ಮಹಿಳಾ ದಿನಾಚರಣೆ 2024; ತುಂಬಾ ಬ್ಯುಸಿನಾ? ಸಮಯ ಉಳಿಸಲು ಇಲ್ಲಿದೆ 6 ಕುಕಿಂಗ್ ಟಿಪ್ಸ್

By Suvarna News  |  First Published Mar 7, 2024, 4:09 PM IST

ನೀವು ವರ್ಕಿಂಗ್ ವುಮನ್ ಆಹ್? ಅಥವಾ ಮಕ್ಕಳನ್ನು ಸಂಭಾಳಿಸುತ್ತಾ ಸದಾ ಬ್ಯುಸಿಯಾಗಿರುವ ತಾಯಿನಾ? ಎಲ್ಲದಕ್ಕೂ ಸಮಯ ಸಾಲ್ತಿಲ್ಲವೆಂದರೆ ಅಡುಗೆಮನೆಯಲ್ಲಿ ನೀವು ಹೇಗೆ ಸಮಯದ ಉಳಿತಾಯ ಮಾಡಬಹುದೆಂಬ 5 ಟಿಪ್ಸ್ ಇಲ್ಲಿವೆ. 


ಮಹಿಳೆಯರು ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಮುನ್ನುಗ್ಗುವಾಗ ಮನೆ, ಕುಟುಂಬದ ಹೊಣೆಯನ್ನೂ ಮರೆಯದೆ ಹೊರುತ್ತಾರೆ. ಮನೆ, ಮಕ್ಕಳು, ಕಚೇರಿ ಎಂದು ಸ್ವತಃ ತಮಗಾಗಿ ಕೊಂಚವೂ ಸಮಯ ಇಟ್ಟುಕೊಳ್ಳದೆ ದುಡಿಯುತ್ತಾರೆ. ಇಷ್ಟೆಲ್ಲ ಒದ್ದಾಡುವಾಗ 10 ನಿಮಿಷ ಉಳಿಸಲು ಸಿಕ್ಕರೂ ದೊಡ್ಡದೇ ಎಂಬಂತಾಗುತ್ತದೆ. ಹಾಗೆ ನೀವು ಕೆಲ ಸಮಯವನ್ನು ಅಡುಗೆಮನೆಯಲ್ಲಿ ಉಳಿಸಲು ಸಾಧ್ಯವಾಗುವಂಥ 5 ಕುಕಿಂಗ್ ಟಿಪ್ಸ್ ಇಲ್ಲಿವೆ. ಈ ಸುಲಭವಾದ ಅಡುಗೆ ಸಲಹೆಗಳು ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ. ಅನುಸರಿಸಲು ಸುಲಭವಾದ ಈ ಸಲಹೆಗಳೊಂದಿಗೆ ಅಡುಗೆಮನೆಯಲ್ಲಿ ಸಮಯವನ್ನು ಸಮರ್ಥವಾಗಿ ನಿರ್ವಹಿಸಿ.

ಊಟದ ಮೆನು
ನಿಮ್ಮ ಬಿಡುವಿಲ್ಲದ ದಿನಗಳಲ್ಲಿ ತ್ವರಿತ ಅಡುಗೆಯನ್ನು ನೀವು ಬಯಸಿದರೆ, ಸಮಯಕ್ಕೆ ಮುಂಚಿತವಾಗಿ ಯೋಜಿಸಿ. ನಿಮ್ಮ ಊಟವನ್ನು ಯೋಜಿಸಲು ಪ್ರತಿ ವಾರದ ಆರಂಭದಲ್ಲಿ ಕೆಲವು ನಿಮಿಷಗಳನ್ನು ಕಳೆಯಿರಿ. ತ್ವರಿತವಾಗಿ ತಯಾರಿಸಲು ಸಾಧ್ಯವಾಗುವ ಪಾಕವಿಧಾನಗಳನ್ನು ವಾರದ ಏಳೂ ದಿನಕ್ಕೆ ಆಯ್ಕೆ ಮಾಡಿ ಮತ್ತು ಅಗತ್ಯವಿರುವ ಪದಾರ್ಥಗಳ ಆಧಾರದ ಮೇಲೆ ಕಿರಾಣಿ ವಸ್ತುಗಳನ್ನು ತಂದಿಟ್ಟಿಕೊಳ್ಳಿ. 

