Women Health : ಮುಟ್ಟಿನ ಬದಲು 'ನಾನು ಡೌನ್' ಅನ್ನೋದೇಕೆ?

By Suvarna News  |  First Published Jun 7, 2023, 5:26 PM IST

ಪಿರಿಯಡ್ಸ್ ಅನ್ನು ಎಂಜಾಯ್ ಮಾಡೋರಿಗಿಂತ ದೊಡ್ಡ ತಲೆ ನೋವೆಂದು ಪರಿಗಣಿಸುವುದೇ ಹೆಚ್ಚು. ಅಂಥದ್ರಲ್ಲಿ ಕೆಲವು ಮಹಿಳೆಯ ಪಿರಿಯಡ್ಸ್‌ಗೆ I am down ಅಂತಾರೆ. ಯಾಕೆ ಹೀಗೆ ಹೇಳುವುದು?


ಆರೋಗ್ಯದ ಬಗ್ಗೆ ಮಹಿಳೆ ನಿರ್ಲಕ್ಷ್ಯ ಮಾಡೋದು ಹೆಚ್ಚು. ಇತ್ತೀಚಿಗೆ ಮಹಿಳೆಯರು ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ತೆಗೆದುಕೊಳ್ಳಲು ಶುರು ಮಾಡಿದ್ರೂ ಕೂಡ ಬಹುತೇಕ ಮಹಿಳೆಯರು ಒಂದಲ್ಲ ಒಂದು ಕಾರಣವನ್ನು ಹೇಳಿ ವೈದ್ಯರ ಬಳಿ ಹೋಗುವುದನ್ನು ಅವೈಡ್ ಮಾಡ್ತಾರೆ. ತಮಗಾದ ಸಮಸ್ಯೆಗೆ ತಮ್ಮಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವವರು ಅನೇಕರು. ಮನೆ ಮದ್ದು ಮಾಡ್ತಾ ಸಮಯದೂಡಿ ಪರಿಸ್ಥಿತಿ ಕೈ ಮೀರಿದಾಗ ಪರಿತಪಿಸ್ತಾರೆ. ಹಾಗಂತ ಎಲ್ಲ ವಿಷ್ಯವನ್ನೂ ಅತೀ ಗಂಭೀರವಾಗಿ ತೆಗೆದುಕೊಳ್ಳುವುದು ಕೂಡ ಯೋಗ್ಯವಲ್ಲ.

ಮುಟ್ಟು (Period) ಪ್ರತಿ ತಿಂಗಳು ಬರುವ ನೈಸರ್ಗಿಕ (Natural) ಕ್ರಿಯೆ. ಅದು ಬಂದೇ ಬರುತ್ತೆ, ಅದು ಮೂರು ದಿನ ಹಿಂಸೆ ನೀಡುತ್ತೆ ಎಂಬುದು ಎಲ್ಲ ಮಹಿಳೆಯರಿಗೂ ತಿಳಿದಿದೆ. ಕೆಲವರಿಗೆ ರಕ್ತಸ್ರಾವ (Bleeding) ಹೆಚ್ಚಾದ್ರೆ ಮತ್ತೆ ಕೆಲವರಿಗೆ ಹೊಟ್ಟೆ ನೋವು ಕಾಡುತ್ತದೆ. ಅತಿ ರಕ್ತಸ್ರಾವದಿಂದ ಬಟ್ಟೆ ಕಲೆಯಾಗುವ ಸಾಧ್ಯತೆಯಿರುತ್ತದೆ. ಈ ವೇಳೆ ಖಿನ್ನತೆ (Depression) ಗೊಳಗಾಗುವ ಅಗತ್ಯವಿಲ್ಲ. ಮುಟ್ಟಿನ ಬಗ್ಗೆ ಹೇಳಿಕೊಳ್ಳಲು ಮಹಿಳೆ ಮುಜುಗರಪಟ್ಟುಕೊಳ್ಳುವ ಅಗತ್ಯವಿಲ್ಲ. ಅನೇಕ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ನಾನು ಡೌನ್ ಎಂಬ ಪದದ ಬಳಕೆ ಮಾಡ್ತಾರೆ.  ಮುಟ್ಟಿಗೆ ಡೌನ್ ಪದ ಬಳಸುವುದು ಯೋಗ್ಯವೇ ಎನ್ನುವ ಬಗ್ಗೆ ನಾವೊಂದಿಷ್ಟು ಚರ್ಚೆ ಮಾಡೋಣ.

Tap to resize

Latest Videos

PERIODS ಟೈಮಲ್ಲಿ ತಲೆಸ್ನಾನ ಮಾಡಬಾರದಂತೆ, ಯಾಕೆ ಗೊತ್ತಾ?

