ರಿಸ್ಕ್ ವಿಷ್ಯ ಬಂದಾಗ ಹಿಂದೆ ಸರಿತಾರೆ ಮಹಿಳೆಯರು!

By Suvarna News  |  First Published Jun 23, 2023, 5:10 PM IST

ಈಗಿನ ಕಾಲದಲ್ಲಿ ಮಹಿಳೆಯರು ನಾನಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಅನೇಕಾನೇಕ ಸಾಧನೆಗಳನ್ನು ಮಾಡಿದ್ದಾರೆ. ಎಲ್ಲ ಕಡೆ ಸೈ ಎನ್ನಿಸಿಕೊಂಡಿದ್ರೂ ಧೈರ್ಯದಿಂದ ಮುನ್ನುಗ್ಗುವ ವಿಷ್ಯ ಬಂದಾಗ ಪುರುಷರಿಗಿಂತ ಒಂದು ಹೆಜ್ಜೆ ಹಿಂದಿದ್ದಾರೆ ಮಹಿಳೆಯರು. 
 


ಜೀವನದಲ್ಲಿ ಏರುಪೇರುಗಳ ಸಾಮಾನ್ಯ. ಎಲ್ಲವನ್ನೂ ಧೈರ್ಯವಾಗಿ ಎದುರಿಸಬೇಕು. ಕೆಲವೊಮ್ಮೆ ಅಚಾನಕ್ ಆಗಿ ಅಪಾಯಗಳು ಎದುರಾಗುತ್ತವೆ. ಅದನ್ನು ಕಷ್ಟಪಟ್ಟಾದ್ರೂ ಪರಿಹರಿಸಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಕೆಲವೊಮ್ಮೆ ಆಪತ್ತನ್ನು ಮೈಮೇಲೆ ಎಳೆದುಕೊಂಡು ಯುದ್ಧಗೆ ಸಿದ್ಧರಾಗಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಅನೇಕ ಸವಾಲು, ಸಮಸ್ಯೆಗಳು ನಮ್ಮಿಂದಲೇ ಹುಟ್ಟಿಕೊಂಡಿರುತ್ತವೆ. ಜೀವನದಲ್ಲಿ ಯಶಸ್ವಿಯಾಗ್ಬೇಕು ಅಂದ್ರೆ ಇಂಥ ಸಮಸ್ಯೆಗಳ ಕಾರಣೀಕರ್ತೃ ನಾವೇ ಆಗಿರಬೇಕಾಗುತ್ತದೆ. 

ಮುಂದೆ ಗುಂಡಿಯಿದೆ ಎಂಬುದು ಗೊತ್ತಿದ್ದೂ ಧೈರ್ಯ (Courage) ಮಾಡಿ ಮುನ್ನುಗ್ಗುವ ಸಾಹಸ (Adventure) ಕ್ಕೆ ಎಲ್ಲರೂ ಕೈ ಹಾಕುವುದಿಲ್ಲ. ಹೊಂಡದಲ್ಲಿ ಬಿದ್ರೆ ಎದ್ದು ಬರ್ತೇನೆ ಎಂಬ ಮೊಂಡು ಧೈರ್ಯ ಮಾಡೋದು ಮಹಿಳೆಯರಿಗಿಂತ ಪುರುಷರೇ ಹೆಚ್ಚು. ಸಾಹಸ ಕೆಲಸಕ್ಕೆ ಮಹಿಳೆಯರು ಹೋಗೋದು ಬಹಳ ಕಡಿಮೆ. ಜೀವನ (Life) ದಲ್ಲಿ ಅಪಾಯವನ್ನು ಎದುರಿಸುವ ವಿಷ್ಯ ಬಂದಾಗ, ಮಹಿಳೆಯರಿಗಿಂತ ಪುರುಷರು ಮುಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದನ್ನು ನಾವು ಹೇಳ್ತಿಲ್ಲ. ಬ್ರಿಟನ್ ನಲ್ಲಿ ನಡೆದ ಸಂಶೋಧನೆಯೊಂದು ಹೇಳ್ತಿದೆ. ನಷ್ಟದ ವಿಷ್ಯ ಬಂದಾಗ ಮಹಿಳೆ ಸಂವೇದನೆಗೆ ಒಳಗಾಗ್ತಾಳೆ. ಈ ಅಧ್ಯಯನವನ್ನು ಬ್ರಿಟಿಷ್ ಜರ್ನಲ್ ಆಫ್ ಸೈಕಾಲಜಿಯಲ್ಲಿ ಪ್ರಕಟಿಸಲಾಗಿದೆ. ನಾವಿಂದು ಅಧ್ಯಯನದಲ್ಲಿ ಯಾವೆಲ್ಲ ವಿಷ್ಯವನ್ನು ಹೇಳಲಾಗಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

