ಆಫೀಸ್ ಇರಲಿ, ಕಾಲೇಜ್ ಇರಲಿ, ಸ್ವಲ್ಪ ಟೈಮ್ ಸಿಕ್ಕರೆ ಸಾಕು, ಹೆಣ್ಮಕ್ಕಳು ರೆಸ್ಟ್ ರೂಮ್‌ಗೆ ದೌಡಾಯಿಸುತ್ತಾರೆ. ಅಷ್ಟಕ್ಕೂ ರೆಸ್ಟ್ ರೂಮಿನಲ್ಲಿ ಹೆಣ್ಮಕ್ಕಳು ಏನೇನೆಲ್ಲ ವಿಚಾರ ಚರ್ಚೆ ಮಾಡ್ತಾರೆ.
ಲೇಡೀಸ್ ಬ್ಯಾಗ್, ಹುಡುಗೀರ ಮನಸ್ಸು, ಹುಡುಗೀರು ಹುಡುಗೀರೇ ಸಿಕ್ಕಾಗ ಆಡೋ ಮಾತು ಇವೆಲ್ಲದರ ಬಗ್ಗೆ ಹುಡುಗರಿಗೆ ಕುತೂಹಲ ಇದ್ದೇ ಇರುತ್ತದೆ. ಈ ಬರಹ ಓದ್ತಾ ಇರೋ ನೀವು ಹುಡುಗ ಆಗಿದ್ದರೆ ನಿಮ್ಮ ಜೊತೆಗೆ ಕೆಲಸ ಮಾಡೋ ಹುಡುಗಿಯೂ, ಲೇಡಿಯೋ ಸೈಕಲ್ ಗ್ಯಾಪಲ್ಲಿ ರೆಸ್ಟ್ ರೂಮಿಗೆ ಹೋಗಿ ಒಂದಿಷ್ಟು ಹೊತ್ತು ಬಿಟ್ಟು ಬರೋದನ್ನು ನೋಡಿಬಹುದು. ಕೆಲವೊಮ್ಮೆ ಹೆಣ್ಣುಮಕ್ಕಳ ರೆಸ್ಟ್ ರೂಮಿಂದ ಜೋರಾಗಿ ನಗೋ ಸದ್ದು, ಜೋರು ಜೋರಾದ ಮಾತು, ಜೋಶ್ ಫುಲ್ ಸಂಗತಿಗಳು ಬಾಗಿಲಾಚೆ ಇರೋ ನಿಮ್ಮ ಕಿವಿಗೂ ಬಿದ್ದಿರಬಹುದು. ಅಷ್ಟಕ್ಕೂ ಆಫೀಸ್ ಕೆಲಸದ ನಡುವೆ, ಕ್ಲಾಸ್ ನಡುವೆ ಒಂಚೂರು ಟೈಮ್ ಸಿಕ್ಕರೆ ಲೇಡೀಸ್ ರೆಸ್ಟ್ ರೂಮ್‌ಗೆ ಓಡೋದ್ಯಾಕೆ ಹೆಣ್ಮಕ್ಕಳು. ಆ ಕುತೂಹಲಕ್ಕೆ ಉತ್ತರ ಇಲ್ಲಿದೆ.
- ಸೈಕಲ್ ಗ್ಯಾಪಲ್ಲಿ ಲೇಡೀಸ್ ರೆಸ್ಟ್ ರೂಮಿಗೆ ಹಾರಿಕೊಂಡು ಬಂದಂತೆ ಬಂದ ಶೀತಲ್ ಹೆಗಲ ಮೇಲಿದ್ದ ದುಪ್ಪಟ್ಟಾವನ್ನು ಕಿತ್ತು ಕುರ್ಚಿಗೆ ಹೊದೆಸಿದಳು. ಕೂದಲ ಕ್ಲಿಪ್ ಬಿಚ್ಚಿ ಅಷ್ಟಗಲದ ಕನ್ನಡಿ ಮುಂದೆ ನಿಂತಳು. ಬಟ್ಟೆಯಲ್ಲಿ ಮರೆ ಮಾಡಿದ್ದ ಬಾಚಣಿಗೆ ತೆಗೆದು ಕನ್ನಡಿ ನೋಡ್ತಾ ಕೂದಲು ಬಾಚಿದಳು. ಒಂದು ಸೈಡ್ ಸ್ವಲ್ಪ ದಪ್ಪಗಾಗಿದ್ದ ಕಾಡಿಗೆ ಸರಿ ಮಾಡಿಕೊಂಡಳು. ಐಬ್ರೋ ಶೇಪ್ ಯಾಕೋ ಈ ಸಲ ಸರಿನೇ ಮಾಡಿಲ್ಲ. ಮುಂದಿನ ಸಲ ಆ ಪಾರ್ಲರ್‌ಗೇ ಹೋಗಬಾರದು ಅಂದುಕೊಂಡಳು. ಅವಳು ಹಾಗಂದುಕೊಳ್ಳುತ್ತಿರುವಾಗಲೇ ಟಪ್ ಟಪ್ ಚಪ್ಪಲಿ ಸೌಂಡ್ ಮಾಡ್ತಾ ಲೇಖಾಳ ಎಂಟ್ರಿ. ಲೇಡೀಸ್ ರೂಮ್ ಒಳಗೆ ಬಂದಿದ್ದೇ ಮೈಯ ಜಡವನ್ನೆಲ್ಲ ಕೊಡೊವೋ ಹಾಗೆ ಮೈ ಮುರಿದಳು.