ಋತುಚಕ್ರಕ್ಕೆ ಮಹಿಳೆಯರು ಡೌನ್ ಪದವನ್ನು ಏಕೆ ಬಳಸುತ್ತಾರೆ? : ನಮ್ಮಲ್ಲಿ ಹೆಚ್ಚಿನ ಮಹಿಳೆಯರು ಮುಟ್ಟು ಶುರುವಾದಾಗ ನಾನು ಡೌನ್  ಎಂಬ ಪದ ಬಳಸ್ತಾರೆ. ಇದು ಎಲ್ಲಿಂದ ಬಂತು ಎಂಬುದು ಯಾರಿಗೂ ಸರಿಯಾಗಿ ತಿಳಿದಿಲ್ಲ. ಮುಟ್ಟು ಎಂಬ ಪದ ಬಳಸಲು ಮಹಿಳೆಯರಿಗೆ ಭಯವಾಗುವ ಕಾರಣಕ್ಕೆ ಹೀಗೆ ಮಾಡ್ತಾರಾ ಅಥವಾ ನಾಚಿಕೆಯ ಕಾರಣಕ್ಕೆ ಈ ಪದ ಬಳಸ್ತಾರಾ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಹೇವಿ ಫ್ಲೋ (Heavy Flow) ಹಾಗೂ ನೋವು (Pain), ಮೂಡ್ ಸ್ವಿಂಗ್ ಈ ಎಲ್ಲ ಕಾರಣಕ್ಕೆ ಮಹಿಳೆಯರು ನಾನು ಡೌನ್ ಎಂಬ ಪದವನ್ನೂ ಬಳಕೆ ಮಾಡುತ್ತಿರಬಹುದು ಎನ್ನುತ್ತಾರೆ ತಜ್ಞರು. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಿಂತ ತಪ್ಪಿತಸ್ಥ ಭಾವನೆ ಹೆಚ್ಚಿರುತ್ತದೆ. ಎಲ್ಲರೂ ಮುಟ್ಟಿನ ಸಮಯದಲ್ಲಿ ನಿರಾಸೆ ಅನುಭವಿಸುವುದಿಲ್ಲ. ಪಿರಿಯಡ್ಸ್ ನಿಂದ  ಎಲ್ಲಾ ಕೆಲಸಕ್ಕೂ ಅಡ್ಡಿಯಾಗುತ್ತದೆ ಎಂದು ಅವರು ಭಾವಿಸ್ತಾರೆ. ತಮ್ಮ ಕೆಲಸ ನಿಲ್ಲುತ್ತದೆ ಎಂದುಕೊಳ್ತಾರೆ. ಹಾಗಾಗಿಯೇ ಅವರು ಮುಟ್ಟಿಗೆ ಡೌನ್ ಎಂಬ ಪದವನ್ನು ಬಳಸ್ತಾರೆ. 

ಮುಟ್ಟಿಗೆ ಡೌನ್ ಪದ ಏಕೆ ಬಳಸಬಾರದು ಗೊತ್ತಾ? : ನೀವು ಯಾವುದೇ ಕಾರಣಕ್ಕೆ ನಾನು ಡೌನ್ ಎಂಬ ಪದವನ್ನು ಬಳಕೆ ಮಾಡ್ತಿರಬಹುದು. ಆದ್ರೆ ಇಂದಿನಿಂದ ಈ ಪದ ಬಳಕೆ ಬಿಟ್ಟುಬಿಡಿ. ಸಾಮಾನ್ಯವಾಗಿ ಮುಟ್ಟು ಎಂದಾಗ ಮಹಿಳೆಯರು ತಮ್ಮನ್ನು ತಾವೇ ಕುಗ್ಗಿಸಿಕೊಳ್ತಾರೆ. ಇದೊಂದು ನೈಸರ್ಗಿಕೆ ಕ್ರಿಯೆ (Natural Process). ಇದಕ್ಕೆ ನಕಾರಾತ್ಮಕ ಪದ ಬಳಸಿದಾಗ ನಿಮ್ಮ ಮಾನಸಿಕ ಸ್ಥಿತಿ (Mental Status) ಮೇಲೆ ಇದು ಪರಿಣಾಮ ಬೀರುತ್ತದೆ. ಮೊದಲಿಗಿಂತ ಹೆಚ್ಚು ಮೂಡ್ ಸ್ವಿಂಗ್ ಇದ್ರಿಂದ ಆಗ್ಬಹುದು. ಮಾಡಬೇಕಾದ ಕೆಲಸದಲ್ಲಿ ನೀವು ಆಸಕ್ತಿ ಕಳೆದುಕೊಳ್ಳಬಹುದು. ಲೈಂಗಿಕ ಆರೋಗ್ಯವು (Sexual Health) ಋತುಚಕ್ರದ ಮೇಲೆ ನಿಂತಿದೆ. ಈ ಕಾರಣದಿಂದಾಗಿ ಭ್ರೂಣಗಳು ರೂಪುಗೊಳ್ಳುತ್ತವೆ. ಗರ್ಭಧಾರಣೆಯು (Pregnancy) ಯಶಸ್ವಿಯಾಗುತ್ತದೆ. ಹಾಗಿರುವಾಗ ನಾವು ಅದನ್ನು ಅಡ್ಡಿ ಎಂದು ಏಕೆ ಪರಿಗಣಿಸಬೇಕು. ಅದನ್ನು ಹೆಮ್ಮೆಯಿಂದ ಸ್ವೀಕರಿಸಿ ಮತ್ತು ಅದರ ಬಗ್ಗೆ ಜನರಿಗೆ ತಿಳಿಸಿ. 

Periods ವೇಳೆ ಸೂರ್ಯನಿಗೆ ಅರ್ಘ್ಯ ಅರ್ಪಿಸಬಹುದಾ?

ಮುಂದಿನ ಬಾರಿ ಪಿರಿಯಡ್ಸ್ ಬಂದಾಗ ನಾನು ಡೌನ್ ಆಗಿದ್ದೇನೆ ಎನ್ನುವ ಬದಲು ಪಿರಿಯಡ್ಸ್ ನಡೆಯುತ್ತಿದೆ ಅಂತಾ ಹೆಮ್ಮೆಯಿಂದ ಹೇಳಿ. ಮುಟ್ಟಿನ ಸಮಯದಲ್ಲಿ ಸಮಸ್ಯೆಯಾಗೋದು ನಿಮಗೆ ಮಾತ್ರವಲ್ಲ. ಎಲ್ಲ ಮಹಿಳೆಯರೂ ಇದನ್ನು ಎದುರಿಸುವ ಕಾರಣ ಸಮಸ್ಯೆ ಬಂದಾಗ ವೈದ್ಯರನ್ನು ಭೇಟಿಯಾಗಿ. 
 

click me!