ಭೂಮಿಯ ಮೇಲೆ ಬದುಕಿರುವ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಏಪ್ರಿಲ್ 2022ರಲ್ಲಿ ಗಿನ್ನೆಸ್ ದಾಖಲೆಗೆ (Guiness recordd) ಅವರ ಹೆಸರು ಸೇರ್ಪಡೆಯಾಗಿತ್ತು.

ಚಾಕೊಲೆಟ್ ಅಂತಾ ಇಲಿ ಪಾಷಾಣ ತಿಂದು ಮಗು ಸಾವು; ಎಲ್ಲೆಂದರಲ್ಲೇ ಪಾಷಾಣ ಇಡುವ ಪೋಷಕರೇ ಎಚ್ಚರ!

2021ರಲ್ಲಿ, ಅವರು ವಾಸಿಸುತ್ತಿದ್ದ ನರ್ಸಿಂಗ್ ಹೋಮ್ ಮೂಲಕ ವೈರಲ್ ಸೋಂಕು ಹರಡಿದ ಸಮಯದಲ್ಲಿಯೂ ಅವರು ಕೋವಿಡ್ -19 ಮಹಾಮಾರಿಯಿಂದ ಬದುಕುಳಿದರು. ಆದರೆ ಕೊರೋನಾ ಸೋಂಕು ತಗಲುವ ಬಗ್ಗೆ ಭಯವಿದೆಯೇ ಎಂದು ಕೇಳಿದಾಗ ಅವರು, ನನಗೆ ಸಾವಿನ ಭಯವಿಲ್ಲ ಎಂದು ಉತ್ತರಿಸಿದ್ದರು. 2020ರಲ್ಲಿ, ರಾಂಡನ್ ಫ್ರೆಂಚ್ ರೇಡಿಯೊಗೆ ತಾನು ಇಷ್ಟು ದಿನ ಹೇಗೆ ಬದುಕಿದ್ದೇನೆಂದು ತಿಳಿದಿಲ್ಲ ಎಂದು ಹೇಳಿದ್ದರು. 'ನನ್ನ ಆಯಸ್ಸಿನ ರಹಸ್ಯವೇನು ಎಂದು ತಿಳಿದಿಲ್ಲ. ಆ ಪ್ರಶ್ನೆಗೆ ದೇವರು ಮಾತ್ರ ಉತ್ತರಿಸಬಲ್ಲರು' ಎಂದು ತಿಳಿಸಿದ್ದರು.

click me!