ಗರ್ಭಾವಸ್ಥೆಯಲ್ಲಿ ಅತಿಯಾಗಿ ವಾಂತಿಯಾಗುವುದು ಸಾಮಾನ್ಯವೇ, ತಜ್ಞರು ಏನಂತಾರೆ ?

By Vinutha Perla  |  First Published Jan 16, 2023, 1:39 PM IST

ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ವಾಂತಿ ಮತ್ತು ವಾಕರಿಕೆ ಸಾಮಾನ್ಯವಾಗಿದೆ. ಕೆಲವೊಬ್ಬರಿಗೆ ಬೆಳಗ್ಗಿನ ಹೊತ್ತು ವಾಂತಿಯಾಗುತ್ತದೆ. ಆದರೆ ಎಲ್ಲರಿಗೂ ಹಾಗಲ್ಲ. ಅನೇಕ ಮಹಿಳೆಯರು ದಿನದ ಯಾವುದೇ ಸಮಯದಲ್ಲಿ ಸುಸ್ತು, ವಾಕರಿಕೆಯ ಸಮಸ್ಯೆಯನ್ನು ಅನುಭವಿಸುತ್ತಾರೆ.


ಗರ್ಭಾವಸ್ಥೆ ಮಹಿಳೆಯ ಪಾಲಿಗೆ ತುಂಬಾ ಸವಾಲಿನ ದಿನಗಳಾಗಿವೆ. ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ದಿನನಿತ್ಯದ ಚಟುವಟಿಕೆ, ಆಹಾರ ಎಲ್ಲವನ್ನೂ ಗಮನಿಸಿಕೊಳ್ಳಬೇಕು. ಇಷ್ಟಲ್ಲಾ ಮಾಡಿದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೊಟ್ಟೆನೋವು, ಸುಸ್ತು, ವಾಂತಿ ಮೊದಲಾದ ಸಮಸ್ಯೆಯಿಂದ ಬಳಲುವಂತಾಗುತ್ತದೆ. ಕೆಲವು ಮಹಿಳೆಯರು ದಿನವಿಡೀ ವಾಂತಿಯಾಗುತ್ತದೆ ಎಂದು ದೂರುತ್ತಾರೆ. ಇಂಥವರಿಗೆ ಏನನ್ನೂ ಕುಡಿಯಲು ಅಥವಾ ತಿನ್ನಲು ಸಾಧ್ಯವಾಗುವುದಿಲ್ಲ. ದಿನವಿಡೀ ವಾಕರಿಕೆಯಿಂದಲೇ ಬಳಲುವಂತಾಗುತ್ತದೆ. ಇದಕ್ಕೇನು ಪರಿಹಾರ ? ಗರ್ಭಾವಸ್ಥೆಯಲ್ಲಿ ಇಂಥಾ ಸ್ಥಿತಿ ನಿಜವಾಗಿಯೂ ಸಾಮಾನ್ಯವೇ ? ಅಥವಾ ಕೆಲವರಲ್ಲಿ ಮಾತ್ರ ಈ ಸಮಸ್ಯೆ ಕಂಡುಬರುತ್ತದಾ ಎಂಬುದನ್ನು ತಿಳಿಯೋಣ. 

ಪಿಟ್ಮುಪರದ ಹರ್ಷ್ ವಿಹಾರ್‌ನಲ್ಲಿರುವ ಮದರ್ಸ್ ಲ್ಯಾಪ್ ಐವಿಎಫ್ ಸೆಂಟರ್‌ನ ವೈದ್ಯಕೀಯ ನಿರ್ದೇಶಕಿ ಮತ್ತು ಐವಿಎಫ್ ತಜ್ಞೆ ಡಾ.ಶೋಭಾ ಗುಪ್ತಾ ಅವರು, ಕೆಲವೊಮ್ಮೆ ಮಹಿಳೆಯರಿಗೆ ಬೆಳಗ್ಗೆ ಹೆಚ್ಚು ಹೊಟ್ಟೆನೋವು (Stomach pain), ಆಹಾರ ತಿನ್ನಲು ಸಾಧ್ಯವಾಗದೇ ಇರುವುದು, ವಾಕರಿಕೆಯ (Vomiting) ಸ್ಥಿತಿ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವೈದ್ಯರು ಕೆಲವು ಔಷಧಿಗಳನ್ನು ಮತ್ತು ಹೆಚ್ಚಿನ ಪ್ರಮಾಣದ ಪಿರಿಡಾಕ್ಸಿನ್ ವಿಟಮಿನ್‌ಗಳನ್ನು ಶಿಫಾರಸು ಮಾಡುತ್ತಾರೆ, ಇದರಿಂದಾಗಿ ವಾಂತಿ ಉಂಟಾಗುವುದಿಲ್ಲ. ಗರ್ಭಾವಸ್ಥೆಯಲ್ಲಿ ವಾಕರಿಕೆ ಸಾಮಾನ್ಯವಾಗಿದೆ. ಅದರಿಂದ ಏನನ್ನೂ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದಿರುವುದು ಸಹಜವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಗರ್ಭಾವಸ್ಥೆಯಲ್ಲಿ, ಯಾವುದೇ ಆಹಾರದ (Food) ವಾಸನೆಯು ವಾಂತಿ ಮತ್ತು ವಾಕರಿಕೆಗೆ ಕಾರಣವಾಗಬಹುದು, ಆದರೆ ವಾಂತಿಯನ್ನು ಔಷಧದಿಂದ (Medicine) ನಿಲ್ಲಿಸಬಹುದು ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸುವ ಮೂಲಕ ಅದನ್ನು ತಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. 

