ಸೋಷಿಯಲ್ ಮೀಡಿಯಾ ಕೀಚಕರು-4
- ನಾಗರಾಜ ಎಸ್.ಬಡದಾಳ್
ದಾವಣಗೆರೆ (ನ.6) : ಸಮಾಜ, ಜನರು, ಊರಿನವರು ಮುಂದೆ ಸಜ್ಜನನಂತೆ, ಸಂತ್ರಸ್ತೆ ಮುಂದೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ಸೋಷಿಯಲ್ ಮೀಡಿಯಾ ಕೀಚಕರ ವಿರುದ್ಧ ಸ್ವಯಂ ಸಂತ್ರಸ್ತ ಮಹಿಳೆಯರೇ ಧ್ವನಿ ಎತ್ತಬೇಕಾಗಿದೆ.
Davanagere: ಸೋಷಿಯಲ್ ಮೀಡಿಯಾ ಕೀಚಕರಿಗೆ ಎಚ್ಚರಿಕೆಯ ಗಂಟೆ
ಮೊಬೈಲ್ ಕರೆ, ವಾಟ್ಸಪ್ ಸಂದೇಶ-ಕರೆ-ವೀಡಿಯೋ ಕಾಲ್, ಫೇಸ್ ಬುಕ್, ಮೆಸ್ಸೆಂಜರ್, ಟ್ವಿಟರ್ ಹೀಗೆ ನಾನಾ ರೀತಿ ಸೋಷಿಯಲ್ ಮೀಡಿಯಾಗಳನ್ನು ದುರ್ಬಳಕೆ ಮಾಡಿ ಅಪ್ರಾಪ್ತೆಯರು, ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ವಿಧವೆ, ವಿಚ್ಛೇದಿತ ಹೆಣ್ಣು ಮಕ್ಕಳಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿರುವ ಸೋಷಿಯಲ್ ಮೀಡಿಯಾ ಕೀಚಕರ ವಿರುದ್ಧ ಸಂತ್ರಸ್ತೆಯರೇ ಧೈರ್ಯದಿಂದ ಧ್ವನಿ ಎತ್ತಿದರೆ ಸಮಸ್ಯೆಗೆ ಪರಿಹಾರ ಸಾಧ್ಯವಿದೆ.
ನಿತ್ಯ ನಿರಂತರ, ಹಗಲು ರಾತ್ರಿ ಎನ್ನದೇ ನೆಮ್ಮದಿ ಕಳೆದು ಪರಿತಪಿಸುತ್ತಿರುವ ಸಂತ್ರಸ್ತ ಹೆಣ್ಣು ಮಕ್ಕಳು ಧೈರ್ಯ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಅಂತಹವರ ನಂಬರ್, ಖಾತೆಯನ್ನು ಬ್ಲಾಕ್ ಮಾಡಬೇಕು. ಹೀಗೆ ಮಾಡಿದರೆ ಒಂದು ವಾರ, 10-15 ದಿನ ನಿಮಗೆ ಇನ್ನಿಲ್ಲದಂತೆ ತನ್ನ ಹೆತ್ತವರು, ಸಹೋದರಿ ಅಥವಾ ಪತ್ನಿಯ ಹೆಸರಿನ ಸಿಮ್, ವಾಟ್ಸಪ್‌ಗಳಿಂದ ಅಥವಾ ಬೇರೆ ಸ್ನೇಹಿತರ ನಂಬರ್‌ಗಳಿಂದ ಕರೆ ಮಾಡಬಹುದು. ಅದಕ್ಕೆ ಯಾವುದೇ ಕಾರಣಕ್ಕೂ ಮಹಿಳೆಯರು ಕಿವಿಗೊಡದೇ ಒಮ್ಮೆ ಎಚ್ಚರಿಸುವ ಕೆಲಸ ಮಾಡಬೇಕು. ತನ್ನ ನೆಮ್ಮದಿಗೆ, ಬದುಕಿಗೆ ಧಕ್ಕೆ ತರುವ ರಾಕ್ಷಸರ ಪಾಲಿಕೆ ಆಕೆ ನವದುರ್ಗೆಯಾಗಿ ಎದುರು ನಿಲ್ಲಬೇಕಾಗಿದೆ.
ಕಾನೂನು ಇರುವುದೇ ಮಹಿಳೆಯರ ರಕ್ಷಣೆಗಾಗಿ. ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಸಹ ನೊಂದ, ಸಂತ್ರಸ್ತ ಹೆಣ್ಣು ಮಕ್ಕಳ ಇದ್ದೇ ಇರುತ್ತದೆ. ಸೋಷಿಯಲ್ ಮೀಡಿಯಾ ಕೀಚಕರ ಜೊತೆಗೆ ಸಲಿಗೆ ಬೆಳೆಸಿ ನಿಮ್ಮ ಸುಖ, ಶಾಂತಿ, ನೆಮ್ಮದಿ, ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿಕೊಳ್ಳುವ ಬದಲಿಗೆ ಒಮ್ಮೆಗೆ ಇಂತಹ ವ್ಯಕ್ತಿಯಿಂದ ತಮಗೆ ಇನ್ನಿಲ್ಲದ ಕಿರುಕುಳವಾಗುತ್ತಿದೆಯೆಂಬುದಾಗಿ ಮನೆಯ ಸದಸ್ಯರ ಗಮನಕ್ಕೆ ತರುವುದು ಸೂಕ್ತ. ಮೌಖಿಕವಾಗಿ ಎಚ್ಚರಿಸುವ ಕೆಲಸ ಮಾಡುತ್ತಾರೆ. ಅದಕ್ಕೂ ಜಗ್ಗದಿದ್ದರೆ ಪೊಲೀಸ್ ಇಲಾಖೆ ಇದ್ದೇ ಇರುತ್ತದೆ.
