
'ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು' ಎಂಬ ಮಾತನ್ನು ಅದೆಷ್ಟು ಬಾರಿ ಕೇಳಿಲ್ಲ ಹೇಳಿ. ಆ ಮಾತು ಅಕ್ಷರಶಃ ಸತ್ಯವೂ ಹೌದು. ಒಬ್ಬ ತಾಯಿ (mother) ಮಾತ್ರ ಮಗುವಿಗೆ ಒಳ್ಳೆಯ ವಿದ್ಯೆ, ಗುಣ, ನಡತೆಯನ್ನು ಹೇಳಿಕೊಡಬಲ್ಲಳು. ಮಗುವಿನ ಅಂತಹ ಗುಣವೇ ಮುಂದೆ ಒಬ್ಬ ಒಳ್ಳೆಯ ಪ್ರಜೆಯನ್ನು ಸಮಾಜಕ್ಕೆ ಕೊಡುತ್ತದೆ. ಹಾಗಾಗಿ ಒಂದು ಮಗುವಿನ ಬಾಲ್ಯ ಪರಿಪೂರ್ಣವಾಗಿ, ಸಂತೋಷದಿಂದ ಕಳೆಯಬೇಕೆಂದರೆ ಅಲ್ಲಿ ಅಮ್ಮನ ಸಾನಿಧ್ಯ ಬೇಕೇ ಬೇಕು. ಪುಟ್ಟ ಮಗು (child) ವಿನ ನೋವು-ನಲಿವು, ಬೇಕು-ಬೇಡಗಳನ್ನು ಒಬ್ಬ ತಾಯಿಗಿಂತ ಹೆಚ್ಚು ಬೇರಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
ಆದರೆ ಇಂದು ಅಮ್ಮಂದಿರು ಪರಿಸ್ಥಿತಿಗೆ ಕಟ್ಟುಬಿದ್ದೋ ಅಥವಾ ಅವರ ಉನ್ನತ ಶಿಕ್ಷಣ (Higher Education) ದಿಂದಲೋ ಮಗುವಿನಿಂದ, ಅದರ ಪೋಷಣೆಯಿಂದ ತುಸು ದೂರ ಸರಿಯುತ್ತಿದ್ದಾರೆ. ಹಾಗಂತ ಅವರು ಮಗುವಿನ ಬಗ್ಗೆ ನಿಷ್ಕಾಳಜಿ ಮಾಡುತ್ತಿದ್ದಾರೆ ಎಂದೇನಿಲ್ಲ. ಆದರೂ ದಿನಪೂರ್ತಿ ಮಗುವಿನ ಜೊತೆಗಿದ್ದು ಅವರ ತೊದಲು ಮಾತು, ಮುಗ್ಧ ಸ್ವಭಾವಗಳನ್ನು ಅರಿತುಕೊಂಡು ತಾವೂ ಮಗುವಾಗಿ ಸುಖ ಅನುಭವಿಸುವವರು ವಿರಳ. ಅಂತಹ ಅಮ್ಮಂದಿರಿಗೆ ಸ್ಟೇ ಎಟ್ ಹೋಮ್ ಮಾಮ್ (Stay at Home Mom-SAHM) ಕುರಿತು ಹೇಳುವ ಅದರಲ್ಲಿರುವ ಸುಖ, ಆರಾಮದ ಬಗ್ಗೆ ಅರ್ಥೈಸುವ ಸಣ್ಣ ಪ್ರಯತ್ನ ಇದಾಗಿದೆ.
ಒಬ್ಬ ತಾಯಿ ಮನೆಯಲ್ಲಿ ಇದ್ದು ತನ್ನ ಮಕ್ಕಳನ್ನು ಮತ್ತು ಮನೆಯನ್ನು ನಿಭಾಯಿಸುತ್ತಾಳೆ. ಅವಳು ಆ ಸಮಯದಲ್ಲಿ ತನ್ನ ಕರೀಯರ್ (Career) ಗಾಗಿ ಕೆಲಸ ಮಾಡದೆ ಇದ್ದರೂ ತನ್ನ ಮಕ್ಕಳಿಗಾಗಿ ಟೀಚರ್, ಕೇರ್ ಟೇಕರ್, ಕುಕ್, ನರ್ಸ್, ಬೇಬಿಸೀಟರ್ ಮತ್ತು ಡ್ರೈವರ್ (Driver) ಹೀಗೆ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿರುತ್ತಾಳೆ. SAHM ಆಗುವುದು ಎಲ್ಲ ಮಹಿಳೆಯರ ಪಾಲಿಗೆ ದೊಡ್ಡ ನಿರ್ಣಯ ಮತ್ತು ಅಷ್ಟೇ ಕಠಿಣ ನಿರ್ಧಾರ ಕೂಡ ಆಗಿದೆ. ಚೆನ್ನಾಗಿ ಓದಿ ಒಳ್ಳೆಯ ಡಿಗ್ರಿ ಪಡೆದುಕೊಂಡು ಮದುವೆಯ ನಂತರ ಮಕ್ಕಳು ಸಂಸಾರ ನೋಡಿಕೊಂಡು ಮನೆಯಲ್ಲೇ ಇರಬೇಕು ಎಂದಾದರೆ ಅದಕ್ಕೆ ಅವಳ ಮನಸ್ಥಿತಿ ಗಟ್ಟಿಯಾಗಿರಬೇಕು.