Tap to resize

Latest Videos

ಹೆರಿಗೆ ನಂತರ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಯಾಕೆ ?

ಗರ್ಭಾವಸ್ಥೆಯಲ್ಲಿ ಅತಿಯಾದ ವಾಂತಿಯ ಸ್ಥಿತಿ ಹೈಪರೆಮೆಸಿಸ್ ಗ್ರಾವಿಡಾರಮ್
ಗರ್ಭಾವಸ್ಥೆಯಲ್ಲಿ ಅತಿಯಾದ ವಾಂತಿಯ ಸ್ಥಿತಿಯನ್ನು ಹೈಪರೆಮೆಸಿಸ್ ಗ್ರಾವಿಡಾರಮ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಗರ್ಭಧಾರಣೆಯ ನಾಲ್ಕನೇ ಮತ್ತು ಆರನೇ ವಾರದ ನಡುವೆ ಪ್ರಾರಂಭವಾಗುತ್ತದೆ. ದಿನನಿತ್ಯದ ವಾಕರಿಕೆ ಮತ್ತು ಬೆಳಗಿನ ಬೇನೆಯು ತೊಂದರೆಯನ್ನು ಉಂಟುಮಾಡಬಹುದು ಆದರೆ ಅದು ಗರ್ಭಿಣಿಗೆ ಅಥವಾ ಮಗುವಿಗೆ (Baby) ಹಾನಿ ಮಾಡುವುದಿಲ್ಲ. ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಮತ್ತು ಮನೆಮದ್ದುಗಳ ಸಹಾಯದಿಂದ ಇದನ್ನು ಗುಣಪಡಿಸಬಹುದು.

ಚಿಕಿತ್ಸೆ ಪಡೆಯಬಹುದು: ಚಿಕಿತ್ಸೆ ನೀಡದೆ ಬಿಟ್ಟರೆ, ಹೈಪರೆಮಿಸಿಸ್ ಗ್ರ್ಯಾವಿಡಾರಮ್ ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರಬಹುದು. ಗರ್ಭಿಣಿ ಮಹಿಳೆ ಸ್ವಲ್ಪ ತೂಕವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಏನನ್ನೂ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದ ಕಾರಣ ನಿರ್ಜಲೀಕರಣವು ಸಂಭವಿಸಬಹುದು. ಇದು  ಮೂತ್ರವನ್ನು ಗಾಢ ಅಥವಾ ಕಂದು ಬಣ್ಣಕ್ಕೆ ಮಾರ್ಪಡಿಸಬಹುದು.

ವೈದ್ಯರೊಂದಿಗೆ ಸಮಾಲೋಚನೆ ನಡೆಸಿ: ಗರ್ಭಾವಸ್ಥೆಯಲ್ಲಿ ನಿರಂತರವಾಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಮುಖ್ಯ. ಕೆಲವೊಮ್ಮೆ ವಾಕರಿಕೆ ಅನುಭವಿಸದಿದ್ದರೂ ಸಹ, ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು. ಆಹಾರಕ್ರಮ, ದಿನಚರಿಯ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸಬೇಕು. ಗರ್ಭಾವಸ್ಥೆಯ ವಾಕರಿಕೆಗೆ ಚಿಕಿತ್ಸೆ ನೀಡುವುದರಿಂದ ಅದು ಹೈಪರ್‌ಮೆಸಿಸ್ ಗ್ರ್ಯಾವಿಡಾರಮ್‌ಗೆ ಮುಂದುವರಿಯುವುದನ್ನು ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ.

ಗರ್ಭಿಣಿಯರು ಡ್ರಿಂಕ್ಸ್ ಮಾಡಿದ್ರೆ ಹೊಟ್ಟೆಯಲ್ಲಿರೋ ಮಗುವಿನ ಅಪಾಯ ತಪ್ಪಿದ್ದಲ್ಲ!

ಗರ್ಭಾವಸ್ಥೆಯಲ್ಲಿ ಎಷ್ಟು ಬಾರಿ ವಾಂತಿ ಮಾಡುವುದು ಸಾಮಾನ್ಯವಾಗಿದೆ ?
ತಜ್ಞರ ಪ್ರಕಾರ, ಬೆಳಗಿನ ಬೇನೆಯು ದಿನಕ್ಕೆ ಒಮ್ಮೆ ಮಾತ್ರ ವಾಂತಿಗೆ ಕಾರಣವಾಗಬಹುದು. ಗರ್ಭಿಣಿ ಹೈಪರ್‌ಮೆಸಿಸ್ ಗ್ರಾವಿಡಾರಮ್ ಸಮಸ್ಯೆ ಹೊಂದಿದ್ದರೆ, ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ವಾಂತಿ ಅಥವಾ ನಿರಂತರ ವಾಕರಿಕೆಯ ಸಮಸ್ಯೆ ಹೊಂದಿರಬಹುದು.

ವಾಂತಿ ಗರ್ಭಪಾತಕ್ಕೆ ಕಾರಣವಾಗಬಹುದೇ ?
ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ವಾಂತಿ ಮತ್ತು ವಾಕರಿಕೆ ಅನುಭವಿಸುವ ಮಹಿಳೆಯರು ಈ ರೋಗಲಕ್ಷಣಗಳನ್ನು ಅನುಭವಿಸದ ಮಹಿಳೆಯರಿಗಿಂತ ಕಡಿಮೆ ಗರ್ಭಪಾತದ ಅಪಾಯವನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ.

click me!