ಹೆಣ್ಣಿಗೆ ತೊಂದರೆ ಇದೇ ಮೊದಲೇನೂ ಆಲ್ಲ:
ದಾವಣಗೆರೆ ನಗರ, ಜಿಲ್ಲೆಯಲ್ಲಿ ಹಿಂದಿನಿಂದಲೂ ಇಂತಹ ಸಾಕಷ್ಟುಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಸೋಷಿಯಲ್ ಮೀಡಿಯಾ ಕೀಚಕರ ಕಾಟದಿಂದ ಅದೆಷ್ಟೋ ಮಹಿಳೆಯರ ಜೀವನವೇ ನರಕ ಸದೃಶವಾಗಿದೆ. ಆಪ್ತತೆಯಿಂದ ಮಾತನಾಡಿದ್ದನ್ನೇ ರೆಕಾರ್ಡ್ ಮಾಡಿ, ಫೋಟೋಗಳನ್ನು ಶೇರ್ ಮಾಡಿದ್ದರೆ, ವೀಡಿಯೋ ಕಾಲ್ ಮಾಡಿದಾಗ ಮಾಡಿಕೊಂಡ ರೆಕಾರ್ಡ್ ಇಟ್ಟು ಹೆಣ್ಣು ಮಕ್ಕಳ ಜೀವನದ ಜೊತೆ ಆಟವಾಡುತ್ತಿರುವ ಇಂತಹ ಆಧುನಿಕ ಕೀಚಕರಿಗೆ ಕರೆದು ಬುದ್ಧಿ ಹೇಳುವ ಕೆಲಸ ಅಲ್ಲಲ್ಲಿ ಆಗುತ್ತಿದೆ. ಆಕಸ್ಮಾತ್ ಹೆಣ್ಣು ಮಕ್ಕಳ ಮನೆಯವರು ಜೋರಾಗಿದ್ದರೆ ಇಂತಹ ಕೀಚಕರ ಪರಿಸ್ಥಿತಿ ದೇವರಿಗೆ ಪ್ರೀತಿ. ಇಂತಹ ಸಾಕಷ್ಟುನಿದರ್ಶನಗಳೂ ಇವೆ.
ಮಾತಿಗಿಂತ ಕೃತಿ ಲೇಸು; ಇದು ಪೊಲೀಸ್ ಭಾಷೆ
ಕೆಲವು ವರ್ಷಗಳ ಹಿಂದೆ ಶಾಲೆಗೆ ಮಕ್ಕಳನ್ನು ಬಿಟ್ಟು ಬರುತ್ತಿದ್ದ ಗೃಹಿಣಿಗೆ ಇನ್ನಿಲ್ಲದಂತೆ ಕಾಡುತ್ತಿದ್ದ ಒಬ್ಬ ಕ್ರೀಡಾಪಟುವನ್ನು ಠಾಣೆಗೆ ಕರೆ ತಂದು ಹಿರಿಯ ಪೊಲೀಸ್ ಅಧಿಕಾರಿ
ಮಹಿಳೆಯರ ಕೆಲಸ ಸುಲಭಗೊಳಿಸುತ್ತೆ ಈ Applications
ಗಳು, ಸಿಬ್ಬಂದಿ ಗಂಟೆಗಟ್ಟಲೇ ಆತಿಥ್ಯ ನೀಡಿದ್ದರಿಂದ ಸಂತೃಪ್ತನಾದ ಆತ ರಾತ್ರೋ ರಾತ್ರಿ ಊರು ಬಿಟ್ಟನಿದರ್ಶನವಿದೆ. ಹೆಣ್ಣು ಮಕ್ಕಳಿಗೆ ತೊಂದರೆ ಆಗುತ್ತಿದ್ದಂತಹ ಸಂದರ್ಭದಲ್ಲಿ ಆಗ ಇದ್ದ ಹಿರಿಯ ಪೊಲೀಸ್ ಅಧಿಕಾರಿಗಳೂ ಮುಲಾಜಿಲ್ಲದೇ ಸ್ಥಳದಲ್ಲೇ ಕ್ರಮ ಕೈಗೊಂಡ ಸಾಕಷ್ಟುನಿದರ್ಶನ ಇವೆ. ಇನ್ನು ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ವಿಚ್ಛೇದಿತೆ, ಅವಿವಾಹಿತೆ, ವಿಧವೆಯರಿಗೆ ತೊಂದರೆ ಕೊಟ್ಟು, ಸಂಕಷ್ಟಮೈಮೇಲೆ ಎಳೆದುಕೊಂಡ ಆಧುನಿಕ ಕೀಚಕರ ಪರಿಸ್ಥಿತಿ ಏನೇನಾಗಿದೆಯೆಂಬುದು, ಇಂತಹ ಪ್ರಕರಣಗಳು ಬಹುತೇಕ ಗ್ರಾಮಗಳು, ಪಟ್ಟಣ, ಊರಿನಲ್ಲೂ ನಡೆಯುತ್ತಲೇ ಇರುತ್ತವೆ. ಅನೇಕರಿಗೆ ಗೊತ್ತೂ ಇರುತ್ತವೆ. ಹೆಣ್ಣಿನ ತಂಟೆಗೆ ಹೋಗಿ ನಿರ್ನಾಮವಾದವರು, ಬೀದಿ ಪಾಲಾದವರ ನಿದರ್ಶನಗಳು ನಮ್ಮ ಪುರಾಣ ಕಾಲದಿಂದಲೂ ಇದ್ದೇ ಇವೆ.