Tap to resize

Latest Videos

ಕಾನ್ಫಿಡೆಂಟ್ ಆಗಿರಬೇಕಾ, ಈ ಟಿಪ್ಸ್ ಫಾಲೋ ಮಾಡಿ

ಅಧ್ಯಯನ ಹೇಳೋದೇನು?: ಸಂಶೋಧಕರು, 13,575 ಜನರ ಮಾಹಿತಿಯನ್ನು ಕಲೆಹಾಕಿ ಈ ವರದಿಯನ್ನು ಪ್ರಸ್ತುತಪಡಿಸಿದ್ದಾರೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರು, ಅಪಾಯಕಾರಿ ಆಯ್ಕೆಗಳ ಬಗ್ಗೆ ಯೋಚಿಸುವಾಗ, ಕಳೆದುಕೊಳ್ಳುವ ಸಾಧ್ಯತೆಯನ್ನು ಮಾತ್ರ ಆಲೋಚನೆ ಮಾಡೋದಿಲ್ಲವಂತೆ. ಕಳೆದುಕೊಂಡ ನಂತ್ರ ಆಗುವ ನಷ್ಟ  ಎಷ್ಟು ನೋವಿನಿಂದ ಕೂಡಿದೆ ಎಂಬುದನ್ನು ಮೌಲ್ಯಮಾಪನ ಮಾಡುತ್ತಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಅತಿ ಹೆಚ್ಚು ಕಳೆದುಕೊಳ್ಳುವ ಬಗ್ಗೆ  ಹಾಗೂ ನಷ್ಟದ ನೋವಿನ ಬಗ್ಗೆ ಆಲೋಚನೆ ಮಾಡ್ತಾರೆ. ಕಳೆದುಕೊಂಡ ನಷ್ಟದ ನೋವು ಸ್ವಲ್ಪವಿದ್ರೂ ಪುರುಷರು ಅದನ್ನು ಗಂಭೀರವಾಗಿ ಪರಿಗಣಿಸೋದಿಲ್ಲ.  

ಮಹಿಳೆಯರಿಗಿಂತ ಹೆಚ್ಚು ಆಶಾವಾದಿ ಪುರುಷರು : ಸಂಶೋಧನಾ ಅಧ್ಯಯನದಲ್ಲಿ ಇದ್ರ ಬಗ್ಗೆಯೂ ಹೇಳಲಾಗಿದೆ. ಪುರುಷರು, ಮಹಿಳೆಯರಿಗಿಂತ ಹೆಚ್ಚು ಆಶಾವಾದಿಗಳಾಗಿರುತ್ತಾರಂತೆ. ಮುಂದಿನ ಒಂದು ವರ್ಷದಲ್ಲಿ ಏನಾಗ್ಬೇಕು ಎಂಬುದನ್ನು ಅವರು ಇಂದೇ ನಿರ್ಧರಿಸಿರುತ್ತಾರಂತೆ. ಆದ್ರೆ ಮಹಿಳೆಯರಿಗಿಂತ ಓವರ್ ಕಾನ್ಫಿಡೆನ್ಸ್ ಇರ್ತಾರೆ ಪುರುಷರು ಎನ್ನುತ್ತದೆ ಸಂಶೋಧನೆ.

