ಮಹಿಳೆಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡೂ ಮುಖ್ಯ. ಕೆಲಸದ ಒತ್ತಡದಲ್ಲಿ ಮಹಿಳೆ ಇದೆಲ್ಲವನ್ನೂ ಮರೆಯುತ್ತಾಳೆ. ಇಷ್ಟು ದಿನ ಬೇರೆಯವರಿಗೆ ದುಡಿದಿದ್ದು ಸಾಕು. ಇನ್ಮುಂದೆ ಆದ್ರೂ ನಿಮಗಾಗಿ ಸ್ವಲ್ಪ ಸಮಯ ಮೀಸಲಿಟ್ಟು ನೋಡಿ.
ಮಾರ್ಚ್ 8 ವಿಶ್ವ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಬರೀ ಮಹಿಳೆಯರಿಗೆ ಈ ಸಂದರ್ಭದಲ್ಲಿ ಶುಭಕೋರೋದು ಮುಖ್ಯವಲ್ಲ. ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಈ ದಿನದ ವಿಶೇಷವಾಗಿದೆ. ಮಹಿಳೆಯಾದವಳು ಅತ್ತೆ, ಮಗಳು, ತಾಯಿ, ಸೊಸೆ, ಅಮ್ಮ ಹೀಗೆ ನಾನಾ ಪಾತ್ರಗಳನ್ನು ನಿರ್ವಹಿಸ್ತಾಳೆ. ಸದಾ ಕುಟುಂಬ ನಿರ್ವಹಣೆ ಮಾಡುವ ಮಹಿಳೆ ತನ್ನ ಆರೋಗ್ಯವನ್ನು ನಿರ್ಲಕ್ಷ್ಯ ಮಾಡ್ತಾಳೆ. ಇಡೀ ದಿನ ಕುಟುಂಬಕ್ಕಾಗಿ ದುಡಿಯುವ ಮಹಿಳೆ ತನಗಾಗಿ, ತನ್ನ ಆರೋಗ್ಯಕ್ಕಾಗಿ ಸಮಯ ಮೀಸಲಿಡಬೇಕು. ಮಹಿಳೆ ತನಗಾಗಿ ಯಾವೆಲ್ಲ ಕೆಲಸವನ್ನು ಮಾಡ್ಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಸಲಹೆಗಳು ತುಂಬಾ ಸರಳವೆನ್ನಿಸಿದ್ರೂ ಅವುಗಳನ್ನು ಅನುಸರಿಸುವುದ್ರಿಂದ ಆಗುವ ಲಾಭ ಅಪಾರ ಎನ್ನುತ್ತಾರೆ ವೈದ್ಯರು.
ಆರೋಗ್ಯ ವೃದ್ಧಿಗೆ ಮಹಿಳೆಯರು ಅನುಸರಿಸ್ಬೇಕು ಈ ಎಲ್ಲ ನಿಯಮ :
ಎಲ್ಲ ಕೆಲಸ ಒಂದೇ ದಿನ ಮಾಡೋದು ಕಷ್ಟ : ಅಡುಗೆ, ಮನೆ ಸ್ವಚ್ಛತೆ, ಬಟ್ಟೆ ವಾಶ್, ಮಕ್ಕಳ ಶಿಕ್ಷಣ, ಶಾಪಿಂಗ್ ಹೀಗೆ ಎಲ್ಲ ಕೆಲಸವನ್ನು ಒಂದೇ ದಿನ ಮಾಡಲು ಮಹಿಳೆಯರು ಮುಂದಾಗ್ತಾರೆ. ಕೆಲ ಮಹಿಳೆಯರು ಅದನ್ನು ಮಾಡ್ತಾರೆ, ಅವರು ಸೂಪರ್ ವುಮೆನ್ ಎಂದು ಭಾವಿಸುವ ಇತರ ಮಹಿಳೆಯರು ತಾವೂ ಆ ಪ್ರಯತ್ನ ನಡೆಸ್ತಾರೆ. ಆದ್ರೆ ಇದು ಸಾಧ್ಯವಾಗದ ಮಾತು. ನೀವು ಯಾವುದೇ ಕಾರಣಕ್ಕೂ ಇಂಥ ಪ್ರಯತ್ನಕ್ಕೆ ಕೈ ಹಾಕಬೇಡಿ. ಮನೆಯ ಕೆಲಸವನ್ನು ನೀವು ಶೆಡ್ಯುಲ್ ಮಾಡಿ. ಒಂದೊಂದು ದಿನ ಒಂದೊಂದು ಕೆಲಸ ಮಾಡುವ ಪ್ಲಾನ್ ಮಾಡಿ.