ಮಕ್ಕಳ ದಿನಚರಿ ಚೆನ್ನಾಗಿರುತ್ತದೆ : SAHM ರೂಪದಲ್ಲಿ ಒಬ್ಬ ತಾಯಿ ಮನೆಯಲ್ಲಿ ಇದ್ದಾಗ ಮಕ್ಕಳಿಗೆ ಟೈಮ್ ಟೈಮ್ ಗೆ ಸರಿಯಾಗಿ ಎಲ್ಲ ಕೆಲಸವನ್ನು ಮಾಡಲು ಸಾಧ್ಯವಾಗುತ್ತೆ. ಇದರಿಂದ ತಾಯಿಗೆ ಎಲ್ಲ ಕೆಲಸವನ್ನೂ ಸಮಯಕ್ಕೆ ಸರಿಯಾಗಿ ನಿಭಾಯಿಸುವ ನಿಪುಣತೆ ಬರುತ್ತದೆ. ಒಬ್ಬ ಅಮ್ಮ ಸಮಯಕ್ಕೆ ಸರಿಯಾಗಿ ಊಟ, ನಿದ್ದೆ, ಅಭ್ಯಾಸ ಮತ್ತು ಮಕ್ಕಳ ಬೇಕು ಬೇಡಗಳನ್ನು ನೋಡಿದಾಗ ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ ಕೂಡ ಚೆನ್ನಾಗಿರುತ್ತೆ.
ಮಕ್ಕಳ ಮೇಲೆ ಗಮನ : ಅಮ್ಮ 24/7 ಮನೆಯಲ್ಲೇ ಇದ್ದಾಗ ಮಕ್ಕಳ (Kids) ಪ್ರತಿಯೊಂದು ಚಟುವಟಿಕೆಯ ಮೇಲೂ ಆಕೆಯ ಗಮನವಿರುತ್ತೆ. ಮಕ್ಕಳು ಹುಶಾರು ತಪ್ಪಿದಾಗ ಅವರ ಜೊತೆಯೇ ಇದ್ದು ಅವರಿಗೆ ಚಿಕಿತ್ಸೆ (Treatement) ಕೊಡಲು ಅನುಕೂಲವಾಗುತ್ತದೆ.
ತಾಲಿಬಾನ್‌ನಲ್ಲಿ ಒತ್ತಾಯದ ಮದುವೆಗೆ ನಿಷೇಧ
ಕೆಲಸದ ಟೆನ್ಷನ್ : ಸ್ಟೇ ಎಟ್ ಹೋಮ್ (Stay at Home) ಮಾಮ್ ಗೆ ಕೆಲಸದ ಟೆನ್ಶನ್ (Tension) ಇರುವುದಿಲ್ಲ. ಕೆಲಸಕ್ಕೆ ಹೋಗುವ ಮಹಿಳೆ ಮಗುವನ್ನು ಇನ್ನೊಬ್ಬರ ಜೊತೆ ಬಿಟ್ಟುಹೋಗಬೇಕಾಗುತ್ತದೆ. ಆಗ ಅವಳಿಗೆ ಮಗುವನ್ನು ಹೇಗೆ ನೋಡಿಕೊಳ್ತಾರೋ ಎಂಬ ಟೆನ್ಶನ್ ಇರುತ್ತದೆ. ಅದೇ ತಾಯಿ ಮನೆಯಲ್ಲೇ ಇದ್ದರೆ ಮಗುವಿನ ಎಲ್ಲ ಚಟುವಟಿಕೆಯನ್ನು ಕಣ್ತುಂಬ ನೋಡಿ ಜೀವನ ಪೂರ್ತಿ ಆ ನೆನಪನ್ನು ಹಿಡಿದಿಟ್ಟುಕೊಳ್ಳಬಹುದು. ಮನೆಯಲ್ಲೇ ಇದ್ದು ಮಕ್ಕಳು ಇಷ್ಟಪಡುವ ತಿಂಡಿಗಳನ್ನು ಮಾಡಿಕೊಡಬಹುದು ಮತ್ತು ಅವರ ಜೊತೆ ಆಟವಾಡಬಹುದು. ಇದರಿಂದ ಮಗುವಿನ ಮಾನಸಿಕ ಅಭಿವೃದ್ಧಿ ಚೆನ್ನಾಗಿ ಆಗುತ್ತದೆ.
ಒತ್ತಡ ಕಡಿಮೆ ಇರುತ್ತದೆ: ಮಕ್ಕಳೊಂದಿಗೆ ಸಮಯ ಕಳೆದಾಗ ತಾಯಿಯ ಒತ್ತಡ ಕೂಡ ಕಡಿಮೆಯಾಗುತ್ತದೆ. ಮಕ್ಕಳ ಆಟಗಳನ್ನು ನೋಡಿ ತಾಯಿ ಕೂಡ ತನ್ನ ಸುಸ್ತನ್ನು ಮರೆಯುತ್ತಾಳೆ.
ಖುಷಿ: ಫುಲ್ ಟೈಮ್ ಒಂದು ಮಗುವಿಗೆ ತಾಯಿಯಾಗಿ ಇರುವುದು ಬಹಳ ಖುಷಿಯ ವಿಷಯ. ಅವಳು ದಿನವಿಡೀ ಮನೆಯಲ್ಲಿ ಇದ್ದು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕೃತಿಯನ್ನು ಕೊಡುತ್ತಾಳೆ. ಮುಂದೆ ಆ ಮಕ್ಕಳು ಉತ್ತಮ ಶಿಕ್ಷಣ ಪಡೆದು ಕೆಲಸ ಪಡೆದುಕೊಂಡಾಗ ಒಬ್ಬ ಅಮ್ಮನ ಪರಿಶ್ರಮ ಸಾರ್ಥಕವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.