undefined
ನೀತಾ ಅಂಬಾನಿ ಲಕ್ಸುರಿಯಸ್ ಹ್ಯಾಂಡ್‌ಬಾಗ್ ಬೆಲೆ ಭರ್ತಿ 3.2 ಕೋಟಿ ರೂ! ಅಂಥದ್ದೇನಿದೆ ಅದ್ರಲ್ಲಿ!
ಕುರ್ಚಿ ಮೇಲೆ ಮೈ ಚಾಚಿ ಬಿದ್ದುಕೊಂಡಳು. 'ಏನೇ ಇವತ್ತು ಟ್ರೆಡಿಶನಲ್(traditional) ಆಗಿ ಬಂದಿದ್ದೀಯಾ? ಇಯರ್ ರಿಂಗ್ ಸಖತ್ತಾಗಿದೆ, ಎಲ್ ತಗೊಂಡೆ?' ಅಂತ ಶೀತಲ್ ಪ್ರಶ್ನೆ. 'ಅದು ನನ್ ಫ್ರೆಂಡ್ ಡೆಲ್ಲಿಯಿಂದ ಬರೋವಾಗ ತಂದಿದ್ದಂತೆ. ಮೊಘಲ್ ಸ್ಟೈಲ್ ಅಂತೇನೋ ಅಂದ್ಲಪ್ಪ..' ಅನ್ನೋ ಉತ್ತರ. ಇಬ್ಬರ ಮಾತು ಇಯರ್ ರಿಂಗ್ ಬಳಿಕ ಶಾಪಿಂಗ್, ಕೂದಲುದುರೋ ಜಾಗತಿಕ ಸಮಸ್ಯೆ, ಮನೆಯಲ್ಲಿ ಮದುವೆ ಆಗೋಕೆ ಹಾಕ್ತಿರೋ ಒತ್ತಡ (Stess), ನೋಡೋಕೆ ಹ್ಯಾಂಡ್‌ಸಮ್ (Handsome) ಆಗಿದ್ರೂ ಶತಮಾನ ಹಿಂದಿನವರ ಥರ ಆಡೋ ಹುಡುಗರು ಇತ್ಯಾದಿ ಸಬ್ಜೆಕ್ಟ್ ಮೇಲೆ ಮುಂದುವರಿಯಿತು. ಈ ಸಲ ಮಾತ್ರ ಸ್ಟ್ರಿಕ್ಟ್ (strict) ಆಗಿ ಡಯೆಟ್ (Diet) ಮಾಡ್ಲೇಬೇಕು ಅನ್ನುವ ಕಠಿಣ ನಿರ್ಧಾರಕ್ಕೆ ಬರುವಾಗಲೇ ಹೊಸ ರೀಲ್ಸ್ ಸಂಗತಿ ಬಂತು. ಇಬ್ಬರೂ ಬಾತ್‌ರೂಮ್‌ನ ನಲ್ಲಿ, ಪೊರಕೆ, ಮಿರರ್ ಅನ್ನೇ ಬಳಸಿಕೊಂಡು 'ಅನ್ಯಾಯಕಾರಿ ಬ್ರಹ್ಮ..' ಹಾಡಿಗೆ ಓವರ್ ಆಕ್ಟಿಂಗ್ (Over acting) ಮಾಡೋಕೆ ಶುರು ಮಾಡಿದರು.