TRENDING NEWS : ಗರ್ಲ್ ಫ್ರೆಂಡ್ ಹೇಳಿದ ಮಾತು ಕೇಳಿ ಸ್ಟಾರ್ ಆದ ಹುಡುಗ
ವಿರಾಮ (Rest) ಮುಖ್ಯ : ಬೆಳಿಗ್ಗೆ ಎದ್ದಾಗಿಂದ ರಾತ್ರಿಯವರೆಗೆ ಕೆಲಸ ಮಾಡೋದು ಆರೋಗ್ಯವನ್ನು ಹಾಳು ಮಾಡುತ್ತದೆ. ಕೆಲಸದ ಮಧ್ಯೆ ವಿರಾಮ ಬಹಳ ಮುಖ್ಯ. ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ಟೇಬಲ್ ಮೇಲೆ ಕಾಲಿಟ್ಟು, ಕಣ್ಣು ಮುಚ್ಚಿ, ಪಾಪ್ ಕಾರ್ನ್ ತಿನ್ನುತ್ತ ಟಿವಿ ನೋಡಿ ಇಲ್ಲವೆ ನಿಮ್ಮಿಷ್ಟದ ಪುಸ್ತಕ ಓದಿ. ಇದ್ಯಾವುದೂ ಅಪರಾಧವಲ್ಲ ಎಂಬುದು ನೆನಪಿರಲಿ.
ಯಾವುದಕ್ಕೂ ಮುಜುಗರ ಬೇಡ : ನಿದ್ರೆ ಮಾಡಲು ಹಿಂಜರಿಯಬೇಡಿ. ಮೆದುಳು ಮತ್ತು ಅಂಗಾಂಗಗಳಿಗೆ ವಿಶ್ರಾಂತಿ ಬಹಳ ಅಗತ್ಯ. ಮೆದುಳಿಗೆ ವಿಶ್ರಾಂತಿ ಸಿಕ್ಕಿಲ್ಲವೆಂದ್ರೆ ಮರೆವು ಶುರುವಾಗುತ್ತದೆ. ಮನಸ್ಸಿಗೆ ವಿಶ್ರಾಂತಿ ನೀಡುವುದು ಮುಖ್ಯ. ಚಿಂತೆಯನ್ನು ಕಡಿಮೆ ಮಾಡ್ಬೇಕು. ಯೋಚಿಸೋದನ್ನು ಕಡಿಮೆ ಮಾಡ್ಬೇಕು. ಹೆಚ್ಚೆಚ್ಚು ನಗ್ತಿರಿ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ.
ತಾಜಾ ಗಾಳಿ ತೆಗೆದುಕೊಳ್ಳಿ : ಸ್ವಲ್ಪ ಸಮಯ ಮನೆಯಿಂದ ಹೊರಗೆ ಬನ್ನಿ. ಗಾಳಿಯಾಡುವ ಜಾಗದಲ್ಲಿ ಶಾಂತವಾಗಿ ಕುಳಿತುಕೊಳ್ಳಿ. ಏನನ್ನೂ ಮಾಡಬೇಡಿ, ಏನನ್ನೂ ಹೇಳಬೇಡಿ. ದೀರ್ಘವಾಗಿ ಉಸಿರಾಟ ನಡೆಸಿ. ಆತುರಬೇಡ.