ಜೀವನದಲ್ಲಿ Success ಸಿಗ್ಬೇಕೆಂದ್ರೆ ಮೊದಲು ನೀವು ಬದಲಾಗ್ಲೇಬೇಕು

ವೃತ್ತಿಯಲ್ಲಿ ರಿಸ್ಕ್ ತೆಗೆದುಕೊಳ್ಳಲು ಯಾರು ಮುಂದಿದ್ದಾರೆ? : ವೃತ್ತಿ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವ ವಿಷ್ಯದಲ್ಲಿ ಕೂಡ ಪುರುಷರೇ ಮುಂದಿದ್ದಾರೆ ಎನ್ನುತ್ತದೆ ಸಂಶೋಧನೆ. ಮುಂದೇನಾಗಬಹುದು ಎಂಬ ಬಗ್ಗೆ ಅತಿಯಾಗಿ ಆಲೋಚನೆ ಮಾಡುವ ಮಹಿಳೆಯರು ರಿಸ್ಕ್ ನಿಂದ ಹಿಂದೆ ಸರಿಯುತ್ತಾರೆ. ಇದ್ದಿದ್ದರಲ್ಲಿಯೇ ತೃಪ್ತಿಪಟ್ಟುಕೊಳ್ಳಲು ಮುಂದಾಗ್ತಾರೆ. ಆದ್ರೆ ಪುರುಷರು ಮುಂದಿನ ಭವಿಷ್ಯಕ್ಕಿಂತ ಈಗಿನ ಬಗ್ಗೆ ಹೆಚ್ಚು ಆಲೋಚನೆ ಮಾಡ್ತಾರೆ. ಹಾಗಾಗಿಯೇ ಅವರು ರಿಸ್ಕ್ ಮೈಮೇಲೆ ಎಳೆದುಕೊಳ್ತಾರೆ. ಸಾಧ್ಯವಿಲ್ಲ ಎಂದಾಗ ಯಾವುದೇ ಆಲೋಚನೆ ಮಾಡದೆ ಕೆಲಸ ಬಿಟ್ಟು ಬರ್ತಾರೆ.

ಹೆಚ್ಚು ಸಂಬಳ ಬರುವ ಉದ್ಯೋಗದಲ್ಲಿರುವ ಮಹಿಳೆಯರ ಸಂಖ್ಯೆ ಕಡಿಮೆ : ಸಂಶೋಧನೆಯಲ್ಲಿ ಇದ್ರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಉದ್ಯಮ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಮಾಡ್ತಿರುವ ಮಹಿಳೆಯರ ಸಂಖ್ಯೆ ಕಡಿಮೆ. ಅತಿ ಹೆಚ್ಚು ಸಂಬಳ ಬರುವ ಉದ್ಯೋಗ, ಟಾಪ್ ಮ್ಯಾನೇಜ್ಮೆಂಟ್ ನಲ್ಲಿಯೂ ಮಹಿಳೆಯರ  ಸಂಖ್ಯೆ ಬೆರಳೆಣಿಕೆಯಷ್ಟಿದೆ ಎಂದು ಸಂಶೋಧನೆ ಹೇಳಿದೆ. ಅಲ್ಲದೆ ಮಹಿಳೆಯರು ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಕಡಿಮೆಯಿದೆ. ಎಲ್ಲಿ ನಷ್ಟದ ಅಪಾಯ ಹೆಚ್ಚಿರುತ್ತದೆಯೋ ಅಲ್ಲಿ ಮಹಿಳೆಯರು ಹೂಡಿಕೆ ಮಾಡುವುದಿಲ್ಲ ಎನ್ನುತ್ತದೆ ಸಂಶೋಧನೆ.
 

click me!