- 'ಇವತ್ತೇನ್ರೀ ಅಡುಗೆ?' ಶುಭಾ ಮಾತಿಗೆ ಶಾಲಿನಿ, 'ಇವತ್ತು ಬೂದುಗುಂಬಳಕಾಯಿ ಹುಳಿ. ನಮ್ಮೆಜಮಾನ್ರಿಗೆ ಇಷ್ಟ. ಆದ್ರೆ ಮಕ್ಕಳು ತಿನ್ನಲ್ಲ..' ಅಂತ ತನ್ನ ಮನೆಯ ಪುರಾಣ ಶುರು ಮಾಡಿದಳು. ತನ್ನ ನಾದಿನಿ ತೊಡೋ ಕೆಟ್ಟ ಬಟ್ಟೆಗಳು, ಆಫೀಸಿನ ಹುಡುಗಿಯರು ಎಷ್ಟು ಗಲೀಜಾಗಿರುತ್ತಾರೆ, ಆನ್‌ಲೈನ್‌ನಲ್ಲಿ (online) ಖರೀದಿಸಿದ ಸೀರೆ, ಬಸ್‌ನ ಫ್ರೀ ಟಿಕೆಟ್‌ನ ಒಳ್ಳೆತನ ಕೆಟ್ಟತನ, ಫೇಸ್‌ಬುಕ್‌ನಲ್ಲಿ (Facebook_ ನಡೀತಿರೋ ಚರ್ಚೆ ಇತ್ಯಾದಿ ವಿಚಾರಗಳ ಬಗ್ಗೆ ಮಧ್ಯವಯಸ್ಸಿನ ಹೆಂಗಸರ ಚರ್ಚೆ ಸಮಯದ ಎಗ್ಗಿಲ್ಲದೇ ಸಾಗುತ್ತದೆ. ನಡುವೆ ಸೆಕ್ಸ್‌ಗೆ (Sex) ಒತ್ತಾಯಿಸುವ ಗಂಡ, ಆತನ ಬಗ್ಗೆ ಇರುವ ಕೆಲವು ಅನುಮಾನಗಳು ಅನ್ನೋ ವಿಚಾರಗಳೂ ಚರ್ಚೆಗೆ ಬರೋದುಂಟು.
- ಇನ್ನೂ ಕೊಂಚ ವಯಸ್ಸಾದವರಿದ್ದರೆ ಮಂಡಿನೋವು, ಸೊಸೆಯ ಗಾಂಚಾಲಿನ, ಹೆಂಡತಿಯ ದಾಸನಂತಿರೋ ಮಗ, ಫಂಕ್ಷನ್‌ನಲ್ಲಿ ಸಿಕ್ಕ ದೂರ ಸಂಬಂಧಿ ಆಡಿದ ಕುಹಕದ ಮಾತು, ದೊಡ್ಡವರ ಬಗ್ಗೆ ಈ ಕಾಲದವರಿಗಿರೋ ಉಡಾಫೆ ಇತ್ಯಾದಿ ಇತ್ಯಾದಿಗಳ ಬಗ್ಗೆ ಚರ್ಚೆ.
ಇನ್ನು ದೊಡ್ಡೋರಿದ್ದರೆ ಚಿಕ್ಕೋರು ಮೊಬೈಲ್‌ನಲ್ಲಿ ರೀಲ್ಸ್ ನೋಡ್ತಾ ತೇಲಿಕೆಯ ಮಾತಾಡ್ತಾ ಅವರ ಮಾತು ಕೇಳಿಸಿಕೊಳ್ಳುವಂತೆ ನಟಿಸುತ್ತ ಹೈರಾಣಾಗುತ್ತ ಅರ್ಜೆಂಟ್ ವರ್ಕ್ ಇದೆ ಅನ್ನುತ್ತ ಅಲ್ಲಿಂದ ಪಾರಾಗುತ್ತಾರೆ.
ಯಪ್ಪಾ..ಇಲ್ಲಿನ ಹುಡುಗ್ರು ಮದ್ವೆಯಾಗೋಕೆ ಸ್ಪೆಷಲ್ ಟೆಸ್ಟ್ ಪಾಸ್ ಮಾಡ್ಬೇಕು, ಸಿಕ್ಕಾಪಟ್ಟೆ ನೋವಾದ್ರೂ ಸಹಿಸ್ಕೋಬೇಕು!