ಕನ್ನಡಿ (Mirror) ಮುಂದಷ್ಟು ಸಮಯ ಕಳೆಯಿರಿ : ಕನ್ನಡಿಯ ಬಳಿ ನಿಂತುಕೊಳ್ಳಿ. ನಿಮ್ಮನ್ನು ನೋಡಿ ಮುಗಳ್ನಗಿ. ನಿಮಗೆ ನೃತ್ಯ ಇಷ್ಟವಾದ್ರೆ ಡಾನ್ಸ್ ಮಾಡಿ. ಹಾಡು ಹೇಳ್ಬೇಕೆಂದ್ರೆ ಹಾಡು ಹೇಳಿ. ನಿಮ್ಮ ಸುತ್ತ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಿ. ಇದು ನಿಮ್ಮನ್ನು ಮತ್ತಷ್ಟು ಬಲಗೊಳಿಸುತ್ತದೆ. ನಿಮ್ಮ ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯಕ್ಕೆ ಒಳ್ಳೆಯದು.
ನಿಮ್ಮಿಷ್ಟದ ಆಹಾರ, ಪಾನೀಯ ಸೇವನೆ ಮಾಡಿ : ನಿಮಗಾಗಿ ನೀವು ಏನನ್ನಾದ್ರೂ ಮಾಡ್ಬೇಕು. ನಿಮ್ಮಿಷ್ಟದ ಆಹಾರ ಖರೀದಿ ಮಾಡಿ, ಇಲ್ಲವೆ ಪಾನೀಯ, ಬಟ್ಟೆ ಯಾವುದಾದ್ರೂ ಸರಿ. ನಿಮ್ಮತನಕ್ಕೆ ಮಹತ್ವ ನೀಡಿ. ಇದು ಜಂಜಾಟದಿಂದ ನಿಮ್ಮನ್ನು ದೂರವಿಡಲು ಸಹಕಾರಿ.
ಗ್ಯಾಜೆಟ್ ಖರೀದಿ ಮಾಡಿ : ನಿಮ್ಮ ಕೆಲಸವನ್ನು ಸುಲಭಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಅಗತ್ಯವಾದ ಗ್ಯಾಜೆಟ್‌ಗಳನ್ನು ಖರೀದಿಸಿ. ಒತ್ತಡ ಮಹಿಳೆಯರ ದೊಡ್ಡ ಶತ್ರು.
ಅನಾರೋಗ್ಯ ಕಾಡಿದ್ರೆ ಚಿಕಿತ್ಸೆ ಪಡೆಯಿರಿ : ನಿಮಗೆ ಆರೋಗ್ಯದಲ್ಲಿ ಏರುಪೇರಾಗ್ತಿದೆ ಎಂದಾದ್ರೆ ನೀವು ಅದನ್ನು ಮುಚ್ಚಿಡಬೇಡಿ. ವೈದ್ಯರನ್ನು ಭೇಟಿಯಾಗಿ. ಮನೆಯವರಿಗೆ ತಿಳಿಸಿ.
Momo Twins : ಒಂದಾದ್ಮೇಲೆ ಒಂದರಂತೆ ಎರಡು ಜೋಡಿ ಅವಳಿಗೆ ಜನ್ಮ ನೀಡಿದ
ವೈದ್ಯಕೀಯ ಪರೀಕ್ಷೆ : ಅನಾರೋಗ್ಯಕ್ಕೆ ಒಳಗಾದಾಗ ಮಾತ್ರ ಚಿಕಿತ್ಸೆ ಪಡೆಯಬೇಕಾಗಿಲ್ಲ. ನಿಯಮಿತವಾಗಿ ರಕ್ತ ಪರೀಕ್ಷೆ ಹಾಗೂ ಶುಗರ್ ಪರೀಕ್ಷೆ ಮಾಡಿಸಿಕೊಳ್ಳೋದು ಒಳ್ಳೆಯದು.