Tap to resize

Latest Videos

undefined

ಮುಂಚಿತವಾಗಿ ಸಿದ್ಧತೆ
ಹೆಚ್ಚುವರಿಯಾಗಿ ಮಕ್ಕಳು ಹೋಂ ವರ್ಕ್ ಮಾಡುವಾಗಲೇ ಜೊತೆಗೆ ಕುಳಿತು ತರಕಾರಿಗಳನ್ನು ಮುಂಗಡವಾಗಿ ಕತ್ತರಿಸಿ ಏರ್ ಟೈಟ್ ಡಬ್ಬಿಯಲ್ಲಿ ಹಾಕಿಡಿ. ಬೆಳ್ಳುಳ್ಳಿಯನ್ನು ಕೂಡಾ ಹೀಗೆ ಬೇರಾವುದೋ ಕೆಲಸಕ್ಕಾಗಿ ಕುಳಿತಾಗ ಬಿಡಿಸಿಟ್ಟುಕೊಳ್ಳಬಹುದು. ವಾರಕ್ಕಾಗುವಷ್ಟು ಕಾಯಿ ತುರಿದು ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳಿ. ಇನ್ನು, ತರಕಾರಿ, ಸೊಪ್ಪುಗಳನ್ನು ತೊಳೆದು ಒಣಗಿಸಿ ಫ್ರಿಡ್ಜ್‌ನಲ್ಲಿರಿಸಿ. ಬಿಡುವಿಲ್ಲದ ವಾರದ ದಿನಗಳಲ್ಲಿ ಈ ಸರಳ ಟ್ರಿಕ್ ನಿಮಗೆ ಸಾಕಷ್ಟು ಸಮಯವನ್ನು ಉಳಿಸಬಹುದು.


 

ಒನ್ ಪಾಟ್ ಮೀಲ್ಸ್
ಚಿತ್ರಾನ್ನ, ಟೊಮ್ಯಾಟೋ ರೈಸ್, ಪುಲಾವ್, ಕಿಚಡಿ ಮುಂತಾದ ರೈಸ್ ಬಾತ್‌ಗಳನ್ನು ತಯಾರಿಸಿದಾಗ ತೊಳೆವ ಪಾತ್ರೆಯೂ ಕಡೆಮೆ ಇರುತ್ತದೆ. ತಯಾರಿಸುವ ಸಮಯವೂ ಉಳಿತಾಯವಾಗುತ್ತದೆ. ಕನಿಷ್ಠ ಪೂರ್ವಸಿದ್ಧತೆ ಮತ್ತು ಅಡುಗೆ ಸಮಯದೊಂದಿಗೆ, ಈ ಪಾಕವಿಧಾನಗಳು ಒಂದೇ ಪಾತ್ರೆಯಲ್ಲಿ ಎಲ್ಲಾ ಪದಾರ್ಥಗಳನ್ನು ಸಂಯೋಜಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ.

ಗ್ಯಾಜೆಟ್ ಬಳಸಿ
ನಿಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡುವಂಥ ಉಪಕರಣಗಳನ್ನು ಕಿಚನ್‌ಗೆ ತಂದಿರಿಸಿಕೊಳ್ಳಿ. ಮೈಕ್ರೊವೇವ್, ಏರ್ ಫ್ರೈಯರ್, ಪ್ರೆಶರ್ ಕುಕ್ಕರ್, ಎಲೆಕ್ಟ್ರಿಕ್ ಸ್ಟೌವ್ ಮುಂತಾದವು ಸಮಯ ಉಳಿಸುತ್ತವೆ. ತರಕಾರಿ ಹೆಚ್ಚುವ ಮೆಷಿನ್ ಇತರೆ ಅಡುಗೆಮನೆ ಪರಿಕರಗಳು ಸಹಾಯಕ್ಕೆ ಬರುತ್ತವೆ.  

ಮಹಿಳಾ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಸೌದಿಯ ಮೊದಲ ಪುರುಷ ರೋಬೋಟ್! ವಿಡಿಯೋ ವೈರಲ್
 

ಸಣ್ಣ ಪ್ರಮಾಣದ ತಯಾರಿಕೆ ಬೇಡ
ದೋಸೆ ಹಿಟ್ಟು, ಚಪಾತಿ ಹಿಟ್ಟು, ಇಡ್ಲಿ ಹಿಟ್ಟು ಮುಂತಾದವುಗಳನ್ನು ಮಾಡುವಾಗ ಕನಿಷ್ಠ ಎರಡು ದಿನಗಳಿಗಾದರೂ ಬರುವಂತೆ ಸಿದ್ಧ ಮಾಡಿಕೊಳ್ಳಿ. ಆಗ, ಕೆಲವೊಮ್ಮೆ ಅಡುಗೆ ಮನೆಗೆ ಹೋಗಲು ಸಮಯವಿಲ್ಲದಿದ್ದರೆ ದೋಸೆ ಮಾಡಿಕೊಂಡು ತಿನ್ನಬಹುದು, ಅಥವಾ ಮರುದಿನದ ತಿಂಡಿಯ ತಲೆಬಿಸಿ ಇಲ್ಲದೆ ಆರಾಮಾಗಿ ನಿದ್ರಿಸಬಹುದು. 

ಅಡುಗೆಮನೆಯನ್ನು ಸ್ವಚ್ಛ, ಸಿದ್ಧವಾಗಿಟ್ಟುಕೊಳ್ಳಿ
ಹರಡಿದ ಅಡುಗೆಮನೆ ಕೆಲಸವನ್ನು ತಡಗೊಳಿಸುತ್ತದೆ. ಅಡುಗೆಮನೆಯಲ್ಲಿ ಎಲ್ಲವೂ ಕೈಗೆ ಸಿಗುವಂತೆ ಹಾಗೂ ಸ್ವಚ್ಛವಾಗಿದ್ದಾಗ ಬೇಗನೆ ಕೆಲಸವಾಗುತ್ತದೆ. 
 

click me!